ಶಸ್ತ್ರಚಿಕಿತ್ಸೆಯ ನಂತರ ಮನೆಗೆ ಹಿಂದಿರುಗಿದ ನಂತರ ನಟ ರಜನಿಕಾಂತ್

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಚೆನ್ನೈನ ಆಸ್ಪತ್ರೆಯಲ್ಲಿ ಶೀರ್ಷಧಮನಿ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಭಾನುವಾರ ಮನೆಗೆ ಮರಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಜನಪ್ರಿಯ ನಟ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ರಜನಿಕಾಂತ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಬಗ್ಗೆ … Continued

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಬದಲಾಯಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಬೆಂಗಳೂರು: ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಗಡಿ ವಿವಾದಗಳು ಇದ್ದಾಗಲೂ ನಾವು ಅದನ್ನು ಮುಂಬೈ ಕರ್ನಾಟಕ ಎಂದು ಹೇಳಬಾರದು. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಸಾರ್ವಜನಿಕ ಇಲಾಖೆಯು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ … Continued

ಭಾರತದ ಕೋವಿಡ್ -19 ಸಕ್ರಿಯ ಪ್ರಕರಣ 248 ದಿನಗಳಲ್ಲೇ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 12,514 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸಂಖ್ಯೆಯನ್ನು 3,42,85,814 ಕ್ಕೆ ಒಯ್ದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಡೇಟಾವನ್ನು ತೋರಿಸಿದೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 251 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್ -19 ಕಾರಣದಿಂದಾಗಿ ದೇಶಾದ್ಯಂತ ಮೃತಪಟ್ಟವರ … Continued

ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ ಬೆಲೆ ಬರೋಬ್ಬರಿ 265 ರೂ.ಹೆಚ್ಚಳ; ಬಹುತೇಕ ಕಡೆ 2 ಸಾವಿರದ ಗಡಿ ದಾಟಿದ ದರ

ನವದೆಹಲಿ:ದೀಪಾವಳಿ ಸಂಭ್ರಮದ ಮೂಡ್​​ನಲ್ಲಿರುವ ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್​. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್​-ಡೀಸೆಲ್​ ಜತೆ ಇದೀಗ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಭರ್ಜರಿ ಹೆಚ್ಚಳ ಮಾಡಲಾಗಿದೆ. 14.5 ಕೆಜಿಯ ಮನೆ ಬಳಕೆ ಸಿಲಿಂಡರ್​ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಬದಲಾಗಿ 19 ಕೆಜಿಯ ಕಮರ್ಷಿಯಲ್​ ಎಲ್​​ಪಿಜಿ ಸಿಲಿಂಡರ್​ಗಳ ಬೆಲೆ ಬರೋಬ್ಬರಿ 265 … Continued

ಡಬ್ಲ್ಯುಎಚ್‌ಒಗೆ ಸಹಾಯ ಮಾಡಲು ಕೋವಿಡ್ ಲಸಿಕೆಗಳಿಗೆ ತುರ್ತು ಬಳಕೆಯ ಅನುಮೋದನೆ ತ್ವರಿತಗೊಳಿಸಲು ಜಿ 20 ಒಪ್ಪಿಗೆ: ಪಿಯೂಷ್ ಗೋಯಲ್

ರೋಮ್: ಕೋವಿಡ್ -19 ಲಸಿಕೆಗಳಿಗೆ ತುರ್ತು ಬಳಕೆಯ ಅನುಮೋದನೆಗಳನ್ನು (ಇಯುಎ) ತ್ವರಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಸಹಾಯ ಮಾಡಲು ಜಿ 20 ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ದೃಢಪಡಿಸಿದ್ದಾರೆ. ರೋಮ್‌ನಲ್ಲಿ ಜಿ 20 ಶೃಂಗಸಭೆಗೆ ಭಾರತದ ತಂಡದಲ್ಲಿರುವ ಗೋಯಲ್, ಜಿ 20 ಶೃಂಗಸಭೆಯಲ್ಲಿ ನಾಯಕರು ‘ರೋಮ್ ಘೋಷಣೆ’ಯನ್ನು ಅಳವಡಿಸಿಕೊಂಡಿದ್ದಾರೆ … Continued

ಪ್ರಭಾಕರ್ ಸೈಲ್ ಆರೋಪ ಆಧಾರ ರಹಿತ ಎಂದು ಕರೆದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ

ಮುಂಬೈ: ಮುಂಬೈ ಡ್ರಗ್ ಪಾರ್ಟಿ ಪ್ರಕರಣದ ಹೊಸ ಬೆಳವಣಿಗೆಯೊಂದರಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಪ್ರಭಾಕರ್ ಸೈಲ್ ಮಾಡಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಸೈಲ್ ಮಾಡಿರುವ ಆರೋಪಗಳು “ಆಧಾರರಹಿತ” ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ ಮತ್ತು ತಮ್ಮ ವಿರುದ್ಧ ಕಪೋಲಕಲ್ಪಿತ ಕಥೆಯನ್ನು ಕಟ್ಟಲಾಗಿದೆ ಎಂದು ಹೇಳಿದ್ದಾರೆ. ವರದಿಯ ಪ್ರಕಾರ, … Continued

ಕಡಿಮೆ ಲಸಿಕೆ ಪ್ರಮಾಣ ನೀಡಿದ ಜಿಲ್ಲೆಗಳೊಂದಿಗೆ ನವೆಂಬರ್ 3ರಂದು ಪ್ರಧಾನಿ ಮೋದಿ ಪರಿಶೀಲನಾ ಸಭೆ

ನವದೆಹಲಿ: ಕಡಿಮೆ ಲಸಿಕಾಕರಣದ (vaccination) ವ್ಯಾಪ್ತಿಯ ಜಿಲ್ಲೆಗಳೊಂದಿಗೆ ನವೆಂಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಮಂತ್ರಿಯವರ ಕಚೇರಿಯ ಪ್ರಕಾರ ಜಿ 20 ಶೃಂಗಸಭೆ ಮತ್ತು ಸಿಒಪಿ 26 ರಲ್ಲಿ ಭಾಗವಹಿಸಿದ ನಂತರ ವಿದೇಶದಿಂದ ಹಿಂದಿರುಗಿದ ನಂತರ ಪ್ರಧಾನಿ ಸಭೆ ನಡೆಸಲಿದ್ದಾರೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಧ್ಯಾಹ್ನ … Continued

ಕೊವಿಡ್ ಲಸಿಕೆ ಬೆಲೆ 265 ರೂ.ಗಳಿಗೆ ಇಳಿಸಲು ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರವೇ ಅಂತಿಮ ನಿರ್ಧಾರ: ವರದಿ

ನವದೆಹಲಿ: ಝೈಡಸ್ ಕ್ಯಾಡಿಲಾ ತನ್ನ ಕೊವಿಡ್ -19 ಲಸಿಕೆ ಬೆಲೆಯನ್ನು 265 ರೂ.ಗಳಿಗೆ ಇಳಿಸಲು ಒಪ್ಪಿಕೊಂಡಿದೆ. ಆದರೆ ಸರ್ಕಾರದ ನಿರಂತರ ಮಾತುಕತೆಗಳ ನಂತರ ಇನ್ನೂ ಅಂತಿಮ ಒಪ್ಪಂದ ಅಂತಿಮವಾಗಿಲ್ಲ  ಎಂದು ವರದಿಗಳು ಹೇಳಿದೆ. ಝೈಡಸ್ ಕ್ಯಾಡಿಲಾ (Zydus Cadila) ಅವರ ZyCov-D 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಿರ್ವಹಣೆ ನೀಡಲು ಭಾರತದ ಔಷಧ … Continued

2020ರಲ್ಲಿ ಭಾರತದಲ್ಲಿ ಪ್ರತಿದಿನ 31 ಮಕ್ಕಳ ಆತ್ಮಹತ್ಯೆ, ಶೇ 21ರಷ್ಟು ಹೆಚ್ಚಳ: ಎನ್​ಸಿಆರ್​ಬಿ ವರದಿ

ನವದೆಹಲಿ: ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ. ಕೊರೊನಾ ಪಿಡುಗು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸಿರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (National Crime Records Bureau – NCRB) ಪ್ರಕಾರ 2020ರಲ್ಲಿ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. … Continued

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ನವದೆಹಲಿ: ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಣಮುಖರಾಗಿದ್ದು, ಆಸ್ರತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅನಾರೋಗ್ಯದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಕ್ಟೋಬರ್ 13 ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಡೆಂಗೆ ಜ್ವರ ಪತ್ತೆಯಾಗಿತ್ತು. ಅವರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ … Continued