ಭಾರತದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ತಿಗೆ ಬಂದ ನಿತಿನ್ ಗಡ್ಕರಿ..!

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಹಸಿರು ಹೈಡ್ರೋಜನ್ ಚಾಲಿತ (green hydrogen-powered) ಕಾರಿನಲ್ಲಿ ಸಂಸತ್ತಿಗೆ ಆಗಮಿಸಿದರು. ಈ ಕಾರಿನಲ್ಲಿ ಸಚಿವರು ತಮ್ಮ ನಿವಾಸದಿಂದ ಸಂಸತ್ತಿಗೆ ಪ್ರಯಾಣಿಸಿದರು. ಇದು ಭಾರತದಲ್ಲಿ ಮೊದಲನೆಯದು ಮತ್ತು ಗಡ್ಕರಿ ಇದು ಭಾರತದ ಭವಿಷ್ಯ ಎಂದು ಶ್ಲಾಘಿಸಿದ್ದಾರೆ. ಹೈಡ್ರೋಜನ್ ಕಾರ್ ಭವಿಷ್ಯ ಎಂದು ನಿತಿನ್ ಗಡ್ಕರಿ ಹೇಳಿದರು, … Continued

ಆಶಿಶ್ ಮಿಶ್ರಾಗೆ ಜಾಮೀನು ರದ್ದು ಕೋರಿ ಸಲ್ಲಿಸಿರುವ ಎಸ್‌ಐಟಿ ವರದಿಗಳಿಗೆ ಉತ್ತರಿಸುವಂತೆ ಉತ್ತರ ಪ್ರದೇಶಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಎಸ್‌ಐಟಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ನಿವೃತ್ತ ನ್ಯಾಯಾಧೀಶರ ಎರಡು ವರದಿಗಳಿಗೆ ಏಪ್ರಿಲ್ 4 ರೊಳಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ, ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಜಾಮೀನು ರದ್ದುಗೊಳಿಸುವಂತೆ … Continued

100ಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಿ ಹತ್ಯೆ: ದೂರು ದಾಖಲು

ತೆಲಂಗಾಣದ ಸಿದ್ದಿಪೇಟ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತ ಅದುಲಾಪುರಂ ಗೌತಮ್ ಹೇಳಿದ್ದಾರೆ. ಗ್ರಾಮದ ಸರಪಂಚ ಮತ್ತು ಗ್ರಾಮ ಪಂಚಾಯತ ಕಾರ್ಯದರ್ಶಿ ನಾಯಿಗಳನ್ನು ಕೊಂದಿದ್ದಾರೆ ಎಂದು ಆರೋಪಿಸಿ ಗೌತಮ್ ದೂರು ದಾಖಲಿಸಿದ್ದಾರೆ. ಗೌತಂ ಅವರು ಸ್ಟ್ರೇ ಅನಿಮಲ್ ಫೌಂಡೇಶನ್ ಆಫ್ ಇಂಡಿಯಾದ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. ದೂರಿನ ಮೇರೆಗೆ ಪ್ರಕರಣ … Continued

ಇಂದೂ ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, 9 ದಿನದಲ್ಲಿ 5.60 ರೂ.ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬುಧವಾರ (ಮಾರ್ಚ್ 30)ವೂ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು 8ನೇ ಬಾರಿಗೆ ದರ ಏರಿಕೆ ಮಾಡಲಾಗಿದ್ದು, ಕಳೆದ 9 ದಿನಗಳಲ್ಲಿ ಲೀಟರ್‌ಗೆ 5.60 ರೂ.ಗಳಷ್ಟು ಹೆಚ್ಚಾಗಿದೆ. . ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮಕ್ಕೆ … Continued

ಆಘಾತಕಾರಿ…ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿದ್ದ ವಿಕಲಚೇತನನಿಗೆ ದೊಣ್ಣೆಯಿಂದ ಥಳಿಸಿದ ದಂಪತಿ…ದೃಶ್ಯ ವೀಡಿಯೊದಲ್ಲಿ ಸೆರೆ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯನ್ನು ಪುರುಷ ಮತ್ತು ಮಹಿಳೆ ಅಮಾನುಷವಾಗಿ ಥಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 27 ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಾದ ಜುಗೇಂದ್ರ ಮತ್ತು … Continued

ಮನೆಯಲ್ಲಿದ್ದ ಪ್ರಧಾನಿ ಮೋದಿ ಫೋಟೋ ತೆಗೆಯದಿದ್ದರೆ ಹೊರಹಾಕುವ ಬೆದರಿಕೆ : ಜಮೀನುದಾರನ ವಿರುದ್ಧ ಪೊಲೀಸರ ಮೊರೆ ಹೋದ ವ್ಯಕ್ತಿ..!

ಮಧ್ಯಪ್ರದೇಶದ ಇಂದೋರ್‌ನ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆಯದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ವಿಚಾರಣೆ ಅಹವಾಲು ವೇದಿಕೆಯನ್ನು ಸಂಪರ್ಕಿಸಿದ್ದಾರೆ. ಇಂದೋರ್‌ನ ಪಿರ್ ಗಲಿ ನಿವಾಸಿ ಯೂಸುಫ್ ಅವರು ಮಂಗಳವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಘಾತಕಾರಿ ದೂರು ನೀಡಿದ್ದಾರೆ. ಪ್ರಧಾನಿ ಮೋದಿಯವರ ಸಿದ್ಧಾಂತದಿಂದ ಪ್ರೇರಿತರಾದ ಯೂಸುಫ್ ಅವರು … Continued

ಹೈದರಾಬಾದ್ ಶಾಕರ್..: ಬ್ಯಾಂಕ್​ ಸಿಬ್ಬಂದಿ ನಿರ್ಲಕ್ಷ್ಯದಿಂದ 18 ತಾಸು ಕಾಲ ಬ್ಯಾಂಕ್‌ ಲಾಕರ್​​ ಕೋಣೆಯಲ್ಲಿ ಕಳೆದ ಮಧುಮೇಹ ಕಾಯಿಲೆಯ 89ರ ವೃದ್ಧ..!

ಹೈದರಾಬಾದ್‌: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ 89 ವರ್ಷದ ವ್ಯಕ್ತಿಯೊಬ್ಬರು ಹೈದರಾಬಾದ್‌ನಲ್ಲಿ ಬ್ಯಾಂಕ್‌ನ ಲಾಕರ್ ಕೋಣೆಯಲ್ಲಿ ರಾತ್ರಿ ಕಳೆಯಬೇಕಾಯಿತು. ಸೋಮವಾರ, ಮಾರ್ಚ್ 28 ರಂದು ಸಿಬ್ಬಂದಿ ಆವರಣಕ್ಕೆ ಬೀಗ ಹಾಕಿ ಹೊರಟುಹೋದ ನಂತರ ವ್ಯಕ್ತಿ 18 ಗಂಟೆಗಳ ಕಾಲ ಬ್ಯಾಂಕ್‌ನಲ್ಲಿ ಕಳೆಯಬೇಕಾಯಿತು. ಈ ಆಘಾತಕಾರಿ ಘಟನೆಯು ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ … Continued

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿಗೆ ಆಹ್ವಾನ

ಮುಂಬೈ : 1990 ರಲ್ಲಿ ಕಾಶ್ಮೀರ್ ಪಂಡಿತರು ಅಲ್ಲಿನ ಮುಸ್ಲಿಂ ಭಯೋತ್ಪಾದಕರಿಂದ ಅನುಭವಿಸಿದ ನರಕವನ್ನು ಎಳೆ ಎಳೆಯಾಗಿ ತೋರಿಸಿದ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶಕ ವಿವೇಕ ಅಗ್ನಿಹೋತ್ರಿಗೆ ಈಗ ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ತನಗೆ ತನ್ನ ಪತ್ನಿ ಪಲ್ಲವಿಗೆ ಬ್ರಿಟನ್ ಸಂಸತ್​ನವರು ಆಹ್ವಾನಿಸಿದ್ದಾರೆ ಎಂದು ಈ ಬಗ್ಗೆ ಸ್ವತಃ … Continued

ಕೊನೆಗೂ ಬರೆಹರಿದ 50 ವರ್ಷಗಳಷ್ಟು ಹಳೆಯದಾದ ಗಡಿ ವಿವಾದ: ಒಪ್ಪಂದಕ್ಕೆ ಅಸ್ಸಾಂ-ಮೇಘಾಲಯ ಸರ್ಕಾರಗಳು ಸಹಿ

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ತಮ್ಮ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯದ ಇತರ … Continued

1957ರಿಂದ 1971: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 6 ಬಾರಿ ವಿಟೋ ಅಧಿಕಾರ ಬಳಸಿ ಭಾರತದ ಹಿತಾಸಕ್ತಿ ಕಾಪಾಡಿದ್ದ ರಷ್ಯಾ, ಆರು ಬಾರಿಯೂ ಭಾರತ ವಿರೋಧಿ ನಿಲುವು ತಾಳಿದ್ದ ಅಮೆರಿಕ..! ಇಲ್ಲಿದೆ ಮಾಹಿತಿ

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ರಷ್ಯಾ ವಿರುದ್ಧ ತರಲಾದ ಖಂಡನಾ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ. ಕೆಲವು ವಲಯಗಳಲ್ಲಿ ಇದನ್ನು ಟೀಕಿಸಲಾಗಿದೆ. ಆದರೆ ಹಿಂದಿನ ಘಟನೆ ಅವಲೋಕಿಸಿದ ನಂತರ, ಭಾರತದ ಯಾಕೆ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನ ಸೋವಿಯತ್ ಯೂನಿಯನ್ (USSR) ಮತ್ತು ಇಂದಿನ … Continued