ಸುಪ್ರೀಂಕೋರ್ಟ್‌ ತೀರ್ಪು ಬರುವವರೆಗೆ ಬೆಳಗಾವಿ, ಕಾರವಾರ, ನಿಪ್ಪಾಣಿಯನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ: ಉದ್ಧವ್‌ ಠಾಕ್ರೆ

ಮುಂಬೈ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಮತ್ತೆ ಮಹಾರಾಷ್ಟ್ರದ ರಾಜ್ಯ ವಿಧಾನ ಪರಿಷತ್ತಿನಲ್ಲಿ ಸೋಮವಾರ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , “ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ” ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿವಾದಿತ ಪ್ರದೇಶದ ನಿವಾಸಿಗಳು ಮರಾಠಿ ಮಾತನಾಡುವ ಜನರು ಎಂದು ಠಾಕ್ರೆ ಹೇಳಿದ್ದಾರೆ. ‘ಪ್ರಾದೇಶಿಕ ಭಾಷೆಗಳನ್ನಾಧರಿಸಿ ರಾಜ್ಯಗಳು … Continued

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಏಮ್ಸ್‌ಗೆ ದಾಖಲು

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 63 ವರ್ಷದ ಅವರನ್ನು ಆಸ್ಪತ್ರೆಯ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಾದ ಕಾರಣಗಳು ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ … Continued

ಸಾಲ ವಂಚನೆ ಪ್ರಕರಣ: ವೀಡಿಯೊಕಾನ್‌ ಮುಖ್ಯಸ್ಥ ವೇಣುಗೋಪಾಲ ಧೂತ್‌ ಅವರನ್ನು ಬಂಧಿಸಿದ ಸಿಬಿಐ

ಮುಂಬೈ: ಐಸಿಐಸಿಐ ಸಾಲ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಡಿಯೋಕಾನ್ ಗ್ರೂಪ್ ಪ್ರವರ್ತಕ ವೇಣುಗೋಪಾಲ ಧೂತ್ ಅವರನ್ನು ಬಂಧಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ ಕೊಚ್ಚರ ಅವರನ್ನು ಸಿಬಿಐ ಬಂಧಿಸಿತ್ತು. ಚಂದಾ ಕೊಚ್ಚರ್ ಮತ್ತು ಆಕೆಯ ಪತಿ ದೀಪಕ್ … Continued

ಅಮೆರಿಕವನ್ನು ಕಂಗೆಡಿಸಿದ ಬಾಂಬ್ ಚಂಡಮಾರುತ: ಸಾವಿನ ಸಂಖ್ಯೆ 34 ಕ್ಕೆ ಏರಿಕೆ, 6,000 ವಿಮಾನಗಳ ಹಾರಾಟ ರದ್ದು

ಅಮೆರಿಕದಾದ್ಯಂತ ಹವಾಮಾನ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 34 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. ವರದಿ ಪ್ರಕಾರ ದೈತ್ಯಾಕಾರದ ಚಂಡಮಾರುತವು ದೇಶದ ಹೆಚ್ಚಿನ ಭಾಗವನ್ನು ಹಿಮ, ಮಂಜುಗಡ್ಡೆ ಮತ್ತು ಶಬ್ದ ಮಾಡುವ ಗಾಳಿಯೊಂದಿಗೆ ಹಿಡಿದಿಟ್ಟುಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬಾಂಬ್ ಚಂಡಮಾರುತ ಎಂದು ಕರೆಯಲ್ಪಡುವ ಚಂಡಮಾರುತವು ಹೆಚ್ಚಿನ ಜೀವಗಳನ್ನು … Continued

ಚೀನಾದಿಂದ ಭಾರತಕ್ಕೆ ಹಿಂತಿರುಗಿದ ವ್ಯಕ್ತಿಗೆ ಕೋವಿಡ್ ಪಾಸಿಟಿವ್; ಜೀನೋಮ್ ಅನುಕ್ರಮಕ್ಕಾಗಿ ಮಾದರಿ ರವಾನೆ

ಆಗ್ರಾ : ಚೀನಾದಿಂದ ಹಿಂದಿರುಗಿದ 40 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಕೊರೊನಾ ಸೋಂಕು ಪಾಸಿಟಿವ್‌ ಬಂದಿದೆ ಎಂದು ಆಗ್ರಾದ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಎ.ಕೆ. ಶ್ರೀವಾಸ್ತವ ಆಜ್ ತಕ್‌ಗೆ ಖಚಿತಪಡಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ರೋಗಿಯೊಂದಿಗೆ ಸಂಪರ್ಕಕ್ಕೆ ಬಂದ ಇತರ ವ್ಯಕ್ತಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಮತ್ತು ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ರೋಗಿಯ ಸಂಪರ್ಕಕ್ಕೆ ಬಂದವರನ್ನೂ … Continued

ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಬೆಂಗಳೂರು: ಬಿಜೆಪಿಯ ಬಗ್ಗೆ ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಈಗ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರಿಡಲಾಗಿದೆ ಎಂದು ಹೇಳಿದರು. ನಗರದಲ್ಲಿನ ತಮ್ಮ ಮನೆ ‘ಪಾರಿಜಾತ’ದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದರು … Continued

ಮದುವೆಯಾಗಲು ನಿರಾಕರಿಸಿದ ನಂತರ ಯುವತಿಯನ್ನು ಥಳಿಸಿದ ವ್ಯಕ್ತಿ: ವೀಡಿಯೊ ವೈರಲ್‌

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯ ಆಘಾತಕಾರಿ ಘಟನೆಯೊಂದರಲ್ಲಿ, 24 ವರ್ಷದ ಯುವಕನೊಬ್ಬ ತನ್ನನ್ನು ಮದುವೆಯಾಗಲು ನಿರಾಕರಿಸಿದ ಆರೋಪದ ಮೇಲೆ 19 ವರ್ಷದ ಯುವತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಮನಸ್ಸಿಗೆ ಘಾಸಿ ನೀಡುವ ವೈರಲ್ ವೀಡಿಯೊದಲ್ಲಿ ಇಬ್ಬರು ಕೈ ಹಿಡಿದುಕೊಂಡು ನಡೆದಾಡುತ್ತಿರುವುದನ್ನು ತೋರಿಸಿದೆ, ಆಗ ಇದ್ದಕ್ಕಿದ್ದಂತೆ ವ್ಯಕ್ತಿ ಯುವತಿಗೆ ಕಪಾಳಮೋಕ್ಷ ಮಾಡಿ, ಅವಳ ಕೂದಲನ್ನು … Continued

ಭಾರತದಲ್ಲಿ ಈ ಕೋವಿಡ್‌ ರೂಪಾಂತರಿಯಿಂದ ಉಲ್ಬಣದ ಸಾಧ್ಯತೆ ಕಡಿಮೆ: ಚೀನಾದಲ್ಲಿ ಕೋವಿಡ್‌ ಉಲ್ಬಣಕ್ಕೆ BF.7 ರೂಪಾಂತರಿ ಬಗ್ಗೆ ವೈರಾಲಜಿಸ್ಟ್‌ ಡಾ.ಗಗನ್‌ದೀಪ್ ಕಾಂಗ್

ಚೀನಾದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಹಿಂದಿನ ಕೋವಿಡ್‌ ರೂಪಾಂತರಗಳಾದ XBB ಮತ್ತು BF.7 ಕೆಲ ಸಮಯದಿಂದ ಭಾರತದಲ್ಲಿವೆ ಮತ್ತು ಅವುಗಳಿಂದ ಹೊಸ ಪ್ರಕರಣಗಳ ಅಲೆಯನ್ನು ಭಾರತದಲ್ಲಿ ನಿರೀಕ್ಷಿಸಲಾಗುವುದಿಲ್ಲ ಎಂದು ವೈರಾಲಜಿಸ್ಟ್ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಜಠರಗರುಳಿನ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗಗನ್‌ದೀಪ್ ಕಾಂಗ್ ಹೇಳಿದ್ದಾರೆ. ಸರಣಿ ಟ್ವೀಟ್‌ಗಳಲ್ಲಿ, ಭಾರತದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿಲ್ಲ … Continued

ಧಾರವಾಹಿ ಸೆಟ್‌ನಲ್ಲಿ 20 ವರ್ಷದ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣ : ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ, ಸಹ ನಟನ ಬಂಧನ

ಮುಂಬೈ: ದೂರದರ್ಶನ ನಟಿ 20 ವರ್ಷದ ತುನಿಶಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಧಾರಾವಾಹಿಯೊಂದರ ಸೆಟ್‌ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಬಂದಿದೆ. ಪೊಲೀಸರು   ಶೀಜಾನ್ ಮೊಹಮ್ಮದ್ ಖಾನ್ ಅನ್ನು ಭಾರತೀಯ ದಂಡ ಸಂಹಿತೆಯ … Continued

ಉತ್ತರಾಖಂಡ: ‘ಮತಾಂತರ’ ಆರೋಪದ ಮೇಲೆ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ ಗುಂಪು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲಾ ಗ್ರಾಮದಲ್ಲಿ ಶುಕ್ರವಾರ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕನಿಷ್ಠ 30 ಯುವಕರ ತಂಡವೊಂದು ದೊಣ್ಣೆ ಹಿಡಿದು ದಾಳಿ ನಡೆಸಿದೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಯೆಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಮತ್ತು ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ ಆರು ಜನರನ್ನು … Continued