ಪಂಜಾಬ್ ಚುನಾವಣೆ 2022: ಉನ್ನತ ನಾಯಕರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಸಿಎಂ ಬಯಸುತ್ತಾರೆ-ಕಾಂಗ್ರೆಸ್‌ ಹೈಕಮಾಂಡನ್ನೇ ಟೀಕಿಸಿದ ನವಜೋತ್ ಸಿಧು

ಅಮೃತಸರ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ‘ಮೇಲಿನ ಜನರುʼ (ಹೈಕಮಾಂಡ್‌) ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ ಎಂದು ಶುಕ್ರವಾರ ಹೇಳಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸುವ ಎರಡು ದಿನಗಳ ಮೊದಲು ಸಿಧು ಅವರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಈ … Continued

ಮುಂದಿನ ಯುಜಿಸಿ ಅಧ್ಯಕ್ಷರಾಗಿ ಜೆಎನ್‌ಯು ಉಪಕುಲಪತಿ ಎಂ ಜಗದೇಶ್ ಕುಮಾರ್ ನೇಮಕ

ನವದೆಹಲಿ: ಜೆಎನ್‌ಯು ಉಪಕುಲಪತಿ ಪ್ರೊಫೆಸರ್ ಎಂ. ಜಗದೇಶಕುಮಾರ್ ಅವರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿಕ್ಷಣ ಸಚಿವಾಲಯದ ಪ್ರಕಾರ, ಜಗದೇಶಕುಮಾರ್ ಅವರನ್ನು ಐದು ವರ್ಷಗಳ ಅವಧಿಗೆದೇಶದ ಉನ್ನತ ಶಿಕ್ಷಣ ನಿಯಂತ್ರಕ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರವು ಎಂ ಜಗದೇಶ್ ಕುಮಾರ್ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ಐದು ವರ್ಷಗಳ ಅವಧಿಗೆ ಅಥವಾ ಅವರು 65 … Continued

ಒಂದೇ ದಿನದಲ್ಲಿ ಎರಡು ಮೈಲಿಗಲ್ಲು ಸ್ಥಾಪಿಸಿದ ಗೌತಮ್‌ ಅದಾನಿ; ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ -ವಿಶ್ವದ 10ನೇ ಸಿರಿವಂತ

ಮುಂಬೈ: ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 10 ನೇ ಶ್ರೀಮಂತ ವ್ಯಕ್ತಿಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ, ಫೆಬ್ರವರಿ 3 ರಂದು ಫೋರ್ಬ್ಸ್‌ ರಿಯಲ್-ಟೈಮ್ ಬಿಲಿಯನೇರ್ ಲೆಕ್ಕಾಚಾರದ ಪ್ರಕಾರ 90.5 ಬಿಲಿಯನ್ ಅಮೆರಿನ್‌ ಡಾಲರ್‌ ನಿವ್ವಳ ಮೌಲ್ಯವನ್ನು ನೋಂದಾಯಿಸಿದ್ದಾರೆ. ಫೋರ್ಬ್ಸ್, ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ … Continued

ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮಹತ್ವದ ಹೆಜ್ಜೆ: ಸ್ವಯಂ ಸೋಂಕುನಿವಾರಕ ಮಾಸ್ಕ್‌ಅಭಿವೃದ್ಧಿ ಪಡಿಸಿದ ಭಾರತೀಯ ವಿಜ್ಞಾನಿಗಳು..!

ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಭಾರತೀಯ ವಿಜ್ಞಾನಿಗಳ ತಂಡವು ಕೋವಿಡ್‌-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ವಯಂ ಸೋಂಕುನಿವಾರಕ ‘ತಾಮ್ರ-ಆಧಾರಿತ ನ್ಯಾನೊಪಾರ್ಟಿಕಲ್-ಲೇಪಿತ’ ಆಂಟಿವೈರಲ್ ಫೇಸ್ ಮಾಸ್ಕ್ (Copper-based Nanoparticle-coated’ Antiviral Face Mask) ಅಭಿವೃದ್ಧಿಪಡಿಸಿದೆ. ಈ ಮಾಸ್ಕ್‌ ಕೋವಿಡ್‌-19 ವೈರಸ್ ಮತ್ತು ಹಲವಾರು ಇತರ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ.ಇದಲ್ಲದೆ, ಮಾಸ್ಕ್‌ … Continued

ನಾಳೆ ಹೈದರಾಬಾದ್‌ನಲ್ಲಿ ಸಂತ ರಾಮಾನುಜರ 216 ಅಡಿ ಎತ್ತರದ ಸಮಾನತೆ ಪ್ರತಿಮೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಫೆಬ್ರವರಿ 5) ಹೈದರಾಬಾದ್‌ಗೆ ಭೇಟಿ ನೀಡಲಿದ್ದು, 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ ‘ಸಮಾನತೆಯ ಪ್ರತಿಮೆ’ಯನ್ನು ಉದ್ಘಾಟಿಸಲಿದ್ದಾರೆ. ಫೆಬ್ರವರಿ 13ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಮಾನುಜಾಚಾರ್ಯರ 120 ಕೆಜಿ ಚಿನ್ನದ ದೇವಸಂ ಅನಾವರಣಗೊಳಿಸಲಿದ್ದಾರೆ. ಕೆ ಚಂದ್ರಶೇಖರ್ ರಾವ್ ಡೈನಾಮಿಕ್ … Continued

ನೀಟ್‌ ಪಿಜಿ ಪರೀಕ್ಷೆ ಮುಂದೂಡಿದ ಕೇಂದ್ರ ಸರ್ಕಾರ

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ನೀಟ್‌ ಪಿಜಿ 2022 ಪರೀಕ್ಷೆಯನ್ನು (ಸ್ನಾತಕೋತ್ತರ ಪದವಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ – 2022) ಆರರಿಂದ ಎಂಟು ವಾರಗಳ ಕಾಲ ಮುಂದೂಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನೀಟ್‌ ಪಿಜಿ 2021 ಪರೀಕ್ಷೆಯ ಕೌನ್ಸೆಲಿಂಗ್‌ನೊಂದಿಗೆ ನೀಟ್‌ ಪಿಜಿ 2022ರ ಪರೀಕ್ಷಾ ದಿನಾಂಕ ತಳಕು ಹಾಕಿಕೊಂಡಿದ್ದರಿಂದ ಅನೇಕ … Continued

ಸಾವಿಗೆ ಹೆದರುವುದಿಲ್ಲ : ಝಡ್ ಕೆಟಗರಿ ಭದ್ರತೆ ತಿರಸ್ಕರಿಸಿದ ಎಐಎಂಐಎಂ ಮುಖ್ಯಸ್ಥ ಓವೈಸಿ

ನವದೆಹಲಿ: : ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಒಂದು ದಿನದ ನಂತರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಶುಕ್ರವಾರ ತಮಗೆ ನೀಡಿದ್ದ “ಝಡ್ ಕೆಟಗರಿ” ಭದ್ರತೆಯನ್ನು ತಿರಸ್ಕರಿಸಿದ್ದಾರೆ ಮತ್ತು “ಸಾವಿಗೆ ಹೆದರುವುದಿಲ್ಲ” ಎಂದು ಹೇಳಿದ್ದಾರೆ. ಆದಾಗ್ಯೂ, ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಮೊಕದ್ದಮೆ ಹೂಡಬೇಕು ಎಂದು ಅವರು ಒತ್ತಾಯಿಸಿದರು. … Continued

ಹೊರಬಿದ್ದ ಎಐಎಂಐಎಂ ಮುಖ್ಯಸ್ಥ ಓವೈಸಿ ಮೇಲೆ ಗುಂಡಿನ ದಾಳಿ ಸಿಸಿಟಿವಿ ದೃಶ್ಯಾವಳಿಗಳು: ಇಬ್ಬರ ಬಂಧನ

ನವದೆಹಲಿ: ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಗುರುವಾರ ಫೆಬ್ರವರಿ 3 ರಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಹನದ ಮೇಲೆ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ … Continued

ಪುಣೆಯಲ್ಲಿ ಕಟ್ಟಡ ಕುಸಿತ: ಐವರು ಕಾರ್ಮಿಕರು ಸಾವು; ಮೂವರ ಬಂಧನ

ಪುಣೆ: ದುರದೃಷ್ಟಕರ ಘಟನೆಯೊಂದರಲ್ಲಿ ಪುಣೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಐವರು ಮೃತಪಟ್ಟಿದ್ದಾರೆ. ಪುಣೆಯ ಯರವಾಡ ಪ್ರದೇಶದ ಶಾಸ್ತ್ರಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ನೆಲಮಾಳಿಗೆಯ ಕಟ್ಟಡದ ಚಪ್ಪಡಿ ಕುಸಿದು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರು ಮತ್ತು ಗಾಯಗೊಂಡವರೆಲ್ಲರೂ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರು. ನಿರ್ಮಾಣ ಸ್ಥಳದಲ್ಲಿ ಐವರು ಕಾರ್ಮಿಕರ … Continued

ಮರಳು ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್‌ ಸಿಎಂ ಚನ್ನಿ ಸೋದರಳಿಯನ ಬಂಧಿಸಿದ ಇಡಿ

ನವದೆಹಲಿ: ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಡರಾತ್ರಿ ಬಂಧಿಸಿದೆ. ಸುಮಾರು ಎಂಟು ಗಂಟೆಗಳ ವಿಚಾರಣೆಯ ನಂತರ ಪಂಜಾಬ್‌ನಲ್ಲಿ ಇಡಿ ಅಧಿಕಾರಿಗಳು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಭೂಪಿಂದರ್ ಸಿಂಗ್ … Continued