6 ಗಂಟೆಗಳ ಕಾಲ ಸೋನಿಯಾ ಗಾಂಧಿ ವಿಚಾರಣೆ ನಡೆಸಿದ ಇ.ಡಿ: ನಾಳೆ ಮತ್ತೆ ಹಾಜರಾಗುವಂತೆ ಸಮನ್ಸ್‌

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಇಂದು, ಮಂಗಳವಾರ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. 3ನೇ ಸುತ್ತಿನ ವಿಚಾರಣೆಗಾಗಿ ಹಾಜರಾಗುವಂತೆ ಅವರಿಗೆ ನಾಳೆ, ಬುಧವಾರ ಮತ್ತೆ ಸಮನ್ಸ್ ನೀಡಲಾಗಿದೆ. ಸೋನಿಯಾ ಗಾಂಧಿ ಅವರು, ಇಂದು ಮಂಗಳವಾರ ಬೆಳಗ್ಗೆ 11 … Continued

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಹಗರಣ: ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇ.ಡಿ

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್ (ಪೂರಕ ಪ್ರಾಸಿಕ್ಯೂಷನ್ ದೂರು) ಸಲ್ಲಿಸಿದೆ. ಶ್ರೀನಗರದ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ದೂರನ್ನು ಪರಿಗಣನೆಗೆ ತೆಗೆದುಕೊಂಡಿದೆ ಮತ್ತು ಆಗಸ್ಟ್ 27 ರಂದು ಆರೋಪಿಗಳಿಗೆ ಹಾಜರಾಗುವಂತೆ ಹೇಳಿದೆ. … Continued

ಪ್ರತಿಭಟನೆ ವೇಳೆ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರ ಕೂದಲು ಹಿಡಿದು ಎಳೆದು, ಕಾರಿನೊಳಗೆ ನೂಕಿದ ದೆಹಲಿ ಪೊಲೀಸರು | ವೀಕ್ಷಿಸಿ

ನವದೆಹಲಿ: ಇಂದು, ಮಂಗಳವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡರನ್ನು ಬಂಧಿಸಲಾಗಿದ್ದು, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ ಅವರ ತಲೆಗೂದಲನ್ನು ಪೊಲೀಸರು ಎಳೆದಾಡಿದ ದೃಶ್ಯ ವೀಡಿಯೊದಲ್ಲಿ ಕಂಡುಬಂದಿದೆ. “ಅವರು ನನಗೆ ಹೊಡೆದರು. ಅವರು ನನ್ನ ಕೂದಲನ್ನು ಎಳೆದರು ಎಂದು ಶ್ರೀನಿವಾಸ್ ಕಿರುಚಿದ್ದಾರೆ. ಇದಕ್ಕೂ ಮುನ್ನ ಪೋಲೀಸರೊಬ್ಬರು ಅವರ ತಲೆಗೂದಲು ಹಿಡಿದು ಎಳೆದಾಡುತ್ತಿದ್ದರು ಹಾಗೂ … Continued

ಗುಜರಾತಿನಲ್ಲಿ ಕಳ್ಳಭಟ್ಟಿ ದುರಂತ: 28 ಜನರ ಸಾವು, ಹಲವರು ತೀವ್ರ ಅಸ್ವಸ್ಥ

ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಮದ್ಯದ ತಯಾರಿಕೆ, ಮಾರಾಟ ಮತ್ತು ಸೇವನೆ ನಿಷೇಧಿಸಿರುವ ಗುಜರಾತ್‌ನಲ್ಲಿ ನಕಲಿ ಮದ್ಯ ಸೇವಿಸಿದ ಆರೋಪಿತ ಘಟನೆಯಲ್ಲಿ 28 ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರು ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಬೊಟಾಡ್ ಮತ್ತು ಅಹಮದಾಬಾದ್ ಜಿಲ್ಲೆಗಳ ಗ್ರಾಮಗಳಲ್ಲಿ ಈ ಸಾವುಗಳು ಸಂಭವಿಸಿವೆ. … Continued

ಕಬಡ್ಡಿ ಆಟದಲ್ಲಿ ರೈಡ್‌ ಮಾಡುತ್ತಿರುವಾಗಲೇ ಆಟಗಾರ ಕುಸಿದ ಬಿದ್ದು ಸಾವು : ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚೆನ್ನೈ: 22ರ ಹರೆಯದ ವಿದ್ಯಾರ್ಥಿಯೊಬ್ಬ ಭಾನುವಾರ ರಾತ್ರಿ ಪನ್ರುತಿ ಸಮೀಪದ ಮನಡಿಕುಪ್ಪಂನಲ್ಲಿ ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ಆಟಗಾರನನ್ನು ವಿಮಲ್‌ರಾಜ್ ಎಂದು ಗುರುತಿಸಲಾಗಿದ್ದು, ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್‌ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಡಲೂರು ಜಿಲ್ಲೆಯ ಕಡಂಪುಲಿಯೂರು ಸಮೀಪದ ಪುರಂಗಿಣಿ ಗ್ರಾಮದವರಾದ ವಿಮಲ್‌ರಾಜ್ ಅವರು ಮನ್ನಾಡಿಕುಪ್ಪಂನಲ್ಲಿ … Continued

4 ಲೋಕಸಭಾ ಸಂಸದರ ಅಮಾನತು ಮಾಡಿದ ಮಾರನೇ ದಿನ ರಾಜ್ಯ ಸಭೆಯಲ್ಲಿ ಒಂದು ವಾರದ ವರೆಗೆ 19 ಸಂಸದರ ಅಮಾನತು

ನವದೆಹಲಿ: ಇಂದಿನ (ಮಂಗಳವಾರದ) ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಪಕ್ಷಗಳ ಹತ್ತೊಂಬತ್ತು ಸಂಸದರನ್ನು ರಾಜ್ಯಸಭೆಯಿಂದ ಒಂದು ವಾರದವರೆಗೆ ಅಮಾನತು ಮಾಡಲಾಗಿದೆ. “ರಾಜ್ಯಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಳ್ಳಲಾಗಿದೆ. ಅವರು ಸಭಾಪತಿಯ ಮನವಿಗಳನ್ನು ನಿರ್ಲಕ್ಷಿಸುತ್ತಲೇ ಇದ್ದರು” ಎಂದು ಬಿಜೆಪಿಯ ಪಿಯೂಷ್ ಗೋಯಲ್ ಹೇಳಿದ್ದಾರೆ. “ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೇತರಿಸಿಕೊಂಡು ಸಂಸತ್ತಿಗೆ … Continued

ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಪೊಲೀಸ್‌ ವಶಕ್ಕೆ : ಇದು ಪೊಲೀಸ್ ರಾಜ್ಯ, ಇಲ್ಲಿ ಮೋದಿಯೇ ರಾಜ ಎಂದ ರಾಹುಲ್‌ ಗಾಂಧಿ

ನವದೆಹಲಿ: ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದ ವೇಳೆ ದೆಹಲಿಯ ಹೃದಯ ಭಾಗದ ರಸ್ತೆಯೊಂದರಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರನ್ನು ಇಂದು, ಮಂಗಳವಾರ ಬಂಧಿಸಲಾಯಿತು. ಬೆಲೆ ಏರಿಕೆ ಮತ್ತು ಜಿಎಸ್‌ಟಿಯಿಂದ ಹಿಡಿದು ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವವರೆಗೆ ಹಲವಾರು ವಿಷಯಗಳ ಕುರಿತು ಪ್ರತಿಭಟಿಸುತ್ತಿರುವಾಗ ಕಾಂಗ್ರೆಸ್ … Continued

ಕ್ಯಾಥೋಲಿಕರು ಇಲ್ಲದಿದ್ದರೆ ತಮಿಳುನಾಡು ಬಿಹಾರ ಆಗುತ್ತಿತ್ತು : ವಿವಾದಕ್ಕೆ ಕಾರಣವಾದ ತಮಿಳುನಾಡು ಸ್ಪೀಕರ್ ಹೇಳಿಕೆ

ಚೆನ್ನೈ: ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರು ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣವಾಗಿದ್ದು, ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರವಾಗುತ್ತಿತ್ತು ಎಂಬ ಒಂದು ತಿಂಗಳ ಹಿಂದಿನ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಕಳೆದ ತಿಂಗಳು ಜೂನ್ 28 ರಂದು, ಅಪ್ಪಾವು ಮತ್ತು ಡಿಎಂಕೆ ಶಾಸಕ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ … Continued

ಟೋಲ್ ಬೂತ್‌ಗೆ ನುಗ್ಗಿದ ಟ್ರಕ್‌… ಟೋಲ್‌ ಸಿಬ್ಬಂದಿಯನ್ನು ಕಾಪಾಡಿದ ಮಹಿಳೆ | ವೀಕ್ಷಿಸಿ

ಡೆಹ್ರಾಡೂನ್: ಡೆಹ್ರಾಡೂನ್‌ನ ಟೋಲ್ ಬೂತ್‌ನಲ್ಲಿ ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದು ನಜ್ಜುಗುಜ್ಜಾಗುತ್ತಿದ್ದ ಟೋಲ್ ಬೂತ್ ಸಿಬ್ಬಂದಿಯನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ. ಈ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡ ವೀಡಿಯೊದಲ್ಲಿ, ಟೋಲ್ ಗೇಟ್ ದಾಟಲು ಕಾಯುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದ … Continued

ಇಡಿಯಿಂದ ಇಂದು ಮತ್ತೆ ಸೋನಿಯಾ ಗಾಂಧಿ ವಿಚಾರಣೆ : ‘ಸತ್ಯಾಗ್ರಹ’ ಮುಂದುವರೆಸಲು ಕಾಂಗ್ರೆಸ್‌ ನಿರ್ಧಾರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡನೇ ಸುತ್ತಿನ ವಿಚಾರಣೆಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು (ಜುಲೈ 26) ಜಾರಿ ನಿರ್ದೇಶನಾಲಯ (ಇಡಿ) ಮುಂದೆ ಮತ್ತೆ ಹಾಜರಾಗುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ಕಾಂಗ್ರೆಸ್ ಮುಖ್ಯಸ್ಥರನ್ನು ಹಣಕಾಸು ತನಿಖಾ … Continued