ರಾಬರ್ಟ್‌ ವಾದ್ರಾಗೆ ಕೊರೊನಾ ಸೋಂಕು.. ಪ್ರಿಯಾಂಕಾ ಗಾಂಧಿ ಹೋಮ್‌ಕ್ವಾರಂಟೈನ್‌

ನವ ದೆಹಲಿ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್​ ವಾದ್ರಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ತಮಗೆ ಕೊರೋನಾ ಸೋಂಕು ದೃಢಪಟ್ಟಿದ್ದರ ಕುರಿತು ರಾಬರ್ಟ್​ ವಾದ್ರಾ ಫೇಸ್​ಬುಕ್​ ಮೂಲಕ ಅಧಿಕೃತ ಪಡಿಸಿದ್ದರು. ಪರೀಕ್ಷೆ ವೇಳೆ ಕೋವಿಡ್​ ದೃಢಪಟ್ಟಿರುವುದಾಗಿ ತಿಳಿಸಿದ್ದರು. ರಾಬರ್ಟ್​ ವಾದ್ರಾಗೆ … Continued

ಬಿಜೆಪಿ ಮುಖಂಡನ ಮೇಲೆ ದಾಳಿ ಮಾಡಿದ ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭದ್ರತಾಪಡೆ

ಕಾಶ್ಮೀರ: ಶುಕ್ರವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಈ ಘಟನೆಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಕಾಕಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡು ಹಾರಿಸಿ ಭಯೋತ್ಪಾದಕರು … Continued

ಸಾಂಪ್ರದಾಯಿಕ ಉಡುಗೆಯಲ್ಲಿ ಮದುರೈ ಮೀನಾಕ್ಷೆ ದೇಗುಲಕ್ಕೆ ಭೇಟಿ ನೀಡಿದ ಮೋದಿ

ಮದುರೈ: ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಧರಿಸಿದ ಪೋಷಾಕಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳು ನಾಡಿನ ಖ್ಯಾತ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮದುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮೋದಿಯವರು ಗುರುವಾರ ರಾತ್ರಿ 8.30ರ ಸುಮಾರಿಗೆ ನೇರವಾಗಿ ದೇವಸ್ಥಾನಕ್ಕೆ ಮೀನಾಕ್ಷಿ ದೇವಸ್ಥಾನಕ್ಕೆ ಪಂಚೆ ಮತ್ತು ಶರ್ಟ್ … Continued

ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ: ಕ್ರಿಕೆಟ್‌ ದಂತಕತೆ ೪೭ರ ಹರೆಯದ ಸಚಿನ್‌ ತೆಂಡೂಲ್ಕರ್‌ ಶುಕ್ರವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಮಾ.೨೭ರಂದು ಕೊರೊನಾ ಸೋಂಕಿಗೆ ಒಳಗಾಗಿದ್ದರು. ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದಗಳು. ವೈದ್ಯಕೀಯ ಸಲಹೆಯ ಮೇರೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ, ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವೇ ದಿನಗಳಲ್ಲಿ ಮನೆಗೆ ಮರಳಲಿದ್ದೇನೆ ಎಂದು ನಾನು ಭಾವಿಸಿದ್ದೇನೆ. ಆರೈಕೆ ಮಾಡಿ ಮತ್ತು ಎಲ್ಲರೂ ಸುರಕ್ಷಿತವಾಗಿರಿ” … Continued

ತಮಿಳುನಾಡು: ಎಂ.ಕೆ. ಸ್ಟಾಲಿನ್ ಅಳಿಯನ ಮನೆ ಮೇಲೆ ಐಟಿ ದಾಳಿ

ಚೆನ್ನೈ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅಳಿಯನ ಮನೆ ಮೇಲೆ ಶುಕ್ರವಾರ (ಏ.೨)ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಬರೀಶನ್ ಒಡೆತನದ ನಾಲ್ಕು ಕಡೆಗಳಲ್ಲಿ ಬೆಳಗ್ಗೆಯಿಂದ ಪರಿಶೀಲನೆ ನಡೆಯುತ್ತಿದೆ. ದಾಳಿ ಮಾಡಲಾದ ಸ್ಥಳಗಳಲ್ಲಿ ನೀಲಂಗರೈನಲ್ಲಿರುವ ಮನೆಯು ಕೂಡ ಒಂದು. ಅಲ್ಲಿ ಸ್ಟಾಲಿನ್ ಪುತ್ರಿ ಹಾಗೂ ಆಕೆಯ ಪತಿ ಶಬರೀಶನ್ ಅವರೊಂದಿಗೆ ವಾಸವಾಗಿದ್ದಾರೆ. ಏಪ್ರಿಲ್ 6 ರಂದು … Continued

ಗುಜರಾತಿನಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು..!

ಅಹಮದಾಬಾದ್: ಗುಜರಾತಿನ ವಡೋದರಾದಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ…! ಶಿಶುಗಳು ಜನಿಸಿದ ಬಳಿಕ ಕೆಲವೇ ದಿನಗಳಲ್ಲಿ ಅತಿಸಾರ ಹಾಗೂ ಡೀಹೈಡ್ರೇಷನ್‌ ತೊಂದರೆಯಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರೀಕ್ಷೆ ಬಳಿಕ ಶಿಶುಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಲಾಗಿದೆ. ಈಗ ಆರೋಗ್ಯ ಸ್ಥಿರವಾಗಿದೆ. ಇನ್ನೂ ಆಸ್ಪ್ತೆರಯಲ್ಲಿಯೇ ಇದ್ದಾರೆ ಎಂದು ಎಸ್‌ಎಸ್‌ಜಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ … Continued

ಒಂದೇ ದಿನ ಭಾರತದಲ್ಲಿ 36 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ..ಇದು ಈವರೆಗೆ ಅತಿ ಹೆಚ್ಚು

ನವ ದೆಹಲಿ; ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,71,242 ಡೋಸ್ ಕೊರೊನಾ ವೈರಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಕೊರೊನಅ ವೈರಸ್ ಎರಡನೇ ಅಲೆಯ ಮಧ್ಯೆ, ಭಾರತವು ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೇರಿಸಲು ಲಸಿಕಾ ಅಭಿಯಾನವನ್ನು ವಿಸ್ತರಿಸಿದೆ. ಏಪ್ರಿಲ್ 2 ರಂದು ಬೆಳಿಗ್ಗೆ 7 ಗಂಟೆಯ … Continued

ಭಾರತದಲ್ಲಿ ಶುಕ್ರವಾರ 81 ಸಾವಿರ ದಾಟಿದ ಕೊರೊನಾ ಪ್ರಕರಣ..6 ತಿಂಗಳಲ್ಲಿ ದೈನಂದಿನ ಸೋಂಕಿನಲ್ಲಿ ಅತಿ ಹೆಚ್ಚು ಜಿಗಿತ..!!

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 81,466 ಜನರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಕಳೆದ ಆರು ತಿಂಗಳಲ್ಲಿ ದೇಶವು ವರದಿ ಮಾಡಿದ ದೈನಂದಿನ ಹೊಸ ಸೋಂಕುಗಳಲ್ಲಿ ಇದು ಅತಿದೊಡ್ಡ ಜಿಗಿತವಾಗಿದೆ. ಕಳೆದ ವರ್ಷ ಅಕ್ಟೋಬರ್ 1 ರಂದು ಸುಮಾರು 81,000 ಪ್ರಕರಣಗಳು ವರದಿಯಾಗಿತ್ತು. ಈಗ … Continued

ಮುಂಬೈನಲ್ಲಿ ಕೊರೊನಾ ವೈರಸ್‌ ಹರಡುವಿಕೆ ದರ ಆಘಾತಕಾರಿ ಹೆಚ್ಚಳ..ಫೆಬ್ರವರಿಗೆ ಹೋಲಿಸಿದರೆ ಶೇ. 475 ಏರಿಕೆ…!!

ಮುಂಬೈ: ಮುಂಬೈ ನಗರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 88,710 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ತಿಂಗಳ ಸೋಂಕಿನ ಪ್ರಮಾಣಕ್ಕಿಂತ ಶೇಕಡಾ 475 ರಷ್ಟು ಹೆಚ್ಚಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿ ಅಂಶಗಳು ತಿಳಿಸಿವೆ. ನಗರದಲ್ಲಿ ಈ ವರ್ಷದ ಜನವರಿಯಲ್ಲಿ 16,328 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 18,359 ಕೊವಿಡ್‌-19 ಪ್ರಕರಣಗಳು ವರದಿಯಾಗಿತ್ತು. … Continued

ಬಲವಂತದ ಮತಾಂತರ ಕಾನೂನು ಜಾರಿಗೊಳಿಸಿದ ಎಲ್‌ಡಿಎಫ್‌, ಯುಡಿಎಫ್‌ ಸರಕಾರಗಳು: ಯೋಗಿ ಆದಿತ್ಯನಾಥ ಖಂಡನೆ

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿಗೊಳಿಸದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರಕಾರಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಂಡಿಸಿದ್ದಾರೆ. ಅವರು ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್‌ನಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿ, ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಸರಕಾರಗಳು ಬಲವಂತದ ಮತಾಂತರ ತಡೆಗೆ ಕಾನೂನು ಜಾರಿ ಮಾಡುವಲ್ಲಿ ವಿಫಲವಾಗಿವೆ … Continued