ಖಾಲಿಸ್ತಾನ್ ಪರ ಭಾವನೆ ಉತ್ತೇಜಿಸುವ ೬ ಯೂಟ್ಯೂಬ್ ಚಾನೆಲ್‌ ನಿಷೇಧಿಸಿದ ಕೇಂದ್ರ

ನವದೆಹಲಿ: ಸರ್ಕಾರದ ನಿದರ್ಶನದ ಮೇರೆಗೆ ಖಾಲಿಸ್ತಾನ್ ಪರ ಭಾವನೆಗಳನ್ನು ಉತ್ತೇಜಿಸುವ ಕನಿಷ್ಠ ಆರು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಕಳೆದ 10 ದಿನಗಳಿಂದ ಹೊರ ದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಆರರಿಂದ ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದ್ದಾರೆ. ಪಂಜಾಬಿ ಭಾಷೆಯಲ್ಲಿ ವಿಷಯ … Continued

ಮಾರ್ಚ್ ಅಂತ್ಯದ ವೇಳೆಗೆ H3N2 ಸೋಂಕಿನ ಪ್ರಕರಣಗಳು ಕಡಿಮೆಯಾಗಲಿದೆ : ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ನೆಟ್‌ವರ್ಕ್ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಋತುಮಾನದ ಇನ್ಫ್ಲುಯೆಂಜಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಕಾಲೋಚಿತ ಇನ್ಫ್ಲುಯೆಂಜಾ H3N2 ಉಪವಿಧದ ಹರಡುವಿಕೆಯಿಂದ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು, ಇದನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು … Continued

20ನೇ ಮಹಡಿಯಿಂದ ಬಿದ್ದು ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರವಾಲ್ ತಂದೆ ಸಾವು

ನವದೆಹಲಿ: ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಇಂದು, ಶುಕ್ರವಾರ ಮಧ್ಯಾಹ್ನ ಹರಿಯಾಣದ ಗುರುಗ್ರಾಮದ ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 54, ಡಿಎಲ್‌ಎಫ್‌ನ ದಿ ಕ್ರೆಸ್ಟ್ ಸೊಸೈಟಿಯ 20 ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ ಎಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಎಲ್‌ಎಫ್ … Continued

ರಾಜ್ಯದಲ್ಲಿ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ರದ್ದು: ಹೈಕೋರ್ಟ್ ಆದೇಶ

ಬೆಂಗಳೂರು : ರಾಜ್ಯದಲ್ಲಿ ಮಾರ್ಚ್ 13ರಿಂದ ನಡೆಯಬೇಕಿದ್ದ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿ ಕರ್ನಾಟ ಹೈಕೋರ್ಟ್ ಆದೇಶ ಮಾಡಿದೆ. ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರು ಈ ಆದೇಶ ಮಾಡಿದ್ದಾರೆ ಎಂದು ಲೈವ್‌ ಲಾ ವರದಿ ಮಾಡಿದೆ. ವರದಿ ಪ್ರಕಾರ, ಡಿಸೆಂಬರ್ 12, 2022, ಡಿಸೆಂಬರ್ 13, 2022 ಮತ್ತು ಜನವರಿ 4, … Continued

H3N2 ಇನ್ಫ್ಲುಯೆಂಜಾ A ವೈರಸ್ ಸೋಂಕು: ರೋಗಲಕ್ಷಣಗಳು, ಚಿಕಿತ್ಸೆ, ಯಾವುದನ್ನು ಮಾಡಬೇಕು-ಮಾಡಬಾರದು..? ತಿಳಿದುಕೊಳ್ಳಬೇಕಾದದ್ದು..

ಇನ್‌ಫ್ಲುಯೆಂಜಾ ಎ ವೈರಸ್‌ನ ಉಪ ವಿಧವಾದ ಎಚ್3ಎನ್2 ಸೋಂಕಿಗೆ ದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹರಿಯಾಣದಲ್ಲಿ ಒಬ್ಬರು ಮೃತಪಟ್ಟರೆ, ಮತ್ತೊಬ್ಬರು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟರೆ ಮತ್ತೊಬ್ಬರು ಹರ್ಯಾಣ ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವೈರಸ್‌ನಿಂದ ಉಂಟಾಗುವ ಜ್ವರದ … Continued

ದೆಹಲಿ ಮದ್ಯ ನೀತಿ ಪ್ರಕರಣ : ಮನೀಶ್ ಸಿಸೋಡಿಯಾಗೆ 7 ದಿನಗಳ ಇ.ಡಿ. ಕಸ್ಟಡಿ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಮದ್ಯದ ನೀತಿಯನ್ನು ರೂಪಿಸುವಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಪ್ರಶ್ನಿಸಲು ಕೇಂದ್ರ ಸಂಸ್ಥೆ ಕನಿಷ್ಠ 10 ದಿನಗಳ ಕಾಲಾವಕಾಶವನ್ನು ಕೋರಿತ್ತು, … Continued

ಉದ್ಯೋಗಕ್ಕಾಗಿ ಭೂ ಹಗರಣ: ಬಿಹಾರ ಡಿಸಿಎಂ ತೇಜಸ್ವಿ ಯಾದವ ದೆಹಲಿ ಮನೆ ಮೇಲೆ ಇ.ಡಿ. ದಾಳಿ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ ಯಾದವ ಮತ್ತು ರಾಬ್ರಿ ದೇವಿ ಅವರನ್ನು ಸಿಬಿಐ ಪ್ರಶ್ನಿಸಿದ ಕೆಲ ದಿನಗಳ ನಂತರ, ಜಾರಿ ನಿರ್ದೇಶನಾಲಯ (ED) ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಅವರ ದೆಹಲಿಯ ಮನೆ ಮೇಲೆ ದಾಳಿ ನಡೆಸಿದೆ. ಲಾಲು ಪ್ರಸಾದ ಯಾದವ ಮತ್ತು ಅವರ ಕುಟುಂಬ ಸದಸ್ಯರನ್ನು … Continued

5369 ಹುದ್ದೆಗಳಿಗೆ ನೇಮಕಾತಿ: 10ನೇ ತರಗತಿ, 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಸಿಬ್ಬಂದಿ ನೇಮಕಾತಿ ಆಯೋಗವು ಸೆಲೆಕ್ಷನ್‌ ಪೋಸ್ಟ್‌ ಫೇಸ್‌ 11 ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ಇಲಾಖೆ / ಸಂಸ್ಥೆ / ಸಚಿವಾಲಯ / ಕಚೇರಿಗಳಲ್ಲಿ ಒಟ್ಟು 5369 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನೇಮಕಾತಿ ಸಂಸ್ಥೆ : ಸಿಬ್ಬಂದಿ ನೇಮಕಾತಿ ಆಯೋಗ ಪರೀಕ್ಷೆ ಹೆಸರು … Continued

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ವಿರುದ್ಧದ ಸಾಕ್ಷ್ಯ ಕೈಬಿಟ್ಟು ತೆಪ್ಪಗಿರಲು ನನಗೆ 30 ಕೋಟಿ ರೂ. ಆಫರ್‌-ಆರೋಪಿ ಸ್ವಪ್ನಾ ಸುರೇಶ್ ಆಘಾತಕಾರಿ ಹೇಳಿಕೆ

ತಿರುವನಂತಪುರಂ: ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಸ್ವಪ್ನಾ ಸುರೇಶ್ ಗುರುವಾರ, ಆಡಳಿತಾರೂಢ ಸಿಪಿಐ(ಎಂ) ಪಕ್ಷವು ಈ ಪ್ರಕರಣವನ್ನು ಇತ್ಯರ್ಥಪಡಿಸಲು ಮಧ್ಯವರ್ತಿ ಮೂಲಕ 30 ಕೋಟಿ ರೂ. ಆಫರ್‌ ನೀಡಿತ್ತು ಎಂದು ಆರೋಪಿಸಿದ್ದಾಳೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಕಳುಹಿಸಿದ್ದ ವಿಜಯ್ ಪಿಳ್ಳೈ ಎಂಬ ಮಧ್ಯವರ್ತಿಯು ಹಣದ ಬದಲಿಗೆ ಮುಖ್ಯಮಂತ್ರಿ ಪಿಣರಾಯಿ … Continued

ದೆಹಲಿ ಮದ್ಯ ನೀತಿ ಪ್ರಕರಣ: ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ ಇ.ಡಿ.

ನವದೆಹಲಿ : ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅವರನ್ನು ಬಂಧಿಸಿದ ನಂತರ ಸಿಸೋಡಿಯಾ ಈಗ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅವರನ್ನು ಬಂಧಿಸುವ ಮೊದಲು, ಇ.ಡಿ. ಅವರನ್ನು ತಿಹಾರ್ ಜೈಲಿನೊಳಗೆ … Continued