ಬಸ್‌ ಚಲಿಸುತ್ತಿರುವಾಗಲೇ ಓಡಿ ಬಂದು ತಲೆಯಿಂದ ಡಿಚ್ಚಿ ಹೊಡೆದು ಬಸ್‌ ಗಾಜು ಪುಡಿಪುಡಿ ಮಾಡಿದ ಯುವಕ : ಬೆಚ್ಚಿ ಬೀಳಿಸುವ ವೀಡಿಯೊ ವೈರಲ್‌ | ವೀಕ್ಷಿಸಿ

ಮಲಪ್ಪುರಂ: ಚಲಿಸುತ್ತಿದ್ದ ಬಸ್‌ನತ್ತ ನುಗ್ಗಿದ ವ್ಯಕ್ತಿಯೊಬ್ಬ ತಲೆಯಿಂದ ಗುದ್ದಿ ಬಸ್ಸಿನ ಗಾಜನ್ನು ಒಡೆದು ಹಾಕಿರುವ ಘಟನೆ ಕೇರಳದಲ್ಲಿ ನಡೆದಿದ್ದು ಡಿಕ್ಕಿಯ ರಭಸಕ್ಕೆ ವ್ಯಕ್ತಿ ಬಸ್ಸಿನಿಂದ ಕೆಲವು ಮೀಟರ್ ದೂರದಲ್ಲಿ ಹಾರಿ ಬಿದ್ದಿದ್ದಾನೆ. ಹೆಚ್ಚಿನ ಅಪಾಯವನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದಾನೆ. ಈ ಘಟನೆಯ ವೀಡಿಯೊ ಜನರನ್ನು ಬೆಚ್ಚಿಬೀಳಿಸಿದೆ. ಶರ್ಟ್ ಧರಿಸದ ವ್ಯಕ್ತಿ ಚಲಿಸುತ್ತಿರುವ ಬಸ್‌ನ ಗಾಜನ್ನು … Continued

ನನಗೆ, ನನ್ನ ಹೆಂಡತಿಗೆ ಚಿತ್ರಹಿಂಸೆ ನೀಡಿ ಸಾಯಿಸ್ತೇವೆ ಎಂದು ಹೆದರಿಸ್ತಿದ್ದಾರೆ’: ದೆಹಲಿ ಎಲ್-ಜಿಗೆ ಪತ್ರ ಬರೆದ ಸುಕೇಶ್, ಬೇರೆ ಜೈಲಿಗೆ ಸ್ಥಳಾಂತರಕ್ಕೆ ಒತ್ತಾಯ

ನವದೆಹಲಿ: ಎಎಪಿ ನಾಯಕರ ವಿರುದ್ಧದ ದೂರುಗಳನ್ನು ಹಿಂಪಡೆಯುವಂತೆ ಜೈಲಿನೊಳಗೆ ಸಿಆರ್‌ಪಿಎಫ್ ಸಿಬ್ಬಂದಿ ನಿರಂತರ ಬೆದರಿಕೆ ಮತ್ತು ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಕೇಶ್ ಚಂದ್ರಶೇಖರ್ ದೆಹಲಿಯ ಎಲ್-ಜಿ ವಿ.ಕೆ. ಸಕ್ಸೇನಾ ಅವರಿಗೆ  ಮತ್ತೊಮ್ಮೆ ಪತ್ರ ಬರೆದಿದ್ದು,  ತನ್ನನ್ನು ಮತ್ತು ತಮ್ಮ ಪತ್ನಿಯನ್ನು ದೆಹಲಿಯ ಹೊರಗಿನ ಮತ್ತೊಂದು ಜೈಲಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾನೆ. ಆಮ್ ಆದ್ಮಿ ಪಕ್ಷದ (ಎಎಪಿ) … Continued

ನವೆಂಬರ್ 17ಕ್ಕೆ ಹಾಜರಾಗುವಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ಗೆ ಹೊಸ ಸಮನ್ಸ್ ಜಾರಿ ಮಾಡಿದ ಇ.ಡಿ.

ನವದೆಹಲಿ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ನವೆಂಬರ್ 17ರಂದು ರಾಂಚಿಯಲ್ಲಿ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಸೊರೇನ್, 47, ನವೆಂಬರ್ 3 ರಂದು ಫೆಡರಲ್ ತನಿಖಾ ಸಂಸ್ಥೆಯಿಂದ ಆರಂಭದಲ್ಲಿ ಸಮನ್ಸ್‌ ನೀಡಲಾಯಿತು. … Continued

ಭಾರತದಲ್ಲಿ 100 ವರ್ಷಕ್ಕೂ ಮೇಲ್ಪಟ್ಟ 2.5 ಲಕ್ಷಕ್ಕೂ ಹೆಚ್ಚು ಮತದಾರರು…!

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವಕುಮಾರ್ ಭಾರತದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ 2.5 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ಬುಧವಾರ ತಿಳಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 80 ವರ್ಷ ಮೇಲ್ಪಟ್ಟ 1,83,53,347 ಮಂದಿ ಇದ್ದಾರೆ. ಶತಾಯುಷಿಗಳ ಸಂಖ್ಯೆ 2,55,598 ಎಂದು ಅಂದಾಜಿಸಲಾಗಿದೆ. ಹದಿಹರೆಯದ ಮತದಾರರ ಸಂಖ್ಯೆ (18-19) ಭಾರತದಲ್ಲಿ 1,52,34,341 ಆಗಿದ್ದರೆ, 20-29 … Continued

‘ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ’: ಬಿಆರ್‌ಎಸ್‌ ಪಕ್ಷದ ಮೇಲೆ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ವಾಗ್ದಾಳಿ

ಹೈದರಾಬಾದ್‌: ತೆಲಂಗಾಣ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಬುಧವಾರ, ನವೆಂಬರ್ 9 ರಂದು ಆಡಳಿತಾರೂಢ ಬಿಆರ್‌ಎಸ್ ಪಕ್ಷದ ಮೇಲೆ ಹೊಸ ದಾಳಿಯನ್ನು ಪ್ರಾರಂಭಿಸಿದರು. ತಮ್ಮ ದೂರವಾಣಿ ಕರೆಗಳನ್ನು ತನಗೆ ತಿಳಿಯದೆ ಟ್ಯಾಪ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಂದರರಾಜನ್, “ನನ್ನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ರಾಜ್ಯದಲ್ಲಿ ವಿಶೇಷವಾಗಿ ರಾಜ್ಯಪಾಲರನ್ನು … Continued

ಬಾಬರಿ ಮಸೀದಿ ಧ್ವಂಸ : ಅಡ್ವಾಣಿ ಇತರರ ಖುಲಾಸೆ ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಲಕ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಸೇರಿದಂತೆ 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ … Continued

ಪಂಜಾಬ್ ನ್ಯಾಶನಲ್‌ ಬ್ಯಾಂಕ್‌ ಹಗರಣ: ನೀರವ್ ಮೋದಿ ಮೇಲ್ಮನವಿ ತಿರಸ್ಕರಿಸಿದ ಲಂಡನ್‌ ಹೈಕೋರ್ಟ್; ಭಾರತಕ್ಕೆ ಹಸ್ತಾಂತರಿಸಲು ಆದೇಶ

ಲಂಡನ್‌: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸಾಲ ಹಗರಣ ಪ್ರಕರಣದಲ್ಲಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಎದುರಿಸಲು ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಹೈಕೋರ್ಟ್ ಬುಧವಾರ ಆದೇಶಿಸಿದೆ. .ಈ ವರ್ಷದ ಆರಂಭದಲ್ಲಿ ಮೇಲ್ಮನವಿ ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು … Continued

ಅಯ್ಯೋ ರಾಮಾ…ರಸ್ತೆ ದಾಟಲು ಹೋಗಿ ಬೈಕ್ ಚಕ್ರಕ್ಕೆ ಸಿಲುಕಿದ ಮಂಗ : ಸ್ಥಳಿಯರಿಂದ ರಕ್ಷಣೆ | ವೀಕ್ಷಿಸಿ

ಅತ್ಯಾಶ್ಚರ್ಯಕರ ರೀತಿಯಲ್ಲಿ ಬೈಕ್‌ನ ಮುಂದಿನ ಚಕ್ರಕ್ಕೆ ಮಂಗವೊಂದು ಸಿಕ್ಕಿಹಾಕಿಕೊಂಡಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ನ ಚಕ್ರಕ್ಕೆ ಸಿಲುಕಿದ್ದ ಕೋತಿಯೊಂದನ್ನ ಉಳಿಸಲು ಜನರ ಗುಂಪು ಸ್ಥಳಿಯರು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಉತ್ತರ ಪ್ರದೇಶದ ಬಡೋಸರಾಯ್‌ನಲ್ಲಿ ಈ ಘಟನೆ ನಡೆದಿದೆ. ಮಂಗವೊಂದು ಬೈಕ್ ಚಕ್ರದಲ್ಲಿ ನೋವಿನಿಂದ ಸಿಲುಕಿಕೊಂಡು ಹೊರಬರಲು ಹೆಣಗಾಡುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಹಗಲು … Continued

ರಾಜ್ಯಪಾಲರನ್ನು ತಕ್ಷಣವೇ ವಜಾಗೊಳಿಸಿ, ಅವರು ಅಧಿಕಾರ ನಡೆಸಲು ಅನರ್ಹ : ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ

ಚೆನ್ನೈ: ರಾಜ್ಯಪಾಲ ಆರ್.ಎನ್.ರವಿ ಅವರನ್ನು ಶಾಂತಿಗೆ ಬೆದರಿಕೆ ಎಂದು ಕರೆದಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ಜನರ ಸೇವೆ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಪದಚ್ಯುತಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ. “ರಾಜ್ಯಪಾಲ ಆರ್‌ಎನ್ ರವಿ ಅವರು ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸುವ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ” ಎಂದು ಡಿಎಂಕೆ ರಾಷ್ಟ್ರಪತಿ … Continued