ರಷ್ಯಾದ ಸ್ಪುಟ್ನಿಕ್ ವಿ 200 ಮಿಲಿಯನ್ ಕೊರೊನಾ ಡೋಸ್‌ ತಯಾರಿಸಲಿರುವ ಭಾರತದ ವಿರ್ಚೋ ಗ್ರೂಪ್

ಮಾಸ್ಕೋ: ವರ್ಷದೊಳಗೆ 200 ಮಿಲಿಯನ್ ಡೋಸ್ ಕೊರೋನಾ ಲಸಿಕೆ ಉತ್ಪಾದನೆಗಾಗಿ ಭಾರತೀಯ ಮೂಲದ ಔಷಧ ಸಂಸ್ಥೆ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರಷ್ಯಾದ ಸ್ಪುಟ್ನಿಕ್ ವಿ. ಕೊವಿಡ್‌ ಲಸಿಕೆಯ ಪಾಲುದಾರ ಸಂಸ್ಥೆ ಸೋಮವಾರ ಹೇಳಿದೆ. ಭಾರತದಲ್ಲಿ ಪ್ರತಿ ವರ್ಷ 200 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಗೆ ವಿರ್ಚೋ ಗ್ರೂಪ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ದೇಶದ ಸಾರ್ವಜನಿಕ … Continued

ಕೊವಿಡ್‌ ಪರಿಣಾಮ; ನಿವ್ವಳ ಲಾಭದಲ್ಲಿ ಶೇ 44.4 ಕುಸಿತ ಕಂಡ ಸೌದಿ ಇಂಧನ ದೈತ್ಯ ಅರಾಮ್ಕೊ..!

ಕೊವಿಡ್‌ ಸಾಂಕ್ರಾಮಿಕ ರೋಗವು ಜಾಗತಿಕ ಬೇಡಿಕೆಯ ಮೇಲೆ ಪರಿಣಾಮ ಬೀರಿದ ಕಾರಣ ಇಂಧನ ದೈತ್ಯ ಸೌದಿ ಅರಾಮ್ಕೊ 2020ರ ನಿವ್ವಳ ಲಾಭದಲ್ಲಿ ಶೇ 44.4 ರಷ್ಟು ಕುಸಿತ ಕಂಡಿದೆ. ಸೌದಿ ಅರೇಬಿಯಾದ ಹಣದ ಹಸು ಎಂದೇ ಕರೆಯಲ್ಪಡುವ ಅರಾಮ್ಕೊ, 2019ರಲ್ಲಿ ಗಳಿಕೆ ಬಹಿರಂಗಪಡಿಸಲು ಪ್ರಾರಂಭಿಸಿದಾಗಿನಿಂದ ಸತತ ಲಾಭದಲ್ಲಿತ್ತು. ಆದರೆ ಕೊವಿಡ್‌ನಿಂದಾಗಿಬದಲಾದ ಸನ್ನಿವೇಶದಲ್ಲಿ ಕುಸಿತ ಕಂಡಿದೆ. ಇದು … Continued

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಹತ್ಯೆ

ಕರಾಚಿ: ಪಾಕಿಸ್ತಾನದ ಸಿಂಧ್‌ ಪ್ರಾಂತದಲ್ಲಿ ಹಿಂದೂ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಸ್ಥಳಿಯ ಸುದ್ದಿವಾಹಿನಿ ಹಾಗೂ ಉರ್ದು ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಯ್‌ ಲಾಲವಾನಿ ಎಂಬ ಪತ್ರಕರ್ತರನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಅವರು ಕ್ಷೌರದಂಗಡಿಯಲ್ಲಿ ಕುಳಿತ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಕೈ, ಹೊಟ್ಟೆ ಹಾಗೂ ಮೊಣಕಾಲಿಗೆ ಗುಂಡು … Continued

ಪಾಕ್‌ ಪ್ರಧಾನಿ ಇಮ್ರಾನ್‌ಗೆ ಕೊರೊನಾ ದೃಢ

ಇಸ್ಲಾಮಾಬಾದ್:‌ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಕೊವಿಡ್‌ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದು, ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದಾರೆ. ಅವರು ಅವರು ಚೀನಾ ಲಸಿಕೆ ಪಡೆದಿದ್ದರು.ಎಂದು ಮಾಧ್ಯಮಗಳು ವರದಿ ಮಾಡಿವೆ.ಸದ್ಯ ಪಾಕಿಸ್ತಾನದಲ್ಲಿ ಇದೊಂದೆ ಲಸಿಕೆ ಲಭ್ಯವಿದೆ ಪಾಕಿಸ್ತಾನದ ಆರೋಗ್ಯ ಸಚಿವ ಫೈಸಲ್‌ ಸುಲ್ತಾನ್‌ ಈ ಕುರಿತಾದಂತೆ ಟ್ವೀಟ್‌ ಮಾಡಿದ್ದು, … Continued

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ. ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ … Continued

೧೦ ನಿಮಿಷಗಳಲ್ಲಿ ಎಲೆಕ್ಟ್ರಿಕ್ ಕಾರ್ ಚಾರ್ಜ್: ಹೀಗೆಂದು ಸ್ಟಾರ್ಟಪ್ ಕಂಪನಿಯೊಂದು ಹೇಳುತ್ತದೆ…!

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್ ಆಂಪಲ್ ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ನೆಟ್‌ವರ್ಕ್ ಪ್ರಾರಂಭಿಸಿದ್ದು, ಹತ್ತು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕಾರನ್ನು ಪೂರ್ಣ ಚಾರ್ಜ್‌ನೊಂದಿಗೆ ಒದಗಿಸಬಹುದಾಗಿದೆ ಎಂದು ಹೇಳಿದೆಯೆಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಇದು ಪ್ರಸ್ತುತ ಉಬರ್‌ನೊಂದಿಗಿನ ಸಹಭಾಗಿತ್ವ ಹೊಂದಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ರೈಡ್-ಹೇಲಿಂಗ್ ಅಪ್ಲಿಕೇಶನ್‌ನ ಫ್ಲೀಟ್ ಕಾರುಗಳನ್ನು ಚಾರ್ಜ್ ಮಾಡುವ ಉಸ್ತುವಾರಿಯನ್ನು ಹೊಂದಿದೆ. ಮತ್ತು … Continued

ಪಾಕಿಸ್ತಾನದಲ್ಲಿ ಅಹ್ಮದಿ ಮಸೀದಿ ಉರುಳಿಸಿದ ಮುಲ್ಲಾಗಳು..!

ಪಾಕಿಸ್ತಾನದ ಗುಜ್ರಾನ್‌ವಾಲಾ ಜಿಲ್ಲೆಯ ಗಾರ್ಮೋಲಾ ವಿರ್ಕನ್‌ ಗ್ರಾಮದಲ್ಲಿ ಉಗ್ರ ಮುಲ್ಲಾಗಳು ಅಹ್ಮದಿ ಮಸೀದಿಯನ್ನು ಹೊಡೆದುರುಳಿಸಿದ್ದಾರೆ. ಈ ವಿಧ್ವಂಸಕ ಕೃತ್ಯಕ್ಕೆ ಸ್ಥಳಿಯ ಪೊಲೀಸರು ಬೆಂಬಲ ನೀಡಿರುವುದು ವಿಶೇಷ. ಮಸೀದಿಯ ಗುಮ್ಮಟ ಹಾಗೂ ಮಿನಾರ್‌ಗಳನ್ನು ಜನಸಮೂಹ ನೆಲಸಮ ಮಾಡಿ ಸಂಭ್ರಮಾಚರಣೆ ಮಾಡಿದ ವಿಡಿಯೋ ಪಾಕಿಸ್ತಾನದಲ್ಲಿ ವೈರಲ್‌ ಆಗಿದೆ. ಈ ಕೃತ್ಯವನ್ನು ಹಲವು ಮುಖಂಡರು ಹಾಗೂ ಪತ್ರಕರ್ತರ ಖಂಡಿಸಿದ್ದಾರೆ. ಪಾಕಿಸ್ತಾನದ … Continued

ಮ್ಯಾನ್ಮಾರ್:‌ ಸೂಕಿಗೆ ಮತ್ತೊಂದು ಸಂಕಷ್ಟ

ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್‌ ಸಾನ್‌ ಸೂಕಿ ಅವರಿಗೆ ೫ ಲಕ್ಷ ಡಾಲರ್‌ ಹಣ ನೀಡಿದ್ದಾಗಿ ನಿರ್ಮಾಣ ಕ್ಷೇತ್ರದ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿರುವುದು ಸೂಕಿಯ ಸಂಕಷ್ಟವನ್ನು ಹೆಚ್ಚಿಸಿದೆ. ಮೌಂಗ್‌ ವೇಕ್‌ ಸೂಕಿಗೆ ಹಣ ನೀಡಿದ್ದಾಗಿ ಸರಕಾರಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಮಿಲಿಟರಿ ಆಡಳಿತ ಸೂಕಿ ಮೇಲೆ ಗಂಭೀರ ಆರೋಪ ಹೊರಿಸಲು … Continued

ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗುವ ಸಾಧ್ಯತೆ: ವಿಶ್ವಸಂಸ್ಥೆ

ಜೆನಿವಾ: ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹವಾಮಾನ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು ಕೊವಿಡ್‌-೧೯ ಪ್ರಸಾರ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಸಂಘಟನೆ, ಕೊರೊನಾ ಪ್ರಸರಣದ ಮೇಲೆ ಹವಾಮಾನ ಬದಲಾವಣೆ ಹಾಗೂ ವಾಯುವಿನ ಗುಣಮಟ್ಟ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು … Continued

ತನಗೆ ಚಿಕಿತ್ಸೆ ನೀಡಿದ ವೈದ್ಯನ 12 ವರ್ಷಗಳ ನಂತರ ಗುರುತಿಸಿ ಕೃತಜ್ಞತೆ ಸಲ್ಲಿಸಿದ ಕಾಡಾನೆ…!

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಗುರುತು ಹಿಡಿದ ಥಾಯ್ಲೆಂಡ್‌ನ ಕಾಡಾನೆಯೊಂದರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಥಾಯ್ಲೆಂಡಿನ ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ ಅವರನ್ನು ೧೨ ವರ್ಷಗಳ ಬಳಿಕ 31 ವರ್ಷದ ಈ ಆನೆ ಗುರುತು ಹಿಡಿದಿದೆ. ತನ್ನ ಸೊಂಡಿಲಿನಿಂದ … Continued