ಭಾರತದಲ್ಲಿ 7,992 ಹೊಸ ಕೋವಿಡ್-19 ಪ್ರಕರಣಗಳು ದಾಖಲು, ಇದು ನಿನ್ನೆಗಿಂತ 6% ಕಡಿಮೆ

ನವದೆಹಲಿ: ಭಾರತವು ಶನಿವಾರ 7,992 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಮಾಹಿತಿಯ ಪ್ರಕಾರ ಇದು ನಿನ್ನೆಗಿಂತ 6.0 ರಷ್ಟು ಕಡಿಮೆಯಾಗಿದೆ. ಇದು ದೇಶದ ಒಟ್ಟು ಪ್ರಕರಣವನ್ನು 3,46,82,736ಕ್ಕೆ ಒಯ್ದಿದೆ. ದೇಶಾದ್ಯಂತ ಒಟ್ಟು ಚೇತರಿಕೆ 3,41,14,331 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 9,265 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ … Continued

ಓಮಿಕ್ರಾನ್‌ ವೈರಸ್‌: ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ತಜ್ಞ ವೈದ್ಯರು

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೋವಿಡ್‌ ಹೊಸ ರೂಪಾಂತರ ಓಮಿಕ್ರಾನ್‌ ವೈರಸ್‌ ಈಗ ವಿಶ್ವದಾದ್ಯಂತ ೫೯ ದೇಶಗಳಲ್ಲಿ ಕಾಣಿಸಿಕೊಂಡಿದೆ. ವಿಶವಸಂಸ್ಥೆ ಇದನ್ನು ಕಾಳಜಿಯ ರೂಪಾಂತರ ಎಂದು ಕರೆದಿದೆ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚನೆ ನೀಡಿದೆ. ಭಾರತದಲ್ಲಿ ಮೊದಲು ಕರ್ನಾಟಕದಲ್ಲಿ ಕಾಣಿಸಿಕೊಂಡ ಓಮಿಕ್ರಾನ್‌ ರೂಪಾಂತರ ಈಗ ದೇಶದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿದ್ದು ಒಟ್ಟು ಸೋಂಕಿನ ಸಂಖ್ಯೆ ೩೩ಕ್ಕೆ ಏರಿದೆ. … Continued

ಪ್ರಿಯಾಂಕಾ ಗಾಂಧಿ ಭೇಟಿ ಸಮಯದಲ್ಲಿ ಗೋವಾ ಕಾಂಗ್ರೆಸ್‌ ನಾಯಕರ ರಾಜೀನಾಮೆ ಸ್ವಾಗತ..!

ಪಣಜಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ (ಡಿಸೆಂಬರ್ 10) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಲು ಗೋವಾಕ್ಕೆ ಬಂದಿಳಿದ ಸಂದರ್ಭದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಅವರನ್ನು ಸ್ವಾಗತಿಸಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾದ ಮೊರ್ಪಿರ್ಲಾ ಗ್ರಾಮದಲ್ಲಿ ಯುವಕರು ಮತ್ತು ಬುಡಕಟ್ಟು ಮಹಿಳೆಯರೊಂದಿಗೆ ಸಂವಾದ … Continued

ಮಹಾರಾಷ್ಟ್ರದಲ್ಲಿ 3 ವರ್ಷದ ಮಗು ಸೇರಿದಂತೆ ಮತ್ತೆ 7 ಜನರಲ್ಲಿ ಓಮಿಕ್ರಾನ್ ಸೋಂಕು ದೃಢ: ರಾಜ್ಯದ ಒಟ್ಟು ಸಂಖ್ಯೆ 17ಕ್ಕೆ ಏರಿಕೆ

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ ಮೂರೂವರೆ ವರ್ಷದ ಮಗು ಸೇರಿದಂತೆ ಕೋವಿಡ್‌ ಓಮಿಕ್ರಾನ್ ರೂಪಾಂತರದ ಸೋಂಕಿನ ಏಳು ಹೊಸ ಪ್ರಕರಣಗಳು ವರದಿಯಾಗಿವೆ, ಇದು ಅಂತಹ ಸೋಂಕಿನ ಸಂಖ್ಯೆಯನ್ನು 17ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದ ರಾಜಧಾನಿ ಮುಂಬೈನಲ್ಲಿ ಮೂರು ಹೊಸ ಓಮಿಕ್ರಾನ್ ಪ್ರಕರಣಗಳು ಕಂಡುಬಂದಿವೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಇತ್ತೀಚಿನ ವರದಿಯ … Continued

ನಿಷೇಧದ ಹೊರತಾಗಿಯೂ‌ ಪುಟ್ಟ ಮಕ್ಕಳ ಮದುವೆಯ ಶಾಕಿಂಗ್ ವಿಡಿಯೊ ವೈರಲ್ | ವೀಕ್ಷಿಸಿ

ಜೈಪುರ: ಭಾರತದಲ್ಲಿ ಬಾಲ್ಯವಿವಾಹವನ್ನು ನಿಷೇಧಿಸಿ 92 ವರ್ಷಗಳು ಕಳೆದಿವೆ, ಆದರೆ ಪ್ರತಿಗಾಮಿ ಮತ್ತು ಅನಿಷ್ಠ ಸಂಪ್ರದಾಯವು ಇನ್ನೂ ದೇಶದಲ್ಲಿ ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಆಚರಣೆಯಲ್ಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾನೂನು ಪ್ರಕಾರ, ಮದುವೆಯಾಗಲು ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ಆಗಿರಬೇಕು. ಆದರೆ ಮುಗ್ಧ ಮಕ್ಕಳನ್ನು ಅವರ ಕುಟುಂಬಗಳು ಇನ್ನೂ ಬಾಲ್ಯದಲ್ಲೇ … Continued

ಜನ ಬಯಸಿದ್ದನ್ನು ತಿನ್ನುವುದು ತಡೆಯಬೇಡಿ :ಅಹಮದಾಬಾದ್ ನಗರ ಪಾಲಿಕೆಗೆ ಹೈಕೋರ್ಟ್ ತಾಕೀತು

ಅಹಮದಾಬಾದ್ : ನಗರದಲ್ಲಿ ಮಾಂಸಾಹಾರ ಮಾರಾಟ ಮಾಡುವ ಮಳಿಗೆಗಳನ್ನು ವಶಪಡಿಸಿಕೊಂಡ ಅಹಮದಾಬಾದ್ ನಗರ ಪಾಲಿಕೆಯನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್‌ಗಳಿಂದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳ ಮನವಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಅಹಮದಾಬಾದ್ ನಗರ ಪಾಲಿಕೆ(ಎಎಂಸಿ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. … Continued

ವಾಂಖೆಡೆ ಕುಟುಂಬದ ವಿರುದ್ಧ ಹೇಳಿಕೆ: ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ ನವಾಬ್ ಮಲಿಕ್

ಮುಂಬೈ: ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬದವರ ಮೇಲಿನ ಟೀಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇನ್ನು ಮುಂದೆ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅವರು ಈ ಹಿಂದೆ ಬಾಂಬೆ ಹೈಕೋರ್ಟ್​ಗೆ ಭರವಸೆ … Continued

ಪೂರ್ಣ ಸೇನಾ ಗೌರವಗಳೊಂದಿಗೆ ಜನರಲ್ ರಾವತ್- ಪತ್ನಿ ಅಂತ್ಯಕ್ರಿಯೆ; ತಂದೆ-ತಾಯಿ ಕೊನೆಯ ವಿಧಿ-ವಿಧಾನ ನೆರವೇರಿಸಿದ ಹೆಣ್ಣುಮಕ್ಕಳಿಂದಲೇ ಚಿತೆಗೆ ಅಗ್ನಿಸ್ಪರ್ಶ

ನವದೆಹಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರನ್ನು ಶುಕ್ರವಾರ ದೆಹಲಿಯ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಅಂತ್ಯಕ್ರಿಯೆಯನ್ನು ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ನೆರವೇರಿಸಿದರು. ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಸೇನಾ ಕಮಾಂಡರ್‌ಗಳು ಕೂಡ … Continued

ಭಾರತದಲ್ಲಿ 26 ಓಮಿಕ್ರಾನ್ ಪ್ರಕರಣಗಳು ಪತ್ತೆ, ಮಾಸ್ಕ್ ಬಳಕೆಯಲ್ಲಿ ಕುಸಿತ, ಮತ್ತೆ ಎಚ್ಚರಿಸಿದ ಕೇಂದ್ರ

ನವದೆಹಲಿ: ದೇಶದಲ್ಲಿ ಇದುವರೆಗೆ ಒಟ್ಟು 26 ಓಮಿಕ್ರಾನ್ (Omicron) ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಪ್ರಕರಣಗಳು ಸೌಮ್ಯ ಲಕ್ಷಣಗಳನ್ನು ಹೊಂದಿವೆ. ಇವುಗಳಲ್ಲಿ ಶೇ 0.04ಕ್ಕಿಂತ ಕಡಿಮೆ ರೂಪಾಂತರಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ವಾರ ದೇಶದಲ್ಲಿ ಒಟ್ಟಾರೆ ಧನಾತ್ಮಕತೆಯ … Continued

ಓಮಿಕ್ರಾನ್ ರೂಪಾಂತರದ ಆತಂಕದ ನಡುವೆ ಮದುವೆ ಮನೆಯಲ್ಲಿಯೂ ಕೋವಿಡ್ ವ್ಯಾಕ್ಸಿನೇಷನ್..!

ಅಹಮ್ಮದಾಬಾದ್‌:ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಆತಂಕದ ನಡುವೆ, ಗುಜರಾತಿನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯ ಮನೆಗಳಲ್ಲಿಯೂ ಲಸಿಕೆ ನೀಡಲು ಆರಂಭಿಸಿದೆ. ಆರೋಗ್ಯ ಅಧಿಕಾರಿಗಳ ತಂಡವು ವಿವಿಧ ಮದುವೆ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರದ ಯಾದೃಚ್ಛಿಕ ಪರಿಶೀಲನೆಯನ್ನು ಪ್ರಾರಂಭಿಸಿದೆ. ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಸ್ಥಳಗಳಲ್ಲಿ ಭಾಗಶಃ ಲಸಿಕೆ ಹಾಕಿದವರಿಗೆ ಲಸಿಕೆ ಹಾಕುತ್ತಾರೆ. … Continued