ಓಮಿಕ್ರಾನ್ ರೂಪಾಂತರ ಸ್ಪೈಕ್ ಪ್ರೋಟೀನ್‌ನಲ್ಲಿ 30ಕ್ಕೂ ಹೆಚ್ಚು ರೂಪಾಂತರ ಹೊಂದಿದೆ ಎಂದು ವರದಿ, ಇದು ಲಸಿಕೆ ಬೈಪಾಸ್ ಮಾಡಬಹುದು: ಏಮ್ಸ್‌ ಮುಖ್ಯಸ್ಥ

ನವದೆಹಲಿ: ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್ ರೂಪಾಂತರವು ಸ್ಪೈಕ್ ಪ್ರೋಟೀನ್ ನಲ್ಲಿ 30ಕ್ಕೂ ಹೆಚ್ಚು ರೂಪಾಂತರಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ, ಇದು ಇಮ್ಯುನೊಸ್ಕೇಪ್ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ನೀಡುತ್ತದೆ ಮತ್ತು ಹೀಗಾಗಿ ಅದರ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವವನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕಾಗಿದೆ ಎಂದು ದೆಹಲಿ ಏಮ್ಸ್‌ ಮುಖ್ಯಸ್ಥ ಡಾ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಸ್ಪೈಕ್ ಪ್ರೋಟೀನ್‌ನ … Continued

ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌, ಟಿಎಂಸಿಗೆ ಮುಖಭಂಗ

ಅಗರ್ತಲಾ: ನವೆಂಬರ್ 15 ರಂದು ನಡೆದ ಚುನಾವಣೆಯಲ್ಲಿ ತ್ರಿಪುರಾದ 14 ನಗರ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಬಿಜೆಪಿ (BJP) ಭರ್ಜರಿ ಗೆಲುವು ಸಾಧಿಸಿದೆ. ಪುರಾದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಅಗರ್ತಲಾ ನಗರ ಪಾಲಿಕೆ (ಎಎಂಸಿ) 51 ವಾರ್ಡ್‌ಗಳಲ್ಲೂ ಗೆಲುವು ಸಾಧಿಸುವ ಮೂಲಕ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದೆ. ಅಗರ್ತಲಾ … Continued

ಮಹತ್ವದ ಸುದ್ದಿ..ಸರ್ಕಾರದಿಂದ ಮಾರ್ಗಸೂಚಿ ಪ್ರಕಟ- ಕೊರೊನಾ ಕಾಣಿಸಿಕೊಂಡ ಕ್ಲಸ್ಟರ್​ಗಳಲ್ಲಿ ಕೊವಿಡ್-19 ಪರೀಕ್ಷೆ ಕಡ್ಡಾಯ; ಶಿಕ್ಷಣ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮುಖ್ಯವಾಗಿ ಕೊರೊನಾ ಕಾಣಿಸಿಕೊಂಡ ಕ್ಲಸ್ಟರ್​ಗಳಲ್ಲಿ ಕಡ್ಡಾಯ ಕೊವಿಡ್19 ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಧಾರವಾಡ, ಬೆಂಗಳೂರು, ಮೈಸೂರು ಕ್ಲಸ್ಟರ್ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿ, ಧಾರವಾಡ, ಬೆಂಗಳೂರು, … Continued

ಸರಣಿ ಲೇಖನ-ಕೃಷಿ ಕಾನೂನಿನಲ್ಲಿ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿ ಆಹಾರ ಸಾಮಗ್ರಿ- ತೈಲ ಸಹ ಸೇರ್ಪಡೆ

(ಕಳೆದ ಒಂದು ವರ್ಷದಿಂದ ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ ಒಂದು ವರ್ಷದಿಂದ ದೇಶದ ರಾಜಧಾನಿ ದಿಲ್ಲಿಯ ಗಡಿಯಲ್ಲಿ ಗಜಮ್ಮನೆ ಕುಳಿತುಬಿಟ್ಟಿದ್ದಾರೆ.ಕೃಷಿ ಕಾಯ್ದೆಗಳನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಸಂಕಷ್ಟಗಳನ್ನು ನಿವಾರಿಸುವ ಮತ್ತು ಅವರನ್ನು ಆರ್ಥಿಕವಾಗು ಸದೃಢಗೊಳಿಸುವ ಉದ್ದೇಶ ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಸಾರಿಸಾರಿ ಹೇಳಿದರೂ … Continued

ಸ್ಮಶಾನಕ್ಕೆ ತೆರಳುತ್ತಿದ್ದ ಮ್ಯಾಟಡೋರ್‌ ವಾಹನ ಲಾರಿಗೆ ಡಿಕ್ಕಿ: 18 ಮಂದಿ ಸಾವು

ಕೋಲ್ಕತ್ತಾ: ಮೃತದೇಹವನ್ನು ಸ್ಮಶಾನಕ್ಕೆ ಕರೆದೊಯುತ್ತಿದ್ದ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ 18 ಮಂದಿ ಸಾವಿಗೀಡಾದ ಭೀಕರ ದುರಂತ ಪಶ್ಚಿಮ ಬಂಗಾಳದಲ್ಲಿ ಶನಿವಾರ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು,ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಫುಲ್ಬರಿಯಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಮ್ಯಾಟಡೋರ್ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ … Continued

ಭಾರತದಲ್ಲಿ 8,774 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ನಿನ್ನೆಗಿಂತ 5.5% ರಷ್ಟು ಹೆಚ್ಚು

ನವದೆಹಲಿ: ಭಾರತವು ಭಾನುವಾರ 8,774 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 5.5% ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ ಇದು ದೇಶದ ಒಟ್ಟು ಕೋವಿಡ್‌ ಪ್ರಕರಣವನ್ನು 3,45,72,523 ಕ್ಕೆ ಒಯ್ದಿದೆ. ದೇಶಾದ್ಯಂತ ಒಟ್ಟು ಚೇತರಿಕೆಯ ಸಂಖ್ಯೆ 3,39,98,278 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 9,481 … Continued

ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಪರಿಶೀಲನೆಗೆ ತಜ್ಞರ ಸಮಿತಿ ರಚನೆಗೆ ನಿರ್ಧಾರ, ಹೊಲಗದ್ದೆ ಸುಡುವುದನ್ನು ಅಪರಾಧ ಮುಕ್ತಗೊಳಿಸುವ ರೈತರ ಬೇಡಿಕೆಗೆ ಒಪ್ಪಿಗೆ: ತೋಮರ್

ನವದೆಹಲಿ: ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ ಬಳಿಕ ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಿಕ್ಕಟ್ಟಿನ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ಕೃಷಿ ಕಾಯ್ದೆಗಳ ರದ್ದತಿ ಬಳಿಕವೂ ಕೃಷಿ ಸುಧಾರಣೆಯ ಅಭಿಯಾನ ಮುಂದುವರಿಯುತ್ತದೆ. ವಿಶೇಷವಾಗಿ ವೈವಿಧ್ಯ ಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿ ಮತ್ತು ಎಂಎಸ್‌ಪಿ ವ್ಯವಸ್ಥೆಯಲ್ಲಿ … Continued

ಎರಡು ಹಳದಿ ಹಾವುಗಳ ಅಪೂರ್ವ ಬಳುಕುವ ನೃತ್ಯ..ವಿಡಿಯೊದಲ್ಲಿ ಸೆರೆ

ಹಸಿರು ಗಿಡಗಳ ಮಧ್ಯದಲ್ಲಿ ಎರಡು ಹಳದಿ ಹಾವುಗಳು ನೃತ್ಯ ಮಾಡುವುದನ್ನು ವಿಡಿಯೊ ತೋರಿಸುತ್ತದೆ. ಹಾವುಗಳು ಸುಂದರವಾಗಿ ಸಂಘಟಿತವಾಗಿ ಪರಸ್ಪರ ಸುತ್ತಿಕೊಂಡು ಗಾಳಿಯಲ್ಲಿ ತೇಲುತ್ತಿರುವಂತೆ ತೋರುತ್ತದೆ. ಅಕ್ಷಯಾ ಶಿವರಾಮನ್ ಎಂಬ ಮಹಿಳೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ವಾಕಿಂಗ್ ಹೋಗುತ್ತಿದ್ದಾಗ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಮಳೆಯ ಸಮಯದಲ್ಲಿ ಹಾವುಗಳು ಬಳಕುತ್ತ ಗಾಳಿಯಲ್ಲಿ ನೃತ್ಯ ಮಾಡುವುದನ್ನು ನೋಡಿದ ಅವರು … Continued

ಮದುವೆಗೆ ಬರಲು ನೋಟಿಸ್‌ ನೀಡಿದ ಮದುಮಕ್ಕಳು…!: ವಕೀಲ ದಂಪತಿ ವಿಶಿಷ್ಟ ಆಮಂತ್ರಣ ಪತ್ರಿಕೆ ನೋಡಿ

ಗುವಾಹತಿ: ವಿವಾಹವು ದಂಪತಿಗಳ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಸಂದರ್ಭಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಅನೇಕ ದಂಪತಿಗಳು ಅದನ್ನು ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ. ಇದು ಈಗಾಗಲೇ ಮದುವೆಯ ಸೀಸನ್ ಸಹ ಆಗಿರುವುದರಿಂದ ಮತ್ತು ಅನೇಕರ ಟೈಮ್‌ಲೈನ್ ಸಂತೋಷದ ಜೋಡಿಗಳ ವಿವಾಹಪೂರ್ವ ಫೋಟೋಶೂಟ್‌ಗಳಿಂದ ತುಂಬಿರುತ್ತದೆ. ಆದರೆ ಇಲ್ಲಿ ವಿವಾಹ ಫೋಟೋ ಶೂಟ್‌ ಗಳಲ್ಲಲ್ಲ, ಆಮಂತ್ರಣ ಪತ್ರಿಕೆಯಲ್ಲೇ ವಿಶೇಷತೆಯಿದೆ. ಅಸ್ಸಾಂನ ಗುವಾಹತಿಯ ವಕೀಲ … Continued

ಸ್ಕ್ವಾಷ್‌ ನಲ್ಲಿ ಮಲೇಷಿಯನ್ ಓಪನ್ ಗೆದ್ದ ಸೌರವ್ ಘೋಸಲ್ : ಈ ಚಾಂಪಿಯನ್‌ ಶಿಪ್‌ ಗೆದ್ದ ಮೊದಲ ಭಾರತೀಯ

ನವದೆಹಲಿ: ಸ್ಕ್ವಾಷ್ ತಾರೆ ಸೌರವ್ ಘೋಸಲ್ ಶನಿವಾರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಮಿಗುಯೆಲ್ ರೊಡ್ರಿಗಸ್ ಅವರನ್ನು ಸೋಲಿಸಿ ಮಲೇಷ್ಯಾ ಓಪನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎರಡನೇ ಶ್ರೇಯಾಂಕದ ಘೋಸಲ್ ಕೊಲಂಬಿಯಾದ ಅಗ್ರ ಶ್ರೇಯಾಂಕದ ರೊಡ್ರಿಗಸ್ ಅವರನ್ನು 55 ನಿಮಿಷಗಳಲ್ಲಿ 11-7, 11-8 ಮತ್ತು 13-11 ರಿಂದ ಸೋಲಿಸಿದರು ಮತ್ತು ಪ್ರತಿಷ್ಠಿತ … Continued