ಕೃಷಿ ಕಾನೂನು ಹಿಂಪಡೆಯಲು ಗಾಂಧಿ ಜಯಂತಿ ವರೆಗೆ ಸರ್ಕಾರಕ್ಕೆ ಡೆಡ್‌ಲೈನ್:‌ ರೈತ ಮುಖಂಡ ಟಿಕಾಯತ್‌

ನವ ದೆಹಲಿ;ರಾಷ್ಟ್ರವ್ಯಾಪಿ ‘ಚಕ್ಕಾ ಜಾಮ್’ ಅಥವಾ ರಸ್ತೆ ದಿಗ್ಬಂಧನವನ್ನು ಭಾರಿ ಯಶಸ್ಸು ಎಂದು ಕರೆದ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದೆ, ಆದರೆ ಸರ್ಕಾರ ಮೂರು ವಿವಾದಾತ್ಮಕ ಕಾನೂನುಗಳ ಕುರಿತು ಹೊಸ ಪ್ರಸ್ತಾಪದೊಂದಿಗೆ ಎಂದು ಹೇಳಿದೆ. ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿಕೆಯಲ್ಲಿ ಪ್ರತಿಭಟನಾ ನಿರತ 40ಕ್ಕೂ ಹೆಚ್ಚು ರೈತ ಸಂಘಗಳು … Continued

ತಮ್ಮ ಅಹಂಕಾರಕ್ಕೆ ರೈತರಿಗೆ ಅನ್ಯಾಯ ಮಾಡಿದ ಮಮತಾ:ನಡ್ಡಾ

ಮಾಲ್ಡಾ (ಪಶ್ಚಿಮ ಬಂಗಾಳ): ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ ಮಾಲ್ಡಾದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಹಾಗೂ ಇತರ ಮುಖಂಡರೊಂದಿಗೆ ಅಲಂಕರಿಸಿದ ಲಾರಿಯಲ್ಲಿ ರೋಡ್‌ ಶೋದಲ್ಲಿ ಪಾಲ್ಗೊಂಡರು. ಘೋರಾ ಮೋರ್‌ ಹಾಗೂ ರವೀಂದ್ರನಾಥ ಟ್ಯಾಗೋರ್‌ ಪ್ರತಿಮೆ ಮಧ್ಯೆ ೧ ಕಿ.ಮೀ. ಉದ್ದದ … Continued

ಭಾರತದ ಕೊವಿಡ್‌ ಲಸಿಕೆಗೆ ೨೫ ದೇಶಗಳು ಕ್ಯೂನಲ್ಲಿ

ಅಮರಾವತಿ: ಭಾರತವು ಈವರೆಗೆ 15 ದೇಶಗಳಿಗೆ ಕೊವಿಡ್‌-19 ಲಸಿಕೆ ಪೂರೈಸಿದೆ ಮತ್ತು ಇನ್ನೂ 25 ರಾಷ್ಟ್ರಗಳು ಔಷಧಕ್ಕಾಗಿ ವಿವಿಧ ಹಂತಗಳಲ್ಲಿ ಸರದಿಯಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ತಿಳಿಸಿದ್ದಾರೆ. ಭಾರತದಿಂದ ಲಸಿಕೆ ಪಡೆಯಲು ಉತ್ಸುಕರಾಗಿರುವ ಮೂರು ವರ್ಗಗಳ ದೇಶಗಳಿವೆ- ಬಡ, ಬೆಲೆ ಸೂಕ್ಷ್ಮ ರಾಷ್ಟ್ರಗಳು ಮತ್ತು ಇತರ ದೇಶಗಳು ನೇರವಾಗಿ ಔಷಧೀಯ … Continued

ಮಾಧ್ಯಮಗಳೊಂದಿಗೆ ಸಂವಹನ ಬೇಡ: ಅಧಿಕಾರಿಗಳಿಗೆ ಆರ್‌ಬಿಐ ತಾಕೀತು

ನವದೆಹಲಿ: ಕೇಂದ್ರಿಯ ಬ್ಯಾಂಕ್‌ನ ನೀತಿಗಳ ಅನುಷ್ಠಾನ ಕುರಿತು ನಡೆಸಲಾಗುವ ಸಭೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಯಾವುದೇ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೂಚನೆ ನೀಡಿದೆ. ಹಳೆಯ ಸರಣಿಯ ೧೦೦ರೂ. ೧೦ ರೂ. ಹಾಗೂ ೫ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ನಂತರ ಆರ್‌ಬಿಐ ಸುತ್ತೋಲೆ ಹೊರಡಿಸಿದೆ. … Continued

ಸಿಬಿಎಸ್‌ಇ-ಜೆಇಇ ಪರೀಕ್ಷೆ ದಿನಾಂಕದಲ್ಲಿ ಕ್ಲ್ಯಾಶ್‌: ವಿದ್ಯಾರ್ಥಿಗಳಿಗೆ ಆತಂಕ

ಸಿಬಿಎಸ್ಇ 12 ನೇ ತರಗತಿ ವಿದ್ಯಾರ್ಥಿಗಳು ಐಐಟಿ ಜಂಟಿ ಪ್ರವೇಶ ಪರೀಕ್ಷೆಯೊಂದಿಗೆ (ಜೆಇಇ ಮುಖ್ಯ) ತಮ್ಮ ಬೋರ್ಡ್ ಪರೀಕ್ಷೆಗಳ ದಿನಾಂಕಗಳ ಘರ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜೀವಶಾಸ್ತ್ರ-ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಗುಂಪುಗಳನ್ನು ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಕಷ್ಟವಾಗಿದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಫೆಬ್ರವರಿ 2 ರಂದು ಸಿಬಿಎಸ್‌ಇ 12 ನೇ … Continued

ನಡ್ಡಾ ಪೋಸ್ಟರ್‌ ಕಿತ್ತಿದ್ದಕ್ಕೆ ಬಿಜೆಪಿ-ಟಿಎಂಸಿ ಆರೋಪ ಪ್ರತ್ಯಾರೋಪ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಪರಿವರ್ತನ ರಥಯಾತ್ರೆ’ ಗಿಂತ ಮುಂಚೆ ಮಾಲ್ಡಾದಲ್ಲಿ ಬಿಜೆಪಿ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಈ ಘಟನೆಗೆ ಆಡಳಿತಾರೂಢ ಟಿಎಂಸಿ ಸರ್ಕಾರವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ, ಆದರೆ, ತಮ್ಮ ಪಕ್ಷದ ಮುಖಂಡರ ಮಧ್ಯದ ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯವರೇ ನಡ್ಡಾ ಅವರ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು … Continued

ತಿಂದ ಇಡ್ಲಿ ದುಡ್ಡು ಕೇಳಿದ್ದಕ್ಕೆ ವ್ಯಾಪಾರಿ ಹತ್ಯೆ

ಥಾಣೆ(ಮಹಾರಾಷ್ಟ್ರ): ಇಲ್ಲಿನ ಮೀರಾ ರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಮೂವರು ಗ್ರಾಹಕರು ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಆತ ಇಡ್ಲಿ ಮಾರಾಟ ಮಾಡುತ್ತಿದ್ದ. ಮೂವರು ಗ್ರಾಹಕರು ಅವರ ರಸ್ತೆ ಬದಿಯ ಡಬ್ಬಾ ಅಂಗಡಿಗೆ ಬಂದು 20 ರೂ. ಬಾಕಿ ಇದೆ ಎಂದು ಜಗಳ ತೆಗೆದರು. … Continued

ಬ್ರಿಟನ್‌ನಲ್ಲಿ ಕೊರೋನಾ ರೂಪಾಂತರದ ವಿರುದ್ಧ ಅಸ್ಟ್ರಾಜೆನೆಕಾ ಪರಿಣಾಮಕಾರಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆಅಸ್ಟ್ರಾಜೆನೆಕಾ ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ, ಲಸಿಕೆಯನ್ನು ಅಭಿವೃದ್ಧಿಪಡಿಸಿದ ಆಕ್ಸ್‌ಫರ್ಡ್ ಸಂಶೋಧಕರ ಪ್ರಕಾರ, ಹೊಸ ವೈರಸ್ ರೂಪಾಂತರಗಳಲ್ಲಿ ಇದು ಪರಿಣಾಮಕಾರಿಯಾಗಿದೆ. ನವೆಂಬರ್‌ನಲ್ಲಿ ಯುಕೆಯಲ್ಲಿ ಮೊದಲ ಬಾರಿಗೆ ಹೊಸ ವೈರಸ್‌ ರೂಪಾಂತರ ಪತ್ತೆಯಾಗಿತ್ತು. ವೈರಸ್‌ನ ಹೊಸ ರೂಪಾಂತರ ಶೀಘ್ರವಾಗಿ ಹರಡುತ್ತದೆ. ಹೊಸ ಲಸಿಕೆ ರೋಗದ ಹರಡುವಿಕೆಯನ್ನು … Continued

ಕಿಸಾನ್‌ ವಿಶೇಷ ರೈಲು

ಅಗರ್ತಾಲ: ದೇಶದ ಈಶಾನ್ಯ ಪ್ರದೇಶಗಳ ರೈತರು ಮತ್ತು ಸಾಗಣೆದಾರರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆ (ಎನ್‍ಎಫ್‍ಆರ್) ಕಿಸಾನ್ ವಿಶೇಷ ರೈಲುಗಳನ್ನು ಫೆ.11 ರಿಂದ ಅಗರ್ತಾಲದಿಂದ ಹೌರಾ ಮತ್ತು ಸೀಲ್ಡಾವರೆಗೆ ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ. ಕಿಸಾನ್ ವಿಶೇಷ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ 19.15 ಗಂಟೆಗೆ ಅಗರ್ತಾಲದಿಂದ ಹೊರಟು ಶನಿವಾರ ಸೀಲ್ಡಾ ತಲುಪಲಿದೆ. ಧರ್ಮಾನ್ ನಗರ, … Continued

2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಸಹಿ

ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಏರೋಸ್ಪೇಸ್‌ ಹಬ್‌ ಆಗಿರುವ ಕರ್ನಾಟಕ,ಹಾಗೂ ಮೂರು ದಿನಗಳಿಂದ ಬೆಂಗಳೂರಿನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಲಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ … Continued