ಚೆಕ್ ಬೌನ್ಸ್ ಪ್ರಕರಣ ; ನಟ ನೀನಾಸಂ ಅಶ್ವತ್ಥ ಬಂಧನ-ಬಿಡುಗಡೆ

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹಾಸನದ ಬಡಾವಣೆ ಠಾಣೆ ಪೊಲೀಸರು ನೀನಾಸಂ ಅಶ್ವತ್ಥ ಅವರನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಿದರು. ಅವರು ನ್ಯಾಯಾಧೀಸರ ಎದುರು ತಪ್ಪೊಪ್ಪಿಕೊಂಡರು ಹಾಗೂ ಚೆಕ್‌ನ ಶೇ. 25ರಷ್ಟು ಹಣವನ್ನು ಪಾವತಿ ಮಾಡಿದರು. ನಂತರ ನ್ಯಾಯಾಲಯ ನೀನಾಸಂ ಅಶ್ವತ್ಥ​ ಅವರಿಗೆ ಜಾಮೀನು … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಎರಡ್ಮೂರು ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಭಾನುವಾರ ಕೂಡ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇದೆ. ನಂತರ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿ ಜುಲೈ … Continued

ಭಾರೀ ಮಳೆಯಿಂದಾಗಿ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ : ಸಂಕಷ್ಟದಲ್ಲಿ ಸಿಲುಕಿರುವ 80 ಕನ್ನಡಿಗರ ರಕ್ಷಣೆಗೆ ಸಿಎಂ ಸೂಚನೆ

ಬೆಂಗಳೂರು : ಅಮರನಾಥ ಯಾತ್ರೆಗೆ ತೆರಳುವ ಮಾರ್ಗ ಮಧ್ಯೆ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ಕರ್ನಾಟಕದ ಸುಮಾರು 80 ಯಾತ್ರಾರ್ಥಿಗಳು ಮಾರ್ಗ ಮಧ್ಯೆ ಸಿಲುಕಿದ್ದಾರೆ. ತಮ್ಮನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ವೀಡಿಯೊ ಮೂಲಕ ಪ್ರಧಾನಿ ಮೋದಿಗೆ ಅವರು ಮನವಿ ಮಾಡಿದ್ದಾರೆ. ಗದಗ ಜಿಲ್ಲೆಯ ವಿವಿಧ ಗ್ರಾಮಗಳು ಸೇರಿದಂತೆ ಕಾರ್ನಟಕದ … Continued

ಬೆಂಗಳೂರು: 1 ತಿಂಗಳ ವರೆಗೆ ಪ್ರತಿದಿನ 2 ಗಂಟೆ ಕಾಲ ಈ ಮಾರ್ಗದ ಮೆಟ್ರೋ ರೈಲು ಸಂಚಾರ ಸ್ಥಗಿತ

ಬೆಂಗಳೂರು: ಒಂದು ತಿಂಗಳ ಕಾಲ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ನೀಡಿದೆ. ಮೆಟ್ರೋ ರೈಲು ನಿಗಮವು ಜುಲೈ 10 ರಿಂದ ಆಗಷ್ಟ್​ 9ರ ವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ ಸಿಗ್ನಲಿಂಗ್​ ಹಾಗೂ ಇತರ ಕಾಮಗಾರಿಗಳನ್ನು … Continued

ರಾಜ್ಯದಲ್ಲಿ ಮಹಾ ಮಳೆಗೆ 20 ಸಾವು : ಸಚಿವ ಕೃಷ್ಣ ಭೈರೇಗೌಡ

ಕುಮಟಾ : ರಾಜ್ಯದಲ್ಲಿ ಮಳೆಗೆ 20 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟ ಸಂಬಂಧ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ … Continued

ನಾಪತ್ತೆಯಾಗಿದ್ದ ಜೈನಮುನಿಗಳ ದೇಹ ತುಂಡು ತುಂಡು ಮಾಡಿ ಬೋರ್​ವೆಲ್​ ಗೆ ಎಸೆದಿದ್ದ ಹಂತಕರು : ಶವದ ತುಂಡುಗಳು ಪತ್ತೆ

ಬೆಳಗಾವಿ: ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾಗಿದ್ದ ಜೈನಮುನಿಗಳ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಟಕಬಾವಿ ಗದ್ದೆಯ ಕೊಳವೆ ಬಾವಿಯಲ್ಲಿ ಶ್ರೀಗಳ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮ ಜೈನಮುನಿ ಕಾಮಕುಮಾರ ನಂದಿ … Continued

ಚಿಕ್ಕೋಡಿ : ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯ ಹತ್ಯೆ

ಬೆಳಗಾವಿ : ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಲಾಗಿದೆ ಎಂದು ಎಂದು ವರದಿಯಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ನಂದಿಪರ್ವತ … Continued

ಪ್ರಧಾನಿ ವಿರುದ್ಧ ನಿಂದನಾತ್ಮಕ ಪದಗಳು ಅವಹೇಳನಕಾರಿ, ದೇಶದ್ರೋಹವಲ್ಲ: ಹೈಕೋರ್ಟ್

ಬೆಂಗಳೂರು : ಶಾಲಾ ಆಡಳಿತ ಮಂಡಳಿ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ರದ್ದುಪಡಿಸುವ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್, ಪ್ರಧಾನಿ ವಿರುದ್ಧ ಅವಹೇಳನಕಾರಿ ಮತ್ತು ಬೇಜವಾಬ್ದಾರಿಯಿಂದ ನಿಂದನೀಯ ಪದಗಳನ್ನು ಬಳಸಲಾಗಿದೆ, ಆದರೆ ಅದು ದೇಶದ್ರೋಹವಲ್ಲ ಎಂದು ಹೇಳಿದೆ. ಬೀದರ್‌ನ ಶಾಹೀನ್ ಶಾಲೆಯ ಎಲ್ಲಾ ಮ್ಯಾನೇಜ್‌ಮೆಂಟ್ ವ್ಯಕ್ತಿಗಳಾದ ಅಲ್ಲಾವುದ್ದೀನ್, ಅಬ್ದುಲ್ ಖಲೀಕ್, ಮಹಮ್ಮದ್ ಬಿಲಾಲ್ ಇನಾಮದಾರ್ ಮತ್ತು ಮಹಮ್ಮದ್ ಮೆಹತಾಬ್ … Continued

ಕರ್ನಾಟಕ ಬಜೆಟ್‌ 2023-24 : ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿ ಪರಿವರ್ತನೆಗೆ ಅವಕಾಶ

ಬೆಂಗಳೂರು : ಕರ್ನಾಟಕ ಭೂ-ಕಂದಾಯ ಕಾಯಿದೆಯ ಸೆಕ್ಷನ್‌ 95ಕ್ಕೆ ತಿದ್ದುಪಡಿ ತಂದು ಸ್ವಯಂ ಘೋಷಣೆಯ ಮೂಲಕ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಂದಾಯ ಇಲಾಖೆ ವಿಚಾರವಾಗಿ ಮುಖ್ಯಮಂತ್ರಿ ತಮ್ಮ ಬಜೆಟ್‌ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿ, “ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಂದಾಯ ಇಲಾಖೆಯ … Continued

ಚಿಕ್ಕೋಡಿ : ಹಿರೇಕೋಡಿ ಗ್ರಾಮದ ಜೈನಮುನಿ ನಾಪತ್ತೆ

ಬೆಳಗಾವಿ :ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿಯೊಬ್ಬರು ಬಸದಿಯಿಂದ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಹಿರೇಕೋಡಿಯ ನಂದಿಪರ್ವತ ಜೈನ ಆಶ್ರಮದಿಂದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಗುರುವಾರ (ಜೂನ್‌ ೬) ಬೆಳಗ್ಗೆ 8 ಗಂಟೆಯಿಂದ ನಾಪತ್ತೆಯಾಗಿದ್ದರೆ ಎನ್ನಲಾಗಿದೆ. ಅವರು ಬುಧವಾರ ರಾತ್ರಿ 10 … Continued