ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಸಿಎಂ ಅಭ್ಯರ್ಥಿ..?

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ತೀವ್ರ ಪ್ರಯತ್ನ ನಡೆಸಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಗಳಿವೆ. ಈ ಕುರಿತು ಸ್ವತಃ ಪ್ರಿಯಾಂಕ ಗಾಂಧಿ ವಾದ್ರಾ ಸುಳಿವು ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಾನು ನಿಮಗೆ ಕಾಣುವುದಿಲ್ಲವೇ ಎಂದು ಹೇಳುವ … Continued

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಹಾವು ಪ್ರತ್ಯಕ್ಷ..ವೀಕ್ಷಿಸಿ

ಮುಂಬೈ: ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್‌.ಆರ್. ಬೋರ್ಕರ್ ಅವರ ಕೊಠಡಿಯಲ್ಲಿ ಶುಕ್ರವಾರ ಹಾವೊಂದು ಪತ್ತೆಯಾಗಿದೆ. ನಂತರ ಹಾವನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ. ಕೋರ್ಟಿನಿಂದ ಗೋಣಿ ಚೀಲದಲ್ಲಿ ಹಾವನ್ನು ತುಂಬಿದ ವಿಡಿಯೋ ಹೊರಬಿದ್ದಿದೆ. ಹಾವು ಸುಮಾರು 5 ಅಡಿ ಉದ್ದವಿದ್ದು, ವಿಷಕಾರಿಯಲ್ಲ ಎಂದು ಹೇಳಲಾಗಿದೆ. ನ್ಯಾಯಮೂರ್ತಿ ಬೋರ್ಕರ್ ಅವರು ತಮ್ಮ ಕೊಠಡಿಯಲ್ಲಿ ಇಲ್ಲದಿದ್ದಾಗ ಹಾವು ಪತ್ತೆಯಾದ ಘಟನೆ ಬೆಳಕಿಗೆ … Continued

ಮಹತ್ವದ ತೀರ್ಪು…ವಿಲ್‌ ಮಾಡದೆ ಮೃತಪಟ್ಟ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಪಡೆಯಲು ಹೆಣ್ಣು ಮಕ್ಕಳು ಅರ್ಹರು: ಸುಪ್ರೀಂಕೋರ್ಟ್‌ ತೀರ್ಪು

ನವದೆಹಲಿ : ವಿಲ್ ಮಾಡದೆ ತಂದೆ ಮೃತಪಟ್ಟ ಹಿಂದೂ ತಂದೆಯ ಹೆಣ್ಣುಮಕ್ಕಳು ಅವರ ಸ್ವಯಂ-ಸಂಪಾದನೆ ಮತ್ತು ಇತರ ಆಸ್ತಿಗಳನ್ನು ಉತ್ತರಾಧಿಕಾರಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ … Continued

ಕತ್ತರಿಸಿದ ಗಂಡನ ರುಂಡದ ಸಮೇತ ಪೊಲೀಸ್​ ಠಾಣೆಗೆ ಬಂದು ಶರಣಾದ ಪತ್ನಿ !

ಚಿತ್ತೂರು (ಆಂಧ್ರಪ್ರದೇಶ): ಆಘಾತಕಾರಿ ಘಟನೆಯಲ್ಲಿ ಆಂಧ್ರಪ್ರದೇಶದ ಮಹಿಳೆಯೊಬ್ಬಳು ತನ್ನ ಪತಿಯನ್ನು ಶಿರಚ್ಛೇದ ಮಾಡಿ ನಂತರ ಗುರುವಾರ ಪೊಲೀಸರ ಮುಂದೆ ರುಂಡದ ಸಮೇತ ಶರಣಾಗಿದ್ದಾಳೆ…! ಪೊಲೀಸರ ಮಾಹಿತಿಯಂತೆ ರಾಜ್ಯದ ಚಿತ್ತೂರು ಜಿಲ್ಲೆಯ ರೇಣಿಗುಂಟದ ಮಹಿಳೆ ಶರಣಾಗುವ ಮುನ್ನ ಪತಿಯ ತಲೆಯನ್ನು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ತೆರಳಿದ್ದಳು. ಆರೋಪಿಯನ್ನು 53 ವರ್ಷದ ಭಾಷ್ಯಂ ರವಿಚಂದ್ರನ್ ಅವರ ಪತ್ನಿ … Continued

ಪುಷ್ಪ ಸಿನಿಮಾದಿಂದ ಪ್ರೇರಣೆಗೊಂಡ ಅಪ್ರಾಪ್ತರಿಂದ ವ್ಯಕ್ತಿಯ ಕೊಲೆ; ದಿಢೀರ್‌ ಫೇಮಸ್​ ಆಗಲೆಂದು ಹತ್ಯೆ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್…!

ನವದೆಹಲಿ : ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾದ ಬಾಲಕರು ವ್ಯಕ್ತಿಯೊಬ್ಬರನ್ನು ಕೊಲೆಗೈದು , ‘ಪ್ರಸಿದ್ಧರಾಗಲು’ ಕೊಲೆಯ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸಿದ್ದ ಕಳವಳಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ವಾಯವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಜಹಾಂಗೀರಪುರಿ ನಿವಾಸಿ 24 … Continued

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಸೇರ್ಪಡೆ ನಂತರ ಮುಲಾಯಂ ಸಿಂಗ್ ಆಶೀರ್ವಾದ ಪಡೆದ ಅಪರ್ಣಾ ಯಾದವ್‌

ನವದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ತಮ್ಮ ಕಿರಿಯ ಸೊಸೆ ಅಪರ್ಣಾ ಯಾದವ್‌ ಅವರಿಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಮಾಡಿದ್ದಾರೆ. ಅಪರ್ಣಾ ಯಾದವ್‌ ಬಿಜೆಪಿ ಸೇರ್ಪಡೆಯಾದ ನಂತರ ಇದು ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿ ಆಶಿರ್ವಾದ ಪಡೆದಿದ್ದಾರೆ. 2017ರ ಉತ್ತರ ಪ್ರದೇಶ … Continued

ಭಾರತದಲ್ಲಿ 3,47,254 ಹೊಸ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,47,254 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಹೊಸ ಕೊರೊನಾ ವೈರಸ್ ಸೋಂಕುಗಳ ಸೇರ್ಪಡೆಯೊಂದಿಗೆ, ಸಕ್ರಿಯ ಪ್ರಕರಣಗಳು 20,18,825 ಕ್ಕೆ ಏರಿದೆ. ಇದೇ ಸಮಯದಲ್ಲಿ 703 ರೋಗಿಗಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 4,88,396 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ … Continued

ಇಂಡಿಯಾ ಟುಡೆ ಮೂಡ್ ಆಫ್ ದಿ ನೇಷನ್ ಸಮೀಕ್ಷೆ: ದೇಶದಲ್ಲಿ ನರೇಂದ್ರ ಮೋದಿ ಪ್ರಾಬಲ್ಯ ಮುಂದುವರೆಸಿದ್ದಾರೆ, ಆದರೆ…

ನವದೆಹಲಿ: ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಜನವರಿ 2022 ರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಅತ್ಯಂತ ಜನಪ್ರಿಯ ರಾಜಕೀಯ ನಾಯಕರಾಗಿ ಮುಂದುವರೆದಿದ್ದಾರೆ. ಆದರೆ 2024 ರ ಲೋಕಸಭಾ ಚುನಾವಣೆಯ ಮೊದಲು ಪರಿಹರಿಸಲು ಅವರಿಗೆ ಸಮಸ್ಯೆಗಳಿಲ್ಲ ಎಂದು ಇದರ ಅರ್ಥವಲ್ಲ ಎಂದು ಸಮೀಕ್ಷೆ ಹೇಳಿದೆ. ಇತ್ತೀಚಿನ ಮೂಡ್ ಆಫ್ ದಿ … Continued

1200 ಕೋಟಿ ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ಚತುಷ್ಪಥ ರಸ್ತೆಗೆ ಕೇಂದ್ರ ಅನುಮೋದನೆ

ಬೆಂಗಳೂರು : ಹಾಲಿ ದ್ವಿಪಥದ ಶಿರಾಡಿ ಘಾಟ್ ರಸ್ತೆಯನ್ನು 1200 ಕೋಟಿ ರೂ.ಗಳ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ. ಎನ್.ಹೆಚ್.ಎ.ಐ ವತಿಯಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡು ಎರಡು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲಾ … Continued

ಮಕ್ಕಳಲ್ಲಿ ಕೋವಿಡ್ ಹೇಗೆ ನಿರ್ವಹಿಸುವುದು? ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೋವಿಡ್ ನಿರ್ವಹಣೆಗಾಗಿ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರವು ಗುರುವಾರ ಬಿಡುಗಡೆ ಮಾಡಿದೆ. ಓಮಿಕ್ರಾನ್ ರೂಪಾಂತರಕ್ಕೆ ಮುಖ್ಯವಾಗಿ ಕಾರಣವಾದ ಪ್ರಸ್ತುತ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಮಾರ್ಗದರ್ಶಿ ಸೂತ್ರಗಳನ್ನು ತಜ್ಞರ ಗುಂಪು ಪರಿಶೀಲಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಸ್ಟೀರಾಯ್ಡ್‌ಗಳನ್ನು ಬಳಸಿದರೆ, ಕ್ಲಿನಿಕಲ್ ಸುಧಾರಣೆಗೆ ಒಳಪಟ್ಟು 10-14 ದಿನಗಳಲ್ಲಿ ಅವುಗಳನ್ನು ಮೊಟಕುಗೊಳಿಸಬೇಕು ಎಂದು … Continued