ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದ 3, ಒಡಿಶಾದ 1 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ:ಪಶ್ಚಿಮ ಬಂಗಾಳದ ಸಂಸರ್‌ಗಂಜ್, ಜಂಗೀಪುರ ಮತ್ತು ಭಬನಿಪುರ ಮತ್ತು ಒಡಿಶಾದ ಪಿಪ್ಲಿಗೆ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಚುನಾವಣೆ ನಡೆಯಲಿದೆ. ಪ್ರಸ್ತುತ, ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ 31 ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಆದಾಗ್ಯೂ, ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ … Continued

ಬೋರ್‌ವೆಲ್‌ ನಿಂದ ಎಷ್ಟು ಬೇಕೋ ಅಷ್ಟು ನೀರು ಪಂಪ್‌ ಮಾಡಿ ಕುಡಿದ ಆನೆ- ವಿಡಿಯೋ ವೈರಲ್

ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ. ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯವು ಆನೆ ಕೊಳವೆಬಾವಿಯಿಂದ ನೀರು ತೆಗೆಯುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆನೆ ಕೊಳವೆಬಾವಿಯಿಂದ ನೀರನ್ನು ಪಂಪ್ ಮಾಡುತ್ತದೆ. … Continued

ಭಾರತದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಸುಪ್ರೀಂಕೋರ್ಟ್ ಕೊಲಿಜಿಯಂ

ನವದೆಹಲಿ: ದೇಶದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕೊಲಿಜಿಯಂಶಿಫಾರಸು ಮಾಡಿದೆ. ಕರ್ನಾಟಕದ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ಮಾಡಬೇಕೆಂದು ಕೊಲಿಜಿಯಂ ತನ್ನ ಶಿಫಾರಸಿನಲ್ಲಿ ಹೇಳಿದೆ. 68 ಹೆಸರುಗಳನ್ನು ಆಯ್ಕೆ ಮಾಡುವ ಮೊದಲು 100 ಹೆಸರುಗಳನ್ನು ಕೊಲಿಜಿಯಂ ಪರಿಗಣಿಸಿತ್ತು. 68ರಲ್ಲಿ 44 ವಕೀಲರು ಮತ್ತು 24 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ಇವರಲ್ಲಿ 11 … Continued

ಉತ್ತರ ಪ್ರದೇಶಲ್ಲಿ ಎಸ್‌ಪಿ ಸ್ಥಾನಗಳು ಗಣನೀಯ ಏರಿಕೆ, ಆದರೆ ಗೆಲ್ಲುವುದು ಬಿಜೆಪಿ ಎನ್ನುತ್ತದೆ ಎಬಿಪಿ- ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ

ಮುಂದಿನ ವರ್ಷದ ಆರಂಭದಲ್ಲಿ ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದಂತಹ ರಾಜ್ಯಗಳೊಂದಿಗೆ ಉತ್ತರ ಪ್ರದೇಶವೂ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಉತ್ತರ ಪ್ರದೇಶದ ಸ್ಪರ್ಧೆಯು ರಾಜಕೀಯ ಪಕ್ಷಗಳಿಗೆ ಹಿಂದಿ ಹೃದಯಭೂಮಿಯಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಮಹತ್ವದ್ದಾಗಿದೆ. ವಿನಾಶಕಾರಿ ಕೋವಿಡ್ -19 ಎರಡನೇ ಅಲೆಯನ್ನು ರಾಜ್ಯ ಸರ್ಕಾರ ನಿರ್ವಹಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಬಿಜೆಪಿಯ ಉನ್ನತ ಅಧಿಕಾರಿಗಳು ಶ್ಲಾಘಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಗಂಗೆಯಲ್ಲಿ … Continued

ಟೋಕಿಯೊ ಪ್ಯಾರಾಲಿಂಪಿಕ್ಸ್: ಮಿಶ್ರ 50 ಮೀಟರ್ ಪಿಸ್ತೂಲ್ ನಲ್ಲಿ ಮನೀಶ್ ನರ್ವಾಲಗೆ ಚಿನ್ನ, ಸಿಂಗರಾಜಗೆ ಬೆಳ್ಳಿ, 15ಕ್ಕೇರಿದ ಭಾರತದ ಪದಕ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ತನ್ನ ಪದಕದ ಪಟ್ಟಿಯನ್ನು 15ಕ್ಕೆ ಏರಿಸಿದೆ. ಶನಿವಾರ ನಡೆದ ಮಿಶ್ರ 50 ಮೀಟರ್ ಪಿಸ್ತೂಲ್ ಎಸ್‌ಎಚ್ 1 ಶೂಟಿಂಗ್ ಫೈನಲ್‌ನಲ್ಲಿ ಮನೀಶ್ ನರ್ವಾಲ್ ಮತ್ತು ಸಿಂಗ್‌ ರಾಜ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದರು. 19 ವರ್ಷದ ಮನೀಶ್ 218.2 ಅಂಕಗಳ ಹೊಸ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ … Continued

ಎಬಿಪಿ – ಸಿ ವೋಟರ್‌-2022ರ ಚುನಾವಣಾ ಪೂರ್ವ ಸಮೀಕ್ಷೆ: ಉತ್ತರಾಖಂಡದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ

ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ 2022 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಬಿಪಿ-ಸಿ ವೋಟರ್‌ ಮತದಾರರ ಸಮೀಕ್ಷೆ ನಡೆಸಿದೆ. 2017 ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಡೆಹ್ರಾಡೂನ್ ಸಿಂಹಾಸನವನ್ನು ವಶಪಡಿಸಿಕೊಂಡಿತ್ತು. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದರಿಂದ ಪರಿಸ್ಥಿತಿ ಮೊದಲಿನಂತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ … Continued

ಪಂಜಾಬಿನಲ್ಲಿ ಎಎಪಿ ಅಧಿಕಾರಕ್ಕೆ ಬರುವ ಸಾಧ್ಯತೆ: ಎಬಿಪಿ-ಸಿ ವೋಟರ್ ಸಮೀಕ್ಷೆ..!

ನವದೆಹಲಿ: ಪಂಜಾಬ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬಹುದು ಹಾಗೂ ಆಮ್ ಆದ್ಮಿ ಪಕ್ಷ ಬಹುಮತದ ತುದಿಗೆ ಬಂದು ನಿಲ್ಲಬಹುದು ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಅಂದಾಜಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ ಇದೀಗ ಅಧಿಕಾರ ಚುಕ್ಕಾಣಿ ಹಿಡಿಯುವ ಸನಿಹದಲ್ಲಿ ಬಂದು ನಿಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. … Continued

ದಾಖಲೆ ಬರೆದ ರಿಲಯನ್ಸ್.. 15 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ದಾಟಿದ ಮೊದಲ ಭಾರತೀಯ ಕಂಪನಿಯಾಯ್ತು ರಿಲಯನ್ಸ್ .!

ಮುಂಬೈ: ಶುಕ್ರವಾರ, ಐತಿಹಾಸಿಕ ಸಾಧನೆಯನ್ನು ಸಾಧಿಸಿದ ರಿಲಯನ್ಸ್ ಇಂಡಸ್ಟ್ರೀಸ್ (RIL) 15 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ದಾಟಿದ ಮೊದಲ ದೇಶೀಯ ಕಂಪನಿಯಾಯಿತು. ಅದರ ಷೇರಿನ ಬೆಲೆಯಲ್ಲಿ ಭಾರೀ ಏರಿಕೆಯನ್ನು ಗಮನಿಸಿದ ನಂತರ, ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡ್ ಚಾರ್ಟ್‌ಗಳಲ್ಲಿ 15, 14, 017.5 ಕೋಟಿ ರೂ.ಗಳನ್ನು ತಲುಪಿತು. … Continued

ಮುಖೇಶ್ ಅಂಬಾನಿ ನಿವಾಸದ ಹೊರಗೆ ಸ್ಫೋಟಕ ಪತ್ತೆ -ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣ: 9,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆ ಹಾಗೂ ಮನ್‍ಸುಖ್‍ ಹಿರೇನ್ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಚಾರ್ಜ್‌ಶೀಟ್‌ ಸಲ್ಲಿಸಿದೆ. 9,000ಕ್ಕೂ ಹೆಚ್ಚು ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿಯವರ ನಿವಾಸ ಆಂಟಿಲಿಯಾ ಹೊರಗೆ … Continued

ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ ಜೆಡಿಯು ಶಾಸಕ..!: ಹೊಟ್ಟೆ ಕೆಟ್ಟಿತ್ತು ಎಂದ ಗೋಪಾಲ ಮಂಡಲ

ಪಾಟ್ನಾ: ಬಿಹಾರದ ಜೆಡಿಯು ಶಾಸಕರೊಬ್ಬರು ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಕಾಣಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಬಿಹಾರದ ಜೆಡಿಯು ಶಾಸಕರಾದ ಗೋಪಾಲ್ ಮಂಡಲ್ (JDU MLA Gopal Mandal) ಅವರು ರೈಲು ಪ್ರಯಾಣದ ವೇಳೆ ಒಳಉಡುಪಿನಲ್ಲಿ ಓಡಾಡಿದ್ದಕ್ಕೆ ಸಹ ಪ್ರಯಾಣಿಕರು ಆಕ್ಷೇಪಿಸಿದ್ದಾರೆ. ಶಾಸಕ ಗೋಪಾಲ್ ಮಂಡಲ್ ಅವರು ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಮೊದಲ ಎಸಿ ಕಂಪಾರ್ಟ್ಮೆಂಟ್‌ನಲ್ಲಿ … Continued