42 ಲಕ್ಷ ರೂ. ಖರ್ಚು ಮಾಡಿ ಶ್ರೀಕೃಷ್ಣ ಮಂದಿರ ಕಟ್ಟಿದ ಮುಸ್ಲಿಂ ಉದ್ಯಮಿ..!

ರಾಂಚಿ: ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ ಅವರು ಸುಮಾರು 42 ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೀಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದಾರೆ…! ರಣೀಶ್ವರ್ ಬ್ಲಾಕ್‌ನ ಪ್ರಮುಖರೂ ಆಗಿರುವ ಶೇಖ್ ಅವರು ಎಲ್ಲಾ ಧರ್ಮಗಳ ಬಗ್ಗೆ ಗೌರವವನ್ನು ಹೊಂದಿದ್ದಾರೆ ಮತ್ತು ಅವರು ಶ್ರೀಕೃಷ್ಣನಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಮನಾಗಿದ್ದರೂ ದೇವಸ್ಥಾನವನ್ನು ಏಕೆ ಕಟ್ಟಿದ್ದೀರಿ ಎಂಬ ಪ್ರಶ್ನೆಗೆ … Continued

ಬುರ್ಖಾಧಾರಿ ಮಹಿಳೆಯಿಂದ ಕ್ಯಾಬ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ

ಗುರುಗ್ರಾಮ್: ಮತ್ತೊಂದು ಆಘಾತಕಾರಿ ಘಟನೆಯಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಕ್ಯಾಬ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ. ಗುರುಗ್ರಾಮ್‌ನ ರಾಜೀವ್ ಚೌಕ್ ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗುರುತು ಮತ್ತು ಉದ್ದೇಶ ಇನ್ನೂ ತಿಳಿದುಬರಬೇಕಿಗದ್ದು, ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು … Continued

ಕರ್ನಾಟಕದ ಹಿಜಾಬ್ ವಿವಾದ ವಿರೋಧಿಸಿ ಆಗ್ರಾದ ತಾಜ್ ಮಹಲ್ ಪ್ರವೇಶಿಸಿ ಹನುಮಾನ್ ಚಾಲೀಸಾ ಪಠಿಸಲು ಯತ್ನ..!

ಆಗ್ರಾ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ವಿರೋಧಿಸಿ ಬಲಪಂಥೀಯ ಸಂಘಟನೆಗಳ ಸದಸ್ಯರು ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಆವರಣಕ್ಕೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದ್ದಾರೆ. ಆದಾಗ್ಯೂ, ಪ್ರತಿಭಟನಾಕಾರರು ತಾಜ್ ಮಹಲ್ ಪ್ರವೇಶಿಸದಂತೆ ಅವರನ್ನು ಪೊಲೀಸರು ತಡೆದಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಜನರು ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿರ್ಬಂಧಿಸಬೇಕು ಮತ್ತು ‘ಹಿಜಾಬ್’ ಹೆಸರಿನಲ್ಲಿ ತೊಂದರೆ ನೀಡುವವರಿಗೆ ಕಠಿಣ … Continued

ದೇಶದ ಅತಿ ಕಿರಿಯ ಮೇಯರ್‌ ಜೊತೆ ಕೇರಳ ಅತಿ ಕಿರಿಯ ಶಾಸಕನ ಮದುವೆ..!

ಕೋಝಿಕೋಡ್:ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳದ ಅತ್ಯಂತ ಕಿರಿಯ ಶಾಸಕ ಕೆ.ಎಂ. ಸಚಿನ್ ದೇವ್ ಅವರು ಒಂದು ತಿಂಗಳೊಳಗೆ ವಿವಾಹವಾಗಲಿದ್ದಾರೆ. ಫೆ.16ರ ಬುಧವಾರ ದೇವ್ ಅವರ ತಂದೆ ಕೆ.ಎಂ.ನಂದಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕುಟುಂಬಸ್ಥರು ಭೇಟಿಯಾಗಿ ವಿವಾಹದ ಕುರಿತು ಚರ್ಚಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ತಿರುವನಂತಪುರದ ಮೇಯರ್ ಆಗಿರುವ … Continued

ಚಲಿಸುತ್ತಿರುವ ರೈಲಿನ ಸಮೇತ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ನಾಲ್ವರು

ಗುರುಗ್ರಾಮ್ (ದೆಹಲಿ): ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ (ಒಆರ್‌ಬಿ) ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಸರ್ಕಾರಿ ರೈಲ್ವೆ ಪೊಲೀಸ್ (GRP) ಪ್ರಕಾರ, ದೆಹಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್‌ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಗುರುಗ್ರಾಮ್‌ ರೈಲು ನಿಲ್ದಾಣದಿಂದ ಬಸಾಯಿ ರೈಲು … Continued

ಕಾಶ್ಮೀರ ಕಣಿವೆಯಲ್ಲಿ ಜೆಇಎಂ ಭಯೋತ್ಪಾದನಾ ಸಂಘಟನೆಯ 10 ಮಂದಿ ಸ್ಲೀಪರ್‌ ಸೆಲ್‌ ಸದಸ್ಯರ ಬಂಧನ

ಶ್ರೀನಗರ: ಜೈಶ್-ಎ-ಮೊಹಮ್ಮದ್‌ಗೆ (ಜೆಇಎಂ) ಭಾರಿ ಹಿನ್ನಡೆಯಾಗಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ 10 ಮಂದಿ ಕೆಲಸಗಾರರನ್ನು ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಮಂಗಳವಾರ ರಾತ್ರಿ ಬಂಧಿಸಿದೆ. ಎಸ್‌ಐಎ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸಿತು ಮತ್ತು ಜೈಶ್‌ನ 10 ಒಜಿಡಬ್ಲ್ಯು ಗಳನ್ನು ಬಂಧಿಸಿತು. ಬಂಧನಗಳ ಬಗ್ಗೆ ವಿವರಗಳನ್ನು ನೀಡಿದ ಜಮ್ಮು ಮತ್ತು ಕಾಶ್ಮೀರ … Continued

ಎನ್ಎಸ್ಎ ಅಜಿತ್ ದೋವಲ್ ನಿವಾಸ ಪ್ರವೇಶಿಸಲು ಯತ್ನ: ಓರ್ವ ವ್ಯಕ್ತಿಯ ಬಂಧನ

ನವದೆಹಲಿ: ಬುಧವಾರ ಬೆಳಗ್ಗೆ ದೆಹಲಿಯಲ್ಲಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಪ್ರವೇಶಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ದೋವಲ್ ಅವರ ನಿವಾಸದ ಹೊರಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆಯ ನಂತರ, “ಯಾರೋ ತನ್ನ ದೇಹದೊಳಗೆ ಚಿಪ್ ಅನ್ನು ಇಟ್ಟಿದ್ದಾರೆ ಮತ್ತು ತನ್ನನ್ನು ನಿಯಂತ್ರಿಸಲಾಗುತ್ತಿದೆ” ಎಂದು … Continued

ಚೆಂಬೆಳಕಿನ‌ ಕವಿ, ನಾಡೋಜ ಚೆನ್ನವೀರ ಕಣವಿ ಅಸ್ತಂಗತ

ಹುಬ್ಬಳ್ಳಿ: ಚೆಂಬೆಳಕಿನ‌ ಕವಿ ಎಂದೇ ಹೆಸರಾಗಿದ್ದ ನಾಡೋಜ ಚೆನ್ನವೀರ ಕಣವಿ(93) ಅಸ್ತಂಗತರಾಗಿದ್ದಾರೆ. ಅನಾರೋಗ್ಯದಿಂದ ದಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ನಾಡೋಜ ಚೆನ್ನವೀರ ಕಣವಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿತ್ತು. ಉಸಿರಾಟ ಸಮಸ್ಯೆಯಿಂದ ಸರಿಯಾಗಿ ತಿಂಗಳು ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ … Continued

ಖ್ಯಾತ ಸಂಗೀತ ನಿರ್ದೇಶ ಬಪ್ಪಿ ಲಹರಿ ನಿಧನ

ಮುಂಬೈ: ಗಾಯಕ- ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ಅವರು ಮಂಗಳವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷವಾಗಿತ್ತು. ಅವರು ಮಂಗಳವಾರ ರಾತ್ರಿ 11.45ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹಿರಿಯ ಗಾಯಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು, ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ … Continued

ಕಿರುರಸ್ತೆಯಲ್ಲಿ ಇಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರಾದ ಸಿಂಹಿಣಿ, ಮುಂದೇನಾಯ್ತು..? ವೀಕ್ಷಿಸಿ

ರಸ್ತೆ ಮಧ್ಯೆ ಸಿಂಹಿಣಿ ಎದುರಾದರೆ ಏನು ಮಾಡುತ್ತೇವೆ? ಸಹಜವಾಗಿ, ಆಘಾತಕ್ಕೊಳಗಾಗುತ್ತೇವೆ ಮತ್ತು ಭಯಭೀತರಾಗುತ್ತೇವೆ, ನಮ್ಮ ಜೀವನದ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ. ಗುಜರಾತ್‌ನಲ್ಲಿ ಸಿಂಹಿಣಿಯೊಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಎದುರಿಗೆ ಥಟ್ಟನೆ ಕಾಣಿಸಿಕೊಂಡಿದೆ. ಟ್ವಿಟರ್‌ನಲ್ಲಿ ಕಂಡುಬಂದ ವಿಡಿಯೊದಲ್ಲಿ, ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಕಡೆಗೆ ಸಿಂಹಿಣಿಯೊಂದು ನಡೆದುಕೊಂಡು ಬರುತ್ತಿದನ್ನು ಕಾಣಬಹುದು. ಸಿಂಹಿಣಿಯು ಅವರನ್ನು ಸಮೀಪಿಸುತ್ತಿದ್ದಂತೆ, ಪಿಲಿಯನ್ ರೈಡರ್, ಭಯಭೀತರಾಗುವುದು ಮತ್ತು … Continued