ರಾಜ್ಯದಲ್ಲಿ ಮಳೆ ಹಾನಿ: ಸಿಎಂ ಬೊಮ್ಮಾಯಿಗೆ ದೂರವಾಣಿ ಮಾಡಿದ ಪ್ರಧಾನಿ ಮೋದಿ

ಬೆಂಗಳೂರು: ರಾಜ್ಯದಲ್ಲಿ ಎಡೆಬಿಡದೆ ಕೆಲ ದಿನಗಳಿಂದ ಸುರಿದ ಭಾರಿ ಮಳೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿದ್ದು, ಮಳೆ ಅನಾಹುತಗಳ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ರಾಜ್ಯಕ್ಕೆ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿನ ಮಳೆ ಅನಾಹುತದ ಬಗ್ಗೆ ಇಂದು(ಮಂಗಳವಾರ) ಬೆಳಿಗ್ಗೆ … Continued

ಈತ ಪೊಲೀಸ್‌ ಆಗ್ತಾನಂತೆ…ಪೊಲೀಸ್‌ ನೇಮಕಾತಿ ಪರೀಕ್ಷೆ ಬರೆಯಲು ಬಂದ ಈತನ ಮಾಸ್ಕ್‌ ಒಳಗೆ ಜೆಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಸಿಮ್ ಕಾರ್ಡ್, ಸ್ವಿಚ್ ಮೈಕ್..!

ಮುಂಬೈ: ಪುಣೆಯ ಸಮೀಪದ ಹಿಂಜೆವಾಡಿಯ ಶಾಲೆಯೊಂದರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಆಗಮಿಸಿದ್ದ ಅಭ್ಯರ್ಥಿಯಿಂದ ಸಿಮ್ ಕಾರ್ಡ್, ಮೈಕ್ ಮತ್ತು ಬ್ಯಾಟರಿ ಹೊಂದಿದ್ದ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿದ ಫೇಸ್ ಮಾಸ್ಕ್ ಅನ್ನು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಪರಾರಿಯಾಗಿದ್ದಾನೆ. ಅಭ್ಯರ್ಥಿಯ ವಿರುದ್ಧ ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಮಹಾರಾಷ್ಟ್ರ … Continued

ವಿರೋಧದ ನಂತರ ರಾಮಾಯಣ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಿಬ್ಬಂದಿ ಕೇಸರಿ ಉಡುಪು ಹಿಂತೆಗೆದುಕೊಂಡ ಭಾರತೀಯ ರೈಲ್ವೆ

ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್ ರೈಲಿನ ವೇಟರ್‌ಗಳ ಕೇಸರಿ ಉಡುಗೆಯನ್ನು ಹಿಂದೂ ಸಂತರು ವಿರೋಧಿಸಿದ ನಂತರ, ಐಆರ್‌ಸಿಟಿಸಿ (IRCTC) ಸೇವಾ ಸಿಬ್ಬಂದಿಯ ಉಡುಪನ್ನು ವೃತ್ತಿಪರ ಉಡುಗೆಗೆ ಬದಲಾಯಿಸಿದೆ ಮತ್ತು ಉಂಟಾದ ಅನಾನುಕೂಲತೆಗೆ ವಿಷಾದಿಸಿದೆ. ಇದಕ್ಕೂ ಮೊದಲು, ಅಡುಗೆ ಬಡಿಸುವ ಮಾಣಿಗಳು ‘ಸಾಧು’ಗಳನ್ನು ಹೋಲುವ ರೀತಿ ಕೇಸರಿ ಸಮವಸ್ತ್ರ ಧರಿಸಿದ್ದರು, ಇದಕ್ಕೆ ಹಿಂದೂ ಸಂತ ಸಮುದಾಯದಿಂದ ವಿರೋಧವನ್ನು ಎದುರಿಸಬೇಕಾಯಿತು. … Continued

ಪ್ರಾಣ ಪಣಕ್ಕಿಟ್ಟು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಅರ್ಚಕನ ಜೀವ ಉಳಿಸಿದ ಟ್ರಾಫಿಕ್ ಸರ್ಕಲ್ ಇನ್ಸ್‌ಪೆಕ್ಟರ್; ವಿಡಿಯೊ ವೈರಲ್..!

ನೆಲ್ಲೂರು: ಆಂಧ್ರಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಅರ್ಚಕನನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಟ್ರಾಫಿಕ್ಸರ್ಕಲ್ ಇನ್ಸ್‌ಪೆಕ್ಟರ್ ಈಗ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಕೊಡವಲೂರು ಶಿವ ದೇವಸ್ಥಾನದ ಅರ್ಚಕರು ವೆಂಕಟೇಶ್ವರಪುರಂ ಸೇತುವೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಪ್ರವಾಹದ ನೀರಿನಲ್ಲಿ ಕೊಚ್ಚಿಹೋದರು ಮತ್ತು ಸಹಾಯಕ್ಕಾಗಿ ಕೂಗಿದರು. ಅವರ ರಕ್ಷಣೆಗೆ … Continued

ಗಂಡನಿಗೆ ಅಮರತ್ವ ನೀಡಲು ಆತನ ಜೀವಂತ ಸಮಾಧಿ ಮಾಡಿದ ಪತ್ನಿ..!

ಚೆನ್ನೈ: ಸಾವಿನ ನಂತರ ಅಮರತ್ವವನ್ನು ಪಡೆಯಲು ಬಯಸಿದ್ದಕ್ಕಾಗಿ 55 ವರ್ಷದ ಮಹಿಳೆಯೊಬ್ಬರು ಪೆರುಂಬಕ್ಕಂನಲ್ಲಿ ತನ್ನ ಪತಿಯನ್ನು ಜೀವಂತವಾಗಿ ಸಮಾಧಿ ಮಾಡಿದ ಘಟನೆ ನಡೆದಿದೆ.ತನ್ನನ್ನು ಜೀವಂತ ಸಮಾಧಿ ಮಾಡಿ ಪತಿ ಹೇಳಿದ್ದನ್ನು ಅನುಕರಿಸಿದ ಪತ್ನಿ ಜೀವಂತ ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಟೆಕ್ಕಿ ಮಗಳು ತನ್ನ ತಂದೆ ಎಲ್ಲಿದ್ದಾರೆಂಬುದರ ಬಗ್ಗೆ ಈ ಮಹಿಳೆಗೆ ಪದೇ … Continued

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ..: ಕರ್ನಾಟಕದಲ್ಲಿ ನವೆಂಬರ್ 26ರಿಂದ ಮತ್ತೆ ಭಾರೀ ಮಳೆ ಮುನ್ಸೂಚನೆ..!

ಬೆಂಗಳೂರು: ಈಗ ಸುರಿಯುತ್ತಿರುವ ಮಳೆಗೆ ಈಗಾಗಲೇ ರಾಜ್ಯ ತತ್ತರಿಸಿದೆ. ಈಗ ರಾಜ್ಯಕ್ಕೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ನವೆಂಬರ್ 26ಕ್ಕೆ ಮತ್ತೆ ವರುಣನ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ನವೆಂಬರ್ 26ರಿಂದ ಡಿಸೆಂಬರ್ 15ರ ವರೆಗೆ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ … Continued

ಭಾರತದಲ್ಲಿ 7,579 ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 7,579 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ನಿನ್ನೆಗಿಂತ 10.7% ಕಡಿಮೆಯಾಗಿದೆ. ಇದು ಒಟ್ಟು ಪ್ರಕರಣವನ್ನು 3,45,26,480 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 236 ಸಾವುಗಳು ವರದಿಯಾಗಿದ್ದು, ಒಟ್ಟು ವರದಿಯಾದ ಸಾವಿನ ಸಂಖ್ಯೆಯನ್ನು 4,66,147 ಕ್ಕೆ ಹೆಚ್ಚಿಸಲಾಗಿದೆ. ಕೇರಳದಲ್ಲಿ (180), ಪಶ್ಚಿಮ ಬಂಗಾಳದಲ್ಲಿ (14) ಗರಿಷ್ಠ … Continued

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡುವಂತೆ ಮುಂಬೈ ನ್ಯಾಯಾಲಯಕ್ಕೆ ಸೂಚಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸದಸ್ಯರೊಬ್ಬರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 20ರ ವರೆಗೆ ಮುಂದೂಡುವಂತೆ ಸೋಮವಾರ ಬಾಂಬೆ ಹೈಕೋರ್ಟ್‌ ಆದೇಶಿಸಿದೆ. ರಾಜಸ್ಥಾನದಲ್ಲಿ 2018ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಕಮ್ಯಾಂಡರ್‌ ಇನ್‌ ಥೀಫ್‌’ (ಕಳ್ಳರ ಮುಖ್ಯಸ್ಥ) ಎಂದು ರಾಹುಲ್‌ ಗಾಂಧಿ ಕರೆದಿದ್ದರು ಎಂದು ಆರೋಪಿಸಿ … Continued

ಸಮೀರ್ ವಾಂಖೆಡೆ-ಕುಟುಂಬದ ವಿರುದ್ಧ ನವಾಬ್ ಮಲಿಕ್ ಹೇಳಿಕೆ ನೀಡದಂತೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

ಮುಂಬೈ: ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಮತ್ತವರ ಕುಟುಂಬದ ವಿರುದ್ಧ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಸಾರ್ವಜನಿಕ ತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆ ನೀಡದಂತೆ ತಡೆ ನೀಡಲು ಬಾಂಬೆ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ. ಸಮೀರ್‌ ಅವರ ತಂದೆ ಧ್ಯಾನದೇವ್‌ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ … Continued

ನಿಗದಿತ ಸಮಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದ ದಲಿತ ವಿದ್ಯಾರ್ಥಿಗಳಿಗೆ ಸೀಟು ಸೃಷ್ಟಿಸುವಂತೆ ಐಐಟಿ-ಬಾಂಬೆಗೆ ಆದೇಶ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ಶಿಕ್ಷಣ ಪಡೆಯಲು ಅರ್ಹತೆ ಹೊಂದಿದ್ದರೂ ತಾಂತ್ರಿಕ ದೋಷದಿಂದಾಗಿ ಗಡುವಿನೊಳಗೆ ಶುಲ್ಕ ಪಾವತಿಸಲಾಗದೆ ಸೀಟು ವಂಚಿತನಾಗಿದ್ದ ದಲಿತ ಸಮುದಾಯದ 17 ವರ್ಷದ ಬಾಲಕನಿಗೆ ಸೀಟು ನಿಗದಿಪಡಿಸುವಂತೆ ಸುಪ್ರೀಂಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ. ಸಂವಿಧಾನದ 142ನೇ ವಿಧಿಯಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿ ವಿದ್ಯಾರ್ಥಿಗೆ ಸೀಟು ನಿಗದಿಪಡಿಸುವಂತೆ ಜಂಟಿ ಸೀಟು ಹಂಚಿಕೆ … Continued