ಭಾರತ-ರಷ್ಯಾ ಸಂಬಂಧಗಳು ವರ್ಷಗಳಿಂದ ಪರಸ್ಪರ ಗಟ್ಟಿಯಾಗಿ ವಿಕಸನಗೊಂಡಿದ್ದು ಹೇಗೆ..? ಒಂದು ಅವಲೋಕನ..

ನವದೆಹಲಿ: ಉಕ್ರೇನ್‌ನಲ್ಲಿನ ಯುದ್ಧವು ಪಶ್ಚಿಮ ಮತ್ತು ರಷ್ಯಾದ ನಡುವಿನ ಸಂಬಂಧಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಭಾರತವನ್ನು ರಾಜತಾಂತ್ರಿಕ  ಹಗ್ಗದ ಮೇಲೆ ನಡೆಯುವಂತೆ ಮಾಡಿದೆ. ಮತ್ತು ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸಂಬಂಧಗಳು ನಡೆದು ಬಂದ ದಾರಿಯನ್ನು ಗಮನಿಸಿದರೆ, ನವದೆಹಲಿಗೆ ಯಾವುದೇ ಸುಲಭವಾದ ಬೇರೆ ಆಯ್ಕೆಗಳಿಲ್ಲ ಎಂಬುದು ಗೋಚರವಾಗುತ್ತದೆ. ಅಗತ್ಯವಿದ್ದಾಗ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಪರಸ್ಪರ … Continued

ಭೀಮಾ ಕೋರೆಗಾಂವ್ ಪ್ರಕರಣ: ಮೂವರು ಆರೋಪಿಗಳ ಡಿಫಾಲ್ಟ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಕ್ರಾಂತಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫೆರೇರಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಅವರಿಗೆ ಡಿಫಾಲ್ಟ್ ಜಾಮೀನು ನಿರಾಕರಿಸಿ ಬಾಂಬೆ ಹೈಕೋರ್ಟ್ 2021ರ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಿಶೀಲಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂಧೆ ಮತ್ತು … Continued

ಹರ್ಯಾಣ ವಿಧಾನಸಭೆಯಲ್ಲಿ ಮತಾಂತರ ತಡೆ ಮಸೂದೆ ಅಂಗೀಕಾರ; ಕಾಂಗ್ರೆಸ್ ಸಭಾತ್ಯಾಗ

ಚಂಡೀಗಡ: ಕಾಂಗ್ರೆಸ್‌ನ ವಿರೋಧ ಮತ್ತು ಸಭಾತ್ಯಾಗದ ನಡುವೆ ಹರ್ಯಾಣ ವಿಧಾನಸಭೆಯು ಮಂಗಳವಾರ ಮತಾಂತರ ತಡೆ ಮಸೂದೆ 2022 ಅನ್ನು ಅಂಗೀಕರಿಸಿತು. ಮಾರ್ಚ್ 4 ರಂದು ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ತಪ್ಪು ನಿರೂಪಣೆ, ಬಲವಂತ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ ವಿವಾಹದ ಮೂಲಕ ನಡೆಯುವ … Continued

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಕಾಶ್ಮೀರ ರಾಜಮನೆತನದ ಹರಿ ಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್

ನವದೆಹಲಿ: ಮಾಜಿ ರಾಜ್ಯಪಾಲ ಕರಣ್ ಸಿಂಗ್ ಪುತ್ರ ಹಾಗೂ ಕಾಶ್ಮೀರ ರಾಜಮನೆತನದ ಹರಿ ಸಿಂಗ್ ಅವರ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಅವರು ಇಂದು, ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ತಳಮಟ್ಟದ ಸಂಪರ್ಕ ಕಡಿತಗೊಂಡಿದೆ” ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ರಾಜೀನಾಮೆಯಲ್ಲಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಶಾಸಕಾಂಗ ಮಂಡಳಿ ಸದಸ್ಯ (ಎಂಎಲ್‌ಸಿ) … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಿಎಂ ಉದ್ಧವ್ ಠಾಕ್ರೆ ಪತ್ನಿ ಸಹೋರದನ ಕಂಪನಿ ಮೇಲೆ ಇಡಿ ದಾಳಿ, ಆಸ್ತಿ ಮುಟ್ಟುಗೋಲು

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿಯ ಸಹೋದರನ ಒಡೆತನದ ಕಂಪನಿಯ 6.45 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ತಿಳಿಸಿದೆ. ಶ್ರೀಧರ್ ಮಾಧವ್ ಪಾಟಂಕರ್ ಒಡೆತನದ ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌ನ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ … Continued

ವಿಶ್ವದ 100 ಅತ್ಯಂತ ಕಲುಷಿತ ನಗರಗಳಲ್ಲಿ 63 ನಗರಗಳು ಭಾರತದಲ್ಲೇ ಇವೆ..!

ನವದೆಹಲಿ: 2021ರಲ್ಲಿ ಭಾರತದ ವಾಯು ಮಾಲಿನ್ಯವು ಹದಗೆಟ್ಟಿದೆ ಎಂದು ಸ್ವಿಸ್ ಸಂಸ್ಥೆಯಾದ IQAir ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟ ವರದಿ ತಿಳಿಸಿದೆ. ಇದು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಮೂರು ವರ್ಷಗಳ ಪ್ರವೃತ್ತಿಯನ್ನು ಕೊನೆಗೊಳಿಸಿದೆ. ಸೂಕ್ಷ್ಮದರ್ಶಕ PM2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ ಸರಾಸರಿ ವಾಯು ಮಾಲಿನ್ಯವು ಪ್ರತಿ ಘನ ಮೀಟರ್‌ಗೆ 58.1 ಮೈಕ್ರೊಗ್ರಾಮ್ ಆಗಿದೆ, ಇದು ವಿಶ್ವ … Continued

ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೋವಿಡ್‌-19 ವೈರಸ್ಸಿನ ಉಪರೂಪಾಂತರಿ ಸ್ಟೆಲ್ತ್ ಓಮಿಕ್ರಾನ್ BA.2…ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ಕೋವಿಡ್‌-19 ವೈರಸ್ಸಿನ ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿ ಬಿಎ.2 ಅಮೆರಿಕದಲ್ಲಿ ತನ್ನ ನೆಲೆ ಸ್ಥಾಪಿಸುವುದನ್ನು ಮುಂದುವರೆಸಿದೆ. ಹೆಚ್ಚು ಸಾಂಕ್ರಾಮಿಕ ಬಿಎ.2 ಉಪ ರೂಪಾಂತರಿಯಿಂದಾಗಿ ಚೀನಾ, ಪಶ್ಚಿಮ ಯುರೋಪ್‌ನಲ್ಲಿ ಕೋವಿಡ್‌-19 ಮತ್ತೆ ಉಲ್ಬಣಗೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋ ಮೂಲದ ಜೀನೋಮಿಕ್ಸ್ ಸಂಸ್ಥೆಯಾದ ಹೆಲಿಕ್ಸ್, BA.2 ರೂಪಾಂತರವನ್ನು ಜನವರಿ ಆರಂಭದಲ್ಲಿ ಅಮೆರಿಕದಲ್ಲಿ ಮೊದಲು … Continued

ಹದಗೆಟ್ಟ ಲಾಲು ಪ್ರಸಾದ್ ಯಾದವ್ ಆರೋಗ್ಯ, ದೆಹಲಿ ಏಮ್ಸ್‌ಗೆ ಸ್ಥಳಾಂತರ

ರಾಂಚಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ನಿಂದ ದೆಹಲಿಯ ಏಮ್ಸ್‌ಗೆ ಕರೆದೊಯ್ಯಲಾಗುತ್ತಿದೆ. ಅವರಿಗೆ ಹೃದಯ ಮತ್ತು ಮೂತ್ರಪಿಂಡದಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ಕಳುಹಿಸಲಾಗುತ್ತಿದೆ. ಜೈಲಿನ ಅಧಿಕಾರಿಗಳು (ದಿನಾಂಕ) … Continued

ಪಶ್ಚಿಮ ಬಂಗಾಳ: ಪಂಚಾಯತ ನಾಯಕನ ಹತ್ಯೆಯ ನಂತರ 8 ಜನರ ಸಜೀವ ದಹನ ಮಾಡಿದ ಗುಂಪು..

ಕೋಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 8 ಜನರು ಸಜೀವ ದಹನವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿರ್ಭೂಮ್‌ನಲ್ಲಿ ಪಂಚಾಯತ್ ನಾಯಕನಾಗಿ ಸೇವೆ ಸಲ್ಲಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನನ್ನು ಹತ್ಯೆಗೈದ … Continued

ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ನಿರ್ಮಿಸಲು 2.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ

ಪಾಟ್ನಾ: ದೇಶದಲ್ಲಿ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ – ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕಾಗಿ .2.5 ಕೋಟಿ ರೂ.ಗಳ ಮೌಲ್ಯದ ಭೂಮಿಯನ್ನು ದಾನ ಮಾಡಿದೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ ಕೈಗೆತ್ತಿಕೊಂಡಿರುವ ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್‌ನ … Continued