ಸಿಸ್ಟಂ ವೈಫಲ್ಯದ ನಂತರ ಅಮೆರಿಕದ 5,400ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ಭಾರೀ ವಿಳಂಬ

ನವದೆಹಲಿ: ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದಿಂದಾದ ಅಭೂತಪೂರ್ವ ಅಡಚಣೆಯಿಂದ ಬುಧವಾರ ಅಮೆರಿಕದಾದ್ಯಂತ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿವೆ. ಅಪಾಯಗಳು, ವಿಮಾನ ನಿಲ್ದಾಣದ ಸೌಲಭ್ಯಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಗತ್ಯ ಮಾಹಿತಿಯ ಬಗ್ಗೆ ವಿಮಾನ ಸಿಬ್ಬಂದಿಗೆ ಮಾಹಿತಿಯನ್ನು ಒದಗಿಸುವ ನೋಟಿಸ್ ಟು ಏರ್ ಮಿಷನ್ಸ್ ಸಿಸ್ಟಮ್ (NOTAM) ನಲ್ಲಿನ ಸಮಸ್ಯೆ ಕಾಣಿಸಿಕೊಂಡ ನಂತರ ಅಮೆರಿಕದ ಎಲ್ಲಾ … Continued

ಒಂದು ವರ್ಷದಲ್ಲಿ ಈರುಳ್ಳಿ ಬೆಲೆ 500%ರಷ್ಟು ದುಬಾರಿ, ಚಿಕನ್ ಬೆಲೆ ಗಗನಕ್ಕೆ : ಪಾಕಿಸ್ತಾನದ ಹಣದುಬ್ಬರ ಎಷ್ಟು ಭೀಕರವಾಗಿದೆಯೆಂದರೆ….

ಪಾಕಿಸ್ತಾನದಲ್ಲಿ ದಿನನಿತ್ಯದ ವಸ್ತುಗಳ ಬೆಲೆಗಳು ಮತ್ತೊಮ್ಮೆ ಸಾಮಾನ್ಯರ ಜೇಬನ್ನು ಸುಡುತ್ತಿವೆ. 2022 ರಲ್ಲಿ ಭಾರಿ ಪ್ರವಾಹದಿಂದ ಉಂಟಾದ ಬಿಕ್ಕಟ್ಟಿನಿಂದ ದೇಶವು ಚೇತರಿಸಿಕೊಳ್ಳುವ ಮೊದಲೇ, ಹಣದುಬ್ಬರವು ಈಗ ಕಾಡುತ್ತಿದೆ. ಜನವರಿ 6, 2022 ರಂದು ಕೆಜಿಗೆ 36.7 ರೂ.ಗಳಿದ್ದ ಈರುಳ್ಳಿ ಬೆಲೆ 2023 ರ ಜನವರಿ 5 ರಂದು 220.4 ರೂ.ಗಳಿಗೆ ಏರಿದ್ದು, ಒಂದು ವರ್ಷದಲ್ಲಿ ಬೆಲೆ … Continued

ಅಫ್ಘಾನಿಸ್ತಾನದಲ್ಲಿ 1 ರಿಂದ 6ನೇ ತರಗತಿ ಹುಡುಗಿಯರಿಗೆ ಶಿಕ್ಷಣಕ್ಕೆ ಅವಕಾಶ ನೀಡಿದ ತಾಲಿಬಾನ್

ಕಾಬೂಲ್‌: ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಈಗ ಆರನೇ ತರಗತಿ ವರೆಗೆ ಹುಡುಗಿಯರಿಗೆ ಶಾಲೆಗಳಲ್ಲಿ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ. ತಾಲಿಬಾನ್‌ನ ಶಿಕ್ಷಣ ಸಚಿವಾಲಯವು ಆರನೇ ತರಗತಿಗಿಂತ ಕೆಳಗಿನ ಬಾಲಕಿಯರಿಗಾಗಿ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರವೊಂದನ್ನು ಕಳುಹಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ವಿಶ್ವ ವಿದ್ಯಾಲಯಗಳಲ್ಲಿ ಮಹಿಳಾ ಶಿಕ್ಷಣವನ್ನು ನಿಷೇಧಿಸಿದ ವಾರಗಳ ನಂತರ ಈ … Continued

5 ವರ್ಷಗಳಿಂದ ನಮ್ಮ ಕಂಪನಿಯ ಯಾವುದೇ ಉದ್ಯೋಗಿಯೂ ಕಂಪನಿ ತೊರೆದಿಲ್ಲ ಎಂದು ಹೇಳಿದ ಈ ಕಂಪನಿ ಸಿಇಒ..!

ಸಾಮೂಹಿಕ ವಜಾಗಳು ಮತ್ತು ರಾಜೀನಾಮೆಗಳು ಸಾಮಾನ್ಯವಾಗಿರುವ ಈ ಸಮಯದಲ್ಲಿ, ನ್ಯೂಯಾರ್ಕ್ ಮೂಲದ AiDigital ನ ಸಹ-ಸಂಸ್ಥಾಪಕ ಮತ್ತು ಸಿಇಒ (CEO) ಸ್ಟೀಫನ್ ಮ್ಯಾಗ್ಲಿ ಅವರು ಕಳೆದ 5 ವರ್ಷಗಳಲ್ಲಿ ಯಾವುದೇ ಉದ್ಯೋಗಿ ತಮ್ಮ ಜಾಹೀರಾತು ಕಂಪನಿಯನ್ನು ತೊರೆದಿಲ್ಲ ಎಂದು ಹೇಳಿದ್ದಾರೆ. ಸ್ಟೀಫನ್ ಮ್ಯಾಗ್ಲಿ ಅವರು ತಮ್ಮ ಜಾಹೀರಾತು ಕಂಪನಿಯಲ್ಲಿ ಆರೋಗ್ಯಕರ ಕೆಲಸದ ಸಂಸ್ಕೃತಿಯನ್ನು ನಿರ್ಮಿಸುವತ್ತ ಗಮನಹರಿಸಿರುವುದಾಗಿ … Continued

ಪಾಕಿಸ್ತಾನದಲ್ಲಿ ತೀವ್ರಗೊಂಡ ಆರ್ಥಿಕ ಬಿಕ್ಕಟ್ಟು : 10000 ರೂ.ಗಳಿಗೆ ಏರಿದ ಎಲ್‌ಪಿಜಿ ಸಿಲಿಂಡರ್ ಬೆಲೆ, ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅಡುಗೆ ಅನಿಲ ಪೂರೈಕೆ…!

ಪಾಕಿಸ್ತಾನದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಾಷಿಂಗ್ಟನ್‌ನಲ್ಲಿರುವ ತನ್ನ ರಾಯಭಾರಿ ಕಚೇರಿಯ ಆಸ್ತಿಯನ್ನು ಮಾರಾಟ ಮಾಡಲು ಪಾಕಿಸ್ತಾನ ಸರ್ಕಾರ ಬಿಡ್‌ಗಳನ್ನು ಆಹ್ವಾನಿಸಿದೆ ಎಂಬ ಅಂಶದಿಂದ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎಷ್ಟು ಆಳವಾಗಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ, ಇಂಧನ ಉಳಿತಾಯಕ್ಕಾಗಿ ಶಾಪಿಂಗ್ ಮಾಲ್‌ಗಳು, ಮದುವೆ ಮಂದಿರಗಳು, ರೆಸ್ಟೋರೆಂಟ್‌ಗಳು ಮತ್ತು ಮಾರುಕಟ್ಟೆಗಳನ್ನು ಮೊದಲೇ ಮುಚ್ಚುವಂತೆ ಸೂಚಿಸಲಾಗಿದೆ. ಕಚ್ಚಾ … Continued

ಸರ್ಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಕೊಂದ ಆರೋಪ: ಇರಾನಿನಲ್ಲಿ ಇಬ್ಬರಿಗೆ ಗಲ್ಲು

ಸೆಪ್ಟೆಂಬರ್ 16 ರಂದು 22 ವರ್ಷದ ಕುರ್ದಿಶ್ ಇರಾನ್ ಮಹಿಳೆ ಮಹ್ಸಾ ಅಮಿನಿಯ ಸಾವಿನ ನಂತರ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಪಡೆಗಳ ಸದಸ್ಯರೊಬ್ಬರನ್ನು ಕೊಂದ ಆರೋಪದ ಮೇಲೆ ಇರಾನ್ ಸರ್ಕಾರ ಶನಿವಾರ ಇಬ್ಬರನ್ನು ಗಲ್ಲಿಗೇರಿಸಿತು. ಶನಿವಾರ ಮರಣದಂಡನೆಗೆ ಒಳಗಾದ ಇಬ್ಬರು ವ್ಯಕ್ತಿಗಳು ಬಸಿಜ್ ಅರೆಸೈನಿಕ ಪಡೆಯ ಸೇನಾಪಡೆಯ ಸದಸ್ಯನನ್ನು ಕೊಂದ ಆರೋಪ ಹೊರಿಸಲಾಗಿತ್ತು. … Continued

ಅಲಾಸ್ಕಾದಿಂದ ಆಸ್ಟ್ರೇಲಿಯಾಕ್ಕೆ ನಿಲ್ಲದೆ ಹಾರಾಟ..: ಎಲ್ಲಿಯೂ ನಿಲ್ಲದೆ 8,435 ಮೈಲುಗಳ ದೂರ ಹಾರುವ ಮೂಲಕ ನೂತನ ವಿಶ್ವ ದಾಖಲೆ ಸ್ಥಾಪಿಸಿದ ಈ ಪಕ್ಷಿ…!

ಬಾರ್-ಟೈಲ್ಡ್ ಗಾಡ್‌ವಿಟ್ ಅಲಾಸ್ಕಾದಿಂದ ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾಕ್ಕೆ 8,435 ಮೈಲುಗಳ ದೂರವನ್ನು ತಡೆರಹಿತವಾಗಿ ವಿಶ್ರಾಂತಿಯಿಲ್ಲದೆ ಹಾರಿದ್ದು, ಇದು ಹಕ್ಕಿಯು ದೀರ್ಘಾವಧಿಯ ತಡೆರಹಿತ ವಲಸೆ ಹಾರಾಟದ ಹಿಂದಿನ ದಾಖಲೆಯನ್ನು ಮುರಿದಿದೆ. ವಿಶ್ರಾಂತಿ ಇಲ್ಲದೆ ಅಥವಾ ಆಹಾರವಿಲ್ಲದೆ 11 ದಿನಗಳ ಪ್ರಯಾಣವನ್ನು ಮಾಡಿದ ವಲಸೆ ಹಕ್ಕಿಯ ಹಾರಾಟವನ್ನು ಉಪಗ್ರಹ ಟ್ಯಾಗ್ ಮೂಲಕ ಟ್ರ್ಯಾಕ್ ಮಾಡಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, … Continued

“ಅನಿಶ್ಚಿತ ಆರ್ಥಿಕತೆ”: 18,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಅಮೆಜಾನ್

ವಾಷಿಂಗ್ಟನ್: “ಅನಿಶ್ಚಿತ ಆರ್ಥಿಕತೆ”ಯಿಂದಾಗಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ ದೈತ್ಯ ಅಮೆಜಾನ್ ತನ್ನ 18,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಬುಧವಾರ ಪ್ರಕಟಿಸಿದೆ. “ನಾವು ನವೆಂಬರ್‌ನಲ್ಲಿ ಮಾಡಿದ ಕಡಿತಗಳು ಮತ್ತು ಇಂದು ನಾವು ಹಂಚಿಕೊಳ್ಳುತ್ತಿರುವವುಗಳ ನಡುವೆ, ನಾವು 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜಿಸಿದ್ದೇವೆ” ಎಂದು ಸಿಇಒ ಆಂಡಿ ಜಾಸ್ಸಿ ತಮ್ಮ ಸಿಬ್ಬಂದಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಪನಿಯು ನವೆಂಬರ್‌ನಲ್ಲಿ … Continued

ಪಾಕಿಸ್ತಾನದಲ್ಲಿ ತೀವ್ರಗೊಂಡ ಆರ್ಥಿಕ ಬಿಕ್ಕಟ್ಟು: ಇಂಧನ ಉಳಿಸಲು ಮಾಲ್‌ಗಳು, ಮಾರುಕಟ್ಟೆಗಳು, ಮದುವೆ ಹಾಲ್‌ಗಳನ್ನು ಬೇಗನೆ ಮುಚ್ಚಲು ಆದೇಶ..!

ನವದೆಹಲಿ: ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಹಣದ ಕೊರತೆಯಿಂದ ನಲುಗುತ್ತಿರುವ ಪಾಕಿಸ್ತಾನದ ಸರ್ಕಾರ ಈಗ ಇಂಧನ ಉಳಿಸುವ ಸಲುವಾಗಿ ಮಂಗಳವಾರ (ಜನವರಿ 3) ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಮದುವೆ ಮಂಟಪಗಳನ್ನು ಬೇಗನೆ ಮುಚ್ಚುವುದಾಗಿ ಘೋಷಿಸಿದೆ. ಈ ನಿರ್ಧಾರವು ಪಾಕಿಸ್ತಾನ ಸರ್ಕಾರದ ಇಂಧನ ಸಂರಕ್ಷಣಾ ಯೋಜನೆಯಡಿಯ ಕ್ರಮಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ. ಇಂಧನ ಉಳಿಸಲು ಮತ್ತು ಆಮದು ಮಾಡಿಕೊಳ್ಳುವ … Continued

ಹೊಸ ವರ್ಷದ ಮೊದಲ ದಿನ 60ನೇ ಮಗುವಿಗೆ ತಂದೆಯಾದ 50 ವರ್ಷದ ವ್ಯಕ್ತಿ…! ಈತನಿಗೆ 100 ಮಕ್ಕಳನ್ನು ಪಡೆಯುವ ಬಯಕೆ…!!

50ರ ಹರೆಯದ ಜಾನ್ ಮುಹಮ್ಮದ್ ಖಿಲ್ಜಿ ಜನವರಿ 1ರಂದು ಭಾನುವಾರ ಬೆಳಗ್ಗೆ 60ನೇ ಮಗುವಿಗೆ ತಂದೆಯಾಗಿದ್ದಾರೆ…! ಅಲ್ಲದೆ, ತನ್ನ ಗುರಿ 100 ಮಕ್ಕಳನ್ನು ಪಡೆಯುವುದು ಎಂದು ಅವರನ್ನು ಉಲ್ಲೇಖಿಸಿ ಕ್ವೆಟ್ಟಾ ವಾಯ್ಸ್‌ ವರದಿ ಮಾಡಿದೆ. 60ನೇ ಮಗುವಿಗೆ ಹಾಜಿ ಖುಶಾಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಾಕಿಸ್ತಾನದ ಕ್ವೆಟ್ಟಾದ ಜಾನ್ ಮುಹಮ್ಮದ್ … Continued