ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೈಕಲ್‌ನಿಂದ ಬಿದ್ದಾಗ… | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಶನಿವಾರ ಬೆಳಗ್ಗೆ ಡೆಲವೇರ್ ರಾಜ್ಯದ ಬೀಚ್ ಹೋಮ್ ಬಳಿ ಬೈಸಿಕಲ್ ನಲ್ಲಿ ಹೋಗುತ್ತಿದ್ದಾಗ ಎಡವಿ ಬಿದ್ದು, ಗಾಯಗೊಂಡರು. ಶ್ವೇತಭವನದ ಪೂಲ್ ವರದಿಯ ವೀಡಿಯೊವು 79 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷರು ಸೈಕಲ್‌ನಿಂದ ಬಿದ್ದು ನಂತರ ತಕ್ಷಣವೇ ಎದ್ದಿರುವುದನ್ನು ತೋರಿಸಿದೆ. ನಂತರ ಅವರು ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. … Continued

ಕಾಬೂಲ್‌ ಗುರುದ್ವಾರದ ಬಳಿ ನಡೆದ ಸ್ಫೋಟ: ಇಬ್ಬರ ಸಾವು

ಕಾಬೂಲ್/ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರದಲ್ಲಿ ಇಂದು, ಶನಿವಾರ ಬೆಳಗ್ಗೆ ಎರಡು ಸ್ಫೋಟಗಳು ಸಂಭವಿಸಿದ ನಂತರ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಸಿಲುಕಿಕೊಂಡಿದ್ದಾರೆ. ಗುರುದ್ವಾರದ ಗೇಟ್ ಬಳಿ ಸ್ಫೋಟಗಳು ಸಂಭವಿಸಿವೆ. ನಂತರ ಗುಂಡಿನ ಸದ್ದುಗಳೂ ಕೇಳಿಬಂದವು. ಎರಡು ಸ್ಫೋಟಗಳು ಗುರುದ್ವಾರದ ದಶ್ಮೇಶ್ ಪಿತಾ ಸಾಹಿಬ್ ಜಿ, ಕಾರ್ಟೆ ಪರ್ವಾನ್, ಕಾಬೂಲ್‌ನ ಎರಡು ಗೇಟ್‌ಗಳ ಬಳಿ ಸಂಭವಿಸಿವೆ … Continued

ಏಕದಿನದ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆಯ ಸ್ಕೋರ್: 50 ಓವರ್‌ಗಳಲ್ಲಿ 498 ರನ್‌ಗಳಿಸಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್‌

ಇಂಗ್ಲೆಂಡ್ ಪುರುಷರ ಕಕ್ರಿಕೆಟ್‌ ತಂಡ, ಶುಕ್ರವಾರ, ಜೂನ್ 17 ರಂದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್‌ ಗಳಿಸಿ ನೂತನ ದಾಖಲೆ ಸೃಷ್ಟಿಸಿತು. ವಿಆರ್‌ಎ ಸ್ಟೇಡಿಯಂನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 50 ಓವರ್‌ಗಳಲ್ಲಿ 498/4 ಸ್ಕೋರ್ ಗಳಿಸಿ ಏಕದಿನದ ಪಂದ್ಯಗಳ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿತು. ಜೂನ್ 2018 ರಲ್ಲಿ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ … Continued

ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಟಿವಿ ನಿರೂಪಕ ಈಗ ಬೀದಿ ಬದಿ ತಿನಿಸು ಮಾರಾಟ ಮಾಡ್ತಾರೆ….!

ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದಲ್ಲಿ ಅಫ್ಘಾನಿಸ್ತಾನದ ಖ್ಯಾತ ಟಿವಿ ಆ್ಯಂಕರ್ ಒಬ್ಬರು ಈಗ ಬೀದಿಗಳಲ್ಲಿ ಆಹಾರವನ್ನು ಮಾರಾಟ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಮಾಧ್ಯಮ ನಿರೂಪಕರಾಗಿದ್ದ ಮೂಸಾ ಮೊಹಮ್ಮದಿ ಅವರು ಈಗ ಜೀವನೋಪಾಯಕ್ಕಾಗಿ ಬೀದಿಯಲ್ಲಿ ತಿನಿಸು … Continued

ಸಿಂಹಿಣಿ ಮತ್ತು 40 ಮೊಸಳೆಗಳು… ನದಿಯಲ್ಲಿ ಸತ್ತ ಹಿಪ್ಪೋ ಮೇಲೆ ನಿಂತ ಸಿಂಹಿಣಿಯನ್ನು ಸುತ್ತುವರಿದ 40 ಮೊಸಳೆಗಳು :ಮುಂದೇನಾಯ್ತು ನೋಡಿ

ನೀರಿನಲ್ಲಿ ಸುಮಾರು 40 ಮೊಸಳೆಗಳು ಸುತ್ತುವರಿದ ಹಾಗೂ ಈ ಮೊಸಳೆಗಳ ಮಧ್ಯೆ ಸಿಂಹವು ಸತ್ತ ಹಿಪ್ಪೋ ಮೇಲೆ ಸಿಕ್ಕಿಹಾಕಿಕೊಂಡ ಅದ್ಭುತ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಂಟೋನಿ ಪೆಸಿ ಅವರು ಮೇ 23, 2022 ರಂದು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಗೇಮ್ ಡ್ರೈವ್‌ನಲ್ಲಿ ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಅವರು ನದಿಯಲ್ಲಿ ಹಸಿದ ಪ್ರಾಣಿಭಕ್ಷಕಗಳಿಂದ … Continued

ಈ ನಾಯಿ ಬೃಹತ್‌ ಹುಲಿಗಳ ಗುಂಪಿನ ಜೊತೆಯೇ ವಾಸಿಸುತ್ತದೆ… ಅಸಂಭವ ಪ್ರೀತಿಗೆ ನಿಬ್ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಪ್ರಾಣಿಗಳ ವೀಡಿಯೊಗಳನ್ನು ಯಾರು ಇಷ್ಟಪಡುವುದಿಲ್ಲ? ನಾಯಿಮರಿಗಳು ಆಡುವ ಮುದ್ದಾದ ವೀಡಿಯೊಗಳು, ಹುಚ್ಚುತನದ ಕೆಲಸಗಳನ್ನು ಮಾಡುತ್ತಿರುವ ಬೆಕ್ಕುಗಳು ಮತ್ತು ಆನೆಗಳು ಹೃದಯವನ್ನು ಕರಗಿಸುತ್ತವೆ, ನಗುವಂತೆ ಮಾಡುತ್ತವೆ. ಆದಾಗ್ಯೂ, ಅಪರೂಪದ ವೀಡಿಯೊವೊಂದು ಇಂಟರ್ನೆಟ್‌ನಲ್ಲಿ ಸುತ್ತುತ್ತಿದೆ. ಯಾಕೆಂದರೆ ಅದು ಒಂದು ನಾಯಿ ಮತ್ತು ಹುಲಿಗಳ ಗುಂಪಿನ ನಡುವಿನ ಅಸಂಭವವಾದ, ಆದರೆ ಸುಂದರವಾದ ಸ್ನೇಹವನ್ನು ಚಿತ್ರಿಸುವ ಅಪರೂಪದ ವೀಡಿಯೊ ಆಗಿದೆ. ನಾಯಿಯೊಂದು … Continued

ವಿದೇಶ ಪ್ರವಾಸದಲ್ಲಿದ್ದಾಗ ರಷ್ಯಾ ಅಧ್ಯಕ್ಷ ಪುತಿನ್‌ರ ಮಲ, ಮೂತ್ರವನ್ನು ಸಂಗ್ರಹಿಸಿ ಅಂಗರಕ್ಷಕರು ಸೂಟ್‌ಕೇಸ್‌ನಲ್ಲಿ ಸಾಗಿಸ್ತಾರಂತೆ: ಕಾರಣ ಇಲ್ಲಿದೆ

ಮಾಸ್ಕೋ: ಉಕ್ರೇನ್‌ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅವರ ಆರೋಗ್ಯ ಈಗ ಜಾಗತಿಕವಾಗಿ ಪ್ರಮುಖ ಚರ್ಚಾ ವಿಷಯವಾಗಿದೆ. ಪುತಿನ್‌ ಆರೋಗ್ಯದ ವಿಚಾರವಾಗಿ ಹಲವು ಅಚ್ಚರಿ ಅಂಶಗಳನ್ನು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ. ಪುತಿನ್‌ ಆರೋಗ್ಯದ ವಿಚಾರವಾಗಿ ಫಾಕ್ಸ್‌ ಸುದ್ದಿ ಸಂಸ್ಥೆ ಈಚೆಗೆ ಅಚ್ಚರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಪುತಿನ್‌ ತಮ್ಮ ಆರೋಗ್ಯದ ಗುಟ್ಟು … Continued

ಮಹಿಳಾ ಉದ್ಯೋಗಿಗಳಿಗೆ ಸಂಬಳ-ಹುದ್ದೆಯಲ್ಲಿ ತಾರತಮ್ಯ ಪ್ರಕರಣ: 921 ಕೋಟಿ ರೂ. ಗಳ ಪರಿಹಾರ ನೀಡಲು ಒಪ್ಪಿದ ಗೂಗಲ್‌

ನ್ಯೂಯಾರ್ಕ್: ಮಹಿಳಾ ಉದ್ಯೋಗಿಗಳಿಗೆ ಸಂಬಳದಲ್ಲಿ ತಾರತಮ್ಯ ಮಾಡಿದ್ದಕ್ಕೆ ಗೂಗಲ್‌ 118 ದಶಲಕ್ಷ ಡಾಲರ್‌(ಅಂದಾಜು ಭಾರತೀಯ 921 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ. ಮಹಿಳಾ ಉದ್ಯೋಗಿಗಳಿಗೆ ಕಡಿಮೆ ವೇತನ ನೀಡುತ್ತಿರುವ ಮತ್ತು ಅವರಿಗೆ ಕೆಳ ಶ್ರೇಣಿಯ ಸ್ಥಾನಗಳನ್ನು ನಿಗದಿಪಡಿಸಿದ ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ತಪ್ಪನ್ನು ಒಪ್ಪಿಕೊಳ್ಳದೆ ಇತ್ಯರ್ಥಪಡಿಸಲು “ತುಂಬಾ ಸಂತೋಷವಾಗಿದೆ” ಎಂದು ಗೂಗಲ್ ಭಾನುವಾರ ಹೇಳಿದೆ. ಇದು … Continued

ಪ್ರವಾದಿ ಕುರಿತ ವಿವಾದವು ಭಾರತದ ಆಂತರಿಕ ವಿಷಯ….ನಾವೇಕೆ ಪ್ರಚೋದಿಸಬೇಕು?’: ಬಾಂಗ್ಲಾದೇಶ ಸಚಿವ ಹಸನ್ ಮಹಮೂದ್

ಢಾಕಾ: ಪ್ರವಾದಿ ಮೊಹಮ್ಮದ್‌ ಅವರ ಅವಮಾನದ ಸುತ್ತಲಿನ ವಿವಾದವು ಭಾರತದ ಆಂತರಿಕ ವಿಷಯವಾಗಿದೆ ಮತ್ತು ಢಾಕಾ ಸರ್ಕಾರವು ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಮತ್ತು ಪ್ರಸಾರ ಸಚಿವ ಡಾ.ಹಸನ್ ಮಹಮೂದ್ ಹೇಳಿದ್ದಾರೆ. ಮೊದಲನೆಯದಾಗಿ, ಬಾಂಗ್ಲಾದೇಶಕ್ಕೆ ಇದು ಬಾಹ್ಯ ಸಮಸ್ಯೆಯಾಗಿದೆ. ಇದು ಭಾರತದ ಸಮಸ್ಯೆಯೇ ಹೊರತು ಬಾಂಗ್ಲಾದೇಶದ್ದಲ್ಲ. ನಾವು ಏನನ್ನೂ ಹೇಳಬೇಕಾಗಿಲ್ಲ ”ಎಂದು ಮಹಮೂದ್ … Continued

ಪ್ರವಾದಿ ಹೇಳಿಕೆ ವಿವಾದ: ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಗಡಿಪಾರು ಮಾಡಲು ಕುವೈತ್ ಸೂಚನೆ

ನವದೆಹಲಿ: ಬಿಜೆಪಿಯ ಮಾಜಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಹೇಳಿಕೆಗಳ ವಿರುದ್ಧ ಕುವೈತ್ ನಗರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕುವೈತ್ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ಪ್ರತಿಭಟನಾಕಾರರನ್ನು ಬಂಧಿಸಿ ಆಯಾ ದೇಶಗಳಿಗೆ ವಾಪಸ್ ಕಳುಹಿಸುವಂತೆ ಕುವೈತ್ ಸರ್ಕಾರ ಸೂಚನೆ ನೀಡಿದೆ. ‘ಇಲ್ಲಿನ ಎಲ್ಲಾ ವಲಸಿಗರು ಕಾನೂನನ್ನು … Continued