7 ತಿಂಗಳಲ್ಲಿ 3 ಬಾರಿ ಕಚ್ಚಿದ ನಾಗರಹಾವು…ಮೂರನೇ ಸಲ ಪ್ರಾಣವನ್ನೇ ತೆಗೆಯಿತು..!

ಆದಿಲಾಬಾದ್ (ತೆಲಂಗಾಣ)​: ತೀರ ಅಪರೂಪದ ಘಟನೆಯೊಂದರಲ್ಲಿ ಯುವತಿಗೆ ಬೇರೆ ಬೇರೆ ಸಮಯದಲ್ಲಿ ಅಂದರೆ ಏಳು ತಿಂಗಳಲ್ಲಿ ನಾಗರ ಹಾವು ಮೂರು ಸಲ ಕಚ್ಚಿದೆ, ಎರಡು ಸಲ ಬದುಕಿದೆ ಹುಡುಗಿ ಮೂರನೇ ಸಲ ಕಚ್ಚಿದಾಗ ಪ್ರಾಣ ಕಳೆದುಕೊಂಡಿದ್ದಾಳೆ ಎಂದಿ ಈಟವಿ ಭಾರತ್‌ ವರದಿ ಮಾಡಿದೆ. ವರದಿ ಪ್ರಕಾರ, ಈ ಘಟನೆ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ನಡೆದ ಬಗ್ಗೆ … Continued

ತನ್ನ ಅಪ್ರಾಪ್ತ ವಿದ್ಯಾರ್ಥಿ ಜೊತೆ ಓಡಿಹೋಗಿ ಮದುವೆ ಮಾಡಿಕೊಂಡ ಶಿಕ್ಷಕಿ..! ಬಂಧನ

ತಮಿಳುನಾಡು: ಮಕ್ಕಳಿಗೆ ಪಾಠ ಮಾಡುತ್ತಾ ಬದುಕಿನ ದಾರಿ ತೋರಬೇಕಿದ್ದ ಶಿಕ್ಷಕಿಯೇ ಈಗ ಅಪ್ರಾಪ್ತನನ್ನು ಮದುವೆಯಾಗಿ ಜೈಲು ಸೇರಿದ್ದಾಳೆ…! ಅಪ್ರಾಪ್ತ ವಯಸ್ಸಿನ ತನ್ನ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿ ಬೇರೆಡೆಗೆ ಕರೆದೊಯ್ದು ದೇವಸ್ಥಾನದಲ್ಲಿ ಮದ್ವೆ ಆಗಿ ಈಗ ಕಂಬಿ ಎಣಿಸುತ್ತಿದ್ದಾಳೆ. ಇಂತಹ ವಿಲಕ್ಷಣ ಘಟನೆ ನಡೆದಿದ್ದು ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ. ಅಪ್ರಾಪ್ತ ವಿದ್ಯಾರ್ಥಿಯನ್ನ ಮದುವೆಯಾದ ಶಿಕ್ಷಕಿ ಶರ್ಮಿಳಾ, ಖಾಸಗಿ ಶಾಲೆಯಲ್ಲಿ … Continued

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಪ್ರತಿಭಟಿಸಿ ಮಾ.28, 29ರಂದು ಭಾರತ್ ಬಂದ್: 20 ಕೋಟಿ ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆ- ಕೇಂದ್ರ ಕಾರ್ಮಿಕ ಸಂಘಗಳು

ನವದೆಹಲಿ: ಕೇಂದ್ರದ “ಕಾರ್ಮಿಕ ವಿರೋಧಿ’ ನೀತಿಗಳನ್ನು ಪ್ರತಿಭಟಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28ರಂದು ಬೆಳಿಗ್ಗೆ 7ರಿಂದ ಮಾರ್ಚ್ 30ರ ಬೆಳಿಗ್ಗೆ 7ರ ವರೆಗೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ಕಾರ್ಮಿಕರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ಮತ್ತು … Continued

ಬಿರ್ಭೂಮ್ ಸಜೀವ ದಹನ ಪ್ರಕರಣ: : ಎಫ್‌ಐಆರ್‌ನಲ್ಲಿ 21 ಮಂದಿ ಹೆಸರಿಸಿದ ಸಿಬಿಐ

ಕೋಲ್ಕತ್ತಾ: ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಎಫ್‌ಐಆರ್‌ನಲ್ಲಿ ಬಿರ್ಭೂಮ್ ಬೆಂಕಿ ಹಚ್ಚಿದ ಪ್ರಕರಣದಲ್ಲಿ 21 ಶಂಕಿತರನ್ನು ಹೆಸರಿಸಿದೆ. ಮಾರ್ಚ್ 21 ರಂದು ಪಶ್ಚಿಮ ಬಂಗಾಳದ ಬಿರ್ಭೂಮ್‌ನ ಬೊಗ್ಟುಯಿ ಗ್ರಾಮದಲ್ಲಿ, ದುಷ್ಕರ್ಮಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದರು. ಸ್ಥಳೀಯ ಪಂಚಾಯತದ ಟಿಎಂಸಿ ‘ಉಪ-ಪ್ರಧಾನ’ ಆಗಿದ್ದ … Continued

ಉತ್ತರ ಪ್ರದೇಶದ ಮದರಸಾಗಳಲ್ಲಿ ಈಗ ರಾಷ್ಟ್ರಗೀತೆ ಹಾಡುವುದು ಕಡ್ಡಾಯ

ಲಕ್ನೋ: ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿಯು ಉತ್ತರಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ. ಗುರುವಾರದ ಸಭೆಯಲ್ಲಿ, ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯು ಮದರಸಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಂಡಿತು. ತಮ್ಮ ದೈನಂದಿನ ತರಗತಿಗಳನ್ನು ಪ್ರಾರಂಭಿಸುವ ಮೊದಲು, ಉತ್ತರ ಪ್ರದೇಶದ ಮದರಸಾದ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಪಠಿಸುತ್ತಾರೆ. ಅವರ ಬೆಳಗಿನ ಪ್ರಾರ್ಥನೆಯೊಂದಿಗೆ ರಾಷ್ಟ್ರಗೀತೆಯನ್ನು … Continued

10 ಕಿಮೀ ದೂರ ಮಗಳ ಶವ ಹೊತ್ತೊಯ್ದ ವ್ಯಕ್ತಿ…ತನಿಖೆಗೆ ಆದೇಶ

ಅಂಬಿಕಾಪುರ (ಛತ್ತೀಸ್‌ಗಢ) : ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವೀಡಿಯೊವನ್ನು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಲಖನ್‌ಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಬಾಲಕಿ … Continued

ಬಾಲಕಿಯ ರುಂಡ ಕತ್ತರಿಸಿ, ಕೊಡಲಿ-ಕತ್ತರಿಸಿದ ತಲೆ ಹಿಡಿದುಕೊಂಡು ಗ್ರಾಮದಲ್ಲಿ ಅಡ್ಡಾಡಿದ ವ್ಯಕ್ತಿ..!

ಸಂಬಲ್‌ಪುರ: ಇಲ್ಲಿನ ಕಳಸದ ಎಂಬಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಯ ಶಿರಚ್ಛೇದ ಮಾಡಿ, ಅಪ್ರಾಪ್ತ ಬಾಲಕಿಯ ತುಂಡರಿಸಿದ ತಲೆಯನ್ನು ಹಿಡಿದುಕೊಂಡು ಗ್ರಾಮದಲ್ಲಿ ಸಂಚರಿಸಿದ್ದು, ಈ ಭೀಭತ್ಸ ಘಟನೆಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಯನ್ನು ಕಳಸದ 30 ವರ್ಷದ ಪ್ರಶಾಂತ್ ಬಗರ್ ಎಂದು ಗುರುತಿಸಲಾಗಿದೆ. ಪೊಲೀಸರು ಬಗರ್ ನನ್ನು ಬಂಧಿಸಿದ್ದು, ಈ ಭೀಕರ ಹತ್ಯೆಯ ಹಿಂದಿನ … Continued

2024ರ ಚುನಾವಣೆ ಮೇಲೆ ಬಿಜೆಪಿಯ ಕಣ್ಣು, ಉತ್ತರ ಪ್ರದೇಶ ಕ್ಯಾಬಿನೆಟ್ ರಚನೆಯಲ್ಲಿ ಜಾತಿ ಲೆಕ್ಕಾಚಾರ, 9 ದಲಿತರು, 20 ಒಬಿಸಿಗಳು, 21 ಮೇಲ್ವರ್ಗದವರಿಗೆ ಪ್ರಾತಿನಿಧ್ಯ

ಲಕ್ನೋ: ಭಾರತೀಯ ಜನತಾ ಪಕ್ಷವು ಐತಿಹಾಸಿಕ ಚುನಾವಣಾ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಕೂಡ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದಾರೆ. ಸಾಂಪ್ರದಾಯಿಕವಾಗಿ ಬ್ರಾಹ್ಮಣರು ಮತ್ತು ಠಾಕೂರ್‌ಗಳನ್ನು ತನ್ನ ಪ್ರಮುಖ ಮತದ ಮೂಲವಾಗಿ ಹೊಂದಿದ್ದ ಬಿಜೆಪಿ, ಈಗ ದಲಿತರನ್ನು ಓಲೈಸಲು ಬಹಳ ಪ್ರಯತ್ನ ಮಾಡಿದೆ, ಜೊತೆಗೆ ನಿರ್ಣಾಯಕ … Continued

ಕೆಲವೇ ಸೆಕೆಂಡುಗಳಲ್ಲಿ ಎರಡು ಬಾರಿ ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಪಾರಾದ ಬಾಲಕ..! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಣ್ಣೂರು (ಕೇರಳ): ಶಾಲಾ ಬಾಲಕನೊಬ್ಬ ಸಾವಿನ ಮನೆ ಕದತಟ್ಟಿ ವಾಪಸ್ ಬಂದ ಘಟನೆಯ ವೀಡಿಯೋ ವೈರಲ್‌ ಆಗಿದೆ. 8 ವರ್ಷದ ಬಾಲಕನೊಬ್ಬ ಕೆಲವೇ ಸೆಕೆಂಡುಗಳಲ್ಲಿ ಒಂದಲ್ಲ ಎರಡು ಬಾರಿ ಸಾವಿನಿಂದ ಪಾರಾಗಿದ್ದಾನೆ…! ಒಂದು ಕ್ಷಣ ತಡವಾಗಿದ್ದರೂ ಬಾಲಕ ಬಸ್ ಚಕ್ರದ ಅಡಿಗೆ ಸಿಲುಕಿ, ಭೀಕರವಾಗಿ ಸಾವಿಗೀಡಾಗುತ್ತಿದ್ದ. ಆದರೆ ಅದೃಷ್ಟವಶಾತ್‌ ಪಾರಾಗಿದ್ದಾನೆ. ಅದಕ್ಕೂ ಮೊದಲು ಬೈಕ್‌ಗೆ ಡಿಕ್ಕಿ … Continued

ಗ್ರಾಹಕರಿಗೆ ಶಾಕ್… ಇಂದು ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ.. ಐದು ದಿನದಲ್ಲಿ ಲೀಟರಿಗೆ 3.10 ರೂ. ಹೆಚ್ಚಳ

ನವದೆಹಲಿ: ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು (ಮಾ.26) ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಪ್ರತಿ ಲೀಟರಿಗೆ ಮತ್ತೆ 80 ಪೈಸೆ ಏರಿಕೆಯಾಗಿದೆ. ಐದು ದಿನಗಳಲ್ಲಿ ಮಾ. 24 ಒಂದು ದಿನ ಮಾತ್ರ ಇಂಧನ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಮಾರ್ಚ್​ 22 ಮತ್ತು ಮಾ.23ರಂದು ಬೆಲೆ ಏರಿಕೆಯಾಗಿತ್ತು. ಒಂದು … Continued