ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲಿಸಿ ನಾಳೆ ಉತ್ತರ ಪ್ರದೇಶದಲ್ಲಿ ರೈತರ ಬೃಹತ್ ಸಭೆ

ಮುಜಾಫರ್‌ನಗರ: ತಮ್ಮ ಒಕ್ಕೂಟದ ಮುಖ್ಯಸ್ಥರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಪರಿಹರಿಸಲು ರೈತರ ಪ್ರಬಲ ಗುಂಪು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಸೌರಮ್ ಪಟ್ಟಣದಲ್ಲಿ ಗುರುವಾರ ಮಹತ್ವದ ಸಭೆ ಕರೆದಿದೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ನಾಯಕ ಮತ್ತು ಬಲ್ಯಾನ್ ಖಾಪ್ ಮುಖ್ಯಸ್ಥ ನರೇಶ … Continued

ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದನ್ನು ತಡೆದ ರೈತ ನಾಯಕ ನರೇಶ್ ಟಿಕಾಯತ್‌, ಐದು ದಿನಗಳ ಕಾಲಾವಕಾಶ ಕೋರಿಕೆ

ನವದೆಹಲಿ: ರೈತ ಮುಖಂಡ ನರೇಶ್ ಟಿಕಾಯತ್‌ ಅವರು ಮಂಗಳವಾರ ಹರಿದ್ವಾರಕ್ಕೆ ಆಗಮಿಸಿ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಮುಳುಗಿಸದಂತೆ ಕುಸ್ತಿಪಟುಗಳನ್ನು ತಡೆದಿದ್ದಾರೆ. ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕುಸ್ತಿಪಟುಗಳು ಗಂಗಾನದಿಯಲ್ಲಿ ಪದಕಗಳನ್ನು ಎಸೆಯಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಹರಿದ್ವಾರಕ್ಕೂ … Continued

12ನೇ ತರಗತಿ ಪಠ್ಯಪುಸ್ತಕದಿಂದ ಖಾಲಿಸ್ತಾನ್”, “ಪ್ರತ್ಯೇಕ ಸಿಖ್ ರಾಷ್ಟ್ರ ಉಲ್ಲೇಖ ತೆಗೆದುಹಾಕಿದ ಎನ್‌ ಸಿಇಆರ್‌ಟಿ

ನವದೆಹಲಿ: ಖಾಲಿಸ್ತಾನ್ ಅಥವಾ ಪ್ರತ್ಯೇಕ ಸಿಖ್ ರಾಷ್ಟ್ರದ ಉಲ್ಲೇಖಗಳು ಇನ್ನು ಮುಂದೆ ಸಿಬಿಎಸ್‌ಇಯ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಭಾಗವಾಗಿರುವುದಿಲ್ಲ. “ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ವಿಷಯ” ಎಂದು ಫ್ಲ್ಯಾಗ್ ಮಾಡಿದ ಉನ್ನತ ಸಿಖ್ ಮಂಡಳಿಯ (SGPC) ಆಕ್ಷೇಪಣೆಗಳನ್ನು ಅನುಸರಿಸಿ ಭಾಗಗಳನ್ನು ತೆಗೆದುಹಾಕಲಾಗಿದೆ. ದೂರಿನ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಅವರ ಶಿಫಾರಸಿನ … Continued

ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತು ಅವಳನ್ನೇ ವಿವಾಹವಾದ ವರ…!!

ಪಾಲಿ : ಒಂದು ಅಸಾಮಾನ್ಯ ಪ್ರಕರಣವೊಂದರಲ್ಲಿ ವರನು ಮದುವೆ ಮಂಟಪದಿಂದ ಓಡಿ ಹೋದ ತನ್ನ ವಧುವಿಗಾಗಿ 13 ದಿನಗಳವರೆಗೆ ಮಂಟಪದಲ್ಲೇ ಕಾದು ಕುಳಿತು ನಂತರ ಅವಳನ್ನೇ ಮದುವೆಯಾಗಿದ್ದಾನೆ…! ವಧು ತನ್ನ ಮದುವೆಗಿಂತ ಸ್ವಲ್ಪ ಮೊದಲು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು ಮತ್ತು ಅಂತಿಮವಾಗಿ 13 ದಿನಗಳ ನಂತರ ತನಗೆ ನಿಶ್ಚಯವಾಗಿದ್ದ ಅದೇ ವರನನ್ನು ಅದೇ ಮದುವೆ ಮಂಟಪದಲ್ಲಿ … Continued

ಈವರೆಗೆ 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ. ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಿದ ಎಸ್‌ಬಿಐ

ನವದೆಹಲಿ: ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರದ ನಂತರ, ಭಾರತದ ಅತಿದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 14,000 ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ದಿನೇಶಕುಮಾರ ಖಾರಾ ಪ್ರಕಟಿಸಿದ್ದಾರೆ. “ಸುಮಾರು 14,000 ಕೋಟಿ ರೂಪಾಯಿ ಮೌಲ್ಯದ 2,000 ರೂ.ಗಳ ನೋಟುಗಳನ್ನು ಖಾತೆಗಳಿಗೆ … Continued

ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು ಧನೋರ್ಕರ್ ನಿಧನ

ಮುಂಬೈ: ಮಹಾರಾಷ್ಟ್ರದ ಕಾಂಗ್ರೆಸ್‌ನ ಏಕೈಕ ಲೋಕಸಭಾ ಸದಸ್ಯ ಬಾಲು (ಸುರೇಶ) ಧನೋರ್ಕರ್ ಅವರು ಮಂಗಳವಾರ ಮುಂಜಾನೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಬಾಲು ಧನೋರ್ಕರ್ ಅವರಿಗೆ 47 ವರ್ಷ ವಯಸ್ಸಾಗಿತ್ತು ಮತ್ತು ಅವರು ಪತ್ನಿ ಪ್ರತಿಭಾ, ಶಾಸಕರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. “ಕಳೆದ ವಾರ ಅವರನ್ನು ಮೂತ್ರಪಿಂಡದ ಕಲ್ಲುಗಳ … Continued

ಮಧ್ಯಪ್ರದೇಶ ಉದ್ಯಾನವನದಲ್ಲಿ 6 ಚಿರತೆಗಳು ಸತ್ತ ನಂತರ ನಮೀಬಿಯಾಕ್ಕೆ ಅಧಿಕಾರಿಗಳ ಅಧ್ಯಯನ ಪ್ರವಾಸ

ಭೋಪಾಲ್: ಚಿರತೆಯ ಪುನರುಜ್ಜೀವನ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುವುದು, ಅಲ್ಲಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ತರಲಾಗುವುದು ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ ಯಾದವ್ ಹೇಳಿದ್ದಾರೆ. ಸೋಮವಾರ ಭೋಪಾಲ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಯಾದವ್ ಅವರು ಜೂನ್ … Continued

ಬಸ್ ಕಮರಿಗೆ ಉರುಳಿ 10 ಮಂದಿ ಸಾವು, 20 ಮಂದಿಗೆ ಗಾಯ

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಜ್ಜರ್ ಕೋಟ್ಲಿ ಬಳಿ ಮಂಗಳವಾರ ಬಸ್ ಕಮರಿಗೆ ಬಿದ್ದ ಪರಿಣಾಮ 10 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸಮಯದಲ್ಲಿ 75 ಪ್ರಯಾಣಿಕರನ್ನು ಹೊತ್ತ ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುವವರಾಗಿದ್ದರು. ಅವರೆಲ್ಲ ಮಾತಾ ವೈಶ್ನವೋದೇವಿ ಮಂದಿರಕ್ಕೆ ತೆರಳುತ್ತಿದ್ದರು. ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. … Continued

1 ಲಕ್ಷ ಬೆಲೆಯ ಮೊಬೈಲ್ ಅಣೆಕಟ್ಟೆ ನೀರಿನಲ್ಲಿ ಬಿತ್ತು: 21 ಲಕ್ಷ ಲೀಟರ್ ನೀರು ಹೊರಬಿಟ್ಟು ತನ್ನ ಮೊಬೈಲ್ ಹುಡುಕಿಸಿದ ಅಧಿಕಾರಿ…!

ಯಾವುದು ಹೆಚ್ಚು ಅಮೂಲ್ಯ ..? ಮೊಬೈಲ್ ಫೋನ್ ಅಥವಾ ಒಣಗಿದ ಹೊಲಗಳಿಗೆ ಸಂಗ್ರಹಿಸಿಟ್ಟ ಲಕ್ಷಾಂತರ ಗ್ಯಾಲನ್ ನೀರು? ಛತ್ತೀಸ್‌ಗಢದ ವಿಲಕ್ಷಣ ಘಟನೆಯೊಂದರಲ್ಲಿ, ಅಣೆಕಟ್ಟಿನ ನೀರಿನಲ್ಲಿ ಬಿದ್ದ ಸರ್ಕಾರಿ ಅಧಿಕಾರಿಯ ದುಬಾರಿ ಫೋನ್ ಅನ್ನು ಮರಳಿ ಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಹೊರಕ್ಕೆ ಬಿಡಲಾಗಿದೆ …! ಹೇಳಿಕೆಯಲ್ಲಿ, ಅಧಿಕಾರಿಯು ನೀರು ‘ಬಳಕೆಗೆ ಯೋಗ್ಯವಾಗಿಲ್ಲ’ ಮತ್ತು … Continued

ಅಮಿತ್ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಬಂದೂಕು ಸಮೇತ 25 ಮಂದಿ ಬಂಧನ

ಇಂಫಾಲ: ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ 25 ಶಸ್ತ್ರಸಜ್ಜಿತ ವ್ಯಕ್ತಿಗಳನ್ನು ಸೇನೆಯ ಬಹು ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್‌ಗಳು (MVCP) ವಶಪಡಿಸಿಕೊಂಡಿವೆ ಮತ್ತು ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಅಧಿಕೃತ ಹೇಳಿಕೆ ತಿಳಿಸಿದೆ. .”ಇಂಫಾಲದ ಪೂರ್ವ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಸನಾಸಾಬಿ, ಗ್ವಾಲ್ಟಾಬಿ ಮತ್ತು … Continued