ವೈದ್ಯಕೀಯ ತುರ್ತು ಸ್ಥಿತಿ ಕಾರಣಕ್ಕೆ ಕರಾಚಿಯಲ್ಲಿ ಲ್ಯಾಂಡ್‌ ಆದ ದೆಹಲಿ-ದೋಹಾ ಇಂಡಿಗೋ ವಿಮಾನ : ಪ್ರಯಾಣಿಕ ಸಾವು

ನವದೆಹಲಿ: ದೆಹಲಿ-ದೋಹಾ ಇಂಡಿಗೋ ವಿಮಾನವು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಅಸ್ವಸ್ಥ ಪ್ರಯಾಣಿಕರಿಗೆ ವೈದ್ಯಕೀಯ ನೆರವಿಗಾಗಿ ತುರ್ತು ಲ್ಯಾಂಡಿಂಗ್ ಮಾಡಿತು. ಆದರೆ ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಪ್ರಯಾಣಿಕ ಕರೆತರುವಾಗಲೇ ಮೃತಪಟ್ಟಿದ್ದ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಭಾನುವಾರ ರಾತ್ರಿ 10:17ಕ್ಕೆ ದೋಹಾಗೆ ತೆರಳುವ ವಿಮಾನ ದೆಹಲಿಯಿಂದ ಹೊರಟಿತ್ತು. ದೆಹಲಿಯಿಂದ ದೋಹಾಗೆ ಕಾರ್ಯಾಚರಿಸುತ್ತಿರುವ … Continued

ನ್ಯೂಜಿಲೆಂಡ್ ಶ್ರೀಲಂಕಾವನ್ನು ಸೋಲಿಸಿದ ನಂತ ಸತತ 2ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದ ಭಾರತ

ನವದೆಹಲಿ: ವಾರದ ಸಸ್ಪೆನ್ಸ್ ಸೋಮವಾರ, ಮಾರ್ಚ್ 13 ರಂದು ಕೊನೆಗೊಂಡಿತು. ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಅಂತ್ಯಗೊಳ್ಳುವ ಮೊದಲೇ ಭಾರತ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಳಿಸಿತು. ಸೋಮವಾರ ನಡೆದ ನ್ಯೂಜಿಲೆಂಡ್‌ನಲ್ಲಿ ನಡೆದ 2-ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಮವಾರ ಶ್ರೀಲಂಕಾ ಸೋಲನುಭವಿಸಿದ ನಂತರ ಭಾರತ … Continued

ಆಸ್ಕರ್ 2023 : ಭಾರತದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರ, ನಾಟು ನಾಟು ಹಾಡಿಗೆ ಒಲಿದ ಆಸ್ಕರ್ ಪ್ರಶಸ್ತಿ

ಲಾಸ್‌ ಎಂಜಲೀಸ್‌: ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್ ಎಂಬ ಚಲನಚಿತ್ರವು ಅತ್ಯುತ್ತಮ ಚಿತ್ರ ಎಂದು 95ನೇ ಆಸ್ಕರ್‌ (ಅಕಾಡೆಮಿ) ಪ್ರಶಸ್ತಿ ಪಡೆಯಿತು.ಹಾಗೂ ಬಹುತೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಭಾನುವಾರ ಸಂಜೆ ನಡೆದ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿತ್ತು. ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ಕಿರುಚಿತ್ರ, ‘ದಿ … Continued

ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಮಹಾರಾಷ್ಟ್ರ, ಮಧ್ಯಪ್ರದೇಶದ 5 ಸ್ಥಳಗಳಲ್ಲಿ ಎನ್‌ಐಎ ಶೋಧ

ನವದೆಹಲಿ: ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ನಡೆಸಿದ ಪಿತೂರಿಯನ್ನು ಬಯಲಿಗೆಳೆಯುವ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಮಧ್ಯಪ್ರದೇಶದ ಸಿಯೋನಿಯಲ್ಲಿ ನಾಲ್ಕು ಸ್ಥಳಗಳು ಮತ್ತು ಮಹಾರಾಷ್ಟ್ರದ ಪುಣೆಯ ಸ್ಥಳವನ್ನು ಶೋಧಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಎನ್‌ಐಎ ತಂಡಗಳು ಪುಣೆಯಲ್ಲಿರುವ ತಲ್ಹಾ ಖಾನ್ ಮತ್ತು ಸಿಯೋನಿಯಲ್ಲಿರುವ ಅಕ್ರಮ್ … Continued

ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌..: ಆಂಧ್ರದ ಮಾಜಿ ಸಿಎಂ ಕಿರಣಕುಮಾರ ರೆಡ್ಡಿ ಕಾಂಗ್ರೆಸ್‌ಗೆ ರಾಜೀನಾಮೆ

ಹೈದರಾಬಾದ್‌: ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿ ಕಿಣಕುಮಾರ ರೆಡ್ಡಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಕಿರಣಕುಮಾರ ರೆಡ್ಡಿ ಅವರು, “ದಯವಿಟ್ಟು ಈ ಪತ್ರವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ಪತ್ರವಾಗಿ ಸ್ವೀಕರಿಸಿ ಎಂದು ಬರೆದಿದ್ದಾರೆ. ಆಂಧ್ರದ ಮಾಜಿ ಮುಖ್ಯಮಂತ್ರಿ ಕೂಡ ರಾಹುಲ್ … Continued

ಪ್ರಧಾನಿ ಮೋದಿ ಭದ್ರತಾ ಲೋಪ: ಪಂಜಾಬ್ ಸರ್ಕಾರದಿಂದ ಕ್ರಮ ಕೈಗೊಂಡ ವರದಿ ಕೇಳಿದ ಕೇಂದ್ರ

ನವದೆಹಲಿ: 2022ರ ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಉಲ್ಲಂಘನೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮದ ಕುರಿತು ಕೇಂದ್ರವು ಪಂಜಾಬ್ ಸರ್ಕಾರದಿಂದ ಕೇಂದ್ರವು ವರದಿಯನ್ನು ಕೇಳಿದೆ. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಪಂಜಾಬ್‌ನಲ್ಲಿ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ಲೋಪವನ್ನು ಕಂಡುಹಿಡಿದಿದೆ. ಈ ವರದಿಯ ಆಧಾರದ … Continued

ತೆಲಂಗಾಣ ಸಿಎಂ ಕೆಸಿಆರ್‌ ಆಸ್ಪತ್ರೆಗೆ ದಾಖಲು

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು. ಇಂದು ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆ ವೇಳೆ ಹೊಟ್ಟೆಯಲ್ಲಿ ಸಣ್ಣ ಹುಣ್ಣು ಇರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆ ಭಾನುವಾರ ತಿಳಿಸಿದೆ. ಮುಖ್ಯಮಂತ್ರಿಯಾಗಿ ಜನಪ್ರಿಯವಾಗಿರುವ ಕೆಸಿಆರ್ ಅವರು ಭಾನುವಾರ ಬೆಳಿಗ್ಗೆ ಹೊಟ್ಟೆಯ ತೊಂದರೆ ಕಾಣಿಸಿಕೊಂಡ ನಂತರ ಅವರನ್ನು ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ (ಎಐಜಿ) ಗೆ ಕರೆದೊಯ್ಯಲಾಯಿತು. ಮುಖ್ಯಮಂತ್ರಿ … Continued

ಬೆಂಗಳೂರು-ಮೈಸೂರು 10 ಪಥಗಳ ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿದ ಪ್ರಧಾನಿ ಮೋದಿ, ಮಂಡ್ಯದಲ್ಲಿ ಹೂಗಳ ಸುರಿಮಳೆಗೈದು ಭರ್ಜರಿ ಸ್ವಾಗತ

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕಕ್ಕೆ ಮತ್ತೊಂದು ಭೇಟಿ ನೀಡಿದ್ದು, ಮಂಡ್ಯದಲ್ಲಿ 10 ಪಥಗಳ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟಿಸಿದರು. ಜೊತೆಗೆ, ಮಂಡ್ಯದಲ್ಲಿ ಹಲವಾರು ಪ್ರಮುಖ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಒಟ್ಟು 8,480 ಕೋಟಿ ರೂಪಾಯಿ ವೆಚ್ಚದಲ್ಲಿ 118 ಕಿಮೀ ಉದ್ದದ ಬೆಂಗಳೂರು-ಮೈಸೂರು ರಸ್ತೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ … Continued

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಕೇಂದ್ರ ಸರ್ಕಾರದ ವಿರೋಧ

ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲಿಂಗಕಾಮಿ ದಂಪತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಕೇಂದ್ರ ಸರ್ಕಾರವು ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧವನ್ನು ಹೊಂದುವುದನ್ನು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ, ಮದುವೆ. ಜೈವಿಕ ಪುರುಷ ಮತ್ತು ಜೈವಿಕ … Continued

ಭಾರತದಲ್ಲಿ ಒಂದೇ ದಿನದಲ್ಲಿ 524 ಕೊರೊನಾ ಪ್ರಕರಣಗಳು ದಾಖಲು: ಇದು 113 ದಿನಗಳಲ್ಲಿ ಅತಿ ಹೆಚ್ಚು

ನವದೆಹಲಿ: ಭಾನುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 113 ದಿನಗಳ ಅಂತರದ ನಂತರ ಭಾರತವು 524 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಈಗ ಸಕ್ರಿಯ ಪ್ರಕರಣಗಳು 3,618 ಕ್ಕೆ ಏರಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸಕ್ರಿಯ ಪ್ರಕರಣಗಳು 3,618 ಕ್ಕೆ ಏರಿದೆ, ಇದು ಒಟ್ಟು ಪ್ರಕರಣಗಳಲ್ಲಿನ 0.01 ಪ್ರತಿಶತವಾಗಿದೆ. ಸಚಿವಾಲಯವು … Continued