ಪುಸ್ತಕ ಪ್ರಕಟಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ 4 ವರ್ಷದ ಪೋರ…!

ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ನಾಲ್ಕು ವರ್ಷದ ಬಾಲಕನೊಬ್ಬ ಪುಸ್ತಕವನ್ನು ಪ್ರಕಟಿಸಿದ ಅತ್ಯಂತ ಕಿರಿಯ ವ್ಯಕ್ತಿ (ಗಂಡು) ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ ಹಾಗೂ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದಾನೆ…! ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 4 ವರ್ಷ ಮತ್ತು 218 ದಿನಗಳ ವಯಸ್ಸಿನಲ್ಲಿ, ಅಬುಧಾಬಿಯ ಪುಟ್ಟಪೋರ ಸಯೀದ್ ರಶೆದ್ ಅಲ್ ಮ್ಹೇರಿ ಪುಸ್ತಕವನ್ನು ಪ್ರಕಟಿಸಿದ ವಿಶ್ವದ ಅತ್ಯಂತ … Continued

ಹಿಂದೂಫೋಬಿಯಾ ಖಂಡಿಸುವ ನಿರ್ಣಯ ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾದ ಜಾರ್ಜಿಯಾ

ವಾಷಿಂಗ್ಟನ್‌: ಅಮೆರಿಕದ ಜಾರ್ಜಿಯಾ ಅಸೆಂಬ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ, ಇದು ಅಂತಹ ಶಾಸನಾತ್ಮಕ ಕ್ರಮವನ್ನು ತೆಗೆದುಕೊಂಡ ಮೊದಲ ಅಮೆರಿಕನ್ ರಾಜ್ಯವಾಗಿದೆ. ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಧರ್ಮಾಂಧತೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಜಾರ್ಜಿಯಾದಲ್ಲಿನ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಡಯಾಸ್ಪೊರಾ ಸಮುದಾಯಗಳಲ್ಲಿ ಒಂದಾದ ಅಟ್ಲಾಂಟಾದ ಉಪನಗರಗಳಲ್ಲಿರುವ ಫೋರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು … Continued

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು : ಕರಾಚಿ ಆಹಾರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದಿಂದ 11 ಮಂದಿ ಸಾವು, ಹಲವರಿಗೆ ಗಾಯ

ಇಂದು, ಶುಕ್ರವಾರ ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಉಚಿತ ಪಡಿತರ ವಿತರಣಾ ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪಡಿತರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಪ್ರಜ್ಞಾಹೀನರಾಗಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್‌ಪ್ರೆಸ್ ನ್ಯೂಸ್ ವರದಿ … Continued

ಮಂಗಳ ಗ್ರಹಕ್ಕೆ ಮಾನವ : ನಾಸಾ ಯೋಜನೆ ಮುಖ್ಯಸ್ಥರಾಗಿ ಭಾರತೀಯ ಮೂಲದ ರೊಬೊಟಿಕ್ಸ್ ಇಂಜಿನಿಯರ್ ನೇಮಕ

ನವದೆಹಲಿ: ಭಾರತೀಯ ಮೂಲದ ಸಾಫ್ಟ್‌ವೇರ್ ಮತ್ತು ರೊಬೊಟಿಕ್ಸ್ ಎಂಜಿನಿಯರ್ ಅಮಿತ್‌ ಕ್ಷತ್ರಿಯ ಅವರನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸದಾಗಿ ಸ್ಥಾಪಿಸಿದ ಚಂದ್ರನಿಂದ ಮಂಗಳಕ್ಕೆ (Moon to Mars) ಗಗನಯಾನ ಕಾರ್ಯಕ್ರಮದ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅಮಿತ್‌ ಕ್ಷತ್ರಿಯ ಅವರು ಕಚೇರಿಯ ಮೊದಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ … Continued

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ; ಮುಂದಿನ ವಾರ ಶರಣಾಗುವ ಸಾಧ್ಯತೆ

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರದ ಆರಂಭದಲ್ಲಿ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ (ಡಿಎ) ಕಚೇರಿಗೆ ಶರಣಾಗುವ ಸಾಧ್ಯತೆಯಿದೆ ಎಂದು ಅವರ ವಕೀಲ ಜೋ ಟಕೋಪಿನಾ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷರ ಕಾನೂನು ತಂಡವು ಪ್ರಾಸಿಕ್ಯೂಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರ ವಿಚಾರಣೆಯು ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ ಎಂದು … Continued

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ಉಚಿತ ಹಿಟ್ಟು ವಿತರಣೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ 11 ಜನರ ಸಾವು

ನವದೆಹಲಿ: ಆರ್ಥಿಕ ಬಿಟ್ಟಿಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ವಿತರಣಾ ಕೇಂದ್ರಗಳಿಂದ ಉಚಿತ ಹಿಟ್ಟು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾಗ ನೂಕು-ನುಗ್ಗಾಟದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ನಾಲ್ಕು ಜಿಲ್ಲೆಗಳಾದ ಸಾಹಿವಾಲ್, ಬಹವಾಲ್‌ಪುರ್, ಮುಜಾಫರ್‌ಗಢ್ ಮತ್ತು ಒಕಾರಾದಲ್ಲಿನ ಉಚಿತ ಹಿಟ್ಟಿನ ಕೇಂದ್ರಗಳಲ್ಲಿ ಕಾಲ್ತುಳಿತದಲ್ಲಿ ಇಬ್ಬರು ವೃದ್ಧ ಮಹಿಳೆಯರು ಮತ್ತು ಒಬ್ಬ … Continued

ʼಮಹಾʼ ತಾಯಿ…: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಸಿಎನ್‌ಎನ್‌ ವರದಿಯ ಪ್ರಕಾರ ಗ್ರೇಟ್ ಡೇನ್ ಜಾತಿ ನಾಯಿ 27 ಗಂಟೆಗಳಲ್ಲಿ 21 ನಾಯಿಮರಿಗಳಿಗೆ ಜನ್ಮ ನೀಡಿದೆ…! ಎರಡು ವರ್ಷದ ನಾಯಿ ನಮೈನ್ ಕಳೆದ ವಾರ ಬುಧವಾರ 21 ನಾಯಿಮರಿಗಳಿಗೆ ಜನ್ಮ ನೀಡಿದ್ದು, ಅದು 27 ಗಂಟೆಗಳ ನಂತರ ಅದು ಮರಿ ಹಾಕುವುದು ಮುಕ್ತಾಯವಾಗಿದೆ. ಔಟ್ಲೆಟ್ ಪ್ರಕಾರ ನಾಯಿಯು ತಾನ್ಯಾ ಡಬ್ಸ್ ಎಂಬವರ ಒಡೆತನದಲ್ಲಿದೆ ಮತ್ತು … Continued

ಅಮೆರಿಕದ ಶಾಲೆಯ ಮೂಲಕ ಸುಂಟರಗಾಳಿ ಹಾದು ಹೋದ ಭಯಾನಕ ಕ್ಷಣ ಸಿಸಿಟಿವಿಯಲ್ಲಿ ಸೆರೆ | ವೀಕ್ಷಿಸಿ

ಕಳೆದ ಶುಕ್ರವಾರ ಸಂಜೆ ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ಮಾರಣಾಂತಿಕ ಸುಂಟರಗಾಳಿ ಬೀಸಿದ ನಂತರ ಕನಿಷ್ಠ 26 ಜನರು ಸಾವಿಗೀಡಾಗಿದ್ದಾರೆ ಮತ್ತು ಅಅನೇಕರು ಗಾಯಗೊಂಡಿದ್ದಾರೆ. ಇದೀಗ, ಮಿಸ್ಸಿಸ್ಸಿಪ್ಪಿಯ ಶಾಲೆಯೊಂದರಲ್ಲಿ ಸುಂಟರಗಾಳಿ ಹೊಕ್ಕಿದ ಭಯಾನಕ ಕ್ಷಣವನ್ನು ಆಘಾತಕಾರಿ ಸಿಸಿಟಿವಿ ವೀಡಿಯೊ ಸೆರೆಹಿಡಿದಿದೆ. ಗಾಳಿಯ ಆರ್ಭಟದ ನಡುವೆ ಸುಂಟರಗಾಳಿಯು ಶಾಲೆಯ ಮೇಲ್ಛಾವಣಿಯನ್ನು ಹಾನಿಗೊಳಿಸುವುದನ್ನು ವೀಡಿಯೊ ತೋರಿಸುತ್ತದೆ. ಈ ಕ್ಲಿಪ್ ಅನ್ನು ಶಾಲೆಯ … Continued

ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 10 ವರ್ಷದ ಕೇರಳ ಮೂಲದ ಬಾಲಕಿ…!

ಅಪ್ಲಿಕೇಶನ್ ಅನ್ನು ರಚಿಸುವ ಮೂಲಕ ಅತ್ಯಂತ ಕಿರಿಯ ಐಒಎಸ್ ಡೆವಲಪರ್ ಆಗಿರುವ ಹನಾ ರಫೀಕ್ ಎಂಬ 9 ವರ್ಷದ ಹುಡುಗಿ ನೆನಪಿದೆಯೇ? ನಂತರ ಅವಳು ಆಪಲ್ ಸಿಇಒ ಟಿಮ್ ಕುಕ್ ಅವರಿಂದ ಪ್ರಶಂಸೆ ಪಡೆದಳು. ಈಗ ಅವಳ ಸಹೋದರಿ ಲೀನಾ ರಫೀಕ್ ಕೂಡ ಸುದ್ದಿಯಾಗುತ್ತಿದ್ದಾಳೆ. ದುಬೈನಲ್ಲಿರುವ ಭಾರತದ ಕೇರಳ ಮೂಲದ ಈ ಹುಡುಗಿ ಕೇವಲ 10ನೇ … Continued

ವಿದ್ಯಾರ್ಥಿನಿ ಅಂಕಪಟ್ಟಿಯಲ್ಲಿ ಪ್ರಮಾದ..ಅವಳು ನಿಧನಳಾಗಿದ್ದಾಳೆ ಎಂದು ಬರೆದ ಶಿಕ್ಷಕ…!

ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರ ಕಾಮೆಂಟ್ ಅತ್ಯಗತ್ಯ. ಪಾಲಕರು ತಮ್ಮ ಮಗುವಿನ ಬಗ್ಗೆ ಶಿಕ್ಷಕರು ಏನು ಹೇಳುತ್ತಾರೆಂದು ತಿಳಿಯಲು ತುಂಬಾ ಉತ್ಸುಕರಾಗಿರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕರೊಬ್ಬರು ಮಾಡಿದ ಪ್ರಮಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಗೊಳಿಸುತ್ತಿದೆ. ಶಿಕ್ಷಕ ಅಂಕಪಟ್ಟಿಯಲ್ಲಿ ಬರೆದ ಟಿಪ್ಪಣಿಯ ಸ್ಕ್ರೀನ್‌ಶಾಟ್ ಈಗ ವೈರಲ್ ಆಗುತ್ತಿದೆ, ಅದರಲ್ಲಿ ಅವರು 2019ನೇ ವರ್ಷದ ಅಂಕಪಟ್ಟಿಯ ಮೇಲೆ ವಿದ್ಯಾರ್ಥಿನೊಯೊಬ್ಬಳು ಉತ್ತೀರ್ಣಳಾಗಿದ್ದಾಳೆ ಎಂದು … Continued