ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭಕ್ಕೆ ಇನ್ನೂ ನಾಲ್ಕೈದು ದಿನ ವಿಳಂಬ: ಸಂಪುಟ ಸಭೆ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಹೇಳಿಕೆ

ಬೆಂಗಳೂರು: ಮನೆ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು 4-5 ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ. ಶುಕ್ರವಾರದಿಂದ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಧ್ಯಾಹ್ನವಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತಿಳಿಸಿದ್ದಾರೆ. ಆದರೆ ಕ್ಯಾಬಿನೆಟ್ ಸಭೆ ನಂತರ ಶುಕ್ರವಾರ ಚಾಲನೆ ನೀಡಬೇಕಿದ್ದ … Continued

ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ರಾಜ್ಯದ ಸಾರಿಗೆ ಸಿಬ್ಬಂದಿಗೆ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು, ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಸಾರಿಗೆ ಸಿಬ್ಬಂದಿ ವೇತನ ಶೇ.15ರಷ್ಟು ಹೆಚ್ಚು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಏಪ್ರಿಲ್ ತಿಂಗಳಿನಿಂದ ಪೂರ್ವಾನ್ವಯ ಆಗುವಂತೆ ಸಾರಿಗೆ ನೌಕರರಿಗೆ … Continued

ಶಾಲಾ ಪಠ್ಯಕ್ರಮದಿಂದ ಸಾವರ್ಕರ, ಹೆಡ್ಗೆವಾರ್ ಪಠ್ಯಕ್ಕೆ ಕೊಕ್; ನೆಹರೂ, ಡಾ. ಅಂಬೇಡ್ಕರ ಪಠ್ಯ ಸೇರ್ಪಡೆ: : ಸಚಿವ ಸಂಪುಟ ನಿರ್ಧಾರ

ಬೆಂಗಳೂರು : ಪಠ್ಯ ಪುಸ್ತಕದಲ್ಲಿರುವ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ವಿಷಯಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಗೆ ಕೊಕ್ ನೀಡಲು ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ … Continued

ಕಟ್ಟಡದ 2ನೇ ಅಂತಸ್ತಿನ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡ; ಕಿಟಕಿ ಮೂಲಕ ತಂತಿಯಲ್ಲಿ ಜಾರುತ್ತ ತಪ್ಪಿಸಿಕೊಂಡ ನೂರಾರು ವಿದ್ಯಾರ್ಥಿಗಳು | ವೀಕ್ಷಿಸಿ

ನವದೆಹಲಿ: ವಾಯವ್ಯ ದೆಹಲಿಯ ಮುಖರ್ಜಿ ನಗರ ಪ್ರದೇಶದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಇಂದು, ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಕಿಟಕಿಗಳಿಂದ ಜಿಗಿಯುತ್ತಿರುವ ದೃಶ್ಯಾವಳಿ ಕಂಡುಬಂದಿದೆ. ವಿಷಯ ತಿಳಿದ ಕೂಡಲೇ 11 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:30 ಕ್ಕೆ ಬೆಂಕಿ ಕಾಣಿಸಿಕೊಂಡಿತು ಮತ್ತು ಅಗ್ನಿಶಾಮಕ … Continued

ಬಿಪೋರ್‌ ಜಾಯ್‌ ಚಂಡಮಾರುತ ಅಪ್ಪಳಿಸುವ ಕೆಲವು ಗಂಟೆಗಳಿರುವಾಗ 74,000 ಜನರ ಸ್ಥಳಾಂತರ

ನವದೆಹಲಿ: ಇಂದು, ಗುರುವಾರ ಸಂಜೆ ಗುಜರಾತಿನ ಕಚ್ ಜಿಲ್ಲೆಯಲ್ಲಿ ಬಿಪೋರ್‌ ಜಾಯ್ ಚಂಡಮಾರುತದ ನಿರೀಕ್ಷಿತ ಅಪ್ಪಳಿಸುವಿಕೆಗೂ ಮುನ್ನ ಗುಜರಾತ್‌ನ ಕರಾವಳಿ ಪ್ರದೇಶದಿಂದ ಸುಮಾರು 74,000 ಜನರನ್ನು ತಾತ್ಕಾಲಿಕ ಶೆಲ್ಟರ್‌ಗೆ ಸ್ಥಳಾಂತರಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪ್ರಸ್ತುತ, ಬಿಪೋರ್‌ ಜಾಯ್ ಚಂಡಮಾರುತವು ಗುಜರಾತ್ ಕರಾವಳಿಯಿಂದ 200 ಕಿಮೀಗಿಂತ ಕಡಿಮೆ ದೂರದಲ್ಲಿದೆ. … Continued

ಅಮೆರಿಕದ ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದದ ಬಗ್ಗೆ ಇಂದು ರಕ್ಷಣಾ ಸಚಿವಾಲಯದಿಂದ ನಿರ್ಧಾರ ಸಾಧ್ಯತೆ: ಮೂಲಗಳು

ನವದೆಹಲಿ: ಇಂದು ಗುರುವಾರ (ಜೂನ್ 15) ನಡೆಯಲಿರುವ ಸಭೆಯಲ್ಲಿ ಅಮೆರಿಕ ನಿರ್ಮಿತ ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸುವ ಒಪ್ಪಂದದ ಬಗ್ಗೆ ರಕ್ಷಣಾ ಸಚಿವಾಲಯ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಒಪ್ಪಂದದ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಆದರೆ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮಕ್ಕೆ ಉತ್ತೇಜನ … Continued

ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿ ಹಿಂಪಡೆದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡು ಸರ್ಕಾರ ಬುಧವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ತನ್ನ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತಾರೂಢ ಡಿಎಂಕೆ ವಿರೋಧ ಪಕ್ಷದ ನಾಯಕರನ್ನು “ಮೌನಗೊಳಿಸಲು” ಕೇಂದ್ರೀಯ ಸಂಸ್ಥೆಗಳನ್ನು “ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಟೀಕಿಸಿದ ನಂತರ ಸರ್ಕಾರದ ಈ ಕ್ರಮವು ಬಂದಿದೆ. ರಾಜ್ಯದಲ್ಲಿ ಯಾವುದೇ ತನಿಖೆ ನಡೆಸುವ ಮೊದಲು ಕೇಂದ್ರ ತನಿಖಾ … Continued

ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದ ಸಚಿವ ಸೆಂಥಿಲ್ ಬಾಲಾಜಿ, ನಿಯಮಾವಳಿ ಉಲ್ಲಂಘನೆ : ಇ.ಡಿ. ರಿಮಾಂಡ್ ನೋಟ್

ಚೆನ್ನೈ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರು ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆಯಲು ರಾಜ್ಯ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಇತರ ಆರೋಪಿಗಳೊಂದಿಗೆ ಕ್ರಿಮಿನಲ್ ಸಂಚು ರೂಪಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ರಿಮಾಂಡ್ ನೋಟ್‌ನಲ್ಲಿ ತಿಳಿಸಿದೆ. ಚಾಲಕರು, ಕಂಡಕ್ಟರ್‌ಗಳು, ಜೂನಿಯರ್ ಟ್ರೇಡ್ಸ್‌ಮೆನ್, ಕಿರಿಯ ಸಹಾಯಕರು, ಜೂನಿಯರ್ ಇಂಜಿನಿಯರ್‌ಗಳು ಇತ್ಯಾದಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು … Continued

ಟ್ವಿಟರಿ‌ನಲ್ಲಿ 2.5 ಕೋಟಿ ಹಿಂಬಾಲಕರು: ಹೊಸ ಮೈಲಿಗಲ್ಲು ಸ್ಥಾಪಿಸಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ

ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ 25 ಮಿಲಿಯನ್ ( 2.5 ಕೋಟಿ)ಹಿಂಬಾಲಕರನ್ನು ಪಡೆದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನುಸರಿಸುವವರ ವಿಷಯದಲ್ಲಿ ಹಲವಾರು ನಾಯಕರು ಮತ್ತು ಸೆಲೆಬ್ರಿಟಿಗಳು ಇನ್ನೂ 25 ಮಿಲಿಯನ್ ಅನ್ನು ತಲುಪಿಲ್ಲ. ಯೋಗಿ ಆದಿತ್ಯನಾಥ್ ಅವರು ಸೆಪ್ಟೆಂಬರ್ 2015 … Continued