ಕ್ರಿಕೆಟ್‌ : ನಾನ್-ಸ್ಟ್ರೈಕರ್‌ನ ತುದಿಯಲ್ಲಿ ರನ್ ಔಟ್ ಆದ ನಂತರ ಸಿಟ್ಟಿನಿಂದ ಬ್ಯಾಟ್ ಎಸೆದ ಬ್ಯಾಟರ್‌ | ವೀಕ್ಷಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ಎಷ್ಟೇ ಬಾರಿ ‘ನಾನ್-ಸ್ಟ್ರೈಕರ್ ರನ್-ಔಟ್’ ನಿಯಮದ ಪ್ರಕಾರ ಸರಿ ಎಂದು ನಿಯಮ ಮಾಡಿದರೂ ಕೆಲವರು ಇನ್ನೂ ಅದರ ವಿರುದ್ಧವಾಗಿಯೇ ಉಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಪಂದ್ಯವೊಂದರಲ್ಲಿ, ನಾನ್ ಸ್ಟ್ರೈಕರ್ ಬ್ಯಾಟರ್‌ ಅನ್ನು ಬೌಲರ್‌ ನಾನ್-ಸ್ಟ್ರೈಕರ್ ರನ್-ಔಟ್ ಮಾಡಿದರು. ಆದರೆ ನಂತರ ನಿಜಕ್ಕೂ ಅನಿರೀಕ್ಷಿತ ವಿದ್ಯಮಾನ ನಡೆಯಿತು. … Continued

ಭೂಮಿಯತ್ತ ನೇರವಾಗಿ ಮುಖ ಮಾಡಿದ ಬೃಹತ್‌ ಗಾತ್ರದ ಬ್ಲ್ಯಾಕ್‌ಹೋಲ್ : ಇದು ಶಕ್ತಿಯುತ ವಿಕಿರಣ ಕಳುಹಿಸುತ್ತದೆ-ವಿಜ್ಞಾನಿಗಳು

ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ವಿಜ್ಞಾನಿಗಳು ಖಗೋಳಶಾಸ್ತ್ರದ ಅದ್ಭುತ ಆವಿಷ್ಕಾರ ಮಾಡಿದ್ದಾರೆ. PBC J2333.9-2343 ನಕ್ಷತ್ರಪುಂಜದಲ್ಲಿ 657 ಮಿಲಿಯನ್ ಜ್ಯೋತಿರ್ವರ್ಷಗಳ ದೂರದಲ್ಲಿ ನೆಲೆಗೊಂಡಿರುವ ಒಂದು ಬೃಹತ್‌ ಕಪ್ಪು ಕುಳಿಯು (black hole) ತನ್ನ ದಿಕ್ಕನ್ನು ಬದಲಿಸಿದೆ ಮತ್ತು ಈಗ ಭೂಮಿಯತ್ತ ಮುಖಮಾಡಿದೆ ಹಾಗೂ ಶಕ್ತಿಯುತ ವಿಕಿರಣವನ್ನು ಕಳುಹಿಸುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಬ್ಲೇಜರ್‌ಗಳು ಹೆಚ್ಚಿನ ಶಕ್ತಿಯ ವಸ್ತುಗಳಾಗಿವೆ ಮತ್ತು … Continued

ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿಗೆ 3 ಮಕ್ಕಳು ಸೇರಿ 6 ಮಂದಿ ಸಾವು

ವಾಷಿಂಗ್ಟನ್: ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ ನಂತರ ಮೂವರು ಮಕ್ಕಳು ಸೇರಿದಂತೆ ಆರು ಜನ ಮೃತಪಟ್ಟಿದ್ದಾರೆ. ನಗರದ ಪೊಲೀಸರು ಟ್ವಿಟ್ಟರ್‌ನಲ್ಲಿ ದಿ ಕವೆನೆಂಟ್ ಸ್ಕೂಲ್‌ನಲ್ಲಿ ಗುಂಡಿನ ದಾಳಿ ಬಗ್ಗೆ ತಿಳಿಸಿದ್ದಾರೆ ಹಾಗೂ ಪೊಲೀಸರೊಂದಿಗೆ ನಡೆದ ಗುಂಡಿನ ಚಲಮಕಿಯಲ್ಲಿ ಶೂಟರ್ ಕೊಲ್ಲಲ್ಪಟ್ಟ ಎಂದು … Continued

ಕೊರೊನಾ ಸಂಬಂಧಿತ ಮೆದುಳು ಕಾಯಿಲೆಯಿಂದ ಜಪಾನ್‌ನಲ್ಲಿ 10%ಕ್ಕಿಂತ ಹೆಚ್ಚು ಮಕ್ಕಳು ಸಾವು : ಸಮೀಕ್ಷೆಯಲ್ಲಿ ಬಹಿರಂಗ

ಟೋಕಿಯೋ : ಜಪಾನ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಕೋವಿಡ್‌-19 ಸೋಂಕಿನ ಕಾರಣದಿಂದ ತೀವ್ರವಾದ ಮೆದುಳಿನ ಸಿಂಡ್ರೋಮ್‌ನಿಂದ 10 ಪ್ರತಿಶತಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಜಪಾನಿನ ಸುದ್ದಿವಾಹಿನಿ ಕ್ಯೋಡೋ ನ್ಯೂಸ್ ಪ್ರಕಾರ, ಆರೋಗ್ಯ ಸಚಿವಾಲಯದ ಸಂಶೋಧನಾ ತಂಡವು ಈ ಸಮೀಕ್ಷೆಯನ್ನು ನಡೆಸಿದೆ. ಜನವರಿ 2020 ಮತ್ತು ಮೇ 2022 ರ ನಡುವೆ ರೋಗಿಗಳು ಕೊರೊನಾ … Continued

ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಸುಂಟರಗಾಳಿ ಆರ್ಭಟ : ಕನಿಷ್ಠ 25 ಮಂದಿ ಸಾವು, ಮುಂದುವರಿದ ರಕ್ಷಣಾ ಕಾರ್ಯ

ಅಪರೂಪದ, ದೀರ್ಘ-ಟ್ರ್ಯಾಕ್ ಸುಂಟರಗಾಳಿಯು ಶುಕ್ರವಾರ ರಾತ್ರಿ  ಅಮೆರಿಕದ ಪಶ್ಚಿಮ ಮಿಸಿಸಿಪ್ಪಿಯಾದ್ಯಂತ ವಿನಾಶ ಉಂಟು ಮಾಡಿತು ಹಾಗೂ ಕನಿಷ್ಠ 25 ಜನರು ಸಾವುಗೀಡಾದರು. ಕಟ್ಟಡಗಳನ್ನು ಧ್ವಂಸ ಮಾಡಿತು ಮತ್ತು ಸಾವಿರಾರು ಮನೆಗಳನ್ನು ವಿದ್ಯುತ್ ಸಂಪರ್ಕಕ್ಕೆ ಹಾನಿ ಮಾಡಿತು. ಅಲಬಾಮಾದಲ್ಲಿ ಚಂಡಮಾರುತದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯೂ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಇದೊಂದು ಭಯಾನಕ ಘಟನೆ” ಎಂದು ಮಿಸ್ಸಿಸ್ಸಿಪ್ಪಿ ಗವರ್ನರ್ … Continued

ವೀಡಿಯೊ | ಗೋಲ್‌ ಹೊಡೆದ ನಂತರ ಕ್ರಿಸ್ಟಿಯಾನೋ ರೊನಾಲ್ಡೊ ಸ್ಟೈಲ್‌ ಅನುಕರಿಸಲು ಹೋಗಿ ಆಸ್ಪತ್ರೆ ಸೇರಿದ ವಿಯೆಟ್ನಾಂ ಫುಟ್ಬಾಲ್ ಆಟಗಾರ

ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್‌ ದಂತಕಥೆ ಮಾತ್ರವಲ್ಲ, ತನ್ನ ದಾಖಲೆಗಳು, ಟೈಟಲ್‌ಗಳು ಮತ್ತು ಗೋಲ್‌ ಗಳಿಸಿದ ನಂತರ ವಿಶಿಷ್ಟವಾಗಿ ಸಂಭ್ರಮ ಪಡುವುದಕ್ಕೂ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಫುಟ್‌ಬಾಲ್ ತಾರೆ. 2013 ರಲ್ಲಿ ಸೌಹಾರ್ದ ಪಂದ್ಯದಲ್ಲಿ ಚೆಲ್ಸಿಯಾ ವಿರುದ್ಧ ಫ್ರೀ-ಕಿಕ್ ಗಳಿಸಿದ ನಂತರ ರೊನಾಲ್ಡೊ ಅವರ ಪ್ರಸಿದ್ಧ ‘ಸಿಯುಯು’ ಸಂಭ್ರಮಾಚರಣೆಯು ಪ್ರಪಂಚದಾದ್ಯಂತದ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ. ಫುಟ್ಬಾಲ್ … Continued

ಚುನಾವಣೆ ನಡೆಸಲೂ ನಮ್ಮ ಬಳಿ ಹಣವಿಲ್ಲ : ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ತೀವ್ರತೆ ಬಗ್ಗೆ ಪಾಕ್‌ ರಕ್ಷಣಾ ಸಚಿವ…!

ಇಸ್ಲಾಮಾಬಾದ್: ಚುನಾವಣೆ ನಡೆಸಲೂ ಪಾಕಿಸ್ತಾನದ  ಹಣಕಾಸು ಸಚಿವಾಲಯದ ಬಳಿ ಹಣವಿಲ್ಲ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. ಮಾಹಿತಿ ಸಚಿವರಾದ ಮರಿಯುಮ್ ಔರಂಗಜೇಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಪಾಕಿಸ್ತಾನದ ರಕ್ಷಣಾ ಸಚಿವರಾದ ಖವಾಜಾ ಆಸಿಫ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಏಪ್ರಿಲ್ … Continued

ಚಾಟ್​ ಜಿಪಿಟಿಗೆ ಪ್ಲಗ್‌ಇನ್ ಸಪೋರ್ಟ್‌: ಚಾಟ್​ ಜಿಪಿಟಿ ಈಗ ತಾನಾಗಿಯೇ ಇಂಟರ್ನೆಟ್​ ಬ್ರೌಸ್​ ಮಾಡುತ್ತದೆ…!

ಚಾಟ್‌ಜಿಪಿಟಿ (ChatGPT) ಎಂಬ ಕೃತಕ ಬುದ್ಧಿಮತ್ತೆಯು ಮಾನವ-ರೀತಿಯ ಸಂಭಾಷಣಾ ಸಾಮರ್ಥ್ಯಗಳು ಮತ್ತು ವಿಷಯ ರಚನೆ, ಅನುವಾದ ಸೇರಿದಂತೆ ಅದರ ವೈವಿಧ್ಯಮಯ ಅಪ್ಲಿಕೇಶನ್‌ಗಳಿಗಾಗಿ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಆದಾಗ್ಯೂ, ಕೃತಕ ಬುದ್ಧಿಮತ್ತೆ (AI) ಉಪಕರಣವು ಪ್ರಸ್ತುತ ಈವೆಂಟ್‌ಗಳ ಕುರಿತು ನವೀಕೃತ ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿರಲಿಲ್ಲ. ಈಗ ಈ ಮಿತಿಯನ್ನು ಪರಿಹರಿಸಲು, ಚಾಟ್‌ಜಿಪಿಟಿ(ChatGPT)ಯ ಸೃಷ್ಟಿಕರ್ತ ಮೈಕ್ರೋಸಾಫ್ಟ್-ಮಾಲೀಕತ್ವದ ಓಪನ್‌ … Continued

ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ವರದಿ ಬಿಡುಗಡೆ ಮಾಡಿದ ಹಿಂಡೆನ್‍ಬರ್ಗ್ ರಿಸರ್ಚ್: ಷೇರು ಮೌಲ್ಯದಲ್ಲಿ ಭಾರೀ ಕುಸಿತ

ನವದೆಹಲಿ: ಅದಾನಿ ಗ್ರೂಪ್‍ನ ವರದಿ ಮಾಡಿದ್ದ ಅಮೆರಿಕ ಮೂಲದ ಹಿಂಡೆನ್‍ಬರ್ಗ್ (Hindenburg) ರಿಸರ್ಚ್ ಈಗ ಟ್ವಿಟ್ವರ್ ಮಾಜಿ ಸಿಇಒ ಹಾಗೂ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಸ್ಥಾಪಿಸಿದ ಪೇಮೆಂಟ್ ಕಂಪನಿ ಬ್ಲಾಕ್ (Block) ಇಂಕ್‌ ವಿರುದ್ಧ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಬ್ಲಾಕ್ ಇಂಕ್‌ನ ಮೇಲೆ ಕಣ್ಣಿಟ್ಟಿದ್ದೆವು. ಈ ಹಿಂದೆ ಬ್ಲಾಕ್ … Continued

ಭಾರತವನ್ನು 2-1ರಿಂದ ಸೋಲಿಸಿದ ನಂತರ ಏಕದಿನ ಪಂದ್ಯದಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿದ ಆಸ್ಟ್ರೇಲಿಯಾ : ಉಳಿದ ತಂಡಗಳ ಶ್ರೇಯಾಂಕಗಳು ಇಲ್ಲಿವೆ

ಐಸಿಸಿ (ICC) ಅಂತಾರಾಷ್ಟ್ರೀಯ ಏಕದಿನದ (ODI) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಶ್ವದ ನಂ 1 ಸ್ಥಾನಕ್ಕೆ ಏರಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಡುವೆ ಚೆನ್ನೈನಲ್ಲಿ ನಡೆದ ಕೊನೆಯ ಹಾಗೂ ಮೂರನೇ ಏಕದಿನದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡ 21 ರನ್‌ಗಳ ಸೋಲು ಅನುಭವಿಸಿದ ನಂತರ ಸ್ಟ್ಯಾಂಡ್-ಇನ್ ನಾಯಕ ಸ್ಟೀವ್‌ ಸ್ಮಿತ್‌ ಅವರು ಆಸ್ಟ್ರೇಲಿಯಾಕ್ಕೆ … Continued