ಇಮ್ರಾನ್ ಖಾನ್: ಕ್ರಿಕೆಟ್ ವೃತ್ತಿ ಜೀವನದ ಯಶಸ್ಸನ್ನು ರಾಜಕೀಯದಲ್ಲಿ ಪುನರಾವರ್ತಿಸಲು ವಿಫಲನಾದ ನಾಯಕ… ಇಮ್ರಾನ್‌ ಸವೆಸಿದ ಏಳುಬೀಳಿನ ದಾರಿ

ಇಸ್ಲಾಮಾಬಾದ್: 1992ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ದುರ್ಬಲ ತಂಡವನ್ನು ಚಾಂಪಿಯನ್‌ ಆಗಿ ಪರಿವರ್ತಿಸಿದ ಪಾಕಿಸ್ತಾನದ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್, ರಾಜಕೀಯದಲ್ಲಿ ಅದೇ ವರ್ಚಸ್ಸನ್ನು ಪುನರಾವರ್ತಿಸಲು ವಿಫಲರಾದರು. ಅಲ್ಲಿ ಅವರು ತಮ್ಮ ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲಿ ದೃಢವಾದ ವಿರೋಧ ಪಕ್ಷಗಳಿಂದ ರನೌಟ್ ಆದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಣಾಮಕಾರಿಯಾಗಿ ಬಹುಮತವನ್ನು ಕಳೆದುಕೊಂಡ ಖಾನ್ ಅವರು ಸಂಸತ್ತನ್ನು ವಿಸರ್ಜಿಸಿದರು … Continued

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಭಾರತೀಯ ಮೂಲದ ಕಲ್ಟ್‌ ನಾಯಕ ಬ್ರಿಟನ್‌ ಜೈಲಿನಲ್ಲಿ ಸಾವು

ಲಂಡನ್‌: ಲಂಡನ್‌ನಲ್ಲಿ ರಹಸ್ಯವಾದ ಉಗ್ರ ಮಾವೋವಾದಿ ಕಲ್ಟ್‌ ನಡೆಸುತ್ತಿದ್ದ ಹಾಗೂ ಆರು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯದಿಂದ 23 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಲ್ಲಿಯೇ ಮೃತಪಟ್ಟಿದ್ದಾರೆ. ಕಾಮ್ರೇಡ್ ಬಾಲಾ ಎಂದು ಅವರ ಅನುಯಾಯಿಗಳಿಗೆ ತಿಳಿದಿರುವ ಅರವಿಂದನ್ ಬಾಲಕೃಷ್ಣನ್ ಅವರು 2016 ರಲ್ಲಿ ಆರು ಅಸಭ್ಯ … Continued

ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡು ಮಾಯಾವತಿಯನ್ನು ಸಿಎಂ ಅಭ್ಯರ್ಥಿ ಮಾಡುವುದಾಗಿ ಆಫರ್‌ ನೀಡಿದ್ದೆವು, ಆದ್ರೆ ಅವರು ಸ್ಪಂದಿಸಲೇ ಇಲ್ಲ: ರಾಹುಲ್ ಗಾಂಧಿ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಬಹುಜನ್ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿಯವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಕಾಂಗ್ರೆಸ್ ಅವರಿಗೆ ಆಫರ್‌ ನೀಡಿತ್ತು. ಆದರೆ ಮಾಯಾವತಿ ನಮ್ಮ ಜತೆ ಮಾತನಾಡಲೇ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಬಿಎಸ್‌ಪಿ ಜತೆ ಮೈತ್ರಿ ಸಾಧಿಸಲು … Continued

ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ನನ್ನು ಭಯೋತ್ಪಾದಕ ಎಂದು ಘೋಷಿಸಿದ ಭಾರತ

ನವದೆಹಲಿ: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್​ ಸಯೀದ್​ಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಭಾರತದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ. ಈಗ ಭಾರತದ ಗೃಹ ಸಚಿವಾಲಯವು ಹಫೀಜ್​ ಸಯೀದ್ ಮಗ ಭಯೋತ್ಪಾದಕ ಎಂದು ಮಹತ್ವದ ಆದೇಶ ಪ್ರಕಟಿಸಿದೆ. ಮುಂಬೈನಲ್ಲಿ 2008ರ ನವೆಂಬರ್​ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ … Continued

ಬಾಲಿವುಡ್‌ ನಟಿ ಸೋನಂ ಕಪೂರ್ ದೆಹಲಿ ನಿವಾಸದಲ್ಲಿ 2.4 ಕೋಟಿ ರೂ.ಗಳ ಮೌಲ್ಯದ ವಸ್ತುಗಳು ಕಳ್ಳತನ

ಬಾಲಿವುಡ್‌ ನಟಿ ಸೋನಂ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ ಅವರ ದೆಹಲಿ ಮನೆಯಲ್ಲಿ ಫೆಬ್ರವರಿಯಲ್ಲಿ ಕಳ್ಳತನ ನಡೆದಿದ್ದು, 2.4 ಕೋಟಿ ರೂಪಾಯಿ ಮೌಲ್ಯದ ನಗದು, ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಶನಿವಾರ ಅಧಿಕೃತವಾಗಿ ತಿಳಿದುಬಂದಿದೆ. ಘಟನೆಯನ್ನು ದೃಢಪಡಿಸಿದ ಪೊಲೀಸ್ ಉಪ ಆಯುಕ್ತ (ನವದೆಹಲಿ ಜಿಲ್ಲೆ) ಅಮೃತಾ ಗುಗುಲೋತ್, … Continued

ಗುಜರಾತಿನಲ್ಲಿ ಹೆಚ್ಚು ಹರಡು ಕೊರೊನಾ ವೈರಸ್‌ನ ‘XE’ ತಳಿ ಪತ್ತೆ: ವರದಿ

ನವದೆಹಲಿ: ಸದ್ಯ ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ಸಿ ಒಮಿಕ್ರಾನ್‌ ರೂಪಾಂತರಿಯ ಹೈಬ್ರಿಡ್‌ ವೈರಸ್‌ ಎಕ್ಸ್ ಇ ಸೋಂಕು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಮೂರು ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ಇದೇ ಮಾದರಿಯ ಸೋಂಕು ವ್ಯಕ್ತಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು. ಆದರೆ ದೃಢಪಟ್ಟಿರಲಿಲ್ಲ. ಈಗ ಗುಜರಾತ್‍ನಲ್ಲಿ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೊಸ ಮಾದರಿಯ ಎಕ್ಸ್ … Continued

ಸರ್ಕಾರಿ ಅಧಿಕಾರಿಗಳೆಂದು ಜನರನ್ನು ಯಾಮಾರಿಸಿ 60 ಅಡಿ ಉದ್ದದ 500 ಟನ್ ಕಬ್ಬಿಣದ ಸೇತುವೆಯನ್ನೇ ಕದ್ದು ಪರಾರಿಯಾದ ಖತರ್ನಾಕ್‌ ಕಳ್ಳರು…!

ಪಾಟ್ನಾ: 60 ಅಡಿ ಉದ್ದದ ಸೇತುವೆಯನ್ನೇ ಕಳ್ಳತನ ಮಾಡಿದ ಅಪರೂಪದ ಪ್ರಕರಣವೊಂದು ಬಿಹಾರದ ರೊಹತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯಾವಾರ್ ಎಂಬಲ್ಲಿ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ 60 ಅಡಿ ಉದ್ದದ 500 ಟನ್ ಕಬ್ಬಿಣದ ಸೇತುವೆಯನ್ನು ಸರ್ಕಾರಿ ಅಧಿಕಾರಿಗಳಂತೆ ತೋರಿಸಿಕೊಂಡು ಕಳ್ಳರು ಕದ್ದಿದ್ದಾರೆ. ಜಲಸಂಪನ್ಮೂಲ ಇಲಾಖೆ ಏಪ್ರಿಲ್ 8 ರಂದು … Continued

ಕೆನಡಾದ ಸಬ್‌ವೇ ನಿಲ್ದಾಣದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

ಟೊರೊಂಟೋ: ಕೆನಡಾದ ಟೊರೊಂಟೊ ಬಳಿಯ ಶೆರ್ಬೋರ್ನ್ ಸಬ್ ವೇ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ವಿದ್ಯಾರ್ಥಿಯನ್ನು 21 ವರ್ಷದ ಕಾರ್ತಿಕ್‌ ವಾಸುದೇವ ಎಂದು ಗುರುತಿಸಲಾಗಿದೆ. ಕೆನಡಾದ ಟೊರೊಂಟೊದ ಸೆನೆಕಾ ಕಾಲೇಜಿನ ಮೊದಲ ಸೆಮಿಸ್ಟರ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ವಾಸುದೇವಗೆ ಗುಂಡು ಹಾರಿಸಿದ್ದು ಯಾರು ಎಂದು ತಿಳಿದುಬಂದಿಲ್ಲ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ … Continued

ನೀವು ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಿಬಿಡಿ: ಭಾರತದವರು ಬಹಳ ಸ್ವಾಭಿಮಾನಿಗಳೆಂದು ಹೊಗಳಿದ ಇಮ್ರಾನ್ ಖಾನ್‌ಗೆ ನವಾಜ್ ಷರೀಫ್ ಪುತ್ರಿ ತಾಕೀತು

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಷರೀಫ್ ಅವರು ಶುಕ್ರವಾರ (ಏಪ್ರಿಲ್ 8, 2022) ಭಾರತವನ್ನು ‘ಖುದ್ದರ್ ಕ್ವಾಮ್’ (ಬಹಳ ಸ್ವಾಭಿಮಾನಿ ಜನರು) ಎಂದು ಶ್ಲಾಘಿಸಿದ ನಂತರ ಇಮ್ರಾನ್ ಖಾನ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷರೂ ಆಗಿರುವ ಮರ್ಯಮ್ ಅವರು ಪಾಕಿಸ್ತಾನದ ಪ್ರಧಾನಿಗೆ … Continued

ಸಂತಾನ ಪಡೆಯಲು ಅಪರಾಧಿಗೆ 15 ದಿನಗಳ ಪೆರೋಲ್ ನೀಡಿದ ರಾಜಸ್ಥಾನ ಹೈಕೋರ್ಟ್

ಜೋಧ್‌ಪುರ: ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಹೆಂಡತಿಯ ಭಾವನಾತ್ಮಕ ಅಗತ್ಯಗಳನ್ನು ರಕ್ಷಿಸಬೇಕು ಎಂದು ಪ್ರತಿಪಾದಿಸಿದ ರಾಜಸ್ಥಾನ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಕೆಯ ಪತಿಗೆ 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಫರ್ಜಾಂದ್ ಅಲಿ ಮತ್ತು ಸಂದೀಪ್ ಮೆಹ್ತಾ ಅವರ ವಿಭಾಗೀಯ ಪೀಠವು ವಿವಿಧ ಧಾರ್ಮಿಕ ಗ್ರಂಥಗಳು ಮತ್ತು ಸಾಮಾಜಿಕ-ಮಾನವೀಯ ಅಂಶಗಳನ್ನು ಉಲ್ಲೇಖಿಸಿ ಮತ್ತು ದಂಪತಿಗೆ … Continued