ಮಾರ್ಚ್‌ 21ರೊಳಗೆ ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರ ನೀಡಿ : ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ತಾಕೀತು

ನವದೆಹಲಿ: ಚುನಾವಣಾ ಬಾಂಡ್‌ ಕುರಿತ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ)ಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಾಕೀತು ಮಾಡಿದೆ. ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಇದೇ ತಿಂಗಳು ಮಾರ್ಚ್ 21ರೊಳಗೆ ಬಿಡುಗಡೆ ಮಾಡಬೇಕು ಎಂದು ಎಸ್‌ಬಿಐಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ತಾಕೀತು ಮಾಡಿದೆ. … Continued

ತೆಲಂಗಾಣ ರಾಜ್ಯಪಾಲರ ಹುದ್ದೆಗೆ ತಮಿಳಿಸೈ ಸೌಂದರರಾಜನ್ ರಾಜೀನಾಮೆ

ಹೈದರಾಬಾದ್‌ : ಲೋಕಸಭೆ ಚುನಾವಣೆಗೆ ಮುನ್ನ ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ತಮಿಳಿಸೈ ಸೌಂದರರಾಜನ್ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬೆಳವಣಿಗೆಯನ್ನು ಪುದುಚೇರಿ ರಾಜಭವನ ಖಚಿತಪಡಿಸಿದೆ. ವರದಿಗಳ ಪ್ರಕಾರ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. “ತೆಲಂಗಾಣದ ಗೌರವಾನ್ವಿತ ರಾಜ್ಯಪಾಲರು ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ ತಮಿಳಿಸೈ ಸೌಂದರರಾಜನ್ … Continued

ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ 3ನೇ ಮಹಾಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌

ಮಾಸ್ಕೋ: ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಕೂಟದ ನಡುವಿನ ನೇರ ಸಂಘರ್ಷವು ಮೂರನೇ ಮಹಾಯುದ್ಧದಿಂದ ಒಂದು ಹೆಜ್ಜೆ ದೂರದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಸೋಮವಾರ ಪಶ್ಚಿಮ ದೇಶಗಳಿಗೆ ಎಚ್ಚರಿಸಿದ್ದಾರೆ. ಆದರೆ ಅಂತಹ ಸನ್ನಿವೇಶವನ್ನು ಯಾರೂ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಉಕ್ರೇನ್ ಯುದ್ಧವು 1962 ರ ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ … Continued

ಆರ್‌ಎಸ್‌ಎಸ್‌ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಪುನರಾಯ್ಕೆ

ನಾಗ್ಪುರ : ರಾಷ್ಟ್ರೀ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ‍್ಯವಾಹರಾಗಿ ದತ್ತಾತ್ತ್ರೇಯ ಹೊಸಬಾಳೆ ಅವರು ಪುನರಾಯ್ಕೆಯಾಗಿದ್ದಾರೆ. ನಾಗ್ಪುರದ ಸ್ಮೃತಿ ಭವನದ ಸಂಕೀರ್ಣದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಹೊಸಬಾಳೆ ಅವರನ್ನು ಸರಕಾರ‍್ಯವಾಹರಾಗಿ ಪುನರಾಯ್ಕೆ ಮಾಡಲಾಗಿದೆ. ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳ ಸುಮಾರು 1500ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 2021ರಿಂದ ಸರಕಾರ‍್ಯವಾಹರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಹೊಸಬಾಳೆ ಅವರನ್ನು … Continued

ಡಬ್ಲ್ಯುಪಿಎಲ್‌ (WPL) 2024 : ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್‌ ಸಿಬಿ

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ತಂಡ ಚೊಚ್ಚಲ ಮಹಿಳಾ ಐಪಿಎಲ್‌-2024 ಟ್ರೋಫಿ ಗೆದ್ದಿದೆ. ದೆಹಲಿಯ ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೋಲಿಸುವ ಮೂಲಕ ಕಪ್‌ ಅನ್ನು ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ … Continued

ಚುನಾವಣಾ ಬಾಂಡ್ ಮೂಲಕ ಅತಿಹೆಚ್ಚು ಹಣ ಸ್ವೀಕರಿಸಿದ ಪಕ್ಷ ಬಿಜೆಪಿ ; ಅತಿಹೆಚ್ಚು ದಾನ ನೀಡಿದ ಫ್ಯೂಚರ್ ಗೇಮಿಂಗ್ ನಿಂದ ಡಿಎಂಕೆಗೆ ಸಿಂಹಪಾಲು : ಎಷ್ಟು ಗೊತ್ತೆ..?

ನವದೆಹಲಿ : ಚುನಾವಣಾ ಬಾಂಡ್‌ಗಳನ್ನು 2018 ರಲ್ಲಿ ಪರಿಚಯಿಸಿದಾಗಿನಿಂದ ಈ ಬಾಂಡ್‌ಗಳ ಮೂಲಕ ಗರಿಷ್ಠ ಹಣ 6,986.5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ. ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್-1,397 ಕೋಟಿ ರೂ., ಕಾಂಗ್ರೆಸ್ -1,334 ಕೋಟಿ ರೂ. ಮತ್ತು ಬಿಆರ್‌ಎಸ್ 1,322 ಕೋಟಿ ರೂ. ಹಣ ಸ್ವೀಕರಿಸಿದೆ. ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರರಾದ ಫ್ಯೂಚರ್ … Continued

ಹಾವಿನ ವಿಷದ ಪ್ರಕರಣ : ಎಲ್ವಿಶ್ ಯಾದವ್ ಬಂಧನ

ನವದೆಹಲಿ: ಬಿಗ್ ಬಾಸ್ ಒಟಿಟಿ (OTT) ವಿಜೇತ ಮತ್ತು ಯೂ ಟ್ಯೂಬರ್ ಎಲ್ವಿಶ್ ಯಾದವ್ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಹಾವಿನ ವಿಷದ ಪ್ರಕರಣದಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ, ನೋಯ್ಡಾ ಪೊಲೀಸರು ಸೆಕ್ಟರ್ 39 ರಲ್ಲಿ ಎಫ್‌ಐಆರ್ ದಾಖಲಿಸಿದ್ದರು ಮತ್ತು ವಿಚಾರಣೆಗೆ ಕರೆದ ನಂತರ ಆತನನ್ನು ಬಂಧಿಸಲಾಯಿತು. ಆತನನ್ನು … Continued

58ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ

ಚಂಡೀಗಢ: ಎರಡು ವರ್ಷಗಳ ಹಿಂದೆ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ತಾಯಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಮತ್ತು 60 ವರ್ಷದ ತಂದೆ ಬಲ್ಕೌರ್ ಸಿಂಗ್ ಅವರು, ಕಳೆದುಕೊಂಡಿದ್ದ ಏಕೈಕ ಮಗನ ಸ್ಥಾನ ತುಂಬಲು ಮತ್ತೊಬ್ಬ ಮಗನನ್ನು ಪಡೆದಿದ್ದಾರೆ. ಸಿಧು … Continued

ತೆಲಂಗಾಣ ಚುನಾವಣೆಗೆ ಮುನ್ನ ಬಿಆರ್‌ಎಸ್ ಗೆ ಸಂಸದ ಡಾ.ರಂಜಿತ್ ರೆಡ್ಡಿ ರಾಜೀನಾಮೆ: ಕಾಂಗ್ರೆಸ್ಸಿಗೆ ಸೇರ್ಪಡೆ

ಹೈದರಾಬಾದ್‌ : ಭಾರತ್ ರಾಷ್ಟ್ರ ಸಮಿತಿಗೆ (ಬಿಆರ್‌ಎಸ್) ಮತ್ತೊಂದು ಹಿನ್ನಡೆಯಾಗಿದ್ದು, ಸಂಸದ (ಎಂಪಿ) ರಂಜಿತ್ ರೆಡ್ಡಿ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಹಾಗೂ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ಬಿಆರ್‌ಎಸ್‌ಗೆ ರಾಜೀನಾಮೆ ನೀಡಲು ರಾಜಕೀಯ ಸನ್ನಿವೇಶಗಳು ಕಾರಣ ಎಂದು ಹೇಳಿದ್ದಾರೆ. X ನಲ್ಲಿ ಅವರು, “ವಿಕಸನಗೊಳ್ಳುತ್ತಿರುವ ರಾಜಕೀಯ ಪರಿಸ್ಥಿತಿಗಳಿಂದಾಗಿ, … Continued

ಗುಜರಾತ್ ವಿವಿ ಹಾಸ್ಟೆಲ್ ಒಳಗೆ ನಮಾಜ್: ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಗುಂಪು, ಐವರಿಗೆ ಗಾಯ

ಅಹಮದಾಬಾದ್: ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಶನಿವಾರ ರಾತ್ರಿ ಹಾಸ್ಟೆಲ್‌ ಒಳಗೆ ನುಗ್ಗಿದ ಜನರ ಗುಂಪೊಂದು, ಆಫ್ರಿಕಾ ದೇಶಗಳು, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ ದೇಶಗಳ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ದಾಳಿಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿರುವ … Continued