ಭಾರತದಲ್ಲಿ 72 ಸಾವಿರ ದಾಟಿದ ದೈನಂದಿನ ಕೊರೊನಾ ಪ್ರಕರಣ.. ಒಂದೇ ದಿನ 31 ಸಾವಿರ ದಾಟಿದ ಪ್ರಕರಣಗಳ ಜಿಗಿತ..!

ಕಳೆದ 24 ಗಂಟೆಗಳಲ್ಲಿ ಭಾರತವು 72,330 ಹೊಸ ಕೊರೊನಾ ವೈರಸ್ (ಕೋವಿಡ್ -19) ಪ್ರಕರಣಗಳನ್ನು ದಾಖಲಿಸಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ಬೆಳಿಗ್ಗೆ ತೋರಿಸಿದೆ. ಈ ಸೋಂಕಿನಿಂದ 459 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ 354 ಮೃತಪಟ್ಟಿದ್ದರು. ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಹೆಚ್ಚಳವಾಗಿದೆ. ರಾಷ್ಟ್ರವ್ಯಾಪಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,22,21,665 … Continued

ಮಹತ್ವದ ಸುದ್ದಿ..ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತದ ಆದೇಶ ಹಿಂಪಡೆದ ಕೇಂದ್ರ

ಇಂದಿನಿಂದ (ಏಪ್ರಿಲ್ 1 ರಿಂದ) ಜಾರಿಗೆ ಬರಬೇಕಿದ್ದ ಸಣ್ಣ ಉಳಿತಾಯ  ಬಡ್ಡಿದರಗಳಲ್ಲಿ ತೀವ್ರ ಕಡಿತದ ಆದೇಶವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಿಗ್ಗೆ “ಮೇಲ್ವಿಚಾರಣೆಯಿಂದ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುವುದು” ಎಂದು ಹೇಳಿದ್ದಾರೆ. ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಸರ್ಕಾರ ಬುಧವಾರ 40-110 ಬೇಸಿಸ್‌ ಪಾಯಿಂಟ್‌ಗಳಿಂದ ತೀವ್ರವಾಗಿ ಕಡಿತಗೊಳಿಸಿತ್ತು. ಪರಿಷ್ಕೃತ … Continued

ಕೊವಿಡ್‌-19 ಲಸಿಕಾ ಅಭಿಯಾನದ ಮೂರನೇ ಹಂತ ಇಂದಿನಿಂದ ಆರಂಭ. ಸಂದೇಹಗಳಿಗೆ ಇಲ್ಲಿದೆ ಉತ್ತರ..

ನವ ದೆಹಲಿ :ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಸರ್ಕಾರವು ಏಪ್ರಿಲ್ 1 ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಚಾಲನೆ ನೀಡಲಿದೆ. ಪರಿಸ್ಥಿತಿ “ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ” ಹೋಗುತ್ತಿದೆ ಎಂದು ಕೇಂದ್ರವು ಎಚ್ಚರಿಸಿದೆ. ಹೀಗಾಗಿ ಹೆಚ್ಚೆಚ್ಚು ಜನರು ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚಿಸಿದೆ. ಇಂದಿನಿಂದ (ಏಪ್ರಿಲ್ 1 ರಿಂದ ) ವ್ಯಾಕ್ಸಿನೇಷನ್ … Continued

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಕೆ ಮಾಡಿ ಕೇಂದ್ರ

ನವ ದೆಹಲಿ: ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಇಳಿಕೆ ಮಾಡಿ ಕೇಂದ್ರ ಸರ್ಕಾರವು ಬುಧವಾರ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಬ್ಯಾಂಕುಗಳು ತನ್ನ ಠೇವಣಿ ದರಗಳನ್ನು ಇಳಿಸಲು ಸಹಕಾರಿಯಾಗಲಿದೆ. ಕಳೆದ ಮೂರು ತ್ರೈಮಾಸಿಕದಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗ ಪರಿಷ್ಕೃತ ಬಡ್ಡಿದರ ಏಪ್ರಿಲ್ 1, 2021ರಿಂದ ಜಾರಿಗೆ ಬರಲಿದೆ. ಪಿಪಿಎಫ್, ರಾಷ್ಟ್ರೀಯ … Continued

ಔರಂಗಾಬಾದ್:‌ ಲಾಕ್‌ಡೌನ್‌ ಖಂಡಿಸಿ ಮೋರ್ಚಾ ನಡೆಸಲು ನಿರ್ಧರಿಸಿದ ಎಐಎಂಎಂ ಸಂಸದ

ಔರಂಗಾಬಾದ್‌: ಔರಂಗಾಬಾದ್‌ ಜಿಲ್ಲೆಯಲ್ಲಿ ೧೦ ದಿನಗಳ ಲಾಕ್‌ಡೌನ್‌ ಹೇರಿಕೆಯನ್ನು ವಿರೋಧಿಸಿದ ಎಐಎಂಎಂ ಸಂಸದ ಇಮ್ತಿಯಾಜ್‌ ಜಲೀಲ್‌, ಇದನ್ನು ಖಂಡಿಸಿ ಪಕ್ಷದ ವತಿಯಿಂದ ಮೋರ್ಚಾ ನಡೆಸಲಾಗುವುದು ಎಂದು ಹೇಳಿದ್ದಾರೆ. ಔರಂಗಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿದ್ರೆಯಲ್ಲಿರುವ ಆಡಳಿತವನ್ನು ಎಚ್ಚರಗೊಳಿಸಲು ಢೋಲ್ ಮತ್ತು ಡ್ರಮ್‌ಗಳನ್ನು ಹೊಡೆಯುವ ಮೂಲಕ ಮೋರ್ಚಾ ನಡೆಸಲಾಗುವುದು ಎಂದರು. ಕೊರೊನಾವೈರಸ್ … Continued

ಜಮ್ಮುವಿನಲ್ಲಿ ೯.೭೫ ಕೆಜಿ ಸ್ಫೋಟಕ ಪತ್ತೆ

ಶ್ರೀನಗರ: ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ೯.೭೫ ಕೆಜಿಯಷ್ಟು ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಭದ್ರತಾ ಪಡೆಗಳು ಬಂಧಿಸಿವೆ. ಗುಂಡಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ವ್ಯಕ್ತಿಯನ್ನು ಬಂಧಿಸಿ ಅವನಿಂದ ೭೮ ಜಿಲೆಟಿನ್‌ ಕಡ್ಡಿಗಳು, ೨೭೫ ಮೀಟರ್‌ ತಂತಿ ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಿಸ್ತ್ವಾರ್‌ ಜಿಲ್ಲೆಯ ಜಲವಿದ್ಯುತ್‌ ಯೋಜನಾ ಪ್ರದೇಶದ ಸಮೀಪ ಅಡಗುದಾಣದಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮಹಾರಾಷ್ಟ್ರದಲ್ಲಿ 40 ಸಾವಿರ ಸಮೀಪ ದೈನಂದಿನ ಕೊರೊನಾ ಪ್ರಕರಣ ದಾಖಲು

ಮುಂಬೈ : ಹೆಮ್ಮಾರಿ ಕೊರೊನಾ ನರ್ತನಕ್ಕೆ ಮಹಾರಾಷ್ಟ್ರ ತತ್ತರಗೊಂಡಿದ್ದು , ಕಳೆದ 24 ಗಂಟೆಯಲ್ಲಿ 39,544 ಕೇಸ್ ಪತ್ತೆಯಾಗಿದೆ. ದೇಶದಲ್ಲೇ ಪ್ರತಿನಿತ್ಯ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಪತ್ತೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 39,544 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಈ ಮೂಲಕ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣ ಸಂಖ್ಯೆ 28,12,980 ಕ್ಕೆ … Continued

ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ: ಮತ್ತೊಮ್ಮೆ ಗಡುವು ವಿಸ್ತರಣೆ

ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಮಾರ್ಚ್‌ 31,2021 ರಿಂದ ಜೂನ್‌ 30,2021ರ ವರೆಗೆ ಗಡುವನ್ನು ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಲಿಂಕ್‌ ಮಾಡುವುದು ಅನಿವಾರ್ಯವಾಗಿದೆ. ಆಧಾರ್‌ – ಪಾನ್‌ ಕಾರ್ಡ್‌ ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಹಲವು ಬಾರಿ ಗಡುವು ವಿಧಿಸಿತ್ತು. ಆಧಾರ್ ಕಾರ್ಡ್​ನೊಂದಿಗೆ ಪಾನ್​ ಕಾರ್ಡ್​ … Continued

ಅಕೋಲಾ: ಕಾಮದಹನ ಬೆಂಕಿಗೆ ನೀರು ಸುರಿದ ಅಲ್ಪಸಂಖ್ಯಾತ ಯುವಕರು..!

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ರಂಗಪಂಚಮಿ ಮುನ್ನಾದಿನ ಬುಧವಾರ 200-300 ಅಲ್ಪಸಂಖ್ಯಾತಯುವಕರ ಗುಂಪು ಹಿಂದೂಗಳು ಕಾಮದಹನ ಧಾರ್ಮಿಕ ವಿಧಿವಿಧಾನ ಮಾಡುವುದನ್ನು ತಡೆದಿದ್ದು, ಕಾಮದಹನ ಮಾಡುವಾಗ ನೀರು ಸುರಿದಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಕೋಲಾದ ಪೋಲಾ ಚೌಕ್‌ನಲ್ಲಿರುವ ಹನುಮಾನ್ ದೇವಸ್ಥಾನದ ಸಮೀಪ ನಡೆದಿದೆ. ಈ ದೇವಾಲಯವು ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿದೆ ಎಂದು ವರದಿಯಾಗಿದೆ. ಹಿಂದೂಗಳು ಮೆರವಣಿಗೆ ಮೂಲಕ ಬಂದು … Continued

ಉತ್ತರ ಪ್ರದೇಶ:‌ ಕೊರೊನಾ ಲಸಿಕೆಗಾಗಿ ಸರ್ಕಾರಿ- ಖಾಸಗಿ ಉದ್ಯೋಗಿಗಳಿಗೆ ೧ ದಿನ ರಜೆ ಪ್ರಕಟ..!

ಲಖನೌ: ಉತ್ತರ ಪ್ರದೇಶದಲ್ಲಿ ಕೊರೊನಾ ಲಸಿಕೆ ಪ್ರಕ್ರಿಯೆ ತೀವ್ರಗೊಳಿಸುವ ಉದ್ದೇಶದಿಂದ ಸರಕಾರ ಲಸಿಕೆಗಾಗಿ ಸರಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಲು ನಿರ್ಧರಿಸಿದೆ. ಸಿಎಂ ನಿವಾಸದಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸ ನಿರ್ದೇಶನಗಳನ್ನು ನೀಡಿದ್ದಾರೆ. ವ್ಯಾಕ್ಸಿನೇಷನ್ ಮಾನಿಟರಿಂಗ್ ಸಮಿತಿಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಪೂರ್ಣವಾಗಿ … Continued