ಸೆಪ್ಟೆಂಬರ್​ 28ರಂದು ಜಿಗ್ನೇಶ್​ ಮೇವಾನಿ, ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಸೇರ್ಪಡೆ ನಿಚ್ಚಳ

ನವದೆಹಲಿ: ಒಂದು ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕ ಕನ್ಹಯ್ಯಕುಮಾರ್ ಮತ್ತು ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ (Rashtriya Dalit Adhikar Manch ) ಶಾಸಕ ಜಿಗ್ನೇಶ್ ಮೇವಾನಿ ಸೆಪ್ಟೆಂಬರ್ 28 ರಂದು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ವರದಿಗಳು ಶನಿವಾರ ತಿಳಿಸಿವೆ. ಈ ಹಿಂದೆ ಇಬ್ಬರು ಯುವ ನಾಯಕರನ್ನು ರಾಹುಲ್ … Continued

ಕೇಂದ್ರ ಸರ್ಕಾರದಿಂದ ಶೀಘ್ರವೇ ಹೊಸ ಸಹಕಾರಿ ನೀತಿ ಪ್ರಕಟ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

ನವದೆಹಲಿ: ಭಾರತದ ಗ್ರಾಮೀಣ ಸಮಾಜವನ್ನು ಉತ್ತೇಜಿಸುವ ಹೊಸ ಸಹಕಾರಿ ನೀತಿಯನ್ನು ಕೇಂದ್ರ ಸರ್ಕಾರ ಶೀಘ್ರವೇ ಘೋಷಿಸಲಿದೆ ಮತ್ತು ಸಹಕಾರ ಚಳವಳಿಯನ್ನು ಬಲಪಡಿಸಲು ಕೇಂದ್ರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರದ ಗೃಹ ಹಾಗೂ ಸಹಕಾರ ಖಾತೆ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಇಲ್ಲಿ ನಡೆದ ಮೊದಲ ರಾಷ್ಟ್ರೀಯ ಸಹಕಾರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ … Continued

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರ, ಒಡಿಶಾದತ್ತ ಚಂಡಮಾರುತ-ಎಚ್ಚರಿಕೆ

ಭುವನೇಶ್ವರ: ಬಂಗಾಳ ಕೊಲ್ಲಿಯ ಈಶಾನ್ಯ ಮತ್ತು ಪೂರ್ವ ಮಧ್ಯಭಾಗದಲ್ಲಿ ‌ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾಗಳ ಕರಾವಳಿ ತೀರಗಳಲ್ಲಿ ಮುಂದಿನ 12 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ವಿಪರೀತ … Continued

ಪ್ರಧಾನಿ ಮೋದಿ ಕಳೆದ ವರ್ಷಕ್ಕಿಂತ ಸ್ವಲ್ಪ ಶ್ರೀಮಂತರು; ಅವರ ಬ್ಯಾಂಕ್ ಬ್ಯಾಲೆನ್ಸ್, ಹೂಡಿಕೆಗಳು, ಸ್ವತ್ತುಗಳ ವಿವರಗಳು ಇಲ್ಲಿವೆ..

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಿವ್ವಳ ಮೌಲ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಳ ಕಂಡಿದೆ. ಪ್ರಧಾನಮಂತ್ರಿಗಳ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿಯವರ ನಿವ್ವಳ ಮೌಲ್ಯವು ಕಳೆದ ವರ್ಷ 2.85 ಕೋಟಿಯಿಂದ 3,07,68,885 (3.07) ಕೋಟಿಗೆ ಏರಿದೆ. ಕಳೆದ ಒಂದು ವರ್ಷದಲ್ಲಿ ಅವರ ನಿವ್ವಳ ಮೌಲ್ಯದ ಹೆಚ್ಚಳ 22 ಲಕ್ಷ ರೂ. … Continued

ಒಡಿಶಾ: ನದಿಯಲ್ಲಿ ಸಿಲುಕಿದ್ದ ಆನೆ ರಕ್ಷಣಾ ಕಾರ್ಯಾಚರಣೆ ವೇಳೆ ದುರಂತ; ಪತ್ರಕರ್ತ, ಒಡಿಆರ್‌ಎಎಫ್ ಸಿಬ್ಬಂದಿ ಸಾವು

ಕಟಕ್: ಒಡಿಶಾದ ಕಟಕ್ ಜಿಲ್ಲೆಯ ಮಹಾನದಿಯ ಮುಂಡಾಲಿ(Mundali) ಸೇತುವೆಯಲ್ಲಿ ಪ್ರವಾಹಕ್ಕೆ ಸಿಲುಕೊಂಡಿದ್ದ ಆನೆ ರಕ್ಷಣಾ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದೆ. ಶುಕ್ರವಾರ ಒಡಿಶಾದ ಮಹಾನದಿ ನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಾದೇಶಿಕ ಟಿವಿ ಚಾನೆಲ್ ಪತ್ರಕರ್ತ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ (ಓಡಿಆರ್‌ಎಎಫ್) ಸದಸ್ಯರು ಮೃತಪಟ್ಟಿದ್ದಾರೆ. ಪತ್ರಕರ್ತ … Continued

ಭಾರತದಲ್ಲಿ 29,616 ಹೊಸ ಕೋವಿಡ್ -19 ಪ್ರಕರಣಗಳು, ಮಾರ್ಚ್ 2020ರ ನಂತರ ಅತ್ಯಧಿಕ ಚೇತರಿಕೆ ದರ

ನವದೆಹಲಿ: ಭಾರತದಲ್ಲಿ ಶನಿವಾರ 24 ಗಂಟೆಗಳಲ್ಲಿ 29,616 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದು ಶುಕ್ರವಾರ ನೋಂದಾಯಿಸಿದ್ದಕ್ಕಿಂತ ಶೇಕಡಾ 5.6 ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಪ್ರಸ್ತುತ 3,01,442 ಸಕ್ರಿಯ ಪ್ರಕರಣಗಳಿದ್ದು, ಶುಕ್ರವಾರ ವರದಿಯಾದ ಅಂಕಿಅಂಶಕ್ಕಿಂತ 1,280 ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶವು 290 ಕೋವಿಡ್ ಸಾವುಗಳನ್ನು ಕಂಡಿದೆ, ಒಟ್ಟು ವರದಿ ಮಾಡಿದ ಸಂಖ್ಯೆ … Continued

ಭಯೋತ್ಪಾದಕರಿಗೆ ಆಶ್ರಯ-ಬೆಂಬಲ ನೀಡಿದ ದೇಶದಿಂದ ಅಗ್ನಿಶಾಮಕ ದಳದ ವೇಷ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಕೆದಕಿದ್ದಕ್ಕಾಗಿ ಪಾಕಿಸ್ತಾನಕ್ಕೆ ಭಾರತದ ಉತ್ತರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ ಜಿಎ) ಭಾರತದ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ ಕಾಶ್ಮೀರ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಟೀಕೆಗಳಿಗೆ ಉತ್ತರಿಸಿದ್ದಾರೆ. ಪಾಕಿಸ್ತಾನದ ನಾಯಕನ ಮತ್ತೊಂದು ಪ್ರಯತ್ನಕ್ಕೆ ಉತ್ತರಿಸುವ ನಮ್ಮ ಹಕ್ಕನ್ನು ನಾವು ಬಳಸುತ್ತೇವೆ, ಈ ದೇಶದ ವೇದಿಕೆಯನ್ನು ಹಾಳುಗೆಡಹುವ ಮೂಲಕ ನನ್ನ ದೇಶಕ್ಕೆ ಸಂಬಂಧಿಸಿದ ಆಂತರಿಕ ವಿಷಯಗಳನ್ನು ತಂದು … Continued

ಭಾರತ-ಅಮೆರಿಕ ಅತ್ಯಂತ ನಿಕಟ ರಾಷ್ಟ್ರಗಳಾಗಲಿವೆ ಎಂದು ಮೊದಲೇ ಹೇಳಿದ್ದೆ: ಪ್ರಧಾನಿ ಮೋದಿ ಭೇಟಿಯಾದಾಗ ಹೇಳಿದ ಬಿಡೆನ್

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಮೊದಲ ವ್ಯಕ್ತಿಗತ ಭೇಟಿಯ ಸಮಯದಲ್ಲಿ, ಬಿಡೆನ್ ಅವರು ಅಮೆರಿಕ-ಭಾರತದ ಸಂಬಂಧವು ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಿದ್ದೇನೆ ಎಂದು ಹೇಳಿದರು. ಅಮೆರಿಕ-ಭಾರತ ಸಂಬಂಧವು ನಮಗೆ ಸಾಕಷ್ಟು ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಾನು … Continued

ಮೋದಿ-ಬಿಡೆನ್ ಭೇಟಿ: ಭಾರತ-ಅಮೆರಿಕ ಬಾಂಧವ್ಯ ವಿಸ್ತರಣೆಗೆ ಬೀಜ ಬಿತ್ತಲಾಗಿದೆ ಎಂದ ಮೋದಿ, ಸಂಬಂಧ ಬಲಪಡಿಸುವುದು ಉದ್ದೇಶ ಎಂದ ಬಿಡೆನ್

ವಾಷಿಂಗ್ಟನ್‌: ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಿದರು. ಆತ್ಮೀಯ ಸ್ವಾಗತಕ್ಕಾಗಿ ಪ್ರಧಾನಿ ಮೋದಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು “ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದಗಳು. ಮೊದಲು, ನಮಗೆ ಚರ್ಚೆಗಳನ್ನು ನಡೆಸಲು … Continued

ಸುಪ್ರೀಂ ಕೋರ್ಟ್‌ ಆಕ್ಷೇಪಣೆ ನಂತರ ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ ಕೈಬಿಟ್ಟ ಎನ್‌ಐಸಿ

ಸುಪ್ರೀಂ ಕೋರ್ಟ್‌ ಆಕ್ಷೇಪಣೆ ನಂತರ ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ ಕೈಬಿಟ್ಟ ಎನ್‌ಐಸಿ ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಆಕ್ಷೇಪಣೆಯ ನಂತರ ಸುಪ್ರೀಂ ಕೋರ್ಟಿನ ಅಧಿಕೃತ ಇ ಮೇಲ್‌ಗಳ ಕೆಳ ಅಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಜಾಹಿರಾತು ಬ್ಯಾನರ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ತೆಗೆದು ಹಾಕಿದೆ. ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ … Continued