ದಕ್ಷಿಣ ಕೊರಿಯಾದಲ್ಲಿ ಹ್ಯಾಲೋವೀನ್ ಹಬ್ಬದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 59 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ : ಬೀದಿಗಳಲ್ಲಿ ಹೃದಯ ವಿದ್ರಾವಕ ದೃಶ್ಯಗಳು

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಪ್ರಮುಖ ಮಾರುಕಟ್ಟೆಯೊಂದರಲ್ಲಿ ಹ್ಯಾಲೋವೀನ್ ಹಬ್ಬಕ್ಕಾಗಿ ಸೇರಿದ್ದ ಭಾರಿ ಜನಸ್ತೋಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 59 ಜನರು ಸಾವಿಗೀಡಾಗಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಿರಿದಾದ ಬೀದಿಗಳಲ್ಲಿ ಅವ್ಯವಸ್ಥೆಯ ನಡುವೆ ಹೃದಯ ಸ್ತಂಭನಕ್ಕೆ ಒಳಗಾದ ಜನರನ್ನು ಪುನರುಜ್ಜೀವನಗೊಳಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪ್ರಯತ್ನಿಸುತ್ತಿರುವುದು ವೀಡಿಯೊಗಳಲ್ಲಿ … Continued

ಚೀನಾದಲ್ಲಿ ಕ್ರೇನ್ ಬಳಸಿ ಕೋವಿಡ್ ರೋಗಿಯನ್ನು ಮೇಲಕ್ಕೆತ್ತುತ್ತಿರುವ ವೀಡಿಯೋ ವೈರಲ್ | ವೀಕ್ಷಿಸಿ

ಚೀನಾದಲ್ಲಿ ಮತ್ತೆ ಕೋವಿಡ್‌ ಹರಡುವಿಕೆಯೊಂದಿಗೆ, ಸರ್ಕಾರವು ಲಾಕ್‌ಡೌನ್‌ಗಳಂತಹ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಮತ್ತೆ ಜಾರಿ ಮಾಡಿದೆ. ಈ ಮಧ್ಯೆ, ಚೀನಾದಲ್ಲಿ ರೋಗಿಯೊಬ್ಬರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಪರಿಶೀಲಿಸದ ಈ ವೀಡಿಯೊವನ್ನು ಅದೇ ಪ್ರದೇಶದ ಸ್ಥಳೀಯರ ಕಿಟಕಿಯಿಂದ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲುಅಧಿಕಾರಿಗಳು ಕ್ರೇನ್‌ನಿಂದ ವ್ಯಕ್ತಿಯನ್ನು ಎಚ್ಚರಿಕೆಯಿಂದ … Continued

ಟ್ವಿಟರ್​ಗೆ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಸ್ಥಾಪಿಸುವುದಾಗಿ ಘೋಷಿಸಿದ ಎಲಾನ್ ಮಸ್ಕ್

ನ್ಯೂಯಾರ್ಕ್: ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್​ನ (Twitter) ನೂತನ ಮಾಲೀಕ, ವಿಶ್ವದ ಅತಿ ಶ್ರೀಮಂತ ಎಲಾನ್ ಮಸ್ಕ್ ಹೊಸ ಘೋಷಣೆ ಮಾಡಿದ್ದು, ಟ್ವಿಟರ್​ಗೆ ‘ಕಂಟೆಂಟ್ ಮಾಡರೇಷನ್ ಕೌನ್ಸಿಲ್’ ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ. ಈ ಮಂಡಳಿಯು ಪ್ರಮುಖ ಕಂಟೆಂಟ್​ಗಳು ಮತ್ತು ಖಾತೆ ಮರುಸ್ಥಾಪನೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿ ಖರೀದಿಸುವ 44 … Continued

ವಿಜಯ್ ಮಾಮಾ, ಹಾಯ್, ನಾನು ರಿಷಿ” -ವೀಡಿಯೊ ಕರೆಯಲ್ಲಿ ವ್ಯಕ್ತಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ಆಹ್ವಾನಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್| ವೀಕ್ಷಿಸಿ

ಸೆಲೆಬ್ರಿಟಿ ಬಾಣಸಿಗ ಸಂಜಯ್ ರೈನಾ ಅವರು ಯುನೈಟೆಡ್ ಕಿಂಗ್‌ಡಂನ ನೂತನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರೊಂದಿಗಿನ ಸಂಕ್ಷಿಪ್ತ ಮತ್ತು ಸಂತೋಷಕರ ಸಂವಾದದ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಕ್ಲಿಪ್‌ನಲ್ಲಿ, ಬಾಣಸಿಗ ಕ್ಯಾಮೆರಾಗೆ “ಮಾಮಾ, ನಿಮಗೆ ಹಲೋ ಹೇಳಲು ಒಬ್ಬರು ಸಿಕ್ಕಿದ್ದಾರೆ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ನಂತರ ಅವರು ಕ್ಯಾಮರಾವನ್ನು ಎಡಕ್ಕೆ ಪ್ಯಾನ್ ಮಾಡುತ್ತಾರೆ … Continued

ಮತ್ತೊಮ್ಮೆ ಭಾರತ ಸರ್ಕಾರ ಹೊಗಳಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ : ಐಎಸ್‌ಐ ಎಕ್ಸ್‌ಪೋಸ್‌ ಮಾಡುವುದಾಗಿ ಬೆದರಿಕೆ

ಲಾಹೋರ್‌: ನವದೆಹಲಿಯ ಸರ್ಕಾರ ಬೇಜವಾಬ್ದಾರಿ ಸರ್ಕಾರವಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ನಾಯಕತ್ವ ಮತ್ತು ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಲಾಹೋರ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಇಸ್ಲಾಮಾಬಾದ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯಕ್ಕೆ ಎಚ್ಚರಿಕೆ ನೀಡಿದ್ದಾರೆ. ತಾನು ನವಾಜ್ ಷರೀಫ್ ಅವರಂತೆ ಓಡಿಹೋಗುವವನಲ್ಲ, ಐಎಸ್‌ಐ ಕಾರ್ಯಚುವಟಿಕೆಯನ್ನು ದೇಶದ ಮುಂದೆ ಬಹಿರಂಗಪಡಿಸುತ್ತೇನೆ ಎಂದು … Continued

ಈ ದಂಪತಿ ಕುರಿತು ಒಂದೇ ದಿನದಲ್ಲಿ 200 ಕೋಟಿ ಜನರಿಂದ ಗೂಗಲ್‌ನಲ್ಲಿ ಹುಡುಕಾಟ…!

ಭಾರತೀಯ ಮೂಲದ ಜನರು ರಿಷಿ ಸುನಕ್ ಅವರನ್ನು ಬ್ರಿಟಿಷ್ ಪ್ರಧಾನಿಯಾಗಿ ನೇಮಕ ಮಾಡಿರುವುದನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಗ್ರೇಟ್ ಬ್ರಿಟನ್‌ನ ಮೊದಲ ಬಿಳಿಯೇತರ ಮತ್ತು ಹಿಂದೂ ಪ್ರಧಾನಿಯಾಗುವ ಮೂಲಕ ರಿಷಿ ಇತಿಹಾಸ ಬರೆದಿದ್ದಾರೆ. ರಿಷಿ ಜೊತೆಗೆ, ಸುಧಾ ಮೂರ್ತಿ ಮತ್ತು ಬಿಲಿಯನೇರ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಕೂಡ ಮಾಧ್ಯಮ ಮತ್ತು … Continued

ಟ್ವಿಟರ್‌ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್ ಅಗರ್ವಾಲ್ ಅವರನ್ನು ವಜಾ ಮಾಡಿದ ಎಲೋನ್ ಮಸ್ಕ್

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್‌ನ ನಿಯಂತ್ರಣವನ್ನು ತೆಗೆದುಕೊಂಡ ನಂತರ ಅದರ ಉನ್ನತಾಧಿಕಾರಿಗಳನ್ನು ವಜಾ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಪ್ಲಾಟ್‌ಫಾರ್ಮ್‌ನ ಖರೀದಿ ಪೂರ್ಣಗೊಳಿಸಲು ಇದು ಶುಕ್ರವಾರದ ಗಡುವಿನ ಮುಂದೆ ಬಂದಿದೆ. ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್, ಕಾನೂನು, ನೀತಿ ಮತ್ತು ಟ್ರಸ್ಟ್ ಮುಖ್ಯಸ್ಥರಾದ ವಿಜಯ ಗದ್ದೆ, ಮುಖ್ಯ ಹಣಕಾಸು … Continued

ಎಲೋನ್ ಮಸ್ಕ್ ಈಗ “ಚೀಫ್ ಟ್ವಿಟ್”…! : ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ ಮಸ್ಕ್, ಟ್ವಿಟರ್ ಕಚೇರಿಗೆ ಸಿಂಕ್‌ನೊಂದಿಗೆ ಭೇಟಿ

ಎಲೋನ್ ಮಸ್ಕ್ ತನ್ನ 44 ಬಿಲಿಯನ್ ಟ್ವಿಟರ್ ಸ್ವಾಧೀನ ಖರೀದಿ ಪ್ರಕ್ರಿಯೆ ಮುಗಿಯುವ ಮುನ್ನವೇ ತನ್ನ ಬಯೋವನ್ನು Chief Twit’ (ಟ್ವಿಟರ್ ಮುಖ್ಯಸ್ಥ) ಎಂದು ಬದಲಾಯಿಸಿಕೊಂಡಿದ್ದಾರೆ. ಟೆಸ್ಲಾ ಸಿಇಒ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಗೆ ಭೇಟಿ ನೀಡಿ ಬುಧವಾರ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ … Continued

ಮತ್ತೆರಡು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಕೈಯಿಂದ ವೇಗವಾಗಿ ಓಡುವ ಅಥ್ಲೀಟ್‌

ಕೈಯಿಂದಲೇ ವೇಗವಾಗಿ ಓಡುವ ಅಥ್ಲೀಟ್‌ ಜಿಯಾನ್‌ ಕ್ಲಾರ್ಕ್‌ (Zion Clark) ಮತ್ತೆ ಎರಡು ಗಿನ್ನಿಸ್‌ ದಾಖಲೆಗಳನ್ನು ಬರೆದಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಜಿಯಾನ್‌ ಕ್ಲಾರ್ಕ್‌ ಸಾಧನೆಯ ವೀಡಿಯೋ ಪೋಸ್ಟ್ ಮಾಡಿದೆ. ಕೌಡಲ್ ರಿಗ್ರೆಸಿವ್ ಸಿಂಡ್ರೋಮ್ ಎಂಬ ಕಾಯಿಲೆಯಿಂದಾಗಿ ಕಾಲುಗಳಿಲ್ಲದೆ, ಕೈಗಳ ಮೇಲೆಯೇ ಅವಲಂಬಿತವಾಗಿರುವ ಅಥ್ಲೀಟ್ ಜಿಯಾನ್ ಕ್ಲಾರ್ಕ್ ಈಗ ಇನ್ನೆರಡು ಗಿನ್ನಿಸ್‌ … Continued

ಇರಾನ್‌ನ ಶಿಯಾ ಪ್ರಾರ್ಥನಾ ಸ್ಥಳದ ಮೇಲೆ ಬಂದೂಕುಧಾರಿಗಳಿಂದ ದಾಳಿ: ಕನಿಷ್ಠ 15 ಜನರ ಸಾವು

ಟೆಹ್ರಾನ್‌: ಇರಾನ್‌ನ  ಪ್ರಮುಖ ಪ್ರಾರ್ಥನಾ ಸ್ಥಳ ಶಿರಾಜ್ ನಗರದ ಶಾ ಚೆರಾಗ್ ಸಮಾಧಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳು ದೇವಾಲಯವನ್ನು ಪ್ರವೇಶಿಸಿದರು ಮತ್ತು ಯಾತ್ರಿಕರ ಮೇಲೆ ಗುಂಡು ಹಾರಿಸಿದರು ಎಂದು ಇರ್ನಾ ಸುದ್ದಿ ಸಂಸ್ಥೆ … Continued