ಪ್ರವಾದಿ ಮಹಮ್ಮದ್‌ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಅರಬ್ ರಾಷ್ಟ್ರಗಳ ಆಕ್ಷೇಪ, ಬಿಜೆಪಿ ವಕ್ತಾರರ ಅಮಾನತು ಕ್ರಮಕ್ಕೆ ಸ್ವಾಗತ

ನವದೆಹಲಿ: ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಯನ್ನು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಖಂಡಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಪ್ರವಾಸದ ನಡುವೆಯೇ ಈ ವಿವಾದ ಭುಗಿಲೆದ್ದಿದೆ. ಸೌದಿ ಅರೇಬಿಯಾವು ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಕಾಮೆಂಟ್‌ಗಳನ್ನು “ಅವಮಾನಕರ” ಎಂದು ಬಣ್ಣಿಸಿದೆ ಮತ್ತು “ನಂಬಿಕೆಗಳು ಮತ್ತು … Continued

25,000 ದಾಟಿದ ಭಾರತದ ಸಾಪ್ತಾಹಿಕ ಕೋವಿಡ್ ಪ್ರಕರಣಗಳು, ಇದು 3 ತಿಂಗಳಲ್ಲಿ ಅತಿ ಹೆಚ್ಚು

ನವದೆಹಲಿ: ಭಾರತವು 4,518 ಹೊಸ ಕೊರೊನಾ ವೈರಸ್ ಸೋಂಕನ್ನು ದಾಖಲಿಸಿದ್ದು, ಕೋವಿಡ್‌-19 ಪ್ರಕರಣಗಳ ಸಂಖ್ಯೆಯನ್ನು 4,31,81,335 ಕ್ಕೆ ಒಯ್ದಿದೆ. ಸಕ್ರಿಯ ಪ್ರಕರಣಗಳು 25,782 ಕ್ಕೆ ಏರಿದೆ ಎಂದು ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಒಂಬತ್ತು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,701 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ … Continued

ಉತ್ತರಾಖಂಡ: ಯಮುನೋತ್ರಿ ಯಾತ್ರಾರ್ಥಿಗಳಿದ್ದ ಬಸ್ ಕಂದಕಕ್ಕೆ ಬಿದ್ದು 25 ಮಂದಿ ಸಾವು

ದಾಮ್ತಾ( ಉತ್ತರಾಖಂಡ): ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದು 25 ಮಂದಿ ಸಾವಿಗೀಡಾದ ಘಟನೆ ಉತ್ತರಾಖಂಡದಲ್ಲಿ ಭಾನುವಾರ ನಡೆದಿದೆ. 28 ಪ್ರಯಾಣಿಕರಿದ್ದ ಬಸ್ಸು ಗುಡ್ಡಗಾಡು ಪ್ರದೇಶದ ಪ್ರಮುಖ ಯಾತ್ರಾ ಸ್ಥಳವಾದ ಯಮುನೋತ್ರಿ ಮಾರ್ಗವಾಗಿ ಸಾಗುತ್ತಿತ್ತು. ಬಸ್ ಮಧ್ಯಪ್ರದೇಶದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ಸದ್ಯ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ … Continued

ತನ್ನ ಭಾವಿ ಪತಿಯನ್ನೇ ಬಂಧಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಅಸ್ಸಾಂನ “ಲೇಡಿ ಸಿಂಘಂ ಕೂಡ ಈಗ ಅರೆಸ್ಟ್‌..!

ಗುವಾಹತಿ: ಕಳೆದ ತಿಂಗಳು ವಂಚನೆ ಆರೋಪದ ಮೇಲೆ ತನಗೆ ಮದುವೆ ನಿಶ್ಚಯವಾಗಿದ್ದ ತಮ್ಮ ಭಾವಿ ಪತಿಯನ್ನೇ ಬಂಧಿಸಿ ಜೈಲಿಗೆ ಕಳುಹಿಸಿ ದೇಶಾದ್ಯಂತ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರನ್ನು ಸಹ ಇದೇ ಪ್ರಕರಣದಲ್ಲಿ ತನ್ನ ಭಾವಿ ಪತಿಯ ಜೊತೆ ಸೇರಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ…! ಅಸ್ಸಾಂನ ನಾಗಾಂವ್ … Continued

ಬಾಲಿವುಡ್‌ ನಟ ಸಲ್ಮಾನ್ ಖಾನ್-ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ: ಸಿದ್ದು ಮೂಸೆವಾಲಾ ಹತ್ಯೆಯ ಉಲ್ಲೇಖ

ಮುಂಬೈ: ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ “ತುಮ್ಹಾರಾ ಮೂಸ್ ವಾಲಾ ಕರ್ ದೇಂಗೆ (ನೀವು ಮೂಸ್ ವಾಲಾನಂತೆ ಕೊನೆಗೊಳ್ಳುತ್ತೀರಿ) ಎಂಬ ಸಂದೇಶದೊಂದಿಗೆ ಸಹಿ ಮಾಡದ ಪತ್ರವೊಂದು ಪತ್ತೆಯಾಗಿದೆ. ಈ ಪತ್ರವನ್ನು ಸಲೀಂ ಖಾನ್ ಅವರ ಕಾವಲುಗಾರರು ಗುರುತಿಸಿದ್ದಾರೆ, ಅಲ್ಲಿ ಹಿರಿಯ ಚಿತ್ರಕಥೆಗಾರ … Continued

ನನ್ನ ಮಾತುಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ: ಪಕ್ಷದಿಂದ ಅಮಾನತುಗೊಂಡ ನಂತರ ಪ್ರವಾದಿ ಮಹಮ್ಮದ್‌ ಮೇಲಿನ ಟೀಕೆಗ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹೇಳಿಕೆ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರ ಹೇಳಿಕೆಗಳ ಕುರಿತು ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದ ನಂತರ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರಿಗಾದರೂ ತೊಂದರೆ ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದರೆ, ನಾನು ಈ ಮೂಲಕ ನನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ … Continued

ಪ್ರವಾದಿ ಮಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅಮಾನತು ಮಾಡಿದ ಬಿಜೆಪಿ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಹೈಕಮಾಂಡ್ ಭಾನುವಾರ ಅಮಾನತುಗೊಳಿಸಿದೆ. ದೆಹಲಿ ಬಿಜೆಪಿಯ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷವು ಕಿತ್ತುಹಾಕಿದೆ. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಅಮಾನತು ಪತ್ರದಲ್ಲಿ ನೂಪುರ್‌ ಶರ್ಮಾ … Continued

ಕಾನ್ಪುರ ಹಿಂಸಾಚಾರ: 29 ಮಂದಿ ಬಂಧನ; ಪಿಎಫ್‌ಐಗೆ ಸಂಬಂಧಿಸಿದ ದಾಖಲೆಗಳು ಪತ್ತೆ ಎಂದ ಉನ್ನತ ಪೊಲೀಸ್ ಅಧಿಕಾರಿ

ನವದೆಹಲಿ: ಶುಕ್ರವಾರ, ಜೂನ್ 3 ರಂದು ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಒಟ್ಟು 29 ಜನರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮುಸ್ಲಿಂ ನಾಯಕ ಹಯಾತ್ ಜಾಫರ್ ಹಶ್ಮಿ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಎಂದು ಪೊಲೀಸರು ಗುರುತಿಸಿದ್ದಾರೆ. ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಹಯಾತ್ … Continued

ಕಾರಿನಲ್ಲಿ ಆಡುತ್ತಿದ್ದಾಗ ಡೋರ್ ಲಾಕ್ ಆಗಿ ಉಸಿರುಗಟ್ಟಿ ಮೂವರು ಮಕ್ಕಳು ಸಾವು

ತಿರುನಲ್ವೇಲಿ (ತಮಿಳುನಾಡು): ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್‍ ಲಾಕ್ ಆದ ಪರಿಣಾಮ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ. ಮೃತ ಮಕ್ಕಳನ್ನು ನಿತೀಶ್ (7), ಆತನ ಸಹೋದರಿ ನಿತೀಶಾ (5) ಮತ್ತು ಕಪಿಚಂದ್ (4) ಎಂದು ಗುರುತಿಸಲಾಗಿದೆ. ನಿತೀಶ್ ಮತ್ತು ನಿತೀಶಾ ಇಬ್ಬರೂ ನಾಗರಾಜ ಎಂಬುವರ … Continued

ರಾಜ್ಯಸಭೆಗೆ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ | ಸಂಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: 11 ರಾಜ್ಯಗಳಿಂದ ರಾಜ್ಯಸಭೆಗೆ ನಲವತ್ತೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಇತ್ತೀಚಿಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಕಪಿಲ್ ಸಿಬಲ್, ಆರ್‌ಜೆಡಿಯ ಮಿಸಾ ಭಾರತಿ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ವಿಜೇತರಲ್ಲಿ ಸೇರಿದ್ದಾರೆ.ಉತ್ತರ ಪ್ರದೇಶದಲ್ಲಿ ಎಲ್ಲಾ 11 ಅಭ್ಯರ್ಥಿಗಳು, ತಮಿಳುನಾಡಿನ 6, ಬಿಹಾರದಲ್ಲಿ 5, … Continued