ಜೆ.ಎಸ್.ಎಸ್ ನಲ್ಲಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮ

ಜನತಾ ಶಿಕ್ಷಣ ಸಮಿತಿ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾಗಿರಿಯ ಜೆ.ಎಸ್.ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಕೋವಿಡ್-೧೯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಟ್ಟು ೪೭೦ ಜನ ಕೋವಿಡ್ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಡಾ. ರತ್ನಾ, ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ ಇತರರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ: ಜೆಎಸ್ಎಸ್‌ ನಿಂದ ಸನ್ಮಾನ

ಧಾರವಾಡ: ಜೆಎಸ್‌ಎಸ್ ಬನಶಂಕರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಕ್ಕೆ ಅತ್ಯತ್ತಮ ಘಟಕ ಮತ್ತು ಸುರೇಶಪ್ಪ ಸಜ್ಜನ ಅವರಿಗೆ ೨೦೧೯-೨೦೨೦ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ೨೪ ಸಪ್ಟೆಂಬರ್ ೨೦೨೧ ರಂದು ದೆಹಲಿಯ ಸುಶ್ಮಾಸ್ವರಾಜ ಭವನದಲ್ಲಿ ನೀಡಿ ಗೌರವಿಸಲಾಯಿತು. ಕಳೆದ ಆರು ವರ್ಷಗಳ ಅವಧಿಯಲ್ಲಿ ೧೦ ರಕ್ತದಾನ ಶಿಬಿರ, ೧೨ ಉಚಿತ … Continued

ಕುಮಟಾ; ಭಾರತ ಬಂದ್‌ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ

ಕುಮಟಾ;ಭಾರತ ಬಂದ್ ಗೆ ಬೆಂಬಲ ಸೂಚಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ರಾಷ್ಟ್ರಿಯ ಹೆದ್ದಾರಿ ೬೬ ರ ಮಣಕಿ ಮೈದಾನದಿಂದ ತಹಶೀಲ್ದಾರ ಕಚೇರಿಯ ವರೆಗೆ ಮೆರವಣಿಗೆಯ ಮೂಲಕ ಸಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಲಾಯಿತು. ಬಿಸಿಯೂಟ ತಯಾರಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು.ನಂತರ ತಹಶೀಲ್ದಾರ ಕಚೇರಿಯ … Continued

ಜೆಇಇ ಮೇನ್ಸ್‌ -ಸಿಇಟಿ ಪರೀಕ್ಷೆಯಲ್ಲಿ ಜೆಎಸ್ಎಸ್ ಆರ್.ಎಸ್.ಹುಕ್ಕೇರಿಕರ ಪಿಯು ಕಾಲೇಜಿನ ಉತ್ತಮ ಸಾಧನೆ

ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ೨೦೨೦-೨೦೨೧ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿ.ಇ.ಟಿ ಹಾಗೂ ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ನಾಲ್ಕು ಹಂತಗಳ ಪರೀಕ್ಷೆಗಳಲ್ಲೂ ಉತ್ತಮ ಸಾಧನೆಗೈದು ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಜೆ.ಇ.ಇ ಮೇನ್ಸ್‌ನಲ್ಲಿ … Continued

ಟಾಟಾ ಉದ್ಯಮ ಲಾಭಾಂಶದ ಬಹುಪಾಲನ್ನು ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗೆ ನೀಡುತ್ತಿದೆ: ಡಾ.ಅಜಿತ್ ಪ್ರಸಾದ

ಧಾರವಾಡ: ದೇಶದ ಅತಿ ದೊಡ್ಡ ಉದ್ಯಮವಾದ ಟಾಟಾ ತನ್ನ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಾರ್ವಜನಿಕರ ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗಾಗಿ ಖರ್ಚು ಮಾಡುತ್ತಿದೆ. ಪರಿಸರದಿಂದ ಬಹಳಷ್ಟನ್ನು ಪಡೆಯುವ ನಾವು ಪರಿಸರಕ್ಕೆ ಏನನ್ನಾದರೂ ತಿರುಗಿ ನೀಡದಿದ್ದರೆ, ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಟ್ಟು ಹೋದಂತಾಗುತ್ತದೆ ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ್ ಪ್ರಸಾದ್ ಹೇಳಿದರು. ಅವರು … Continued

ಧಾರವಾಡ ಜೆಎಸ್ಎಸ್ ಐಟಿಐನಲ್ಲಿ ಅಭಿಯಂತರರ ದಿನಾಚರಣೆ

ಧಾರವಾಡ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಐಟಿಐನಲ್ಲಿ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಭಿಯಂತರರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹೇಶ ಕುಂದರಪಿಮಠ, ವಿನಾಯಕ ಗವಳಿ, ವಿಶಾಲ ಭಜಂತ್ರಿ, ಅಶೋಕ ಜಿಗಳೂರ, ಮಹೇಶ ಬಡಿಗೇರ, ವಿಕಾಸ ಬಿಳಗೀಕರ್, ಬಿ.ಎ. ತಡಕೋಡ, ಕೆ. ಜಿ. ವಸ್ತ್ರದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೊಲನಗದ್ದೆ ಸೀತಾ ಹೆಗಡೆ ನಿಧನ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಹೊಲನಗದ್ದೆಯ ಸೀತಾ ಎಂ. ಹೆಗಡೆ(77) ಮಂಗಳವಾರ ಸಂಜೆ ನಿಧನರಾದರು. ಇವರು ಖ್ಯಾತ ಪರಿಸರ ಹೋರಾಟಗಾರರಾಗಿದ್ದ ದಿ. ಎಂ. ಆರ್. ಹೆಗಡೆ ಅವರ ಪತ್ನಿ. ಮೃತರು ಸೀತಕ್ಕ ಎಂದೇ ಪ್ರಸಿದ್ದರಾಗಿದ್ದರು. ಪರಿಸರ, ಸಮಾಜಿಕ ಹಾಗೂ ದಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು  ಹಾಗೂ ಅಪಾರ-ಬಂಧು ಬಳಗವನ್ನು … Continued

ಇಂದು ಸರಳ-ಸಜ್ಜನಿಕೆಯ ಜನಾನುರಾಗಿ ವ್ಯಕ್ತಿ ಬಸವರಾಜ ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ

(ಬಸವರಾಜ ಎಸ್. ಬಿಕ್ಕಣ್ಣವರ ಪ್ರಥಮ ಪುಣ್ಯ ಸ್ಮರಣೆ ರವಿವಾರ, ದಿನಾಂಕ ೧೨.೦೯.೨೦೨೧ ಧಾರವಾಡದ ಸ್ವಗೃಹದಲ್ಲಿ ಜರುಗಲಿದ್ದು, ಆ ನಿಮಿತ್ಯವಾದ ಲೇಖನ) ಬಸವರಾಜ ಎಸ್. ಬಿಕ್ಕಣ್ಣವರ ಸರಳ, ಸಜ್ಜನಿಕೆಯ ವ್ಯಕ್ತಿ ಜನಾನುರಾಗಿಯಾಗಿದ್ದರು. ಬಿ.ಕಾಂ., ಪದವೀಧರರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಪ್ರವೃತ್ತಿಯಲ್ಲಿ, ಸಮಾಜ ಸೇವಕರು ಹಾಗೂ ರಾಜಕಾರಣಿಗಳಾಗಿದ್ದರು. ಬಸವರಾಜ ಸುಸಂಸ್ಕೃತ ಕುಟುಂಬ ಹಿನ್ನೆಲೆಯ ಇವರು ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾಗಿದ್ದ … Continued

ಅತ್ಯುತ್ತಮ ವಿದ್ಯಾರ್ಥಿಗಳೇ ಶಿಕ್ಷಕರ ಜೀವಾಳ: ಡಾ. ನ.ವಜ್ರಕುಮಾರ

ಧಾರವಾಡ: ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ. ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ ವರ್ಣಿಸಲು ಅಸಾಧ್ಯ. ನಮ್ಮನ್ನು ಗುರುತಿಸಿ ಮಾತನಾಡಿಸಿದಾಗ ಆಗುವ ಆತ್ಮತೃಪ್ತಿ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಶಿಕ್ಷಕ ದಿನಾಚರಣೆ ನಿಮಿತ್ತ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾವು ಹಣ-ಆಸ್ತಿ ಗಳಿಸಬಹುದು … Continued

ಶ್ರೀಕೃಷ್ಣ ಜನ್ಮಾಷ್ಟಮಿ..: ಕೃಷ್ಣ-ರಾಧೆ ವೇಷ ಧರಿಸಿ ಚಿಣ್ಣರ ಸಂಭ್ರಮ

ಧಾರವಾಡ; ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿ ಪರಂಪರೆಯ ಪರಿಚಯ ಮಾಡಿಕೊಡುವ ಸಂದರ್ಭ. ಪ್ರತಿ ಹಬ್ಬದಿಂದ ನಾವು ಒಂದು ಒಳ್ಳೆಯ ಸಂದೇಶ ಪಡೆಯುತ್ತೇವೆ. ಎಂದು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬದ ಆಚರಣೆಯ ಮಹತ್ವ, ಸಂದೇಶಗಳ ಪರಿಚಯ ಇಂದಿನ ಮಕ್ಕಳಿಗೆ … Continued