ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ

ನವದೆಹಲಿ: ಯುಕ್ರೇನ್‌ನ ಯುದ್ಧಪೀಡಿತ ದೇಶದಲ್ಲಿ ಭದ್ರತಾ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ಅಲ್ಲಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಉಕ್ರೇನಿಯನ್ ರಾಜಧಾನಿ ಕೀವ್ ಮತ್ತು ಇತರ ಹಲವಾರು ಪ್ರಮುಖ ನಗರಗಳ ಮೇಲೆ ರಷ್ಯಾದ ದಾಳಿಗಳು ಹೆಚ್ಚುತ್ತಿರುವ ಮಧ್ಯೆ ಈ ನಿರ್ಧಾರವು ಬಂದಿದೆ. ದೇಶದ ಪಶ್ಚಿಮ ಭಾಗಗಳಲ್ಲಿನ ದಾಳಿಗಳು ಸೇರಿದಂತೆ ಉಕ್ರೇನ್‌ನಲ್ಲಿ … Continued

ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ

ಇಂಫಾಲ: ಮಣಿಪುರದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿರುವ ಬಿಜೆಪಿಗೆ ಜೆಡಿಯು ಬೆಂಬಲ ಘೋಷಿಸಿದೆ. ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಜೊತೆ ಬಿಜೆಪಿ ಮೈತ್ರಿಯನ್ನು ಮುಂದುವರೆಸಲಿದೆ ಎಂದು ಹಾಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ. ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) … Continued

ಭೋಪಾಲ್‌ನಲ್ಲಿ 4 ಶಂಕಿತ ಭಯೋತ್ಪಾದಕರ ಬಂಧನ, ಸ್ಫೋಟಕಗಳು ವಶ

ಭೋಪಾಲ: ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾನುವಾರ ಭೋಪಾಲ್‌ನಲ್ಲಿ ಕೇಂದ್ರ ಏಜೆನ್ಸಿಗಳು ಮತ್ತು ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಭದ್ರತಾ ಕಾರ್ಯಾಚರಣೆಯಲ್ಲಿ ಕನಿಷ್ಠ 4 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಂಡು ಕಾರ್ಯಾಚರಣೆ ನಡೆಸಲಾಗಿದ್ದು, ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಭೋಪಾಲ್‌ನ ಐಶ್‌ಬಾಗ್ ಪೊಲೀಸ್ ಠಾಣೆಯಿಂದ 200 ಮೀಟರ್ ದೂರದಲ್ಲಿರುವ ಫಾತಿಮಾ … Continued

800 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತಂದ ಮಹಿಳಾ ಪೈಲಟ್‌

ಕೊಲ್ಕತ್ತಾ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ’ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಕೋಲ್ಕತ್ತಾದ ಯುವ ಮಹಿಳಾ ಪೈಲೆಟ್ ಮಹಾಶ್ವೇತ ಚಕ್ರವರ್ತಿ ಗಮನ ಸೆಳೆದಿದ್ದು ಉಕ್ರೇನ್‌ನಿಂದ ಸುಮಾರು ೮೦೦ ಭಾರತೀಯರನ್ನು ದೇಶಕ್ಕೆ ಕರೆ ತಂದಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆಯ ವಿಮಾನದ ಪೈಲೆಟ್ ಆಗಿರುವ ೨೪ ವರ್ಷದ ಮಹಾಶ್ವೇತ ಚಕ್ರವರ್ತಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾದ ಮುಖ್ಯಸ್ಥೆ … Continued

ಶಾಲೆಯಲ್ಲಿ ಇನ್ನೂ ಕಸ ಗುಡಿಸುವ ಕೆಲಸ ಮಾಡುತ್ತಿರುವ ಪಂಜಾಬ್ ಸಿಎಂ ಚನ್ನಿ ಸೋಲಿಸಿದ ಎಎಪಿ ಶಾಸಕರ ತಾಯಿ..!

ಬರ್ನಾಲಾ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಭ್‌ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ತಮ್ಮ ಮಗ ಗೆದ್ದ ನಂತರವೂ ಶನಿವಾರ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ. ಭಾದೌರ್ ಕ್ಷೇತ್ರದಿಂದ ಚನ್ನಿ ಅವರನ್ನು 37,550 … Continued

ಭಾರತದ ಗಡಿಯಲ್ಲಿ ಹೆಪ್ಪುಗಟ್ಟಿದ ಹಿಮದಲ್ಲಿ ಕಬಡ್ಡಿ ಆಡಿದ ಸೈನಿಕರು: ವೀಡಿಯೋ ವೈರಲ್

ಶಿಮ್ಲಾ: ಇಂಡೋ-ಟಿಬೆಟಿಯನ್ ಗಡಿಯಲ್ಲಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳ ಬಾಋತದ ಗಡಿಯಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆ ಧರಿಸಿ ಕಬಡ್ಡಿ ಆಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ … Continued

ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೊ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧೆ

ಮಾಜಿ ಕೇಂದ್ರ ಸಚಿವ ಮತ್ತು ನಟ ಶತ್ರುಘ್ನ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್ ಟಿಕೆಟ್‌ನಲ್ಲಿ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. “ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ನಟ ಶತ್ರುಘ್ನ ಸಿನ್ಹಾ ಅವರು … Continued

ರಷ್ಯಾ ಗಡಿಯಲ್ಲಿ ಅಮೆರಿಕದ 12 ಸಾವಿರ ಸೈನಿಕರ ನಿಯೋಜನೆ: ವಿಶ್ವ ಯುದ್ಧದ ಭೀತಿ..?

ವಾಷಿಂಗ್ಟನ್: ವ್ಲಾದಿಮಿರ್ ಪುತಿನ್ ಅವರು ಉಕ್ರೇನ್ ವಿರುದ್ಧ ನಡೆಸಿದ ಯುದ್ಧದಲ್ಲಿ ವಿಜಯಿಯಾಗುವುದಿಲ್ಲ ಎಂದು ಪ್ರತಿಪಾದಿಸುತ್ತಲೇ, ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ಸ್ಥಳಾಂತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಶುಕ್ರವಾರ ಹೌಸ್ ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧದ ವಿರುದ್ಧ ಹೋರಾಡುವುದಿಲ್ಲ” ಎಂದು … Continued

ಚೀನಾ ಗಡಿಯಲ್ಲಿ ಅಗತ್ಯವಿರುವ ಸಲಕರಣೆಗಳೊಂದಿಗೆ ಭಾರತ ಬೆಂಬಲಿಸಲು ಮುಂದುವರಿಕೆ: ಅಮೆರಿಕ ಉನ್ನತ ಅಮೆರಿಕ ಅಡ್ಮಿರಲ್

ವಾಷಿಂಗ್ಟನ್: ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತಕ್ಕೆ ಅಗತ್ಯವಿರುವ ಉಪಕರಣಗಳು ಮತ್ತು ಇತರ ವಸ್ತುಗಳ ಬೆಂಬಲವನ್ನು ಅಮೆರಿಕ ಮುಂದುವರಿಸುತ್ತದೆ. ವಾಷಿಂಗ್ಟನ್ ಮತ್ತು ಪ್ರಚಂಡ ಪಾಲುದಾರಿಕೆಯನ್ನು ನವದೆಹಲಿ ಹಂಚಿಕೊಳ್ಳುತ್ತವೆ ಎಂದು ಪ್ರತಿಪಾದಿಸಿದ್ದಾರೆ ಎಂದು ಅಮೆರಿಕದ ಉನ್ನತ ಅಡ್ಮಿರಲ್ ಸಂಸದರಿಗೆ ತಿಳಿಸಿದ್ದಾರೆ, ಈ ವಾರ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಮುಂದೆ ಸಾಕ್ಷ್ಯ ನೀಡುತ್ತಾ, ಅಮೆರಿಕ … Continued

ಕಾಂಗ್ರೆಸ್ ಕಾರ್ಯಕಾರಿಯಲ್ಲಿ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ರಾಜೀನಾಮೆ..?

ನವದೆಹಲಿ: ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಕಾಂಗ್ರೆಸ್ ಅಧಿಕಾರದಿಂದ … Continued