ಭೂಕಂಪದಿಂದ ಇಡೀ ಸ್ಟುಡಿಯೊವೇ ಜೋರಾಗಿ ಅಲ್ಲಾಡಿದರೂ ಹೆದರದೆ ಸುದ್ದಿ ಓದುತ್ತಿದ್ದ ಪಾಕಿಸ್ತಾನ ಟಿವಿ ಆ್ಯಂಕರ್ | ವೀಕ್ಷಿಸಿ

ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಉತ್ತರ ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಕಟ್ಟಡಗಳು ನಡುಗುತ್ತಿದ್ದಂತೆ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿದ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಇದೀಗ ಭೂಕಂಪದ ಅಗಾಧತೆಯನ್ನು ತೋರಿಸುವ ಪಾಕಿಸ್ತಾನದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. … Continued

ಮತ್ತೆ 9000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಅಮೆಜಾನ್

ಅಮೆಜಾನ್ 9,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ ಸಿಇಒ ಆಂಡಿ ಜಾಸ್ಸಿ ಉದ್ಯೋಗಿಗಳಿಗೆ ಈ ಬಗ್ಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಅಮೆಜಾನ್ ಕಷ್ಟದ ಸಮಯವನ್ನು ಎದುರಿಸುತ್ತಿದೆ ಮತ್ತು ವೆಚ್ಚವನ್ನು ಉಳಿಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇ-ಕಾಮರ್ಸ್ ದೈತ್ಯ ಈ ವರ್ಷದ ಜನವರಿಯಲ್ಲಿ ಸುಮಾರು 18,000 ಕಾರ್ಮಿಕರನ್ನು ವಜಾಗೊಳಿಸಿತ್ತು. ಈಗ 9,000 … Continued

ಮಂಗಳ ಗ್ರಹದಿಂದ ಕಲ್ಲು-ಮಣ್ಣಿನ ಸ್ಯಾಂಪಲ್‌ ಭೂಮಿಗೆ ತರಲು ನಾಸಾಕ್ಕೆ $ 949 ಮಿಲಿಯನ್ ಹಣ ಹಂಚಿಕೆ ಮಾಡಿದ ಅಮೆರಿಕ

ಮಂಗಳ ಗ್ರಹದಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರಲು ನಾಸಾ (NASA)ಕ್ಕೆ $ 949 ಮಿಲಿಯನ್ ಬಜೆಟ್ ನೀಡಲಾಗಿದೆ. ಇದು 2024ರ ಮೊದಲ ವರ್ಷಕ್ಕೆ $27.2 ಶತಕೋಟಿಐಾಗಿದ್ದು, ಇದು ಹಿಂದಿನ ವರ್ಷಕ್ಕಿಂತ $ 1.8 ಶತಕೋಟಿ ಅಥವಾ 7% ಹೆಚ್ಚಳ ಕೋರಿದ ಬೈಡನ್‌ ಆಡಳಿತದ ವಿನಂತಿಯ ಭಾಗವಾಗಿದೆ. ನಾಸಾ (NASA) ನಿರ್ವಾಹಕ ಬಿಲ್ ನೆಲ್ಸನ್ … Continued

ಇಮ್ರಾನ್ ಖಾನ್ ಕೋರ್ಟ್‌ಗೆ ತೆರಳಿದ ನಂತರ ಅವರ ಮನೆಗೆ ನುಗ್ಗಿದ ಪಾಕ್ ಪೊಲೀಸರು: ಬೆಂಬಲಿಗರ ಮೇಲೆ ಲಾಠಿ ಚಾರ್ಜ್‌ | ವೀಕ್ಷಿಸಿ

ಲಾಹೋರ್ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಇಸ್ಲಾಮಾಬಾದ್‌ಗೆ ತೆರಳಿದ ನಂತರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಲಾಹೋರ್‌ನಲ್ಲಿರುವ ಮನೆಗೆ ಪಾಕಿಸ್ತಾನ ಪೊಲೀಸರು ಶನಿವಾರ ಪ್ರವೇಶಿಸಿದ್ದಾರೆ ಎಂದು ಅವರ ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ತೆಗೆದು ಅವರ ಮನೆಗೆ ನುಗ್ಗಿದಾಗ ಖಾನ್ ಅವರ ಪತ್ನಿ ಬುಶ್ರಾ ಬೇಗಂ ಅವರು ಮನೆಯಲ್ಲಿದ್ದರು. ಕಾರ್ಯಾಚರಣೆಯ … Continued

ಉಕ್ರೇನ್ ಯುದ್ಧ ಅಪರಾಧದ ಆರೋಪಗಳ ಮೇಲೆ ವ್ಲಾಡಿಮಿರ್ ಪುತಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಿಂದ ಬಂಧನ ವಾರಂಟ್

ಹೇಗ್: ಉಕ್ರೇನಿಯನ್ ಮಕ್ಕಳನ್ನು ಕಾನೂನುಬಾಹಿರವಾಗಿ ಗಡೀಪಾರು ಮಾಡಿದ ಯುದ್ಧ ಅಪರಾಧದ ಆರೋಪದ ಮೇಲೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಶುಕ್ರವಾರ ಬಂಧನ ವಾರಂಟ್ ಹೊರಡಿಸಿದೆ. ಅದೇ ರೀತಿಯ ಆರೋಪದ ಮೇಲೆ ಮಕ್ಕಳ ಹಕ್ಕುಗಳ ರಷ್ಯಾದ ಅಧ್ಯಕ್ಷೀಯ ಕಮಿಷನರ್ ಮರಿಯಾ ಲ್ವೊವಾ-ಬೆಲೋವಾ ವಿರುದ್ಧವೂ ವಾರಂಟ್ ಹೊರಡಿಸಿದೆ ಎಂದು ಹೇಗ್ ಮೂಲದ ಅಂತಾರಾಷ್ಟ್ರೀಯ … Continued

ಕೋವಿಡ್‌-19 ವೈರಸ್‌ ಚೀನಾದ ವುಹಾನ್ ಸಮುದ್ರಾಹಾರ ಮಾರ್ಕೆಟ್‌ನಲ್ಲಿ ಮಾರಾಟವಾಗುವ ಸೋಂಕಿತ ರಕೂನ್ ನಾಯಿಗಳಿಂದ ಹರಡಿರಬಹುದು : ಹೊಸ ಅಧ್ಯಯನ

ಕೋವಿಡ್‌-19 ಸಾಂಕ್ರಾಮಿಕವು ಜಗತ್ತನ್ನು ತಲ್ಲಣಗೊಳಿಸಿದಾಗಿನಿಂದ, ಅದರ ಮೂಲವು ಯಾವುದೆಂಬುದು ಸಂಶೋಧಕರನ್ನು ಗೊಂದಲಕ್ಕೀಡು ಮಾಡಿದೆ. ಈಗ, ಚೀನಾದ ವುಹಾನ್‌ನಲ್ಲಿರುವ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಸೋಂಕಿತ ರಕೂನ್ ನಾಯಿಗಳಿಂದ ವೈರಸ್ ಹರಡಿರಬಹುದು ಎಂದು ಸೂಚಿಸುವ ಪುರಾವೆಗಳನ್ನು ಅಂತಾರಾಷ್ಟ್ರೀಯ ತಜ್ಞರ ತಂಡವು ಕಂಡುಹಿಡಿದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವೈರಸ್ ತಜ್ಞರ ಅಂತಾರಾಷ್ಟ್ರೀಯ ತಂಡದ ಪ್ರಕಾರ ಮಾರಣಾಂತಿಕ … Continued

8 ಭಯೋತ್ಪಾದನೆ ಪ್ರಕರಣಗಳು, ಒಂದು ಸಿವಿಲ್ ಪ್ರಕರಣದಲ್ಲಿ ಇಮ್ರಾನ್ ಖಾನಗೆ ರಕ್ಷಣಾತ್ಮಕ ಜಾಮೀನು ನೀಡಿದ ಲಾಹೋರ್ ಹೈಕೋರ್ಟ್

ಇಸ್ಲಾಮಾಬಾದ್‌ : ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಲಾಹೋರ್ ಹೈಕೋರ್ಟ್ ಒಂಬತ್ತು ಪ್ರಕರಣಗಳಲ್ಲಿ ರಕ್ಷಣಾತ್ಮಕ ಜಾಮೀನು ನೀಡಿದೆ. ಖಾನ್ ಅವರು ತೋಶಖಾನಾ ಪ್ರಕರಣದಲ್ಲಿ ತಮ್ಮ ಬಂಧನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಲಾಹೋರ್‌ನಲ್ಲಿರುವ ಅವರ ಜಮಾನ್ ಪಾರ್ಕ್ ನಿವಾಸದೊಳಗೆ ಅವರ ನೂರಾರು ಬೆಂಬಲಿಗರು ಕೋಟೆಯಂತೆ ಮಾಡಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ … Continued

ಎಂಥಾ ಲೋಕವಯ್ಯಾ…: ಮಹಿಳೆ ಕೊಂದು ಹೃದಯ ತುಂಡು ಮಾಡಿ ಆಲೂಗಡ್ಡೆ ಜೊತೆ ಬೇಯಿಸಿ ಕುಟುಂಬಕ್ಕೆ ತಿನ್ನಲು ನೀಡಿದ ವ್ಯಕ್ತಿ.. ನಂತ್ರ ಅವ್ರನ್ನೂ ಕೊಂದ..!

ಒಕ್ಲಹೋಮಾ (ಅಮೆರಿಕ) : ಅಮೆರಿಕದ ಒಕ್ಲಹೋಮಾ ರಾಜ್ಯದಲ್ಲಿ ಸತತ ಐದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ದಿ ಇಂಡಿಪೆಂಡೆಂಟ್ ಪ್ರಕಾರ, 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ ಜೈಲಿನಿಂದ ಅವಧಿಗಿಂತ ಮುಂಚಿತವಾಗಿ ಬಿಡುಗಡೆಯಾದ ಒಂದು ತಿಂಗಳ ನಂತರ 2021 ರಲ್ಲಿ ಭೀಕರ ಕೊಲೆಗಳನ್ನು ಮಾಡಿದ್ದಾನೆ. ಆತ ಬಿಡುಗಡೆಯಾದ ವಾರಗಳ ನಂತರ, ಆಂಡ್ರಿಯಾ … Continued

ಮಡಗಾಸ್ಕರ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 34 ಮಂದಿ ಸಾವು

ಅಂಟಾನಾನರಿವೊ (ಮಡಗಾಸ್ಕರ್): ಮಯೊಟ್ಟೆಗೆ ತೆರಳಲು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್‌ ಮುಳುಗಿದ ನಂತರ ಮಡಗಾಸ್ಕರ್‌ನ ಅಧಿಕಾರಿಗಳು ಹಿಂದೂ ಮಹಾಸಾಗರದಿಂದ 34 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಲಗಾಸಿ ಕಡಲ ಅಧಿಕಾರಿಗಳು ಪ್ರಕಾರ, 58 ಪ್ರಯಾಣಿಕರನ್ನು ಹೊತ್ತ ಬೋಟ್‌ ಅಧಿಕೃತ ವಲಸೆ ಅಥವಾ ಕಸ್ಟಮ್ಸ್ ನಿಯಂತ್ರಣಗಳ ಮೂಲಕ ಹೋಗದೆ ರಹಸ್ಯವಾಗಿ ಸಾಗಿತು ಮತ್ತು ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ತಡರಾತ್ರಿ ಮುಳುಗಿತು. … Continued

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಕೋರ್ಟ್ ರಿಲೀಫ್: ನಾಳೆ ವರೆಗೆ ಬಂಧನವಿಲ್ಲ

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವ ಕಾರ್ಯಾಚರಣೆಯನ್ನು ನಾಳೆ (ಮಾರ್ಚ್‌ ೧೬) ಬೆಳಗ್ಗೆ 10 ಗಂಟೆಯವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್ ನ್ಯಾಯಾಲಯ ಪಾಕಿಸ್ತಾನ ಪೊಲೀಸರಿಗೆ ಆದೇಶಿಸಿದೆ. ಪೊಲೀಸರು ಇಂದು, ಬುಧವಾರ ಲಾಹೋರ್‌ನಲ್ಲಿರುವ ಅವರ ಮನೆಯ ಹೊರಗೆ ಖಾನ್ ಅವರ ಬೆಂಬಲಿಗರೊಂದಿಗೆ ಜನಸಮೂಹದೊಂದಿಗೆ ಸಂಘರ್ಷ ನಡೆಸಿದರು. ಇಮ್ರಾನ್‌ ಖಾನ್‌ ಬೆಂಬಲಿಗರು ಪೊಲೀಸರತ್ತ ಕಲ್ಲುಗಳನ್ನು ಎಸೆದರು. … Continued