ಇದೇನ್ರೀ..: 65 ವರ್ಷಗಳಿಂದಲೂ ಮರಳು-ಜಲ್ಲಿಕಲ್ಲುಗಳು 80 ವರ್ಷದ ಈ ಮಹಿಳೆಗೆ ಆಹಾರ…!

ಭಾರತದ ವಾರಣಾಸಿಯ ಕುಸುಮಾವತಿ ಎಂಬ 80 ವರ್ಷದ ಮಹಿಳೆ ತಾನು ಕಳೆದ 65 ವರ್ಷಗಳಿಂದ ಮರಳು ಮತ್ತು ಜಲ್ಲಿಕಲ್ಲು ತಿನ್ನುತ್ತಿದ್ದೇನೆ ಎಂದು ಹೇಳಿದ್ದಾಳೆ. ಹೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸಲು ಮರಳು ಮತ್ತು ಜಲ್ಲಿಕಲ್ಲುಗಳನ್ನು ಮೊದಲ ಸಲ ಸೇವಿಸಿದಾಗ ತಾನು 15 ವರ್ಷ ವಯಸ್ಸಿನವಳಾಗಿದ್ದೆ ಎಂದು ಅವಳು ಹೇಳಿದ್ದು, ಅಂದಿನಿಂದ ಮರಳು ಮತ್ತು ಜಲ್ಲಿಕಲ್ಲು ತನ್ನ ಆಹಾರದ ಭಾಗವಾಯಿತು … Continued

ಅಕ್ಟೋಬರ್ 29ರಿಂದ ಜಿ-20 ಶೃಂಗಸಭೆ, ಸಿಒಪಿ-26 ವಿಶ್ವ ನಾಯಕರ ಸಭೆಗಾಗಿ ಇಟಲಿ, ಬ್ರಿಟನ್ನಿಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮವಾಗಿ 16ನೇ ಜಿ-20 ಶೃಂಗಸಭೆ ಮತ್ತು ಸಿಒಪಿ-26ರ ವಿಶ್ವ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ 29 ರಿಂದ ನವೆಂಬರ್ 2ರ ವರೆಗೆ ಬ್ರಿಟನ್‌, ಇಟಲಿಗೆ ಪ್ರಯಾಣಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಎಂಇಎ ಭಾನುವಾರ ತಿಳಿಸಿದೆ. ಇಟಲಿಯ ಪ್ರಧಾನಿ ಮಾರಿಯೋ ಡ್ರ್ಯಾಗಿಯವರ ಆಹ್ವಾನದ ಮೇರೆಗೆ 2021 ರ ಅಕ್ಟೋಬರ್ 30-31ರ … Continued

ಮಂತ್ರವಾದಿ ಮಾತು ಕೇಳಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಹತ್ಯೆ ಮಾಡಿದ ಮಕ್ಕಳಿಲ್ಲದ ದಂಪತಿ..!

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ವರದಿಯಾದ ಅತ್ಯಂತ ಆಘಾತಕಾರಿ ಡಬಲ್ ಕೊಲೆ ಪ್ರಕರಣದಲ್ಲಿ, ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಮಕ್ಕಳಿಲ್ಲದ ದಂಪತಿಗಳು ಒಂದೇ ವಾರದಲ್ಲಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ, ಮಾಟ ಮಂತ್ರವಾದಿಯೊಬ್ಬ ಮಕ್ಕಳನ್ನು ಪಡೆಯಲು ‘ನರಬಲಿ’ ಮಾಡಲು ಪ್ರೇರೇಪಿಸಿದ ನಂತರ ಅವರು ಈ ಕೊಲೆ ಮಾಡಿದ್ದಾರೆ. ದಂಪತಿ ಹಾಗೂ ವಾಮಾಚಾರ ಹಾಗೂ ಮಾಟಮಂತ್ರ ಮಾಡುತ್ತಿದ್ದ ವ್ಯಕ್ತಿ ಸೇರಿದಂತೆ ಐವರನ್ನು … Continued

ದೈನಂದಿನ ಸೋಪ್ ಒಪೆರಾ :ಆಂತರಿಕ ಬಿಕ್ಕಟ್ಟಿನ ಬಗ್ಗೆ ಬಹಿರಂಗವಾಗಿ ಪಂಜಾಬ್ ಕಾಂಗ್ರೆಸ್ ಟೀಕಿಸಿದ ಅದೇ ಪಕ್ಷದ ನಾಯಕ ಮನೀಶ್ ತಿವಾರಿ

ಚಂಡೀಗಡ: ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಭಾನುವಾರ ತಮ್ಮ ಪಕ್ಷದ ಪಂಜಾಬ್ ಘಟಕವನ್ನು ಬಹಿರಂಗವಾಗಿ ಟೀಕಿಸಿದ್ದಾರೆ ಮತ್ತು ಅವರು “ಇಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು” ನೋಡಿಲ್ಲ ಎಂದು ಹೇಳಿದ್ದಾರೆ. .ಕಾಂಗ್ರೆಸ್ಸಿನ ಜಿ 23 ಸದಸ್ಯರಾದ ತಿವಾರಿ ಅವರು ನನ್ನ 40 ವರ್ಷಗಳ ಕಾಂಗ್ರೆಸ್‌ ಜೀವನದಲ್ಲಿ ಈಗ ಪಂಜಾಬ್ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವಂತಹ ಅವ್ಯವಸ್ಥೆ ಮತ್ತು ಅರಾಜಕತೆಯನ್ನು … Continued

ಉತ್ತರ ಪ್ರದೇಶದ ಕಾನ್ಪುರದಲ್ಲಿ ಝಿಕಾ ವೈರಸ್ ಪ್ರಕರಣ ಪತ್ತೆ

ಕಾನ್ಪುರ: ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್‌ನ ಮೊದಲ ಪ್ರಕರಣ ಕಾನ್ಪುರದಲ್ಲಿ ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ರೋಗಿಯು ವಾಯುಪಡೆಯ ಸಿಬ್ಬಂದಿಯಾಗಿದ್ದು ಕಾನ್ಪುರದ ಪೋಖರ್‌ಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆರೋಗ್ಯ ಇಲಾಖೆ ರೋಗಿಯ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ. ಫಲಿತಾಂಶವು ಸಕಾರಾತ್ಮಕವಾಗಿ ಬಂದ ನಂತರ, ನಗರ ಪಾಲಿಕೆಯಿಂದ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಕನಿಷ್ಠ 200 ಜನರನ್ನು … Continued

ಸಬ್‌ಮರಿನ್‌ ನಾಶಕ ಎಂಕೆ 54 ಟಾರ್ಪೆಡೊ ಖರೀದಿಗೆ ಅಮೆರಿಕದೊಂದಿಗೆ 423 ಕೋಟಿ ಒಪ್ಪಂದಕ್ಕೆ ಭಾರತ ಸಹಿ

ನವದೆಹಲಿ: ಭಾರತದ ರಕ್ಷಣಾ ಇಲಾಖೆಯು ಅಮೆರಿಕದಿಂದ ಎಂಕೆ 54 ಟಾರ್ಪೆಡೊಗಳನ್ನು ಖರೀದಿಸಲು ₹ 423 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಕಳೆದ ಗುರುವಾರವೇ ಅಮೆರಿಕ ಸರ್ಕಾರದೊಂದಿಗೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಬ್​ಮರೀನ್ ನಾಶಕ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಈ ಟಾರ್ಪೆಡೊಗಳು ನೆರವಾಗಲಿವೆ ಎಂದು ಹೇಳಲಾಗಿದೆ. ಇದನ್ನು … Continued

ಆಘಾತಕಾರಿ….20 ರೂ. ಕದ್ದ ಶಂಕೆ ಮೇಲೆ 7 ವರ್ಷದ ಬಾಲಕಿಯನ್ನು ತಳ್ಳುವ ಗಾಡಿಗೆ ಹಗ್ಗದಿಂದ ಕಟ್ಟಿ ಎಳೆದೊಯ್ದರು…!

ಮೀರತ್:‌ ಉತ್ತರ ಪ್ರದೇಶದಲ್ಲಿ ನಡೆದ ಭೀಕರ ಹಾಗೂ ಆಘಾತಕಾರಿ ಘಟನೆಯೊಂದರಲ್ಲಿ ಏಳು ವರ್ಷದ ಬಾಲಕಿಯನ್ನು ಕಳ್ಳತನದ ಶಂಕೆಯ ಮೇಲೆ ಅಂಗಡಿಯವನು ಮತ್ತು ಅವನ ಸಹಾಯಕ ತಳ್ಳುಗಾಡಿಗೆ ಹಗ್ಗದಿಂದ ಕಾಲುಕಟ್ಟಿ ಎಳೆದೊಯ್ದ ಬಗ್ಗೆ ವರದಿಯಾಗಿದೆ. ಹಾಪುರ್ ಜಿಲ್ಲೆಯ ಬಹದ್ದೂರ್ ಘಡ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತ ಬಾಲಕಿಯೊಬ್ಬಳು 20 … Continued

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ: ಬಂಧಿತ ಆರೋಪಿ ಆಶೀಶ್​ ಮಿಶ್ರಾಗೆ ಡೆಂಗ್ಯೂ ; ಆಸ್ಪತ್ರೆಗೆ ದಾಖಲು

ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆಶೀಶ್​ ಮಿಶ್ರಾರಿಗೆ ಅನಾರೋಗ್ಯ ಉಂಟಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಶೀಶ್​ ಮಿಶ್ರಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆಂದು ಹೇಳಲಾಗಿದ್ದು, ಅವರ ರಕ್ತದ ಮಾದರಿ ತಪಾಸಣೆಗಾಗಿ ಕಳುಸಲಾಗಿದೆ. ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶೀಶ್​ ಮಿಶ್ರಾರನ್ನು ಜಿಲ್ಲಾ ಕಾರಾಗೃಹದಲ್ಲಿ ಇಡಲಾಗಿತ್ತು. ಅವರೀಗ ಶಂಕಿತ ಡೆಂಗ್ಯೂದಿಂದ ಬಳಲುತ್ತಿರುವ … Continued

ಭಾರತದಲ್ಲಿ 15,906 ಹೊಸ ಕೋವಿಡ್ ಪ್ರಕರಣಗಳು ದಾಖಲು

ನವದೆಹಲಿ: ಭಾರತವು 15,906 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಶನಿವಾರಕ್ಕೆ ಹೋಲಿಸಿದರೆ, ಹೊಸ ಪ್ರಕರಣಗಳು 2.6 ಶೇಕಡಾ ಕಡಿಮೆಯಾಗಿದೆ. ಭಾರತದ ಒಟ್ಟು ಪ್ರಕರಣ 3,41,75,468 ಕ್ಕೆ ತಲುಪಿದೆ. 561 ಹೊಸ ಸಾವುಗಳೊಂದಿಗೆ, ಒಟ್ಟು ಮೃತಪಟ್ಟವರ ಸಂಖ್ಯೆ 4,54,269 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 16,479 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದು ದೇಶಾದ್ಯಂತ ಒಟ್ಟು ಚೇತರಿಕೆಯನ್ನು … Continued

ಒಂದೂವರೆ ವರ್ಷದಲ್ಲಿ ಲೀಟರ್​ಗೆ ಪೆಟ್ರೋಲ್ 36 ರೂ., ಡೀಸೆಲ್ 26.58 ರೂ. ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ ನಾಲ್ಕನೇ ದಿನವಾದ ಶನಿವಾರ ಸಹ ಲೀಟರ್‌ಗೆ 35 ಪೈಸೆಗಳಷ್ಟು ಏರಿಕೆಯಾಗಿದ್ದು, 18 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪೆಟ್ರೋಲ್‌ನ ಮೇಲಿನ ದರ ಲೀಟರ್‌ಗೆ 36 ರೂಪಾಯಿ ಮತ್ತು ಡೀಸೆಲ್‌ನ ಮೇಲೆ 26.58 ರೂಪಾಯಿ ಏರಿಕೆ ಆಗಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 100 ರೂ.ಗಳಿಗಿಂತ ಹೆಚ್ಚಾಗಿದೆ. … Continued