ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಮೀಸಲಾತಿ ಮತ್ತೆ ಹೈಕೋರ್ಟ್‌ ಅಂಗಳಕ್ಕೆ

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸರಕಾರ ನಿಗದಿ ಪಡಿಸಿದ್ ಮೀಸಲಾತಿ ಮತ್ತು ಮತದಾರರ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಹೈಕೋರ್ಟ ಧಾರವಾಡ ಪೀಠದ ಮೊರೆ ಹೋಗಿದ್ದು, ಎರಡೂವರೆ ವರ್ಷಗಳಿಂದಲೂ ಚುನಾವಣೆ ನಡೆಯದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ. ಎರಡೂವರೆ ವರ್ಷಗಳಿಂದ ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳೇ … Continued

ವೇಟರ್‌ ಆರ್ಡರ್‌ ತರುವುದು ಲೇಟ್‌ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ, ಇಂದ್ರಜೀತ್‌ ಲಂಕೇಶ್‌ ಅವರು ಇನ್ವೆಸ್ಟಿಗೇಟರಾ: ನಟ ದರ್ಶನ್‌

ಬೆಂಗಳೂರು: ಹೋಟೆಲ್‌ನಲ್ಲಿ ವೇಟರ್‌ ಮೇಲೆ ನಟ ದರ್ಶನ್‌ ಹಲ್ಲೆ ನಡೆಸಿದ್ದರು ಎಂಬ ಇಂದ್ರಜಿತ್‌ ಲಂಕೇಶ್‌ ಅವರ ಆರೋಪವನ್ನು ದರ್ಶನ್‌ ತಳ್ಳಿಹಾಕಿದ್ದಾರೆ. ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್‌, ಆರ್ಡರ್‌ ತರುವುದನ್ನು ತಡ ಮಾಡಿದ್ದಕ್ಕೆ ಸಿಟ್ಟು ಮಾಡಿದ್ದೇನೆ. ಯಾಕಪ್ಪಾ ಲೇಟು, ಬೇಗ ಬಾ ಎಂದು ಕೇಳಿದ್ದೇನೆ ಅಷ್ಟೆ. ಅದು ಮಾತುಕತೆಯಲ್ಲೇ ಮುಗಿದಿದೆ. ನಾನು … Continued

ಜುಲೈ 17ರಂದು ಚೆನ್ನಾಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ

ಸಿದ್ದಾಪುರ: ಸಿದ್ದಾಪುರದ ಪ್ರಯೋಗ ಸ್ವಯಂಸೇವಾ ಸಂಸ್ಥೆ ಹಾಗೂ ಸಂಸ್ಕೃತಿ ಸಂಪದದ ಸಹಯೋಗದಲ್ಲಿ ಡಾ. ಗಜಾನನ ಶರ್ಮಾ ಅವರ ಚೆನ್ನಾಭೈರಾದೇವಿ ಕಾದಂಬರಿ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭ ರಾಘವೇಂದ್ರ ಮಠದ ಸಭಾಭವನದಲ್ಲಿ ಜುಲೈ 17ರಂದು ಮಾಧ್ಯಾಹ್ನ 3 ಗಂಟೆಗೆ ನಡೆಯಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪುಸ್ತಕ ಬಿಡುಗಡೆ ಮಾಡುವರು. ಚಿಂತಕ ಹಾಗೂ ಪರಿಸರ ತಜ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ … Continued

ಇಂದ್ರಜಿತ್‌ ಲಂಕೇಶ್‌ ದೂರು: ತನಿಖೆಗೆ ಮೈಸೂರು ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವರ ಸೂಚನೆ

ಬೆಂಗಳೂರು: ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನೀಡಿದ ದೂರನ್ನು ಆಧರಿಸಿ ತನಿಖೆ ಸೂಚಿಸಿದ್ದು, ಮೈಸೂರು ಪೊಲೀಸ್‌ ಆಯುಕ್ತರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ … Continued

ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ, ನಟ ದರ್ಶನ್‌ಗೆ ಬುದ್ಧಿ ಹೇಳಿದ್ದೆ: ಸಂದೇಶ್‌ ನಾಗರಾಜ್‌ ಪುತ್ರ

ಮೈಸೂರು: ಹೋಟೆಲ್‌ನಲ್ಲಿ ಸಣ್ಣಪುಟ್ಟ ಗಲಾಟೆ ಆಗಿದ್ದು ನಿಜ. ಆಗ ದರ್ಶನ್‌ ಅವರಿಗೆ ನಾನೇ ಬುದ್ಧಿ ಹೇಳಿದ್ದೆ ಎಂದು ಸಂದೇಶ್‌ ನಾಗರಾಜ್‌ ಪುತ್ರ ಸಂದೇಶ್‌ ಗಲಾಟೆ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಹೋಟೆಲ್‌ನಲ್ಲಿ ಗಲಾಟೆ ಆಗಿಲ್ಲ. ಈ ಬಗ್ಗೆ ನನಗೇನೂ ಗೊತ್ತಿಲ್ಲʼ ಎಂದು ಸಂದೇಶ್‌ ನಾಗರಾಜ್‌ ಹೇಳಿಕೆ ನೀಡಿದ್ದ ರ ಬೆನ್ನಲ್ಲೇ ಅವರ ಪುತ್ರ ಸಂದೇಶ್‌ ಅವರು ಮಾತನಾಡಿ, … Continued

ದಲಿತ ವೇಟರ್ ಮೇಲೆ ನಟ ದರ್ಶನ್, ಸ್ನೇಹಿತರಿಂದ ಹಲ್ಲೆ: ಇಂದ್ರಜಿತ್ ಲಂಕೇಶ ಆರೋಪ, ಗೃಹ ಸಚಿವರಿಗೆ ದೂರು

ಬೆಂಗಳೂರು: 25 ಕೋಟಿ ರೂ. ವಂಚನೆ ಪ್ರಕರಣ ಮುಕ್ತಾಯವಾಗುತ್ತಿದ್ದಂತೆ ಈಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ನಟ ದರ್ಶನ್ ಮತ್ತು ಸ್ನೇಹಿತರು ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ. ಬ್ಯಾಂಕಿನಿಂದ ಸಾಲ ಕೊಡಿಸುವ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ 25 ಕೋಟಿ ರೂಪಾಯಿ … Continued

ಶೇ.30 ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನ

posted in: ರಾಜ್ಯ | 0

ಬೆಂಗಳೂರು: ರಾಜ್ಯಕ್ಕೆ ಕೊರೋನಾ ಕಾಲಿಟ್ಟ ನಂತರ ಶೈಕ್ಷಣಿಕ, ಆರ್ಥಿಕ, ಕೈಗಾರಿಕೆಗಳು, ಮೂಲಸೌಲಭ್ಯಗಳ ಅಭಿವೃದ್ದಿ ಸಂಪೂರ್ಣ ಕುಂಠಿತಗೊಂಡಿದೆ. ಶೈಕ್ಷಣಿಕ ವಿಷಯದಲ್ಲಂತೂ ವಿದ್ಯಾರ್ಥಿಗಳಿಗೆ, ಪಾಲಕರಿಗೆ ತೀರಾ ತೊಂದರೆಯಾಗಿದೆ. ಕೊರೋನಾದಿಂದಾಗಿ ಇನ್ನೂ ಭೌತಿಕ ತರಗತಿಗಳು ಆರಂಭವಾಗದ ಹಿನ್ನಲೆಯಲ್ಲಿ ಈ ವರ್ಷವೂ ಪಠ್ಯ ಕಡಿತಕ್ಕೆ ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕಳೆದ ವರ್ಷ ಆಫ್ ಲೈನ್ ತರಗತಿಗಳು ತಡವಾಗಿ ಆರಂಭವಾದ ಹಿನ್ನಲೆಯಲ್ಲಿ … Continued

9 ಅಧಿಕಾರಿಗಳಿಗೆ ಎಸಿಬಿ ಶಾಕ್‌..ಬೆಳ್ಳಂಬೆಳಿಗ್ಗೆ 40 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರು: ರಾಜ್ಯದಲ್ಲಿ ಇಂದು (ಗುರುವಾರ) ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ನಡೆದಿದೆ. ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ಏಕಕಾಲಕ್ಕೆ ಶಿವಮೊಗ್ಗ, ದಾವಣಗೆರೆ, ಉಡುಪಿ, ಮಂಡ್ಯ,ಬೆಂಗಳೂರು ಸೇರಿದಂತೆ 40 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆ ಏಕಕಾಲಕ್ಕೆ … Continued

ಇಂದಿನಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಆರಂಭಿಸಲು ಆದೇಶ

ಬೆಂಗಳೂರು :ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಶೈಕ್ಷಣಿಕ ವರ್ಷವು ಆರಂಭವಾಗಲಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಆದೇಶಿಸಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದು, ದಿನಾಂಕ 15-07-2021ರಿಂದ ದ್ವಿತೀಯ ಪಿಯುಸಿಗೆ ಶೈಕ್ಷಣಿಕ ವರ್ಷವು … Continued

ತುಂಬಿ ಹರಿಯುವ ಹೊಳೆಯಲ್ಲಿ ಸ್ಟ್ರೆಚ್ಚರ್ ನಲ್ಲಿ ಗಾಯಾಳು ಮಹಿಳೆ ಹೊತ್ತೊಯ್ದರು..!

ಮಂಗಳೂರು: ರಾಜ್ಯ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ವೃದ್ಧೆಯನ್ನು ಸ್ಟ್ರೆಚರಿನಲ್ಲಿ ಎತ್ತಿಕೊಂಡು ಹೋಗಬೇಕಾದ ಅನಿವಾರ್ಯತೆಯ ವಿದ್ಯಮಾನ ಬುಧವಾರ ನಡೆದಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿ ನಡೆದಿದೆ. ಅಲ್ಲಿನ ನಿವಾಸಿ ದೇವಕಿ ಅವರು ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಕಾಲು ಮುರಿತಕ್ಕೊಳಗಾಗಿದ್ದರು. … Continued