ಕೊರೊನಾ 3ನೇ ಅಲೆ ಬರುವುದು ಅನುಮಾನ, ಬಂದ್ರೂ ಮಕ್ಕಳಿಗೆ ಗಂಭೀರ ವ್ಯಾಧಿ ಬರಲ್ಲ

ದಾವಣಗೆರೆ: ಕೊರೊನಾ 3ನೇ ಅಲೆ ಬರುತ್ತದೆ, ಮಕ್ಕಳಿಗೆ ಹೆಚ್ಚಾಗಿ ಕಾಡುತ್ತದೆ ಎಂಬುದೇ ಅವೈಜ್ಞಾನಿಕ. ಸೋಂಕು ಬಂದರೂ ಮಕ್ಕಳಿಗೆ ಗಂಭೀರವಾದ ವ್ಯಾಧಿ ಬರುವುದಿಲ್ಲವೆಂದು ಪರಿಣಿತರು ಹಾಗೂ ತಜ್ಞರು ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಮೂರನೇ ಅಲೆಯಲ್ಲಿ ಪಾಸಿಟಿವ್ ಬಂದರೂ ಗಂಭೀರ … Continued

ಮೋದಿ ಹೊಸಸಂಪುಟದ ಶೇ.೪೨ ಸಚಿವರ ಮೇಲಿದೆ ಕ್ರಿಮಿನಲ್ ಪ್ರಕರಣ: ಶೇ.೯೦ ಮಂದಿ ಕೋಟ್ಯಧೀಶರು..!

ನವದೆಹಲಿ: ಇತ್ತೀಚೆಗೆ ಪುನಾರಚನೆಯಾದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸಚಿವ ಸಂಪುಟದ ೭೮ ಮಂತ್ರಿಗಳಲ್ಲಿ ಕನಿಷ್ಠ ಶೇ.೪೨ ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಹಾಗೂ ಈ ಪೈಕಿ ಶೇ.೯೦ ರಷ್ಟು ಮಂದಿ ಕೋಟ್ಯಾಧೀಶರು ಇದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತದಾನ ಹಕ್ಕುಗಳ ಗುಂಪು ಪ್ರಕಟಿಸಿದ ಹೊಸ ವರದಿಯಲ್ಲಿ ತಿಳಿಸಲಾಗಿದೆ. ಈ ಮಂತ್ರಿಗಳ … Continued

ಆಯುರ್ವೇದದ ದಂತಕತೆ, ಪದ್ಮವಿಭೂಷಣ ಪಿ.ಕೆ. ವಾರಿಯರ್‌ ನಿಧನ

ಮಲ್ಲಪ್ಪುರಂ: ಖ್ಯಾತ ಆಯುರ್ವೇದ ವೈದ್ಯ ಮತ್ತು ಕೊಟ್ಟಕ್ಕಲ್ ಆರ್ಯ ವೈದ್ಯಶಾಲಾದ ವ್ಯವಸ್ಥಾಪಕ ಪದ್ಮವಿಭೂಷಣ ಪಿ.ಕೆ. ವಾರಿಯರ್ ಶನಿವಾರ ನಿಧನರಾದರು. ಜೂನ್ 8 ರಂದು 100ನೇ ವರ್ಷಕ್ಕೆ ಕಾಲಿಟ್ಟಿದ್ದ ವಾರಿಯರ್, ಶನಿವಾರ ಮಧ್ಯಾಹ್ನ 12.30 ಕ್ಕೆ ಕೊಟ್ಟಕ್ಕಲ್‌ನಲ್ಲಿ ಕೊನೆಯುಸಿರೆಳೆದರು. ಕೊಟ್ಟಕ್ಕಲ್‌ನ ಆರ್ಯ ವೈದ್ಯ ಶಾಲೆಯ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ … Continued

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ 20 ಮಸೂದೆ ಮಂಡನೆ: ಸಚಿವ ಜೋಶಿ 

ಹುಬ್ಬಳ್ಳಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ 5 ಸುಗ್ರೀವಾಜ್ಞೆಗಳು ಸೇರಿದಂತೆ 20 ಪ್ರಮುಖ ಮಸೂದೆಗಳನ್ನು ಮಂಡಿಸಲಾಗುತ್ತದೆ. ಜುಲೈ 18 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವಪಕ್ಷಗಳ ಸಂಸತ್ ಸದಸ್ಯರ ಸಭೆ ಕರೆದಿದ್ದಾರೆ. ಸರ್ಕಾರ ಎಲ್ಲ ರೀತಿಯ ರಚನಾತ್ಮಕ ಚರ್ಚೆಗೆ ಸಿದ್ಧವಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು. … Continued

ಏಕರೂಪ ನಾಗರಿಕ ಸಂಹಿತೆ ಕೇವಲ ಭರವಸೆಯಾಗಿ ಉಳಿಯಬಾರದು: ಕಾನೂನು ಸಚಿವಾಲಯಕ್ಕೆ ಕಾರ್ಯ ಪ್ರವೃತ್ತರಾಗಿ ಎಂದ ದೆಹಲಿ ಹೈಕೋರ್ಟ್

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವುದನ್ನು ಬೆಂಬಲಿಸಿದ ದೆಹಲಿ ಹೈಕೋರ್ಟ್, ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ವಿವಿಧ ವೈಯಕ್ತಿಕ ಕಾನೂನುಗಳಲ್ಲಿನ ಘರ್ಷಣೆಯಿಂದಾಗಿ ಉದ್ಭವಿಸುವ ಸಮಸ್ಯೆಗಳಿಗೆ ಭಾರತೀಯ ಯುವಕರನ್ನು ಒಡ್ಡುವ ಅಗತ್ಯವಿಲ್ಲ ಎಂದು ಹೇಳಿದೆ. ಆಧುನಿಕ ಭಾರತೀಯ ಸಮಾಜವು “ಕ್ರಮೇಣ ಏಕರೂಪವಾಗುತ್ತಿದೆ, ಧರ್ಮ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಅಡೆತಡೆಗಳು ನಿಧಾನವಾಗಿ ಕರಗುತ್ತಿವೆ” ಮತ್ತು … Continued

ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಬಿಡುಗಡೆ ಮಾಡಿದ ಉತ್ತರ ಪ್ರದೇಶ ಕಾನೂನು ಆಯೋಗ..ಸಾರ್ವಜನಿಕರಿದ ಅಭಿಪ್ರಾಯ ಆಹ್ವಾನ

ನವದೆಹಲಿ: ಜನಸಂಖ್ಯೆ ನಿಯಂತ್ರಣ ಗುರಿಯಾಗಿಟ್ಟುಕೊಂಡು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗವು ಮಸೂದೆಯ ಮೊದಲ ಕರಡನ್ನು ಬಿಡುಗಡೆ ಮಾಡಿದೆ ಮತ್ತು ಜುಲೈ 19 ರೊಳಗೆ ಸಾರ್ವಜನಿಕ ಅಭಿಪ್ರಾಯವನ್ನು ಕೋರಿದೆ. ಇಬ್ಬರು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವವರಿಗೆ ಪ್ರೋತ್ಸಾಹ ಧನ ನೀಡುವಂತೆ ಮಸೂದೆ ಕೋರಿದೆ. ಉತ್ತರಪ್ರದೇಶದಲ್ಲಿ ಸೀಮಿತ ಸಂಪನ್ಮೂಲಗಳ ಕಾರಣ, ಹೆಚ್ಚು ಸಮನಾದ ವಿತರಣೆಯೊಂದಿಗೆ ಸುಸ್ಥಿರ … Continued

ಭಾರತದಲ್ಲಿ 4.55 ಲಕ್ಷಕ್ಕೆ ಕುಸಿದ ಕೋವಿಡ್ -19 ಸಕ್ರಿಯ ಪ್ರಕರಣಗಳು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 24 ಗಂಟೆಗಳ ಅವಧಿಯಲ್ಲಿ 42,766 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 1,206 ಸಾವುಗಳು ದಾಖಲಾಗಿವೆ. ದೇಶದ ಸಕ್ರಿಯಪ್ರಕರಣ ಈಗ 4,55,033 ರಷ್ಟಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳು ಭಾರತದಲ್ಲಿ ಸಂಚಿತ ಕೋವಿಡ್ -19 ಪ್ರಕರಣಗಳಲ್ಲಿ ಶೇಕಡಾ 1.48 ರಷ್ಟಿದೆ. ಸಕ್ರಿಯ ಪ್ರಕರಣಗಳು … Continued

ಎಸ್​ಎಸ್​ಎಲ್​ಸಿ ಪರೀಕ್ಷೆ- 2021: ಭಯ ಬಿಡಿ..ಪರೀಕ್ಷೆಗೆ ನೋಂದಾಯಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪಿಯುಸಿಗೆ ಪ್ರವೇಶ

ಬೆಂಗಳೂರು: ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ನೋಂದಾಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಪಿಯುಸಿ ತರಗತಿಗಳ ಪ್ರವೇಶಕ್ಕೆ ಅವಕಾಶ ನೀಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್​ಎಸ್​ಎಲ್​ಸಿ ಪರೀಕ್ಷೆಗಳ ಕುರಿತು ರಾಜ್ಯದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಶುಕ್ರವಾರ ಡಿ.ಎಸ್.ಇ.ಆರ್.ಟಿ ಯಲ್ಲಿ “ಬನ್ನಿ ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ … Continued

ದಕ್ಷಿಣ ಭಾರತದಲ್ಲಿ ಕೋವಿಡ್‌-19 ವ್ಯಾಕ್ಸಿನೇಷನ್‌ಗಳು ಕುಸಿಯುತ್ತಿವೆ.. ಮಾಹಿತಿ ಇಲ್ಲಿದೆ..

ಜೂನ್ 21 ರಂದು ಭಾರತದ 92 ಲಕ್ಷ ವ್ಯಾಕ್ಸಿನೇಷನ್‌ಗಳನ್ನು ದಾಖಲಿಸಿದಾಗಿನಿಂದ, ಪ್ರತಿದಿನ ನೀಡಲಾಗುವ ಡೋಸ್‌ಗಳ ಸಂಖ್ಯೆ 90 ಲಕ್ಷದ ಸಮೀಪಕ್ಕೆ ಬಂದಿಲ್ಲ. ವಾಸ್ತವವಾಗಿ, ಜೂನ್ 21 ರಿಂದ, ಭಾರತವು ದಿನಕ್ಕೆ 50 ಲಕ್ಷ ಲಸಿಕೆಗಳನ್ನು ಏಳು ದಿನಗಳಲ್ಲಿ ಮಾತ್ರ ದಾಖಲಿಸಿದೆ – ಜೂನ್ 23 ರಂದು 68 ಲಕ್ಷ ಡೋಸ್‌ಗಳು, ಜುಲೈ 4 ರಂದು, ಭಾರತವು … Continued

14 ಜಿಕಾ ವೈರಸ್‌ ಪ್ರಕರಣ ವರದಿಯಾದ ನಂತರ ಕೇರಳದಲ್ಲಿ ಎಚ್ಚರಿಕೆ : ಪರಿಣಾಮವೇನು.. ಹೇಗೆ ಹರಡುತ್ತದೆ..?

ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಹಿಮ್ಮೆಟ್ಟುತ್ತಿದೆ, ಕೇರಳದಲ್ಲಿ ಹೆಚ್ಚು ನಿಧಾನವಾಗಿದೆ. ಕೇರಳ ಈಗ ಜಿಕಾ ವೈರಸ್ ಸೋಂಕಿನ ಮೊದಲ ದೃಢಪಡಿಸಿದ ಪ್ರಕರಣವನ್ನು ಪತ್ತೆ ಮಾಡಿದೆ. ತಿರುವನಂತಪುರಂನಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಇದು ಗುರುವಾರ ದೃಢಪಟ್ಟಿದೆ. ಈಗ ಕೇರಳದಲ್ಲಿ ಮೊದಲ ಬಾರಿಗೆ ಜಿಕಾ ವೈರಸ್ ಪ್ರಕರಣ ವರದಿಯಾದ ಒಂದು ದಿನದ ನಂತರ, ಇನ್ನೂ … Continued