ಸ್ಟಾರ್‌ ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟುಗಳು ಕಾನೂನುಬದ್ಧವಾಗಿವೆ, ಗೊಂದಲ ಬೇಡ: ಆರ್​ಬಿಐ ಸ್ಪಷ್ಟನೆ

ನವದೆಹಲಿ: ಸ್ಟಾರ್‌ (*) ಚಿಹ್ನೆ ಹೊಂದಿರುವ ಬ್ಯಾಂಕ್‌ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿರುವ ಊಹಾಪೋಹಗಳ ಬಗ್ಗೆ ಆರ್‌ಬಿಐ ಈ ಸ್ಪಷ್ಟನೆ ನೀಡಿದ್ದು, ಸ್ಟಾರ್‌ (*) ಚಿಹ್ನೆ ಹೊಂದಿರುವ ನೋಟುಗಳು ಕಾನೂನುಬದ್ಧವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 27 ರಂದು ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ ಬ್ಯಾಂಕ್‌ … Continued

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ವೀಡಿಯೊ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸೂಚಿಸಿದ ಕೇಂದ್ರ -ವರದಿ

ನವದೆಹಲಿ : ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಮಣಿಪುರದ ಭಯಾನಕ ವೀಡಿಯೊ ಪ್ರಕರಣವನ್ನು ಕೇಂದ್ರೀಯ ತನಿಖಾ ದಳವು ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವಾಲಯವು ಪ್ರಕರಣವನ್ನು ಸಿಬಿಐಗೆ ವಹಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದೆ ಕಳೆದ ಮೂರು ತಿಂಗಳಿನಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರ … Continued

ಅಯ್ಯೋ ದೇವ್ರೆ…: ಐಫೋನ್ ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿದ ದಂಪತಿ….!

ಕೋಲ್ಕತ್ತಾ: ಪಶ್ಚಿಮ ಬಂಗಾಳದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದಂಪತಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿ ರೀಲ್‌ಗಳನ್ನು ಮಾಡಲು ದುಬಾರಿ ಐಫೋನ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಬೆಳವಣಿಗೆಯು ರಾಜ್ಯದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬವಳನ್ನು … Continued

ಮದುವೆಗಳಲ್ಲಿ ಸಿನಿಮಾ ​ಹಾಡು ಬಳಕೆ ಮಾಡುವುದು ಕಾಪಿರೈಟ್ ಉಲ್ಲಂಘನೆಯಲ್ಲ; ಕೇಂದ್ರ ಸರ್ಕಾರ

ನವದೆಹಲಿ : ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಾಲಿವುಡ್ ಸೇರಿದಂತೆ ಯಾವುದೇ ಸಿನಿಮಾ ಹಾಡುಗಳನ್ನ ಬಳಕೆ ಮಾಡಿದರೆ ಅದು ಕೃತಿಸ್ವಾಮ್ಯದ ಉಲ್ಲಂಘನೆ (Copyright Infringement) ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾವುದೇ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಮಾರಂಭಗಳಲ್ಲಿ … Continued

‘ರಾಷ್ಟ್ರೀಯ ಹಿತಾಸಕ್ತಿ’ : ಇ.ಡಿ. ಮುಖ್ಯಸ್ಥರಿಗೆ ಸೆಪ್ಟೆಂಬರ್‌ 15ರ ವರೆಗೆ ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸೆಪ್ಟೆಂಬರ್‌ 15ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರಾಗಿ ಮುಂದುವರಿಯಲು ಸಂಜಯಕುಮಾರ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ನಡೆಯುತ್ತಿರುವ ಹಣಕಾಸು ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪರಾಮರ್ಶೆಯಲ್ಲಿ ಮಿಶ್ರಾ ಗೈರಾಗುತ್ತಾರೆ. ಹೀಗಾಗಿ ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಕೋರಿತ್ತು. ಮಿಶ್ರಾ ಅವರ … Continued

12 ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಕೂಡಿಕೊಂಡಿದ್ದ 1 ವರ್ಷದ ಅವಳಿಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ಏಮ್ಸ್‌ ವೈದ್ಯರು….

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (AIIMS) 12 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಕಳೆದ ವರ್ಷ ಜನಿಸಿದ್ದ ಎದೆ ಮತ್ತು ಹೊಟ್ಟೆ ಸೇರಿಕೊಂಡಿದ್ದ ಸಂಯೋಜಿತ ಅವಳಿ ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಅವರನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ ಎಂದು ವೈದ್ಯರು ಬುಧವಾರ ತಿಳಿಸಿದ್ದಾರೆ. ಎಐಐಎಂಎಸ್‌ನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ … Continued

ಟವರ್‌ನ 13ನೇ ಮಹಡಿಗೆ ಏರಿದ ಭಾರತೀಯ ರಾಕ್ ಹೆಬ್ಬಾವು…!

ಮುಂಬೈ: ನಾಲ್ಕು ಅಡಿ ಉದ್ದದ ಭಾರತೀಯ ರಾಕ್ ಹೆಬ್ಬಾವು (ಕಪ್ಪು-ಬಾಲದ ಹೆಬ್ಬಾವು) ಮುಂಬೈನ ಘಾಟ್‌ಕೋಪರ್‌ನ (ಪಶ್ಚಿಮ) ಗೋಪುರದ 13 ನೇ ಮಹಡಿಯ ಟೆರೇಸ್‌ಗೆ ಹೇಗೋ ಏರಿದ ಘಟನೆ ನಡೆದಿದ್ದು, ಅದನ್ನು ಈಗ ರಕ್ಷಿಸಲಾಗಿದೆ. ಈ ಹಾವು ಅಷ್ಟು ಎತ್ತರವನ್ನು ಹೇಗೆ ತಲುಪಿತು ಎಂಬುದೇ ಈಗ ಕೌತುಕವಾಗಿದೆ. ಪ್ರಾಣಿ ಪ್ರಿಯರು ಮತ್ತು ನಿವಾಸಿಗಳು ಮುಂಬೈನ ಐಟಿ ಸಂಸ್ಥೆಯೊಂದರಲ್ಲಿ … Continued

ಗ್ಯಾರಂಟಿ ಯೋಜನೆ ಜಾರಿ : ಈ ವರ್ಷ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ ಎಂದ ಡಿಸಿಎಂ ಡಿ.ಕೆ. ಶಿವಕುಮಾರ

ಬೆಂಗಳೂರು: ಐದು ಗ್ಯಾರಂಟಿಯಿಂದ ಉಂಟಾಗುವ ಆರ್ಥಿಕ ಅಡಚಣೆಯಿಂದಾಗಿ ಈ ವರ್ಷ ಅಭಿವೃದ್ಧಿಗೆ ಹಣ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ಸವಾಲುಗಳನ್ನು ಎದುರಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಹೇಳಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಜಾರಿಯಾಗದಿರುವ ಬಗ್ಗೆ ಹಲವು ಶಾಸಕರು ಆರೋಪಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ … Continued

ದೆಹಲಿ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಮಸೂದೆ : ಸರ್ಕಾರಕ್ಕಿದ್ದ ರಾಜ್ಯಸಭೆಯ ಅಡಚಣೆ ನಿವಾರಣೆ-ಕಾರಣ ವೈಎಸ್ಆರ್ ಕಾಂಗ್ರೆಸ್

ನವದೆಹಲಿ: ದೆಹಲಿಯಲ್ಲಿ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಮಸೂದೆ ಸೇರಿದಂತೆ ಕೇಂದ್ರವು ಸಂಸತ್ತಿನಲ್ಲಿ ಮಂಡಿಸಲಿರುವ ವಿವಿಧ ಮಸೂದೆಗಳಿಗೆ ಎನ್‌ಡಿಎ ಸರ್ಕಾರಕ್ಕೆ ಬೆಂಬಲಿಸಲು ಹಾಗೂ ಮಣಿಪುರದ ಮೇಲೆ ಕಾಂಗ್ರೆಸ್‌ ಮಂಡಿಸಿದ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಜ್ಯಸಭೆಯಲ್ಲಿ ಒಂಬತ್ತು … Continued

ಸರ್ಕಾರಿ ಸಿಬ್ಬಂದಿಗೆ 1 ವರ್ಷದ ಹೆರಿಗೆ ರಜೆ, 1 ತಿಂಗಳ ಪಿತೃತ್ವ ರಜೆ ಜಾರಿಗೆ ತರಲು ಮುಂದಾದ ಈ ರಾಜ್ಯ

ಗ್ಯಾಂಗ್ಟಾಕ್: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ತಮ್ಮ ಸರ್ಕಾರವು ಉದ್ಯೋಗಿಗಳಿಗೆ 12 ತಿಂಗಳ ಹೆರಿಗೆ ರಜೆ ಮತ್ತು ಒಂದು ತಿಂಗಳ ಪಿತೃತ್ವ ರಜೆಯನ್ನು ನೀಡಲಿದೆ ಎಂದು ಬುಧವಾರ ಹೇಳಿದ್ದಾರೆ. ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಸೌಲಭ್ಯ ಒದಗಿಸಲು ಸೇವಾ … Continued