ರಾಯ್‌ಪುರ ರೈಲು ನಿಲ್ದಾಣದಲ್ಲಿ ಸ್ಫೋಟ: 6 ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ರಾಯ್‌ಪುರ: ಶನಿವಾರ ಮುಂಜಾನೆ ರಾಯ್‌ಪುರ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಆರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್‌ನ 211 ಬೆಟಾಲಿಯನ್‌ನ ಜವಾನರು ವಿಶೇಷ ರೈಲಿನಲ್ಲಿ ಜಮ್ಮುವಿಗೆ ಹೋಗುತ್ತಿತ್ತು. ಇಂದು ಬೆಳಿಗ್ಗೆ 6.30 ರ ಸುಮಾರಿಗೆ ರಾಯ್‌ಪುರ ರೈಲ್ವೇ ನಿಲ್ದಾಣದಲ್ಲಿ ಸಿಆರ್‌ಪಿಎಫ್‌ನ ವಿಶೇಷ ರೈಲಿನಲ್ಲಿ ಸಣ್ಣ ಸ್ಫೋಟ ದಾಖಲಾಗಿದೆ. ರೈಲು ಜರ್ಸುಗುಡಾದಿಂದ … Continued

ಭಾರತದಲ್ಲಿ 15,981 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 15,981 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು ದೇಶವು ಒಂದು ದಿನ ಮೊದಲು ಕಂಡಿದ್ದಕ್ಕಿಂತ ಶೇಕಡಾ 5.2 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಗೆ ಶನಿವಾರ ತಿಳಿಸಿದೆ. ಇದರ ಪರಿಣಾಮವಾಗಿ, ಭಾರತದಲ್ಲಿ ಒಟ್ಟು ಪ್ರಕರಣ 3,40,53,573ಕ್ಕೆ ಏರಿದೆ. … Continued

ಭಾರತದ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಎರಡು ವರ್ಷಕ್ಕೆ ದ್ರಾವಿಡ್ ನೇಮಕ: ವರದಿ

ನವದೆಹಲಿ: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನವೆಂಬರ್ 2021 ರಿಂದ ಆರಂಭವಾಗುವ ಎರಡು ವರ್ಷಗಳ ಕಾಲ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ದ್ರಾವಿಡ್ ಅಂತಿಮವಾಗಿ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.. ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಫೈನಲ್‌ನಲ್ಲಿ ಈ … Continued

ಜಾಗತಿಕ ಹಸಿವಿನ ಸೂಚ್ಯಂಕ 2021: 94 ನೇ ಸ್ಥಾನದಿಂದ 101ನೇ ಸ್ಥಾನಕ್ಕೆ ಕುಸಿದ ಭಾರತ

ಭಾರತವು ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ ವರದಿಯಲ್ಲಿ 135 ರಾಷ್ಟ್ರಗಳ ಪೈಕಿ 101 ನೇ ಸ್ಥಾನಕ್ಕೆ ಕುಸಿದಿದೆ. ಭಾರತ ಕಳೆದ ವರ್ಷ 94 ನೇ ಸ್ಥಾನದಲ್ಲಿತ್ತು. ಈಗ ಪಾಕಿಸ್ತಾನ (92), ಬಾಂಗ್ಲಾದೇಶ (76) ಮತ್ತು ನೇಪಾಳ (76) ಗಳ ಇವುಗಳು ಭಾಋತಕ್ಕಿಂತ ಮುಂದಿವೆ..! ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ … Continued

ರಾಜೀನಾಮೆ ಹಿಂಪಡೆದ ನವಜೋತ್ ಸಿಂಗ್ ಸಿಧು : ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಕೆ

ನವದೆಹಲಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ನವಜೋತ್ ಸಿಂಗ್ ಸಿಧು ಹಿಂಪಡೆದಿದ್ದಾರೆ. ಮತ್ತು ಅದೇ ಹುದ್ದೆಯಲ್ಲಿ ತಮ್ಮ ಕರ್ತವ್ಯವನ್ನು ಮುಂದುವರಿಸಲಿದ್ದಾರೆ. ಶುಕ್ರವಾರ, ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ನಂತರ, ನವಜೋತ್ ಸಿಂಗ್ ಸಿಧು “ನಾನು ನನ್ನ ಎಲ್ಲಾ ಕಳವಳಗಳನ್ನು ರಾಹುಲ್ ಗಾಂಧಿಯೊಂದಿಗೆ ಹಂಚಿಕೊಂಡಿದ್ದೇನೆ. ಎಲ್ಲವನ್ನೂ ಬಗೆಹರಿಸಲಾಗಿದೆ” ಎಂದು ಹೇಳಿದ್ದಾರೆ. ಅಖಿಲ … Continued

ಸಿಂಘು ಗಡಿ ಹತ್ಯೆ ಪ್ರಕರಣ: ಪೊಲೀಸರಿಗೆ ಶರಣಾದ ಸರಬ್ಜಿತ್ ಸಿಂಗ್

ನವದೆಹಲಿ:ನಿಹಾಂಗ್ ಸಮುದಾಯಕ್ಕೆ ಸೇರಿದ ಸರಬ್ಜಿತ್ ಸಿಂಗ್ ಎಂಬ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದು, ದೆಹಲಿ-ಹರಿಯಾಣ ಗಡಿ ಸಮೀಪದ ಕುಂಡ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದ ಜವಾಬ್ದಾರಿಯನ್ನು ಈತ ಹೊತ್ತುಕೊಂಡಿದ್ದಾನೆ. ಸರಬ್ಜಿತ್ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವಿವರಗಳ ಪ್ರಕಾರ, ಅವರನ್ನು ಶನಿವಾರ (ನಾಳೆ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. .35 ವರ್ಷದ ವ್ಯಕ್ತಿಯನ್ನು … Continued

ದುರ್ಗಾ ದೇವಿ ಮೆರವಣಿಗೆ ನಡುವೆ ನುಗ್ಗಿದ ಕಾರು; ಒಂದು ಸಾವು, 20 ಮಂದಿಗೆ ಗಾಯ, ದೃಶ್ಯ ವಿಡಿಯೊದಲ್ಲಿ ಸೆರೆ

ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಜಶ್‌ಪುರದಲ್ಲಿ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಆದರೆ ಘಟನೆಯಲ್ಲಿ, ಕನಿಷ್ಠ ನಾಲ್ಕು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. 20 ಮಂದಿ ಇತರರು ಗಾಯಗೊಂಡಿದ್ದು ಇದರಲ್ಲಿ ನಾಲ್ವರ ಸ್ಥಿತಿ ಚಗಂಭೀರವಾಗಿದೆ … Continued

ಕೋವಿಡ್ ಲಸಿಕೆ ಹಾಕಲು ಕಾಲು ಸಂಕದ ಮೇಲೆ ಉಕ್ಕಿದ ನದಿ ದಾಟಿದ ಆರೋಗ್ಯ ಕಾರ್ಯಕರ್ತರ ವಿಡಿಯೋ ವೈರಲ್

ಇಟಾನಗರ: ಕೊರೊನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಭಾರೀ ಸಾಹಸ ಮಾಡುತ್ತಾರೆ. ನದಿ ದಾಟುತ್ತಾರೆ, ಎತ್ತರದ ಗುಡ್ಡ ದಾಟಿ ಹೋಗಿ ಲಸಿಕೆ ನೀಡಿದ್ದಾರೆ. ಈಗ ಇಂಥದ್ದೇ ಒಂದು ವಿದ್ಯಮಾನದಲ್ಲಿ ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಬಿದಿರಿನ ಕಾಲು ಸಂಕ ದಾಟಿ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. Watch … Continued

ಜೆಇಇ ಅಡ್ವಾನ್ಸಡ್ 2021 ಫಲಿತಾಂಶ ಪ್ರಕಟ :ಇತಿಹಾಸ ನಿರ್ಮಿಸಿದ ಮೃದುಲ್​ ಅಗರ್ವಾಲ್​

ನವದೆಹಲಿ: ಪ್ರತಿಷ್ಠಿತ ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​(JEE Advanced) 2021ರ ಫಲಿತಾಂಶವು ಹೊರಬಿದ್ದಿದೆ. ರಾಜಸ್ಥಾನದ ಜೈಪುರ ಮೂಲದ 18 ವರ್ಷದ ಮೃದುಲ್​ ಅಗರ್​​ವಾಲ್​, ಈವರೆಗೆ ಅತಿಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ನಿರ್ಮಿಸಿದ್ದಾನೆ. ದೆಹಲಿಯ ಕಾವ್ಯಾ ಚೋಪ್ರಾ ಬಾಲಕಿಯರಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದಾಳೆ. ಅರ್ಹತಾ ಪರೀಕ್ಷೆಯಾದ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ 100 ಪರ್ಸೆಂಟೈಲ್​ ಗಳಿಸಿ, … Continued

ಸಿಂಗು ಗಡಿಯಲ್ಲಿ ಕೈ ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿರುವ ವ್ಯಕ್ತಿಯ ಅರೆಬೆತ್ತಲೆ ದೇಹ ಪತ್ತೆ..!

ನವದೆಹಲಿ: ಇಂದು (ಶುಕ್ರವಾರ) ಬೆಳಗ್ಗೆ ಸಿಂಗು ಗಡಿಯಲ್ಲಿರುವ ರೈತರ ಪ್ರತಿಭಟನಾ ಸ್ಥಳದಲ್ಲಿ ಎಡಗೈ ಮಣಿಕಟ್ಟು ತುಂಡಾಗಿ ಮತ್ತು ರಕ್ತದ ಮಡುವಿನೊಂದಿಗೆ ತಲೆಕೆಳಗಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು ಪೊಲೀಸ್ ಬ್ಯಾರಿಕೇಡ್‌ಗೆ ಕಟ್ಟಿರುವುದು ಕಂಡುಬಂದಿದೆ. ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯಲ್ಲಿ ನಡೆದ ಈ ಕೊಲೆಗೆ ನಿಹಾಂಗ್ಸ್ – ‘ಯೋಧ’ ಸಿಖ್ ಗುಂಪು ಕಾರಣ ಎಂದು ಆರಂಭಿಕ ವರದಿಗಳು ಹೇಳಿವೆ … Continued