ವಿದ್ಯಾರ್ಥಿಗಳಿಗೆ ಬಸ್‌ಪಾಸ್‌: ಸೇವಾ-ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಎನ್‌ಡಬ್ಲ್ಯೂಕೆಆರ್ಟಿಸಿ ಎಂಡಿ ಸೂಚನೆ

ಹುಬ್ಬಳ್ಳಿ: ಶಾಲಾ ಕಾಲೇಜುಗಳು ಹಂತ, ಹಂತವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿದಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ವಿತರಿಸುತ್ತಿದೆ. ಈ ಕುರಿತು ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದ್ದು, ಸೇವಾ ಸಿಂಧು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ಪಾಸ್ ಕೌಂಟರ್‌ಗಳಿಂದ ಬಸ್ ಪಾಸ್ ಪಡೆಯಲು ಸಂಸ್ಥೆಯ ವ್ಯವಸ್ಥಾಪಕ … Continued

ಶಾಹೀನ್‌ ಚಂಡಮಾರುತದ ಪ್ರಭಾವ: ಕರ್ನಾಟಕದಲ್ಲೂ ಅಕ್ಟೋಬರ್ 1ರಿಂದ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಗುಲಾಬ್​ ಚಂಡಮಾರುತದ ಪರಿಣಾಮ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಗೆ ಕಾರಣವಾದ ಗುಲಾಬ್ ಚಂಡಮಾರು ಅರಬ್ಬೀ ಸಮುದ್ರದಲ್ಲಿ ದುರ್ಬಲಗೊಂಡ ನಂತರ ಮತ್ತೆ ಮರುಜನ್ಮ ಪಡೆದು ಶಾಹೀನ್​ ಚಂಡಮಾರುತ( Cyclone Shaheen)ವಾಗಿ ಅಕ್ಟೋಬರ್ 1ರಂದು ವಿಶೇಷವಾಗಿ ಗುಜರಾತ್‌ ಹಾಗೂ ಉತ್ತರ ಮಹಾರಾಷ್ಟ್ರಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ. … Continued

ಬೆಂಗಳೂರಿಗೆ ಬಂತು ಮೊದಲ ಎಲೆಕ್ಟ್ರಿಕ್ ಬಸ್, ಸಾರಿಗೆ ಸಚಿವರ ಸಂಚಾರ

ಬೆಂಗಳೂರು: ಕರ್ನಾಟಕಕ್ಕೆ ಮೊದಲ ಎಲೆಕ್ಟ್ರಿಕ್ ಬಸ್ ಬೆಂಗಳೂರು ನಗರಕ್ಕೆ ಬಂದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 90 ಮಿನಿ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ಮುಂದಾಗಿದೆ. ಜೆಬಿಎಂ ಕಂಪನಿಯಿಂದ ಬಿಎಂಟಿಸಿ ಗುತ್ತಿಗೆ(ಜಿಸಿಸಿ) ಆಧಾರದಲ್ಲಿ ಬಸ್ ಪಡೆದುಕೊಳ್ಳುತ್ತಿದೆ. ಎನ್ ಟಿಪಿಸಿ ಸಹಯೋಗದಲ್ಲಿ ಸೇವೆ ಒದಗಿಸಲು ಒಪ್ಪಂದ ‌ಮಾಡಿಕೊಳ್ಳಲಾಗಿದೆ. ಬೆಂಗಳೂರಿಗೆ ಬಂದ ಮೊದಲ ಬಸ್ಸಿನ ಪರೀಕ್ಷಾರ್ಥ ಸಂಚಾರವನ್ನು ಬಿಎಂಟಿಸಿಯ ಕೆಂಗೇರಿ ಘಟಕದೊಳಗೇ‌ … Continued

ಡೆತ್‌ನೋಟ್‍ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಿನೆಮಾ-ಕಿರುತೆರೆ ನಟಿ

ಬೆಂಗಳೂರು: ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ ಇಂದು (ಗುರುವಾರ) ಬೆಂಗಳೂರಿನ ದೊಡ್ಡಬೆಲೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್​ ಅಪಾರ್ಟ್​ಮೆಂಟ್​ನಲ್ಲಿ ಕಿರುತೆರೆ ನಟಿ ಸೌಜನ್ಯ (25) ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ನಟಿ ಸೌಜನ್ಯ(25) ಇಂದು ಬೆಳಗ್ಗೆ ಪಿಎಗೆ ತಿಂಡಿ ತರಲು … Continued

ಹುಬ್ಬಳ್ಳಿ: ಈಗ ದೇವರಗುಡಿಹಾಳ-ಬೂದನಗುಡ್ಡದ ಬಳಿಯೂ ಚಿರತೆ ಪ್ರತ್ಯಕ್ಷ….!

ಹುಬ್ಬಳ್ಳಿ: ಈಗ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಲಘಟಗಿಯ ದೇವರ ಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ದೇವರಗುಡುಹಾಳ, ಕಲಘಟಗಿ ತಾಲೂಕಿನ ಬೂದನಗುಡ್ಡದಲ್ಲಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುತ್ತಾಡಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಇದನ್ನು ಖಚಿತಪಡಿಸಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಇದು … Continued

ಬೆಂಗಳೂರು: ಬಾಕಿ ತೆರಿಗೆ ಪಾವತಿಸದ ಮಂತ್ರಿ ಮಾಲ್​ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದ ಸತಾಯಿಸುತ್ತಿದ್ದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ (Mantri Square Mall)ಗೆ ಇಂದು (ಸೆಪ್ಟಂಬರ್‌30, ಗುರುವಾರ) ಬೆಳಿಗ್ಗೆ ಬೀಗ ಹಾಕಲಾಗಿದೆ. ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‌ಗೆ ಬೀಗ ಹಾಕಿದ ಕಾರಣ ಮಾಲ್‌ಗೆ ಬಿಬಿಎಂಪಿ ಅಧೀಕಾರಿಗಳು ಬೀಗ ಜಡಿದಿದ್ದಾರೆ. 2017ರ ಬಳಿಕ ಇದೂವರೆಗೂ ಮಂತ್ರಿ ಮಾಲ್​ ಆಸ್ತಿ … Continued

ನಮ್ಮ ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ..!

ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಗಳಷ್ಟು ಮಣ್ಣು ಕುಸಿದಿರುವ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗೊಟ್ಟಿಗೆರೆಯಿಂದ ನಾಗವಾರದ ವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಟಿವಿಎಂ ಮೆಶಿನ್‌ ಊರ್ಜಾ ಸುರಂಗ ಕೊರೆದಿತ್ತು. ಆದ್ರೆ ಈಗ ಮೆಟ್ರೋ ಕಾಮಗಾರಿಯಿಂದಾಗಿ ಟ್ಯಾನರಿ … Continued

ರೇಣುಕಾಚಾರ್ಯ, ಜೀವರಾಜ್​ಗೆ ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಮತ್ತೆ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮರು ನೇಮಕಗೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ರೇಣುಕಾಚಾರ್ಯ ಮತ್ತು ಜೀವರಾಜ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಈಗ ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿಯಾಗಿ ಎರಡು ತಿಂಗಳ ಬಳಿಕ ಇವರಿಬ್ಬರು ಮತ್ತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ. ಇವರಿಗೆ ಸಂಪುಟ ದರ್ಜೆ ಸಚಿವರ … Continued

ಮಗುವಿನೊಂದಿಗೆ ನದಿಗೆ ಹಾರಿದ್ದ ತಾಯಿ ಜೀವಂತವಾಗಿ ಪತ್ತೆ, ಮಗುವಿಗಾಗಿ ಮುಂದುವರಿದ ಶೋಧ

ಗದಗ: ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆ ನದಿಯಲ್ಲಿರುವ ಮುಳ್ಳು ಕಂಟಿಯಲ್ಲಿ ಜೀವಂತ ಪತ್ತೆಯಾಗಿದ್ದಾರೆ. ಆದರೆ ಮೂರು ವರ್ಷದ ಮಗು ಸಿಕ್ಕಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಉಮಾದೇವಿ ಸಂಗಮೇಶ ಶೆಲ್ಲಿಕೇರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರು. ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಮೂರು … Continued

ಸಿದ್ದಗಂಗಾ ಮಠ – ಮೀರಾಬಾಯಿ ಕೊಪ್ಪಿಕರಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ” 2020 ಮತ್ತು 2021 ನೇ ಸಾಲಿಗೆ ಎರಡು ವರ್ಷಗಳ ಪ್ರಶಸ್ತಿ ಪ್ರಕಟಿಸಿದೆ. ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸಕಾರವು ಈ … Continued