ಪರೀಕ್ಷೆಯಲ್ಲಿ ವಿದ್ಯಾರ್ಥಿ ಈ ರೀತಿ ಉತ್ತರ ಬರೆಯುವುದನ್ನೂ ನೋಡಿದ್ದೀರಾ… ಮತ್ತೊಬ್ಬ ಉತ್ತರ ಪತ್ರಿಕೆಯಲ್ಲೇ ನೂರರ ನೋಟುಗಳನ್ನಿಟ್ಟಿದ್ದಾನೆ…!

ಶಾಲಾ-ಕಾಲೇಜುಗಳಲ್ಲಿ ವರ್ಷವಿಡೀ ಮೋಜು ಮಸ್ತಿ ಮಾಡುವ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಉತ್ತರ ಪತ್ರಿಕೆಯಲ್ಲಿ ತಪ್ಪು ಬರೆಯುತ್ತಾರೆ. ಅದೇ, ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಇಂತಹ ವಿಷಯಗಳನ್ನೂ ಬರೆಯುತ್ತಾರೆ. ಅದು ಈಗ ಸಾಕಷ್ಟು ವೈರಲ್ ಆಗಿದೆ. ಉತ್ತರ ಪತ್ರಿಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ತಮಾಷೆ ಮಾಡುತ್ತಿದ್ದಾರೆ. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ … Continued

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಸಿಬ್ಬಂದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ತಿರುಪತಿ: ಮಂಗಳವಾರ ಆಂಧ್ರಪ್ರದೇಶದ ತಿರುಪತಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಆಕೆಗೆ ಪ್ರವೇಶ ನಿರಾಕರಿಸಿದ ನಂತರ ಈ ಘಟನೆ ನಡೆದಿದೆ. ತಿರುಪತಿ ಹೆರಿಗೆ ಆಸ್ಪತ್ರೆ ಎದುರು ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಒಬ್ಬ ಪುರುಷ ಮಹಿಳೆಗೆ … Continued

ಶ್ರದ್ಧಾ ಹತ್ಯೆ: ನ್ಯಾಯಾಲಯದಲ್ಲಿ ಕೊಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿಲ್ಲ ಎಂದ ವಕೀಲರು

ನವದೆಹಲಿ: ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ದೊಡ್ಡ ಟ್ವಿಸ್ಟ್‌ನಲ್ಲಿ, ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ವಕೀಲರು ಶ್ರದ್ಧಾಳನ್ನು ಕೊಂದಿರುವುದಾಗಿ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ನ್ಯಾಯಾಲಯದಲ್ಲಿ ಅಫ್ತಾಬ್ ಪೂನಾವಾಲಾನನ್ನು ಪ್ರತಿನಿಧಿಸುತ್ತಿರುವ ಡಿಫೆನ್ಸ್ ವಕೀಲ ಅವಿನಾಶಕುಮಾರ ಅವರು, ಆತ ತಾನೇ (ಶ್ರದ್ಧಾ) ವಾಕರ್‌ನನ್ನು ಕೊಂದಿರುವುದಾಗಿ ನ್ಯಾಯಾಲಯದಲ್ಲಿ ಅವನು ಎಂದಿಗೂ ತಪ್ಪೊಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ನಾನು … Continued

ಕಾಂಗ್ರೆಸ್‌ ಮೈತ್ರಿ ತೊರೆದು ಶಿವಸೇನೆ ದೂರವಾಗಲಿದೆಯೇ? ಸಾವರ್ಕರ್-ಹಿಂದುತ್ವದಲ್ಲಿ ರಾಜಿ ಇಲ್ಲ ಎಂದು ರಾವತ್ ಹೇಳಿಕೆ ನಂತರ ಹರಡಿದ ಊಹಾಪೋಹ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಭಾಗವಾಗಿದ್ದರೂ ಸಹ ವೀರ್‌ ಸಾವರ್ಕರ್ ಮತ್ತು ಹಿಂದುತ್ವದ ಪ್ರಮುಖ ಸೈದ್ಧಾಂತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ. ಶಿವಸೇನೆಯ ಈ ನಿಲುವು ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೇಲೆ ಪರಿಣಾಮ ಬೀರಲಿದೆಯೇ? ರಾವತ್ ಹೇಳಿಕೆಯು … Continued

ಗುಜರಾತ್ ಮೊರ್ಬಿ ತೂಗು ಸೇತುವೆ ದುರಂತದ ದಿನ 500 ಜನರ ಸಾಮರ್ಥ್ಯದ ಸೇತುವೆಗೆ 3,165 ಜನರಿಗೆ ಟಿಕೆಟ್‌ ನೀಡಲಾಗಿತ್ತು- ಆಘಾತಕಾರಿ ಮಾಹಿತಿ ಬಹಿರಂಗ…!

ಮೊರ್ಬಿ: ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆ ಕುಸಿತದ ಘಟನೆಯನ್ನು ದೊಡ್ಡ ದುರಂತ” ಎಂದು ಸುಪ್ರೀಂ ಕೋರ್ಟ್ ಕರೆದ ಒಂದು ದಿನದ ನಂತರ, ಮಂಗಳವಾರದ ವಿಧಿವಿಜ್ಞಾನ ತನಿಖೆಯ ವರದಿಯು ಸೇತುವೆ ಕುಸಿದು 132 ಜನರನ್ನು ಸಾವಿಗೆ ಕಾರಣವಾದ ಅಕ್ಟೋಬರ್ 30 ರಂದು ಜನರಿಗೆ 3,165 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ…! ಕೇಬಲ್‌ಗಳು ತುಕ್ಕು ಹಿಡಿದಿವೆ ಮತ್ತು … Continued

ಅಸ್ಸಾಂ-ಮೇಘಾಲಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು : 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಶಿಲ್ಲಾಂಗ್: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಒಬ್ಬರು ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ತಡೆಯಲು, ಈ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ಸಂಬಂಧ ಮೇಘಾಲಯ ಪೊಲೀಸರು … Continued

ಸಿಟ್ಟನ ಭರದಲ್ಲಿ ಕೊಂದೆ…: ಗೆಳತಿಯನ್ನು ಕೊಂದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿದ ಆರೋಪಿ ಆಫ್ತಾಬ್ ಪೂನಾವಾಲಾ

ನವದೆಹಲಿ: ವಿಶೇಷ ವಿಚಾರಣೆಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸಾಕೇತ್ ನ್ಯಾಯಾಲಯವು ಇಂದು, ಮಂಗಳವಾರ ಆಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಆತನ ಐದು ದಿನಗಳ ಕಸ್ಟಡಿ ಅಂತ್ಯಗೊಂಡ ನಂತರ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು. ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಅವರನ್ನುಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಇಂದು, … Continued

ಜೈಲಲ್ಲಿರುವ ದೆಹಲಿ ಸಚಿವ ಜೈನ್‌ಗೆ ಮಸಾಜ್ ಮಾಡಿದ್ದು ಜೈಲಿನಲ್ಲಿರುವ ಅತ್ಯಾಚಾರದ ಆರೋಪಿ: ಬಿಜೆಪಿ ಗಂಭೀರ ಆರೋಪ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮೇಲಿನ ವಾಗ್ದಾಳಿ ಹೆಚ್ಚಿಸಿರುವ ಬಿಜೆಪಿ ವೈರಲ್ ಆಗಿರುವ ವೀಡಿಯೊದಲ್ಲಿ ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ, ಆದರೆ ಅತ್ಯಾಚೃದ ಆರೋಪಿ ಎಂದು ಗಂಭೀರ ಆರೋಪ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ವೀಡಿಯೊಗಳಲ್ಲಿ ಮಸಾಜ್ ಮಾಡುವವರು ರಿಂಕು … Continued

ಎಎಪಿ ಶಾಸಕನ ಬೆನ್ನಟ್ಟಿ ಥಳಿಸಿದ ಪಕ್ಷದ ಕಾರ್ಯಕರ್ತರು : ದೃಶ್ಯ ಕ್ಯಾಮರಾದಲ್ಲಿ ಸೆರೆ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ದೆಹಲಿ ನಗರ ಘಟಕವು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗುಲಾಬ್ ಸಿಂಗ್ ಯಾದವ್ ಅವರನ್ನು ಹಲವು ಪಕ್ಷದ ಕಾರ್ಯಕರ್ತರು ಬೆನ್ನಟ್ಟಿ ಥಳಿಸಿದ ವೀಡಿಯೊವನ್ನು ಹಂಚಿಕೊಂಡಿದೆ. ಬಿಜೆಪಿ ಮತ್ತು ಇತರ ಟ್ವಿಟ್ಟರ್ ಹ್ಯಾಂಡ್ಲರ್‌ಗಳು ಹಂಚಿಕೊಂಡ ವೀಡಿಯೊದಲ್ಲಿ, ಗುಲಾಬ್‌ ಸಿಂಗ್ ಅವರು ಕಾರ್ಯಕರ್ತರ ಗುಂಪಿನೊಂದಿಗೆ ಬಿಸಿಯಾದ ವಾಗ್ವಾದ ಮಾಡುತ್ತಿರುವುದನ್ನು … Continued

ದೆಹಲಿ ವಿಮಾನ ನಿಲ್ದಾಣದಲ್ಲಿ ‘ಮೋಸ್ಟ್-ವಾಂಟೆಡ್’ ಖಲಿಸ್ತಾನಿ ಭಯೋತ್ಪಾದಕನ ಬಂಧನ

ನವದೆಹಲಿ: ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ “ಖಾನ್‌ಪುರಿಯಾ” ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸೋಮವಾರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 2019ರಿಂದ ತಲೆಮರೆಸಿಕೊಂಡಿದ್ದ ಕುಲ್ವಿಂದರ್ಜಿತ್, ಹಲವು … Continued