ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಈಶ್ವರಪ್ಪ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಈ ಸಂಬಂಧ ಇಂದು, ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು ಈಶ್ವರಪ್ಪ ನಾಳೆ, ಶುಕ್ರವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಂತರ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದರು. … Continued

ಪ್ರಾಥಮಿಕ ತನಿಖೆ ಮುಗಿಯುವವರೆಗೆ ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮವಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರಾಥಮಿಕ ತನಿಖೆ ಮುಗಿಯುವ ವರೆಗೆ ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಂತೋಷ್ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು, ಸತ್ಯಾಂಶ ಹೊರಬರಲಿ, ಆಧಾರ ರಹಿತ ಆರೋಪಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ, ಅವರ ಬಳಿ ಏನಾದರೂ ಪುರಾವೆ ಇದ್ದರೆ ಸರ್ಕಾರದೊಂದಿಗೆ ಹಂಚಿಕೊಳ್ಳಲಿ, ನಾವು ತನಿಖೆ ನಡೆಸುತ್ತೇವೆ … Continued

ಸರ್ಕಾರ-ಎಸ್ಕಾಂಗಳ ಅಸಮರ್ಥ ಆಡಳಿತದಿಂದಾದ ಆರ್ಥಿಕ ನಷ್ಟಕ್ಕೆ ಜನಸಾಮಾನ್ಯರ ಮೇಲೇಕೆ ಹೊರೆ ?: ಅಂಕಿ-ಅಂಶಗಳ ಸಮೇತ ವಿದ್ಯುತ್‌ ದರ ಏರಿಕೆ ಪ್ರಶ್ನಿಸಿದ ವಸಂತ ಲದವಾ

ಹುಬ್ಬಳ್ಳಿ: ಅನಿಯಂತ್ರಿತ ಹಣದುಬ್ಬರದ ಪರಿಸ್ಥಿತಿಯಲ್ಲಿ ಜನ ತಮ್ಮ ಸೀಮಿತ ವರಮಾನಗಳ ಜೊತೆ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಹೊರೆ ಹೇರುತ್ತಲೇ ಇವೆ. ಈಗಾಗಲೇ ನೊಂದ-ಬೆಂದ ಜನ ಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಧಾರವಾಡ ಜಿಲ್ಲಾ … Continued

ನನ್ನ ಸಿಡಿ ತಯಾರಿಸಿದ ಮಹಾನಾಯಕನ ತಂಡವೇ ಸಂತೋಷ ಪಾಟೀಲ ಪ್ರಕರಣದ ಹಿಂದೆಯೂ ಇದೆ: ಹೊಸ ಬಾಂಬ್‌ ಸಿಡಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ನನ್ನ ಸಿ.ಡಿ. ತಯಾರಿಸಿದ ಮಹಾನಾಯಕನ ತಂಡವೇ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಹಿಂದಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಬಡಸ ಗ್ರಾಮದಲ್ಲಿನ ಮೃತ ಸಂತೋಷ ಪಾಟೀಲ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರ ಜೊತೆ ಜೊತೆ ಮಾತನಾಡಿದ ಅವರು, ಮಹಾನಾಯಕ ಮತ್ತು … Continued

ಅಂಕೋಲಾ: ಬೆಂಕಿ ಹೊತ್ತಿಕೊಂಡು ಒಣಹುಲ್ಲು ಸಾಗಿಸುತ್ತಿದ್ದ ವಾಹನ ಸುಟ್ಟು ಕರಕಲು, ಚಾಲಕನಿಗೆ ಗಾಯ: ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ತಳಗದ್ದೆಯ ಸಮೀಪ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನ ಮತ್ತು ಅದರಲ್ಲಿದ್ದ ಒಣಹುಲ್ಲು ಸುಟ್ಟು ಕರಕಲಾದ ಘಟನೆ ಗುರುವಾರ ಮುಂಜಾನೆ ನಡೆದ ಬಗ್ಗೆ ವರದಿಯಾಗಿದೆ. ವಾಹನ ಚಾಲಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬೊಲೆರೋ ಪಿಕಪ್ ವಾಹನದಲ್ಲಿ ಅಂಕೋಲಾದ ತಳಗದ್ದೆಯಿಂದ ಕುಮಟಾದ ಖಂಡಗಾರಕ್ಕೆ ಭತ್ತದ ಒಣಹುಲ್ಲು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ … Continued

ಸಿಎಂ ನಿವಾಸಕ್ಕೆ ಮುತ್ತಿಗೆಗೆ ಯತ್ನ: ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಪೊಲೀಸ್‌ ವಶಕ್ಕೆ

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಪದಚ್ಯುತಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸದತ್ತ ಪಾದಯಾತ್ರೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕರ್ನಾಟಕ ಉಸುವಾರು ರನದೀಪ ಸುರ್ಜೆವಾಲಾ ಹಾಗೂ ಇತರರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು, ಗುರುವಾರ ಮುಖ್ಯಮಂತ್ರಿ … Continued

ಕಾಂಗ್ರೆಸ್ ಮುಖಂಡರ ವಿರೋಧದ ಮಧ್ಯೆಯೂ ಸಂತೋಷ ಪಾಟೀಲ ಅಂತ್ಯಕ್ರಿಯೆ

ಬೆಳಗಾವಿ: ಉಡುಪಿಯ ಖಾಸಗಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆಯಿತು. ಕಾಂಗ್ರೆಸ್ ನಾಯಕರ ಪ್ರತಿಭಟನೆಯ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಸಂತೋಷಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಮದುವೆಗಳಿದ್ದ … Continued

ಬೆಳಗಾವಿ: ಸ್ವಗ್ರಾಮ ತಲುಪಿದ ಸಂತೋಷ ಪಾಟೀಲ ಮೃತದೇಹ – ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ, ಉಡುಪಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ ಪಾಟೀಲ್ ಮೃತದೇಹವನ್ನು ಉಡುಪಿಯಿಂದ ಸ್ವಗ್ರಾಮ ಬಡಸ ಗ್ರಾಮಕ್ಕೆ ತರಲಾಗಿದೆ. ಪಾರ್ಥಿವ ಶರೀರ ತಾಲೂಕಿನ ಬಡಸ ಗ್ರಾಮಕ್ಕೆ  ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಆರೋಪಿಗಳನ್ನು ಬಂಧಿಸುವವರೆಗೂ ಶವ … Continued

ಸಿ ವರ್ಗದ ದೇಗುಲಗಳ ತಸ್ತಿಕ್‌ ಮೊತ್ತ 60 ಸಾವಿರ ರೂ.ಗೆ ಹೆಚ್ಚಳ, ಉಚಿತ ಸಾಮೂಹಿಕ ವಿವಾಹ-ಸಪ್ತಪದಿ ಮರಚಾಲನೆಗೆ ಆದೇಶ

ಬೆಂಗಳೂರು: ತಸ್ತಿಕ್‌ ಮೊತ್ತವನ್ನು 48 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಸಿ ವರ್ಗದ ದೇಗುಲಗಳಲ್ಲಿ ಪ್ರಸ್ತುತ ತಸ್ತಿಕ್‌ ಮೊತ್ತ 48 ಸಾವಿರ ಇತ್ತು. ಈಗ 60 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಹೆಚ್ಚಳ ಆದೇಶ ಅನ್ವಯವಾಗಲಿದೆ. ಅಷ್ಟೇ ಅಲ್ಲದೆ, ಕೊರೊನಾ ವೈರಸ್ ಸಾಂಕ್ರಾಮಿಕದ … Continued

ಉಕ್ರೇನ್ ಆಕ್ರಮಣದ ಹಿನ್ನೆಲೆ: ರಷ್ಯಾದಿಂದ ಹೊರಕ್ಕೆ ಬಂದ ಇನ್ಫೋಸಿಸ್

ಬೆಂಗಳೂರು: ರಷ್ಯಾದಿಂದ ಐಟಿ ದಿಗ್ಗಜ ಇನ್ಫೋಸಿಸ್ ಹೊರಬರುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ ಬಗ್ಗೆ ಸುದ್ದಿ ಬಂದಿತ್ತು. ಇಂದು ಇನ್ಫೋಸಿಸ್ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಸಿಇಒ ಸಲೀಲ್ ಪರೇಖ್ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ … Continued