ಕ್ರೌರ್ಯ ಮತ್ತು ಅಹಂಕಾರದ ಸಂದೇಶ:ಲಖಿಂಪುರ್ ವಿಡಿಯೋ ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ, ನ್ಯಾಯಕ್ಕಾಗಿ ಒತ್ತಾಯ

ನವದೆಹಲಿ: ಹಲವಾರು ವಿರೋಧ ಪಕ್ಷದ ನಾಯಕರ ನಂತರ, ಈಗ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಲಖಿಂಪುರ್ ಖೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಕಾರನ್ನು ಓಡಿಸುವ ಹೊಸ ವೈರಲ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಹಂಚಿಕೊಂಡ ವರುಣ್ ಗಾಂಧಿ, “ವಿಡಿಯೊ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಚೆಲ್ಲಿದ ರೈತರ ಮುಗ್ಧ … Continued

ಭಾರತದಲ್ಲಿ 2.46 ಲಕ್ಷಕ್ಕೆ ಇಳಿಕೆಯಾದ ಸಕ್ರಿಯ ಪ್ರಕರಣಗಳು, 200 ದಿನಗಳಲ್ಲಿ ಕಡಿಮೆ

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 22,431 ಹೊಸ ಕೋವಿಡ್ -19 ಪ್ರಕರಣಗಳನ್ನು ಗುರುವಾರ ದಾಖಲಿಸಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 3,38,94,312 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಡೇಟಾ ತೋರಿಸಿದೆ. ಇದೇ ಸಮಯದಲ್ಲಿ ದೇಶವು 318 ಸಾವುಗಳನ್ನು ವರದಿ ಮಾಡಿದೆ, ಇದು … Continued

ಲಖಿಂಪುರ್ ಖೇರಿ: ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ ರಾಹುಲ್, ಪ್ರಿಯಾಂಕಾ

ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಸಂಜೆ ಲಖಿಂಪುರ್ ಖೇರಿ ತಲುಪಿದರು ಮತ್ತು ಭಾನುವಾರ ಘರ್ಷಣೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ ಮಾಡಿದರು. ರಾಹುಲ್ ಗಾಂಧಿ ಸಂಜೆ ಸೀತಾಪುರಕ್ಕೆ ಬಂದರು, ಅಲ್ಲಿ ಅವರ ಸಹೋದರಿ ಪ್ರಿಯಾಂಕಾ ಲಖಿಂಪುರ್ ಖೇರಿಗೆ ಭೇಟಿ ನೀಡುವ ನಿಷೇಧದ ಆದೇಶಗಳನ್ನು ಧಿಕ್ಕರಿಸಿ ಬಂಧನದಲ್ಲಿದ್ದರು. ಪ್ರಿಯಾಂಕಾ … Continued

ಲಖೀಂಪುರ್ ಹಿಂಸಾಚಾರ :ಇಂದು ಸುಪ್ರೀಂಕೋರ್ಟಿನಲ್ಲಿ ವಿಚಾರಣೆ

ನವದೆಹಲಿ: ಲಖೀಂಪುರ್ ಖೇರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಉತ್ತರ ಪ್ರದೇಶದ ಲಖೀಂಪುರ್ – ಖೇರ್ ಹಿಂಸಾಚಾರ ಘಟನೆ ಸಂಬಂಧ ಸುಪ್ರೀಂಕೋರ್ಟ್ ಬುಧವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಲಖೀಂಪುರ್ ಖೇರ್ ನಲ್ಲಿ ಭಾನುವಾರ ಸಂಭವಿಸಿದ ಹಿಂಸಾಚಾರದಲ್ಲಿ ನಾಲ್ವರು … Continued

ಕ್ರೂಸ್‌ ಹಡಗು ಡ್ರಗ್ಸ್ ಪ್ರಕರಣ: ಇನ್ನೂ ನಾಲ್ವರನ್ನು ಎನ್‌ಸಿಬಿ ವಶಕ್ಕೆ ನೀಡಿದ ಮುಂಬೈ ಕೋರ್ಟ್‌

ಮುಂಬೈ: ಕ್ರೂಸ್‌ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇನ್ನೂ ನಾಲ್ವರನ್ನು ಮುಂಬೈನ ನ್ಯಾಯಾಲಯವೊಂದು ಅಕ್ಟೋಬರ್ 14ರ ವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ. ಆ ಮೂಲಕ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 16 ಮಂದಿಯನ್ನು ಎನ್‌ಸಿಬಿ ವಶಕ್ಕೆ ನೀಡಲಾಗಿದೆ. ಗೋಪಾಲ್ ಆನಂದ್, ಸಮೀರ್ ಸೈಗಲ್, ಮಾನವ್ ಸಿಂಘಾಲ್ ಮತ್ತು … Continued

ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ..!

ಇಸ್ರೇಲ್​ನ ಜೆರುಸಲೇಂನಲ್ಲಿ ಎರಡು ಸಾವಿರ ವರ್ಷಗಳಗಿಂತಲೂ ಹಿಂದಿನ ಐಷಾರಾಮಿ ಟಾಯ್ಲೆಟ್ ಒಂದು ಪತ್ತೆಯಾಗಿದೆ…! ಇಸ್ರೇಲ್​ನ ಹಳೆಯ ನಗರವೊಂದರಲ್ಲಿ ಸುಮಾರು 2,700 ವರ್ಷಗಳ ಹಿಂದಿನ ಕಲ್ಲಿನ ಅಪರೂಪದ ಟಾಯ್ಲೆಟ್ ಪತ್ತೆಯಾಗಿದ್ದು, ಕುಳಿತುಕೊಳ್ಳಲು ಆರಾಮದಾಯಕವಾಗುವ ರೀತಿಯಲ್ಲಿ ಕಲ್ಲನ್ನು ವಿನ್ಯಾಸಗೊಳಿಸಲಾಗಿದೆ. ಇಸ್ರೇಲಿ ಪುರಾತನ ಪ್ರಾಧಿಕಾರವು ನಯವಾದ, ಕೆತ್ತಿದ ಸುಣ್ಣದ ಕಲ್ಲಿನ ಶೌಚಾಲಯ ಪತ್ತೆಯಾಗಿದೆ ಎಂದು ತಿಳಿಸಿದೆ. ವಿಶಾಲವಾದ ಮಹಲಿನಲ್ಲಿ ಇದು … Continued

4,445 ಕೋಟಿ ರೂ.ಗಳ ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ನವದೆಹಲಿ: ದೇಶದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 4,445 ಕೋಟಿ ರೂಪಾಯಿ ವೆಚ್ಚದಲ್ಲಿ ಏಳು ಜವಳಿ ಪಾರ್ಕ್ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪಿಎಂ ಮೇಘಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ಸ್ ರೀಜನ್ ಅಂಡ್ ಅಪಾರೆಲ್ಸ್ – ಪಿಎಂ ಮಿತ್ರ ಪಾರ್ಕ್ ದೇಶದ ವಿವಿಧ ಕಡೆ ಆರಂಭಿಸಲು ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದೆ. … Continued

5 ವರ್ಷದಲ್ಲಿ 75 ಯುವತಿಯರ ಜೊತೆ ಈತನ ಮದುವೆ..!..ಈತ ನೀಡಿದ ಇನ್ನಷ್ಟು ಮಾಹಿತಿಗೆ ಪೊಲೀಸರೇ ಶಾಕ್..!!

ನವದೆಹಲಿ: ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಯುವಕ ಬಹಿರಂಗಪಡಿಸಿದ ಮಾಹಿತಿಗೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಪೊಲೀಸ್ ತಂಡವೇ ಹೌಹಾರಿದೆ…! ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಭೇದಿಸಲಾದ ವೇಶ್ಯಾವಾಟಿಕೆ ದಂಧೆಯ ಕುರಿತು ಶಾಕಿಂಗ್​ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಮುನೀರ್​ ಇಲ್ಲಿವರೆಗೂ 75 ಮದುವೆ ಆಗಿರುವ ವಿಚಾರ ಬಯಲಾಗಿದೆ. ಈ ಆರೋಪಿ ಮುನೀರ್​ ಬಾಂಗ್ಲದೇಶ ಮೂಲದವನಂತೆ. … Continued

ಭಾರತದಲ್ಲಿ ಇಂಧನ ಬಿಕ್ಕಟ್ಟು ತೀವ್ರ : ಕೇವಲ 4 ದಿನಗಳ ಕಲ್ಲಿದ್ದಲು ದಾಸ್ತಾನು ಮಾತ್ರ ಲಭ್ಯ..!

ನವದೆಹಲಿ: ಭಾರತದ ಕಲ್ಲಿದ್ದಲು (Coal) ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯದಿಂದ ವಿದ್ಯುತ್‌ ಕೊರತೆ (Electric Shortage) ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಇದು ವಿಶ್ವದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಪ್ರಮುಖ ಆರ್ಥಿಕತೆಯನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನೂ ಉಂಟು ಮಾಡುತ್ತಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಅಂತ್ಯದಲ್ಲಿ ಸರಾಸರಿ ನಾಲ್ಕು ದಿನಗಳ ಇಂಧನದ ದಾಸ್ತಾನು (Fuel Shortage) … Continued

ಲಖಿಂಪುರ ಹಿಂಸಾಚಾರ ಪ್ರಕರಣ; ಘಟನಾ ಸ್ಥಳಕ್ಕೆ ಭೇಟಿ ನೀಡಲು ರಾಹುಲ್, ಪ್ರಿಯಾಂಕಾಗೆ ಕೊನೆಗೂ ಅನುಮತಿ

ನವದೆಹಲಿ: ಲಖನೌ ವಿಮಾನ ನಿಲ್ದಾಣದಲ್ಲಿ ನಡೆದ ಹೈಡ್ರಾಮಾ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೀತಾಪುರಕ್ಕೆ ತೆರಳುತ್ತಿದ್ದಾರೆ, ಜೊತೆಗೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಸಹ ತೆರಳುತ್ತಿದ್ದಾರೆ. ರಾಹುಲ್‌ ಗಾಂಧಿ ಹಿಂಸಾಚಾರದಲ್ಲಿ ಮೃತಪಟ್ಟ ದುಃಖದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡಲು ಅವರು ಖೇರಿಗೆ ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶ … Continued