ಮೇಡ್-ಇನ್-ಇಂಡಿಯಾ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಇಂದು ವಾಯುಪಡೆಗೆ ಸೇರ್ಪಡೆ

ನವದೆಹಲಿ: ಭಾರತೀಯ ವಾಯುಪಡೆ(ಐಎಎಫ್)ಗೆ ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ಹೆಲಿಕಾಪ್ಟರ್‌ನ (ಎಲ್‌ಸಿಎಚ್) ಮೊದಲ ಬ್ಯಾಚ್ ಅನ್ನು ಸೋಮವಾರ ಸೇರ್ಪಡೆಗೊಳಿಸಲಿದೆ. ಇದು ಕ್ಷಿಪಣಿಗಳನ್ನು ಮತ್ತು ಇತರ ಆಯುಧಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ. . LCH, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ, ಪ್ರಾಥಮಿಕವಾಗಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು … Continued

ಹಾವಿನಿಂದಾಗಿ ಕೆಲಕಾಲ ಸ್ಥಗಿತಗೊಂಡ ಭಾರತ -ದಕ್ಷಿಣ ಆಫ್ರಿಕಾ ನಡುವಿನ ಎರಡನೇ 2ನೇ ಟಿ 20 ಪಂದ್ಯ… ವೀಕ್ಷಿಸಿ

ಗುವಾಹತಿಯಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾನುವಾರ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಬ್ಯಾಟ್‌ ಮಾಡುತ್ತಿರುವಾಗ ಬರ್ಸಾಪರಾ ಕ್ರೀಡಾಂಗಣದಲ್ಲಿ ಹಾವು ಕಂಡುಬಂದಿದೆ. ಏಳನೇ ಓವರ್‌ನ ನಂತರ ಈ ಘಟನೆ ಸಂಭವಿಸಿದೆ ಮತ್ತು ಮೈದಾನದ ಸಿಬ್ಬಂದಿ ಹಾವನ್ನು ಮೈದಾನದಿಂದ ಹೊರಗೆ ಕೊಂಡೊಯ್ದರು, ಪ್ರವಾಸಿಗರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ತಂಡದ … Continued

ದೂರವಾಣಿ ಕರೆಗಳಿಗೆ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಉತ್ತರಿಸಿ: ಅಧಿಕಾರಿಗಳಿಗೆ ಮಹಾರಾಷ್ಟ್ರ ಸರ್ಕಾರದ ಸೂಚನೆ

ಮುಂಬೈ: ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಬಳಸುವುದನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರ ಶನಿವಾರ ಸರ್ಕಾರಿ ನಿಯಮ  (ಜಿಆರ್) ತಂದಿದೆ. ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಜಿಆರ್‌ನಲ್ಲಿ ಅಧಿಕಾರಿಗಳು ತಮ್ಮನ್ನು ಭೇಟಿಯಾಗಲು ಬರುವ ಜನರಲ್ಲಿ ‘ವಂದೇ … Continued

ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಅವರನ್ನು ಭಾನುವಾರ ಗುರುಗ್ರಾಮದ  ಮೇದಾಂತ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 82 ವರ್ಷದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ … Continued

ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿ ಪೊಲೀಸ್ ವಶದಿಂದ ಪರಾರಿ

ಚಂಡೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದಾನೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಶ್ನೋಯಿಯ ಬಂಟನಾಗಿರುವ ದೀಪಕ್ ಟಿನು ಎಂಬಾತ ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ಪೊಲೀಸರ ವಶದಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಮನ್ಸಾ ಪೊಲೀಸರು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕನನ್ನು ಹಾಜರಾತಿ ವಾರಂಟ್ … Continued

ಏಕಕಾಲದಲ್ಲಿ 2 ಪದವಿ: ಯುಜಿಸಿಯಿಂದ ಅಧಿಸೂಚನೆ

ನವದೆಹಲಿ: ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳು ಭೌತಿಕ ಕ್ರಮದಲ್ಲಿ ಏಕಕಾಲದಲ್ಲಿ ಎರಡು ಶೈಕ್ಷಣಿಕ ಪದವಿಗಳನ್ನು ಪಡೆಯಲು ಅನುಕೂಲವಾಗುವಂತೆ ತಮ್ಮ ರಚನೆಯಲ್ಲಿ ಶಾಸನಬದ್ಧ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ಶುಕ್ರವಾರ ಸೂಚಿಸಿದೆ. ಯುಜಿಸಿ ಏಪ್ರಿಲ್‌ನಲ್ಲಿ ವಿದ್ಯಾರ್ಥಿಗಳಿಗೆ ಎರಡು ಪೂರ್ಣ ಸಮಯದ ಪದವಿಗಳನ್ನು ಒಟ್ಟಿಗೆ ಮುಂದುವರಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಅನುಮೋದಿಸಿತ್ತು. ಯುಜಿಸಿ ಶುಕ್ರವಾರ ಹೇಳಿಕೆಯಲ್ಲಿ … Continued

ರೈಲ್ವೆ ಇಲಾಖೆಯಲ್ಲಿ 3115 ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನ : ಸಲ್ಲಿಕೆ ಆರಂಭ

ಪೂರ್ವ ರೈಲ್ವೆಯ 3115 ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್‌ 29 ಕೊನೆಯ ದಿನವಾಗಿದೆ. ವಿಭಾಗ-ಪೂರ್ವ ರೈಲ್ವೆ ಅಪ್ರೆಂಟಿಸ್ ನೇಮಕಾತಿ ಅಪ್ರೆಂಟಿಸ್‌ ಹುದ್ದೆಗಳು-3115 ವಯಸ್ಸಿನ ಮಿತಿ -15 ರಿಂದ 24 ವರ್ಷಗಳು ಅರ್ಜಿ ಸಲ್ಲಿಕೆ ಆರಂಭ- 30 ಸೆಪ್ಟೆಂಬರ್ 2022 ಅರ್ಜಿ ಸಲ್ಲಿಕೆ ಕೊನೆ ದಿನಾಂಕ-29 ಅಕ್ಟೋಬರ್ … Continued

ದಸರಾ ಹಬ್ಬಕ್ಕೆ ರೈಲ್ವೆ ನೌಕರರಿಗೆ ಬೋನಸ್: 78 ದಿನಗಳ ವೇತನಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ಭಾರತೀಯ ರೈಲ್ವೇ ನೌಕರರು ದಸರಾ ರಜಾದಿನಗಳು ಪ್ರಾರಂಭವಾಗುವ ಮೊದಲು 2022 ಕ್ಕೆ ಬೋನಸ್ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಶನಿವಾರ, ಅಕ್ಟೋಬರ್ 1 ರಂದು ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ಅನ್ನು ಅನುಮೋದಿಸಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. 2021-22 ಹಣಕಾಸು ವರ್ಷಕ್ಕೆ ಆರ್‌ಪಿಎಫ್/ಆರ್‌ಪಿಎಸ್‌ಎಫ್ … Continued

ಚಲಿಸುವ ರೈಲಿನಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿ: ಯಮರಾಜನಿಗೆ ಸಡ್ಡು ಹೊಡೆದು ಬಾಯಿಯಿಂದ ಉಸಿರು (ಸಿಪಿಆರ್) ನೀಡಿ ಬದುಕಿಸಿದ ಪತ್ನಿ | ವೀಡಿಯೊ ವೈರಲ್‌

ಮಥುರಾ: ಮಥುರಾ ರೈಲ್ವೇ ನಿಲ್ದಾಣದಲ್ಲಿ, ಮಹಿಳೆಯೊಬ್ಬಳು ತನ್ನ ಪತಿಗೆ ಸಿಪಿಆರ್ ನೀಡಿ ಜೀವವನ್ನು ಉಳಿಸಿದ್ದಾಳೆ. ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿತ್ತು. ನಿಲ್ದಾಣದಲ್ಲಿ ರೈಲು ನಿಂತ ತಕ್ಷಣ ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್‌ಗೆ ಕರೆತರಲಾಯಿತು, ಆದರೆ ಅಷ್ಟರೊಳಗೆ ಆತನ ಉಸಿರು ನಿಂತು ಹೋಗಿತ್ತು. ಮಾಹಿತಿ ಪಡೆದ ಆರ್‌ಪಿಎಫ್ ಕಾನ್‌ಸ್ಟೆಬಲ್ ಅಶೋಕ್ ಕುಮಾರ್ ಸ್ಥಳಕ್ಕೆ ಧಾವಿಸಿದರು. ಅವರು ಪ್ರಯಾಣಿಕನ ಹೆಂಡತಿಯನ್ನು ತನ್ನ … Continued

ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್: ವರದಿ

ಇಸ್ಲಾಮಾಬಾದ್: ಮಹಿಳಾ ನ್ಯಾಯಾಧೀಶರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಇಸ್ಲಾಮಾಬಾದ್‌ನ ಮ್ಯಾಜಿಸ್ಟ್ರೇಟ್ ಬಂಧನ ವಾರಂಟ್ ಹೊರಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಝೆಬಾ ಚೌಧರಿ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪಿಟಿಐ ಮುಖ್ಯಸ್ಥರ ವಿರುದ್ಧ ಆಗಸ್ಟ್ … Continued