ಕಾರವಾರ ಮೆಡಿಕಲ್‌ ಕಾಲೇಜಿನಲ್ಲಿ 27 ವಿದ್ಯಾರ್ಥಿಗಳಿಗೆ ಕೊರೊನಾ, ಇದರಲ್ಲಿ ಲಸಿಕೆ ಪಡೆದವರು 24..!

ಕಾರವಾರ:ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ 27  ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. ಲಸಿಕೆ ಪಡೆದುಕೊಂಡ 24 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ಅತೀ ಹೆಚ್ವು ವಿದ್ಯಾರ್ಥಿಗಳಿಗೆ ಕೊರೊನಾ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದ್ದು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಹೊರತುಪಡಿಸಿ 450 ಪ್ರಥಮ ,ದ್ವಿತೀಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ … Continued

ರಾಜ್ಯ ಸಹಕಾರಿ ಮಹಾಮಂಡಳಿಗೆ ಜಿ.ಟಿ.ದೇವೆಗೌಡ ಅಧ್ಯಕ್ಷ, ಜಗದೀಶ ಕವಟಗಿಮಠ ಉಪಾಧ್ಯಕ್ಷರಾಗಿ ಆಯ್ಕೆ

ಬೆಂಗಳೂರು: ರಾಜ್ಯ ಸಹಕಾರಿ ಮಹಾಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಎಂ.ಕವಟಗಿಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 29 ಜಿಲ್ಲಾ ಯೂನಿಯನ್ ಗಳಿಂದ 13 ನಿರ್ದೇಶಕರನ್ನು ಚುನಾವಣೆಯಲ್ಲಿ ಆಯ್ಕೆಮಾಡಲಾಯಿತು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸಹಕಾರ ಮಹಾಮಂಡಳಿಯ ಅಭಿವೃದ್ಧಿಗಾಗಿ ದುಡಿದು, ಇಡೀ ದೇಶದಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ವಲಯಕ್ಕೂ … Continued

ಬಿಂಕದಕಟ್ಟಿ ಮೃಗಾಲಯಕ್ಕೆ ಬಂದ ಸಿಂಹಗಳು ವೀಕ್ಷಣೆಗೆ ಮುಕ್ತ

ಗದಗ: ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನದಿಂದ ಇಲ್ಲಿನ ಬಿಂಕದಕಟ್ಟೆ ಮೃಗಾಲಯಕ್ಕೆ ತಂದಿದ್ದ “ಧರ್ಮʼ ಹಾಗೂ “ಅರ್ಜುನʼ ಹೆಸರಿನ ಸಿಂಹಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದ್ದು, ಅವು ಎಪ್ರಿಲ್‌ ೭ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿವೆ. ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೃತಕ ಕೊಳ ನಿರ್ಮಿಸಲಾಗಿದೆ. ಜೋಡಿ ಸಿಂಹಗಳು ಕಿರು ಮೃಗಾಲಯದ ಆಕರ್ಷಣೆ ಹೆಚ್ಚಿಸಿವೆ ಎಂದು ಡಿಸಿಎಫ್‌ ಸೂರ್ಯಸೇನ ತಿಳಿಸಿದ್ದಾರೆ.

ಸಿಎಂ ಬಿಎಸ್‌ವೈ ಬದಲಾವಣೆಗೆ ಸಂಘ ಪರಿವಾರ ಬಯಸಿದೆ: ಸಿದ್ದರಾಮಯ್ಯ

ಮಸ್ಕಿ: ಬಸನಗೌಡ ಪಾಟೀಲ ಯತ್ನಾಳ ಹಾಗೂ ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್‌ ಬೆಂಬಲವಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸಲು ಸಂಘ ಪರಿವಾರ ಬಯಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಿಜೆಪಿ ಸರಕಾರಕ್ಕೆ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯಿಲ್ಲ. ಸಚಿವ ಈಶ್ವರಪ್ಪ ಪತ್ರ ಬರೆದಿರುವುದು ಗಂಭೀರ ವಿಚಾರ. ಯತ್ನಾಳ ನಾಲ್ಕು ತಿಂಗಳುಗಳಿಂದ ವಾಗ್ದಾಳಿ ನಡೆಸುತ್ತಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ … Continued

ಸಾರಿಗೆ ಮುಷ್ಕರ: ಬೆಂಗಳೂರಿನಲ್ಲಿ ಪ್ರತಿ ೫ ನಿಮಿಷಕ್ಕೊಂದು ಮೆಟ್ರೊ ರೈಲು..!

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಬುಧವಾರದಿಂದ (ಮಾ.೭ರಿಂದ) ಅನಿರ್ದಿಷ್ಟವಾಧಿ ಮುಷ್ಕರ ಆರಂಭಿಸುವುದರಿಂದ ಪ್ರಯಾಣಿಕರಿಗೆ ಬಸ್‌ಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಸರ್ಕಾರವು ಈ ಬಗ್ಗೆ ಕ್ರಮಕ್ಕೆ ಮುಂದಾಗಿದ್ದು ಬೆಂಗಳೂರಿನಲ್ಲಿ ಪ್ರತಿ ೫ನಿಮಿಷಕ್ಕೊಂದು ಮೆಟ್ರೋ ರೈಲಿನ ವ್ಯವಸ್ಥೆ ಮಾಡಲಾಗಿದೆ. ಬಸ್‌ ಇಲ್ಲದೆ ಸಾರ್ವಜನಿಕರು ಪರದಾಡಬಾರದು ಎಂಬ ದೃಷ್ಟಿಯಿಂದ ಸರ್ಕಾರ ಈ ಕ್ರಮಕ್ಕರೆ ಮುಂದಾಗಿದ್ದು ಹೀಗಾಗಿ ಬೆಂಗಳೂರಿನಲ್ಲಿ ಪ್ರತಿ ೫ … Continued

ಸಾರಿಗೆ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ:ಸಿಎಂ ಬಿಎಸ್‌ವೈ

ಬೆಳಗಾವಿ : ಸದ್ಯ ರಾಜ್ಯ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಸಾರಿಗೆ ನೌಕರರು ಮುಂದಿಟ್ಟಿರುವ 6 ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. 6 ನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ನಾಳೆ ಸಾರಿಗೆ ನೌಕರರು ಮುಷ್ಕರ ನಡೆಸಲು ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ … Continued

ಕೇಂದ್ರ ಸಚಿವ ಜೋಶಿ ಮನೆ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನ..

ಹುಬ್ಬಳ್ಳಿ:ಬಿದ್ದ ಮನೆಯ ಪರಿಹಾರಕ್ಕಾಗಿ ಅಲೆದು ಅಲೆದು ಸುಸ್ತಾದ ಮಹಿಳೆಯೊಬ್ಬರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಎದುರು ಡೆತ್ ನೋಟ್ ಬರೆದಿಟ್ಟು  ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.‌ ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಪ್ಪ ಕಮ್ಮಾರ ಎಂಬ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಮಳೆಗಾಲದ ಸಮಯದಲ್ಲಿ ಅತಿವೃಷ್ಟಿಯಿಂದ ಮನೆ ಬಿದಿದ್ದು, ಅದರ ಪರಿಹಾರಕ್ಕಾಗಿ ಕಳೆದ … Continued

ಕರ್ನಾಟಕದಲ್ಲಿ ಆರು ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ..!

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರವೂ ಕೊರೊನಾ ದೈನಂದಿನ ಸೋಂಕಿನಲ್ಲಿ ಭಾರೀ ಹೆಚ್ಚಳವಾಗಿದೆ. ಮಂಗಳವಾರ ಒಂದೇ ದಿನ 6150 ಜನರಿಗೆ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ. ಒಂದೇ ದಿನ ಇವತ್ತು ಒಂದೇ ದಿನ 39 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,26,584 ಕ್ಕೆ ಏರಿಕೆಯಾಗಿದೆ. ಒಂದೇ ದಿನ 3487 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,68,762 … Continued

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ: 32 ಸಾವಿರ ಖಾಸಗಿ ವಾಹನ ರಸ್ತೆಗೆ 

ಉಡುಪಿ: ಸಾರಿಗೆ ನೌಕರರು ಬುಧವಾರ (ಏ.೭)ದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಮೇರೆಗೆ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ವಾಹನಗಳನ್ನು ಓಡಿಸಲು ಸರ್ಕಾರ ತೀರ್ಮಾನಿಸಿದೆ.ಇದಕ್ಕಾಗಿ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಖಾಸಸಗಿ ಬಸ್‌ಗಳ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಮಂಗಳವಾರ ಉಡುಪಿಯಲ್ಲಿ ಖಾಸಗಿ ಬಸ್ ಒಕ್ಕೂಟದ ರಾಜ್ಯ ಖಜಾಂಚಿ ಕುಯಿಲಾಡಿ ಸುರೇಶ್ … Continued

ನಾಳೆ ಸಾರಿಗೆ ನೌಕರರ ಮುಷ್ಕರ, ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

ಬೆಂಗಳೂರು: ತಮ್ಮ ಬೇಡಿಕೆಗಳು ಈಡೇರದ ಕಾರಣಕ್ಕೆ ಏ.೭ರಂದು ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಸ್‌ ಸಂಚಾರಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಸರ್ಕಾರವು ಮುಷ್ಕರವನ್ನು ಹಿಂಪಡೆಯುವಂತೆ ಸಾರಿಗೆ ನೌಕರರಲ್ಲಿ ಮಾತುಕತೆ ನಡೆಸಿದರೂ ವಿಫಲವಾಗಿದ್ದು, ಹೀಗಾಗಿ ಸರ್ಕಾರವು ಮುಷ್ಕರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಜೊತೆಗೆ ಸದ್ಯದ ಸ್ಥಿತಿಯಲ್ಲಿ ಸಾರಿಗೆ ನೌಕರರಿಗೆ 6ನೇ ವೇತನ … Continued