27 ವರ್ಷಗಳ ಸೇವೆಯ ನಂತರ ನಾಳೆಯಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ನಿಷ್ಕ್ರಿಯ…!

ವಾಷಿಂಗ್ಟನ್‌ : 27 ವರ್ಷಗಳ ಸೇವೆಯ ನಂತರ ಮೈಕ್ರೋಸಾಫ್ಟ್ ಹಳೆಯ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ನಿವೃತ್ತಿ ಮಾಡಲು ಯೋಜಿಸಿದೆ. ಇದು ಜೂನ್‌ 15 ರಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಇದು ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿದ ಗ್ರಾಫಿಕಲ್ ವೆಬ್ ಬ್ರೌಸರ್‌ಗಳ ಸ್ಥಗಿತಗೊಂಡ ಸರಣಿಯಾಗಿದೆ ಎಂದು Mashable ವರದಿ ಹೇಳಿದೆ. ಮೊದಲು, ಇದನ್ನು ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ … Continued

ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ನೇಮಕಾತಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಮುಂದಿನ ಒಂದೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ ಮಿಷನ್ ಮೋಡ್‌‌ನಲ್ಲಿ 10 ಲಕ್ಷ ನೇಮಕಾತಿಗಳನ್ನು ಮಾಡಲು ಪ್ರಧಾನಿ ನರೇಂದ್ರ ಮೋದಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಒಂದೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ … Continued

ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳ, ಆದರೆ ಜಾಗತಿಕ ಜೀವಿತಾವಧಿ ಸರಾಸರಿಗಿಂತ ಭಾರತದ್ದು ಕಡಿಮೆ

ನವದೆಹಲಿ: 2015-19ರ ಅವಧಿಯಲ್ಲಿ ಭಾರತದ ಜೀವಿತಾವಧಿಯು 69.7 ವರ್ಷಕ್ಕೆ ತಲುಪಿದೆ, ಇದು ಅಂದಾಜು ಜಾಗತಿಕ ಸರಾಸರಿ ಜೀವಿತಾವಧಿ 72.6 ವರ್ಷಗಳಿಗಿಂತ ಕಡಿಮೆಯಾಗಿದೆ. ಜೀವಿತಾವಧಿಗೆ ಎರಡು ವರ್ಷಗಳನ್ನು ಸೇರಿಸಲು ಭಾರತ ಸುಮಾರು ಹತ್ತು ವರ್ಷಗಳನ್ನು ತೆಗೆದುಕೊಂಡಿದೆ. ಈ ಅವಧಿಯಲ್ಲಿ ಒಂದನೇ ವರ್ಷ ಮತ್ತು ಐದನೇ ವಯಸ್ಸಿನಲ್ಲಿ ಜೀವಿತಾವಧಿಯನ್ನು ಅವಲೋಕಿಸಿದರೆ, ಹೆಚ್ಚಿನ ಶಿಶುಗಳು ಮತ್ತು ಐದಕ್ಕಿಂತ ಕಡಿಮೆ ವಯಸ್ಸಿನನವರ … Continued

ಭಾರತದಲ್ಲಿ 6,594 ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ಹಿಂದಿನ ದಿನಕ್ಕಿಂತ 18% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ಮಂಗಳವಾರ 6,594 ಹೊಸ ಪ್ರಕರಣಗಳನ್ನು ವರದಿ ಮಾಡಿದೆ – ಹಿಂದಿನ ದಿನಕ್ಕೆ ಹೋಲಿಸಿದರೆ ಇದು 18% ಕಡಿಮೆ. ನಿನ್ನೆ, ಭಾರತವು 8,084 ಹೊಸ ಪ್ರಕರಣಗಳನ್ನು ವರದಿ ಮಾಡಿತ್ತು; ದೇಶವು 8,000 ಕ್ಕೂ ಹೆಚ್ಚು ಪ್ರಕರಣಗಳನ್ನು ಸತತ ಮೂರು ದಿನ ವರದಿ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, … Continued

ಗಾಳಿಮಳೆ ಸಮಯದಲ್ಲಿ ಮರದ ಕೆಳಗೆ ನಿಲ್ಲಬಾರದು ಯಾಕೆ.?: ಈ ಮರಕ್ಕೆ ಮಿಂಚು ಹೊಡೆದದ್ದು ನೋಡಿದರೆ ತಿಳಿಯುತ್ತದೆ.. ವೀಕ್ಷಿಸಿ

ಮಿಂಚುಗಳ ಅಪಾಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ಗುಡುಗು ಸಹಿತ ಮಳೆಯ ಸಮಯದಲ್ಲಿ ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕು ಎಂದು ಹೇಳುತ್ತಾರೆ. ಮರದ ಕೆಳಗೆ ನಿಲ್ಲಬಾರದು ಯಾಕೆ ಎಂಬುದು ಸಂಪೂರ್ಣ ಅರ್ಥವಾಗಬೇಕಾದರೆ ಈ ವೈರಲ್ ವೀಡಿಯೊವನ್ನು ನೋಡಬೇಕು. ಟ್ವಿಟರ್‌ನಲ್ಲಿ ವಂಡರ್ ಆಫ್ ಸೈನ್ಸ್‌ನಿಂದ ಹಂಚಿಕೊಂಡ ವೀಡಿಯೊ ಕ್ಲಿಪ್‌ ಕಾಂಡದ ಮಧ್ಯದಲ್ಲಿರುವ ಮರಕ್ಕೆ ಮಿಂಚು ಹೊಡೆಯುವುದನ್ನು ತೋರಿಸುತ್ತದೆ. … Continued

ಪ್ರವಾದಿ ವಿವಾದ: ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಭಾರತದ ಮೇಲೆ ಸರಣಿ ಸೈಬರ್ ದಾಳಿ ಆರಂಭಿಸಿದ ಅಂತಾರಾಷ್ಟ್ರೀಯ ಹ್ಯಾಕರ್‌ಗಳು

ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಕುರಿತು ನೀಡಿದ ಇತ್ತೀಚಿನ ಹೇಳಿಕೆಗಳ ನಂತರ, ಮಲೇಷ್ಯಾ ಮೂಲದ ಹ್ಯಾಕ್ಟಿವಿಸ್ಟ್ ಗುಂಪು ಡ್ರ್ಯಾಗನ್‌ಫೋರ್ಸ್ ಭಾರತ ಸರ್ಕಾರದ ವಿರುದ್ಧ ಸರಣಿ ಸೈಬರ್ ದಾಳಿಯನ್ನು ಪ್ರಾರಂಭಿಸಿದೆ. ದೂರದರ್ಶನ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಜ್ಞಾನವಾಪಿ ಮಸೀದಿ ಸಮೀಕ್ಷೆಯ ಕುರಿತು ಪ್ಯಾನೆಲ್ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಶರ್ಮಾ … Continued

ಉತ್ತರ ಪ್ರದೇಶ: ವಿಧಾನ ಪರಿಷತ್ತಿನ ಎಲ್ಲಾ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ

ಲಕ್ನೋ: ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 13 ಮಂದಿಯಲ್ಲಿ ಒಂಬತ್ತು ಮಂದಿ ಬಿಜೆಪಿಯಿಂದ, ನಾಲ್ವರು ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರಾದ ಚೌಧರಿ ಭೂಪೇಂದ್ರ, ದಯಾಶಂಕರ್ ಮಿಶ್ರ ದಯಾಳು, ಜೆಪಿಎಸ್ ರಾಥೋಡ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: 9 ತಾಸುಗಳ ವಿಚಾಋಣೆ ನಂತರ ಮಂಗಳವಾರ ಮತ್ತೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸೂಚಿಸಿದ ಇಡಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ)ದಿಂದ ಸೋಮವಾರ ವಿಚಾರಣೆಗೆ ಒಳಗಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದ ವಿಚಾರಣೆಯು ರಾತ್ರಿ 9 ಗಂಟೆಯ ನಂತರವೂ ಮುಂದುವರೆದಿದ್ದು, ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಅವರು … Continued

ನಮ್ಮ ನಾಯಕರನ್ನು ಕೇಂದ್ರೀಯ ಸಂಸ್ಥೆಗಳು ಕರೆಸಿದಾಗ ಕಾಂಗ್ರೆಸ್ ವಿರೋಧಿಸಲಿಲ್ಲ; ಈಗ ಪ್ರತಿಭಟನೆ ಏಕೆ: ಇದು ಡಬಲ್‌ ಸ್ಟ್ಯಾಂಡರ್ಡ್‌ ರಾಜಕಾರಣ ಎಂದ ಟಿಎಂಸಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿರುವ ದಿನದಂದು ತೃಣಮೂಲ ಕಾಂಗ್ರೆಸ್ ಮುಖವಾಣಿ ‘ಜಾಗೋ ಬಾಂಗ್ಲಾ’ ಕಾಂಗ್ರೆಸ್ ನ ನಡವಳಿಕೆಯನ್ನು ಬೂಟಾಟಿಕೆ ಎಂದು ಹೇಳಿದೆ. ತೃಣಮೂಲ ಮುಖವಾಣಿ ಜಾಗೋ ಬಾಂಗ್ಲಾ ಮುಖಪುಟದ ಮುಖಪುಟದ ಶೀರ್ಷಿಕೆ ‘ರಾಹುಲ್‌ಗೆ ಇಡಿ ಸಮನ್ಸ್, ಕಾಂಗ್ರೆಸ್ ಪ್ರತಿಭಟನೆ, ಸೋನಿಯಾ ಆಸ್ಪತ್ರೆಗೆ ಬಂದರು ಎಂದು ಹೇಳಿದೆ. ಕೋವಿಡ್-19 … Continued

ದೆಹಲಿಯಲ್ಲಿ ಪ್ರತಿಭಟನೆ ವೇಳೆ ಪೊಲೀಸರು ತಳ್ಳಿದ್ದರಿಂದ ಮಾಜಿ ಸಚಿವ ಚಿದಂಬರಂ ಪಕ್ಕೆಲುಬು ಮುರಿದಿದೆ ಎಂದ ಕಾಂಗ್ರೆಸ್

ನವದೆಹಲಿ: ಇಂದು, ಸೋಮವಾರ ದೆಹಲಿಯಲ್ಲಿ ನಡೆದ ಪಕ್ಷದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ತಳ್ಳಿದ ಕಾರಣ ಕಾಂಗ್ರೆಸ್ ನಾಯಕ ಚಿದಂಬರಂ ಅವರ ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) … Continued