ತೀವ್ರ ಅಸ್ವಸ್ಥತೆಯಿಂದ ಖ್ಯಾತ ನಟ ವಿಕ್ರಂ ಚೆನ್ನೈ ಆಸ್ಪತ್ರೆಗೆ ದಾಖಲು

ಚೆನ್ನೈ: ನಟ ವಿಕ್ರಮ್ ಶುಕ್ರವಾರ ತೀವ್ರ ಆರೋಗ್ಯ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲಗಳ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ ವಿಕ್ರಮ್ ಅವರನ್ನು ದಾಖಲಿಸಲಾಗಿದೆ. ಸಂಜೆ 6 ಗಂಟೆಗೆ ಚೆನ್ನೈನಲ್ಲಿ ಮುಂಬರುವ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ 56 ವರ್ಷದ ವಿಕ್ರಮ್ ಭಾಗವಹಿಸಬೇಕಿತ್ತು. ಆದರೆ ತೀವ್ರ ಅಸ್ವಸ್ಥತೆ ನಂತರ ಅವರನ್ನು ಆಸ್ಪತ್ರೆಗೆ … Continued

ನೂರಾರು ವಾಹನಗಳು ಹೋಗುತ್ತಿದ್ದರೂ ನೀರು ತುಂಬಿದ ಮುಂಬೈನ ರಸ್ತೆಯಲ್ಲಿ ಆರಾಮವಾಗಿ ಮಲಗಿರುವ ವ್ಯಕ್ತಿ: “ಮಾಲ್ಡೀವ್ಸ್ ಇನ್ ಮಲಾಡ್” ಎಂದ ಇಂಟರ್ನೆಟ್ | ವೀಕ್ಷಿಸಿ

ಮುಂಬೈನಲ್ಲಿ ಸೋಮವಾರದಿಂದ ಭಾರೀ ಮಳೆಯಾಗುತ್ತಿದ್ದು, ನಗರದ ನಿವಾಸಿಗಳಿಗೆ ಭಾರಿ ತೊಂದರೆಯಾಗಿದೆ. ಜಲಾವೃತ ಮತ್ತು ಇತರ ಮಳೆ ಸಂಬಂಧಿತ ಘಟನೆಗಳಿಂದ ಮಹಾನಗರದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇದರ ಮಧ್ಯೆ, ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಮಲಗಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಬಸ್ಸುಗಳು ಮತ್ತು ಕಾರುಗಳಂತಹ ವಾಹನಗಳು ಹಾದು ಹೋಗುತ್ತಿದ್ದರೂ ನೀರು ತುಂಬಿದ ರಸ್ತೆಯ … Continued

ಉತ್ತರ ಪ್ರದೇಶದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಮೊಹಮ್ಮದ್ ಜುಬೇರ್, ಆದರೆ ಜೈಲಿಂದ ಬಿಡುಗಡೆಯಿಲ್ಲ

ನವದೆಹಲಿ: ಮೂವರು ಹಿಂದೂ ಬಲಪಂಥೀಯ ನಾಯಕರನ್ನು “ದ್ವೇಷವಾದಿಗಳು” ಎಂದು ಕರೆದಿದ್ದಕ್ಕಾಗಿ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಸುಪ್ರೀಂ ಕೋರ್ಟ್ ಇಂದು, ಶುಕ್ರವಾರ ಐದು ದಿನಗಳ ಜಾಮೀನು ನೀಡಿದೆ; ಆದರೆ ದೆಹಲಿಯಲ್ಲಿ ದಾಖಲಾದ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಅವರು ಸದ್ಯಕ್ಕೆ ಜೈಲಿನಲ್ಲೇ ಇರುತ್ತಾರೆ. ಆಲ್ಟ್ ನ್ಯೂಸ್ … Continued

ವಿವಾದಾತ್ಮಕ ಹೇಳಿಕೆಗೆ ಪೊಲೀಸ್‌ ನೋಟಿಸ್‌; ನಟಿ ಸಾಯಿ ಪಲ್ಲವಿ ಅರ್ಜಿ ತಿರಸ್ಕರಿಸಿದ ತೆಲಂಗಾಣ ಹೈಕೋರ್ಟ್

ಹೈದರಾಬಾದ್: ಗೋರಕ್ಷಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ಪೊಲೀಸರು ನೀಡಿದ್ದ ನೋಟಿಸ್ ರದ್ದುಗೊಳಿಸುವಂತೆ ಕೋರಿ ನಟಿ ಸಾಯಿ ಪಲ್ಲವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ರಾಜ್ಯ ಹೈಕೋರ್ಟ್‌ ವಜಾಗೊಳಿಸಿದೆ. ಸಾಯಿ ಪಲ್ಲವಿ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ ನಂತರ ಬಜರಂಗದಳದ ಕಾರ್ಯಕರ್ತರೊಬ್ಬರು ಅವರ ವಿರುದ್ಧ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು … Continued

ಏಕನಾಥ್ ಶಿಂಧೆ ಸರ್ಕಾರಕ್ಕೆ ಠಾಕ್ರೆ ಬಣದಿಂದ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಸವಾಲು

ಮುಂಬೈ: ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಜೂನ್ 30 ರಂದು, ಮಹಾರಾಷ್ಟ್ರ ರಾಜ್ಯಪಾಲ ಬಿ.ಎಸ್. ಕೋಶ್ಯಾರಿ ಅವರು ಶಿಂಧೆ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ರಾಜಭವನದಲ್ಲಿ ಭೇಟಿಯಾದರು, ಈ … Continued

ನೈನಿತಾಲ್‌ನಲ್ಲಿ ಕಾರು ನದಿಗೆ ಬಿದ್ದು 9 ಸಾವು, ಇಬ್ಬರ ರಕ್ಷಣೆ

ಡೆಹ್ರಾಡೂನ್‌: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ಎರ್ಟಿಗಾ ಕಾರು ನದಿಗೆ ಬಿದ್ದ ಪರಿಣಾಮ ಒಂಬತ್ತು ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು, ಅವರಲ್ಲಿ ಒಬ್ಬ ಹೆಣ್ಣು ಮಗು ಕೂಡ ಇತ್ತು ಎಂದು ಹೇಳಲಾಗಿದೆ. ಉತ್ತರಾಖಂಡ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಮತ್ತು ಅಗ್ನಿಶಾಮಕ ತಂಡವು ಸ್ಥಳಕ್ಕೆ ಧಾವಿಸಿದೆ. ವರದಿಯ … Continued

ಹಳೆ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಹೆಚ್ಚಿದ ಬಂಧನದ ಒತ್ತಾಯದ ಮಧ್ಯೆ ಹರಿಯಾಣ ಐಟಿ ಸೆಲ್ ಮುಖ್ಯಸ್ಥರನ್ನು ತೆಗೆದುಹಾಕಿದ ಬಿಜೆಪಿ

ಚಂಡೀಗಡ: ಪ್ರವಾದಿ ಮತ್ತು ಇಸ್ಲಾಂ ಧರ್ಮದ ಕುರಿತು 2017ರ ಟ್ವೀಟ್‌ಗೆ ಸಂಬಂಧಿಸಿದಂತೆ ಅರುಣ್ ಯಾದವ್ ಅವರ ಬಂಧನಕ್ಕೆ ಹೆಚ್ಚುತ್ತಿರುವ ಒತ್ತಾಯದ ನಡುವೆ ಬಿಜೆಪಿಯು ಗುರುವಾರ ಸಂಜೆ ಪಕ್ಷದ ಹರಿಯಾಣ ಘಟಕದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅವರನ್ನು ತೆಗೆದುಹಾಕಿದೆ. ಆಲ್ಟ್‌ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ನಾಲ್ಕು ವರ್ಷಗಳ ಹಳೆಯ ಟ್ವೀಟ್‌ನಿಂದ ಬಂಧನಕ್ಕೊಳಗಾದ ನಂತರ 2017ರ ಟ್ವೀಟ್‌ಗೆ … Continued

ತಮಿಳುನಾಡಿನ ತಿರುನಲ್ವೇಲಿಯಲ್ಲಿ 4,000 MW ಸೌರ ಸೆಲ್‌ -ಮಾಡ್ಯೂಲ್ ಉತ್ಪಾದನಾ ಘಟಕ ನಿರ್ಮಿಸಲು ಟಾಟಾ ಪವರ್ ಒಡಂಬಡಿಕೆ

ಟಾಟಾ ಪವರ್ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಗ್ರೀನ್‌ಫೀಲ್ಡ್ 4000 MW ಸೋಲಾರ್ ಸೆಲ್ ಮತ್ತು 4000MW ಸೋಲಾರ್ ಮಾಡ್ಯೂಲ್ ಉತ್ಪಾದನಾ ಘಟಕ ಸ್ಥಾಪನೆಗೆ ಸುಮಾರು 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ತಮಿಳುನಾಡು ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದೆ. ಸ್ಥಾವರದಲ್ಲಿ ಹೂಡಿಕೆಯನ್ನು 16 ತಿಂಗಳುಗಳಲ್ಲಿ ಮಾಡಲಾಗುತ್ತದೆ ಮತ್ತು ಇದು 2,000 ಕ್ಕೂ ಹೆಚ್ಚು … Continued

ಆನಂದ್ ಶರ್ಮಾ ಬಿಜೆಪಿ ಸೇರುತ್ತಾರೆಯೇ..?: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ಬಳಿಕ ಸ್ಪಷ್ಟನೆ ನೀಡಿದ ಕಾಂಗ್ರೆಸ್ ನಾಯಕ

ನವದೆಹಲಿ: ಕೇಂದ್ರದ ಮಾಜಿ ಸಚಿವ ಮತ್ತು “ಜಿ-23” ಅಥವಾ ಭಿನ್ನಮತೀಯ ಕಾಂಗ್ರೆಸ್ ನಾಯಕರ ಗುಂಪಿನ ಸದಸ್ಯ ಆನಂದ್ ಶರ್ಮಾ ಅವರು ಗುರುವಾರ ಸಂಜೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಇದು ಅವರು ಕೇಸರಿ ಪಾಳಯಕ್ಕೆ ಹೋಗುತ್ತಾರೆಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುಂಚೆಯೇ … Continued

1996ರಲ್ಲಿ ಮತಗಟ್ಟೆ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಾಲಿವುಡ್ ನಟ ರಾಜ್ ಬಬ್ಬರ್‌ಗೆ ಎರಡು ವರ್ಷ ಜೈಲು ಶಿಕ್ಷೆ

ಲಕ್ನೊ: ಮತದಾನ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಮತ್ತು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಉತ್ತರ ಪ್ರದೇಶದ ಸಂಸದರು- ಶಾಸಕರ ವಿಶೇಷ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕುರಿತು ಮೇ 2, 1996 ರಂದು ಮತಗಟ್ಟೆ ಅಧಿಕಾರಿ ವಜೀರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನ್ಯಾಯಾಲಯ … Continued