ಭಾರತದಲ್ಲೇ ಅತಿ ಹೆಚ್ಚು ಭಾಷೆ ಮಾತನಾಡುವವರು ಬೆಂಗಳೂರಿನಲ್ಲಿದ್ದಾರೆ..!: ಇಲ್ಲಿ ಜನ ಎಷ್ಟು ಭಾಷೆ ಮಾತಾಡ್ತಾರೆ ಗೊತ್ತಾ..?

ಬೆಂಗಳೂರು: ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ  ದೇಶದಲ್ಲಿಯೇ ಅತಿ ಹೆಚ್ಚು  ಹೆಚ್ಚು ಭಾಷೆಗಳನ್ನು ಮಾತನಾಡುತ್ತಾರೆ. 2011 ರ ಜನಗಣತಿಯ ಇತ್ತೀಚಿನ ವಿಶ್ಲೇಷಣೆಯಲ್ಲಿ ಇದು ಮುಂಚೂಣಿಗೆ ಬಂದಿದೆ. 2011 ರ ಜನಗಣತಿಯ ಈ ವಿಶ್ಲೇಷಣೆಯನ್ನು ಇಬ್ಬರು ಶಿಕ್ಷಣತಜ್ಞರು ಮಾಡಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 107 ಭಾಷೆಗಳನ್ನು ಮಾತನಾಡುತ್ತಾರೆ. ಇದರಲ್ಲಿ 22 ನಿಗದಿತ ಮತ್ತು 84 ನಿಗದಿತವಲ್ಲದ … Continued

ಟೋಕಿಯೋ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಗೆ ಚಿನ್ನ, ಮನೋಜ್ ಸರ್ಕಾರಗೆ ಕಂಚು

ಟೋಕಿಯೊ: ಪ್ರಮೋದ್ ಭಗತ್ ಅವರು ಕ್ರೀಡಾಕೂಟದಲ್ಲಿ ಭಾರತದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಚಿನ್ನದ ಪದಕ ವಿಜೇತರಾದರು. 33 ವರ್ಷದ ಅವರು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್ 3 ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದರು, ಪ್ರಮೋದ್ ಭಗತ್ ಪ್ಯಾರಾಲಿಂಪಿಕ್ ಪದಕದ ಮೇಲೆ ದೃಷ್ಟಿ ನೆಟ್ಟಿದ್ದರು. ತಮ್ಮ ಚೊಚ್ಚಲ ಕ್ರೀಡಾಕೂಟದಲ್ಲಿ ಸರ್ವೋಚ್ಚ ಆಡಳಿತ ನಡೆಸುವ ಮೂಲಕ … Continued

60 ರೂಪಾಯಿ ವಿಷಯಕ್ಕೆ 11 ವರ್ಷದ ಗೆಳೆಯನ ಕಲ್ಲು ಹೊಡೆದು ಕೊಂದ 13 ವರ್ಷದ ಬಾಲಕ..!

ಹಮೀರ್ಪುರ (ಉತ್ತರ ಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿಉತ್ತರಪ್ರದೇಶದ ಹಮೀರ್‌ಪುರ್ ಜಿಲ್ಲೆಯಲ್ಲಿ ಕೇವಲ 60 ರೂ.ಗಳಕಾರಣಕ್ಕೆ 11 ವರ್ಷದ ಸ್ನೇಹಿತನನ್ನು ಕಲ್ಲೆಸೆದು ಸಾಯಿಸಿದ 13 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಬಾಲಕನ ಶವವನ್ನು ಬುಧವಾರ ಕಾಡುಪ್ರಾಣಿಗಳು ಛಿದ್ರಗೊಳಿಸಿ 11 ತುಂಡುಗಳಾಗಿ ಮಾಡಿದ ನಂತರ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಬಂಧಿತ ಹುಡುಗ ಸುಮೇರ್ ಪುರ ಪಟ್ಟಣದ ಕಾನ್ಶಿ ರಾಮ್ … Continued

ನ್ಯಾಯಾಲಯದಲ್ಲಿ ಭೌತಿಕ ವಿಚಾರಣೆ: ಸಿಜೆಐಗೆ ಪುಟ್ಟ ಹುಡುಗಿ ಬರೆದ ಪತ್ರ ಆಧರಿಸಿ ಪಿಐಎಲ್ ದಾಖಲಿಸಿಕೊಂಡ ಸುಪ್ರೀಂಕೋರ್ಟ್‌

ನವದೆಹಲಿ:ಕೋರ್ಟ್‌ಗಳಲ್ಲಿ ಭೌತಿಕ ವಿಚಾರಣೆ ನಡೆಸುವ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಸುಪ್ರೀಂಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಪುನಾರಂಭಗೊಂಡಿವೆ, ಹಾಗಿದ್ದರೂ ನ್ಯಾಯಾಲಯಗಳು ಭೌತಿಕ ವಿಚಾರಣೆ ಆರಂಭಿಸುವುದಕ್ಕೆ ಉತ್ಸುಕತೆ ತೋರುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌. ವಿ. ರಮಣ ಅವರಿಗೆ ಪುಟ್ಟ ಹುಡುಗಿಯೊಬ್ಬಳು ಬರೆದ ಪತ್ರವನ್ನು ಆಧರಿಸಿ ಸುಪ್ರೀಂಕೋರ್ಟ್‌ … Continued

ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದ 3, ಒಡಿಶಾದ 1 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ:ಪಶ್ಚಿಮ ಬಂಗಾಳದ ಸಂಸರ್‌ಗಂಜ್, ಜಂಗೀಪುರ ಮತ್ತು ಭಬನಿಪುರ ಮತ್ತು ಒಡಿಶಾದ ಪಿಪ್ಲಿಗೆ ಉಪಚುನಾವಣೆ ಸೆಪ್ಟೆಂಬರ್ 30 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಚುನಾವಣೆ ನಡೆಯಲಿದೆ. ಪ್ರಸ್ತುತ, ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ 31 ಸ್ಥಾನಗಳು ಮತ್ತು ಲೋಕಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಆದಾಗ್ಯೂ, ಪಶ್ಚಿಮ ಬಂಗಾಳ ಸರ್ಕಾರದ ವಿಶೇಷ … Continued

ಬೋರ್‌ವೆಲ್‌ ನಿಂದ ಎಷ್ಟು ಬೇಕೋ ಅಷ್ಟು ನೀರು ಪಂಪ್‌ ಮಾಡಿ ಕುಡಿದ ಆನೆ- ವಿಡಿಯೋ ವೈರಲ್

ನವದೆಹಲಿ: ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು ಮಾತ್ರ ಸೇದಿಕೊಂಡು ಕುಡಿದಿರುವ ಅಪರೂಪದ ವೀಡಿಯೋ ಇದೀಗ ವೈರಲ್ ಆಗಿದೆ. ಜಲ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯವು ಆನೆ ಕೊಳವೆಬಾವಿಯಿಂದ ನೀರು ತೆಗೆಯುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಆನೆ ಕೊಳವೆಬಾವಿಯಿಂದ ನೀರನ್ನು ಪಂಪ್ ಮಾಡುತ್ತದೆ. … Continued

ಭಾರತದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಸುಪ್ರೀಂಕೋರ್ಟ್ ಕೊಲಿಜಿಯಂ

ನವದೆಹಲಿ: ದೇಶದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕೊಲಿಜಿಯಂಶಿಫಾರಸು ಮಾಡಿದೆ. ಕರ್ನಾಟಕದ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ಮಾಡಬೇಕೆಂದು ಕೊಲಿಜಿಯಂ ತನ್ನ ಶಿಫಾರಸಿನಲ್ಲಿ ಹೇಳಿದೆ. 68 ಹೆಸರುಗಳನ್ನು ಆಯ್ಕೆ ಮಾಡುವ ಮೊದಲು 100 ಹೆಸರುಗಳನ್ನು ಕೊಲಿಜಿಯಂ ಪರಿಗಣಿಸಿತ್ತು. 68ರಲ್ಲಿ 44 ವಕೀಲರು ಮತ್ತು 24 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ಇವರಲ್ಲಿ 11 … Continued

ಉತ್ತರ ಪ್ರದೇಶಲ್ಲಿ ಎಸ್‌ಪಿ ಸ್ಥಾನಗಳು ಗಣನೀಯ ಏರಿಕೆ, ಆದರೆ ಗೆಲ್ಲುವುದು ಬಿಜೆಪಿ ಎನ್ನುತ್ತದೆ ಎಬಿಪಿ- ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆ

ಮುಂದಿನ ವರ್ಷದ ಆರಂಭದಲ್ಲಿ ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರದಂತಹ ರಾಜ್ಯಗಳೊಂದಿಗೆ ಉತ್ತರ ಪ್ರದೇಶವೂ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಉತ್ತರ ಪ್ರದೇಶದ ಸ್ಪರ್ಧೆಯು ರಾಜಕೀಯ ಪಕ್ಷಗಳಿಗೆ ಹಿಂದಿ ಹೃದಯಭೂಮಿಯಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಮಹತ್ವದ್ದಾಗಿದೆ. ವಿನಾಶಕಾರಿ ಕೋವಿಡ್ -19 ಎರಡನೇ ಅಲೆಯನ್ನು ರಾಜ್ಯ ಸರ್ಕಾರ ನಿರ್ವಹಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಬಿಜೆಪಿಯ ಉನ್ನತ ಅಧಿಕಾರಿಗಳು ಶ್ಲಾಘಿಸಿದರೆ, ಇದಕ್ಕೆ ವ್ಯತಿರಿಕ್ತವಾಗಿ ಗಂಗೆಯಲ್ಲಿ … Continued

ಟೋಕಿಯೊ ಪ್ಯಾರಾಲಿಂಪಿಕ್ಸ್: ಮಿಶ್ರ 50 ಮೀಟರ್ ಪಿಸ್ತೂಲ್ ನಲ್ಲಿ ಮನೀಶ್ ನರ್ವಾಲಗೆ ಚಿನ್ನ, ಸಿಂಗರಾಜಗೆ ಬೆಳ್ಳಿ, 15ಕ್ಕೇರಿದ ಭಾರತದ ಪದಕ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವು ತನ್ನ ಪದಕದ ಪಟ್ಟಿಯನ್ನು 15ಕ್ಕೆ ಏರಿಸಿದೆ. ಶನಿವಾರ ನಡೆದ ಮಿಶ್ರ 50 ಮೀಟರ್ ಪಿಸ್ತೂಲ್ ಎಸ್‌ಎಚ್ 1 ಶೂಟಿಂಗ್ ಫೈನಲ್‌ನಲ್ಲಿ ಮನೀಶ್ ನರ್ವಾಲ್ ಮತ್ತು ಸಿಂಗ್‌ ರಾಜ್ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದರು. 19 ವರ್ಷದ ಮನೀಶ್ 218.2 ಅಂಕಗಳ ಹೊಸ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ … Continued

ಎಬಿಪಿ – ಸಿ ವೋಟರ್‌-2022ರ ಚುನಾವಣಾ ಪೂರ್ವ ಸಮೀಕ್ಷೆ: ಉತ್ತರಾಖಂಡದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ

ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ 2022 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಬಿಪಿ-ಸಿ ವೋಟರ್‌ ಮತದಾರರ ಸಮೀಕ್ಷೆ ನಡೆಸಿದೆ. 2017 ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಡೆಹ್ರಾಡೂನ್ ಸಿಂಹಾಸನವನ್ನು ವಶಪಡಿಸಿಕೊಂಡಿತ್ತು. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದರಿಂದ ಪರಿಸ್ಥಿತಿ ಮೊದಲಿನಂತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ … Continued