ಪ್ರಧಾನಿ ಮೋದಿ ‘ನನ್ನ ದೊಡ್ಡಣ್ಣ’ ಎಂದು ಬಣ್ಣಿಸಿದ ತೆಲಂಗಾಣ ಕಾಂಗ್ರೆಸ್‌ ಸರ್ಕಾರದ ಸಿಎಂ : ಮೋದಿ ಜೊತೆ ರೇವಂತ ರೆಡ್ಡಿ ʼಸ್ನೇಹಪರತೆʼ ಮಾತು ಚರ್ಚೆಗೆ ಗ್ರಾಸ

ಆದಿಲಾಬಾದ್‌ : ತೆಲಂಗಾಣ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಸೋಮವಾರ ಪ್ರಧಾನಿ ಮೋದಿಯನ್ನು ತಮ್ಮ ʼದೊಡ್ಡಣ್ಣʼ ಎಂದು ಬಣ್ಣಿಸಿದ್ದಾರೆ…! ಸೋಮವಾರ ತೆಲಂಗಾಣದ ಆದಿಲಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 56,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಯೋಜನೆಗಳ ಉದ್ಘಾಟನೆಯಲ್ಲ, ಪ್ರಧಾನಿ ಮತ್ತು ಮುಖ್ಯಮಂತ್ರಿ ರೇವಂತ ರೆಡ್ಡಿ ನಡುವಿನ ಬಾಂಧವ್ಯ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು. … Continued

ವೀಡಿಯೊ..| ಪುತ್ರ ಅನಂತ ಅಂಬಾನಿ ಪ್ರೀ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನೀತಾ ಅಂಬಾನಿಯಿಂದ ʼವಿಶ್ವಂಭರಿ ಸ್ತುತಿʼ ನೃತ್ಯ ಪ್ರದರ್ಶನ : ವೀಕ್ಷಿಸಿ

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ ಅಂಬಾನಿ- ನೀತಾ ಅಂಬಾನಿ ಪುತ್ರ ಅನಂತ ಅಂಬಾನಿ (Anant Ambani) ವಿವಾಹ ಪೂರ್ವ ಕಾರ್ಯಕ್ರಮವು ಗುಜರಾತಿನ ಜಾಮನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಗ-ಸೊಸೆಗಾಗಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯ ಮಾಡಿದ್ದಾರೆ. ಶಕ್ತಿ ಮತ್ತು ಶಕ್ತಿಯ ಮೂರ್ತರೂಪವಾದ ಮಾ ಅಂಬೆಗೆ ಸಮರ್ಪಿತವಾದ ‘ವಿಶ್ವಂಭರಿ ಸ್ತುತಿ’ ಭಕ್ತಿಗೀತೆಗೆ ಶಾಸ್ತ್ರೀಯ ನೃತ್ಯ … Continued

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ : ಉದಯನಿಧಿ ಸ್ಟಾಲಿನ್‌ ಮೇಲೆ ಸುಪ್ರೀಂ ಕೋರ್ಟ್‌ ಗರಂ

ನವದೆಹಲಿ: ಕಳೆದ ವರ್ಷ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ಅವರು ಸಂವಿಧಾನದ 19 (1) (ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 25 ವಿಧಿ (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದೆಡೆಗಿನ … Continued

ಸದನದಲ್ಲಿ ಭಾಷಣ-ಮತಕ್ಕಾಗಿ ಲಂಚ : ಸಂಸದರು-ಶಾಸಕರಿಗೆ ಯಾವುದೇ ವಿನಾಯ್ತಿ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, 1998ರ ತೀರ್ಪು ರದ್ದು

ನವದೆಹಲಿ: ಸಂಸದರು (ಎಂಪಿಗಳು) ಮತ್ತು ವಿಧಾನಸಭೆಗಳ ಸದಸ್ಯರು (ಎಂಎಲ್‌ಎಗಳು) ಲಂಚ ಪಡೆದ ಆರೋಪ ಬಂದಾಗ ಸಂವಿಧಾನದ 105 ಮತ್ತು 194 ನೇ ವಿಧಿಯ ಅಡಿಯಲ್ಲಿ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ಸಂಸತ್ತಿನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಜನಪ್ರತಿನಿಧಿಗಳಿಗೆ … Continued

ಹೋಗಿ…ಗೆದ್ದು ಬನ್ನಿ…ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ…: ಲೋಕಸಭೆ ಚುನಾವಣೆಗೂ ಮುನ್ನ ಸಚಿವರಿಗೆ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದೊಂದಿಗೆ ನಡೆದ ಒಂದು ದಿನದ ಸಭೆಯ ನೇತೃತ್ವ ವಹಿಸಿದ್ದರು. ಈ ಸಭೆಯಲ್ಲಿ ಅವರು, ಮುಂಬರುವ ಲೋಕಸಭೆ ಚುನಾವಣೆ ಘೋಷಣೆಗೆ ಮುಂಚಿತವಾಗಿಯೇ ತಮ್ಮ ಸಚಿವರಿಗೆ “ಹೋಗಿ, ಗೆದ್ದುಬನ್ನಿ, ನಾನು ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ” ಎಂದು ಸಂದೇಶ ನೀಡಿದ್ದಾರೆ. ನಿರ್ಣಾಯಕ ಸಭೆಯಲ್ಲಿ ವಿಷನ್ ಡಾಕ್ಯುಮೆಂಟ್ ‘ವಿಕಸಿತ ಭಾರತ 2047’ … Continued

ಲೋಕಸಭೆ ಚುನಾವಣೆ 2024 : ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಕೊಕ್‌…!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಹೆಸರುಗಳೊಂದಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಅದರಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ…! ಪಟ್ಟಿಯಲ್ಲಿ ಬಿಜೆಪಿ ಅಸ್ಸಾಂನ 11 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವರಲ್ಲಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳಾಗಿವೆ. 2019ರ ಸಾರ್ವತ್ರಿಕ … Continued

ಲೋಕಸಭೆ ಚುನಾವಣೆ : ಬಿಜೆಪಿ ಟಿಕೆಟ್ ಘೋಷಣೆಯಾದ ನಂತ್ರ ನಾನು ಸ್ಪರ್ಧಿಸುವುದಿಲ್ಲ ಎಂದ ಭೋಜಪುರಿ ನಟ…!

ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂದು ಹೆಸರು ಘೋಷಿಸಲಾಗಿದ್ದ ಭೋಜಪುರಿ ಗಾಯಕ ಮತ್ತು ನಟ ಪವನ್ ಸಿಂಗ್ ಅವರು, ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಭಾನುವಾರ ಘೋಷಿಸಿದ್ದಾರೆ. “ನನ್ನನ್ನು ನಂಬಿ ಅಸನ್ಸೋಲ್ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಘೋಷಿಸಿದ್ದಕ್ಕಾಗಿ ನಾನು ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಹೇಳುತ್ತೇನೆ, ಆದರೆ ಕೆಲವು ಕಾರಣಗಳಿಂದ … Continued

ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ : ರಾಜಕೀಯಕ್ಕೆ ವಿದಾಯ ಹೇಳಿದ ಡಾ.ಹರ್ಷವರ್ಧನ್

ನವದೆಹಲಿ : ಮಾಜಿ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ತಮ್ಮ ಮೂರು ದಶಕಗಳ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹಾಲಿ ಬಿಜೆಪಿ ಸಂಸದ ಹರ್ಷವರ್ಧನ್ ಅವರು ರಾಜಕೀಯ ತ್ಯಜಿಸುವ ನಿರ್ಧಾರವನ್ನು ಭಾನುವಾರ ಪ್ರಕಟಿಸಿದ್ದಾರೆ. ಬಿಜೆಪಿ ತನ್ನ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಅವರ ಈ ನಿರ್ಧಾರ ಬಂದಿದೆ. … Continued

ಚಾಲಕ “ಫೋನ್‌ನಲ್ಲಿ ಕ್ರಿಕೆಟ್ ನೋಡುತ್ತಿದ್ದ…: 14 ಜನರ ಸಾವಿಗೆ ಕಾರಣವಾದ 2023ರ ಆಂಧ್ರ ರೈಲು ಅಪಘಾತದ ಬಗ್ಗೆ ಸಚಿವ ಅಶ್ವಿನಿ ವೈಷ್ಣವ

ನವದೆಹಲಿ: ಅಕ್ಟೋಬರ್ 29, 2023 ರಂದು ಅಪಘಾತದಿಂದಾಗಿ 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿಯಾದ ಘಟನೆಯಲ್ಲಿ ಒಂದು ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ಆ ವೇಳೆ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ … Continued

ವೀಡಿಯೊ…| ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಮಗನ ಭಾವನಾತ್ಮಕ ಮಾತಿಗೆ ಕಣ್ಣೀರಿಟ್ಟ ರಿಲಯನ್ಸ್‌ ಅಧ್ಯಕ್ಷ ಮುಖೇಶ ಅಂಬಾನಿ

ರಿಲಯನ್ಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಭಾವೋದ್ವೇಗಕ್ಕೆ ಒಳಗಾಗಿದ ಪ್ರಸಂಗ ನಡೆದಿದೆ. ಶನಿವಾರ ಮಾರ್ಚ್ 2 ರಂದು ತಮ್ಮ ಜಾಮ್‌ನಗರದಲ್ಲಿ ನಡೆದ ಕಿರಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮ ಕಾರ್ಯಕ್ರಮದಲ್ಲಿ ಅನಂತ ಅಂಬಾನಿ ಅವರು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಅತಿಥಿಗಳಿಗೆ ಧನ್ಯವಾದ ಹೇಳುತ್ತಿರುವಾಗ ಮುಖೇಶ ಅಂಬಾನಿ ಕಣ್ಣೀರು … Continued